ಭಾರತೀಯ ರೈಲ್ವೆಯಲ್ಲಿ ಬರೋಬ್ಬರಿ 2.5 ಲಕ್ಷ ಹುದ್ದೆಗಳು ಭರ್ತಿಯಾಗಿಲ್ಲ: ಕೇಂದ್ರ ಮಾಹಿತಿ

By Gowthami K  |  First Published Aug 8, 2023, 2:40 PM IST

ಭಾರತೀಯ ರೈಲ್ವೆಯಲ್ಲಿ ಸುಮಾರು 2.5 ಲಕ್ಷ ಹುದ್ದೆಗಳು ಖಾಲಿ ಉಳಿದಿವೆ ಎಂದು ಆಗಸ್ಟ್ 7 ರಂದು ಕೇಂದ್ರ ಸರ್ಕಾರವು ಸಂಸತ್ತಿನಲ್ಲಿ  ಮಾಹಿತಿ ಹಂಚಿಕೊಂಡಿದೆ.


ನವದೆಹಲಿ (ಆ.8): ಭಾರತೀಯ ರೈಲ್ವೆಯಲ್ಲಿ ಸುಮಾರು 2.5 ಲಕ್ಷ ಹುದ್ದೆಗಳು ಖಾಲಿ ಉಳಿದಿವೆ ಎಂದು ಆಗಸ್ಟ್ 7 ರಂದು ಕೇಂದ್ರ ಸರ್ಕಾರವು ಸಂಸತ್ತಿನಲ್ಲಿ  ಮಾಹಿತಿ ಹಂಚಿಕೊಂಡಿದೆ. 'ಗ್ರೂಪ್ ಸಿ' ಉದ್ಯೋಗಗಳಿಗೆ ಸಂಬಂಧಿಸಿದ ಹೆಚ್ಚಿನ ಹುದ್ದೆಗಳು ಖಾಲಿ ಇವೆ ಎಂದು ಹೇಳಿದೆ.

 ಬಿಜೆಪಿ ಶಾಸಕ ಸುಶೀಲ್ ಕುಮಾರ್ ಮೋದಿ ಅವರು ಕೇಳಿದ ಪ್ರಶ್ನೆಗೆ ಉತ್ತರವಾಗಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಈ ಬಗ್ಗೆ ವರದಿ ಸಲ್ಲಿಸಿದ್ದು,   ಗ್ರೂಪ್ ಸಿ ಹುದ್ದೆಗಳಲ್ಲಿ ರೈಲ್ವೆಯ ಎಲ್ಲಾ ವಲಯಗಳಲ್ಲಿ ಒಟ್ಟು 2,48,895 ಹುದ್ದೆಗಳು ಖಾಲಿ ಇವೆ ಎಂದಿದ್ದಾರೆ.

Tap to resize

Latest Videos

undefined

ಬೆಂಗಳೂರು ಮೂಲದ ಕಂಪೆನಿಯಿಂದ 18 ಉದ್ಯೋಗಿಗಳು ವಜಾ!

ಜುಲೈ 1, 2023 ರಂತೆ ಭಾರತೀಯ ರೈಲ್ವೆಯಲ್ಲಿ 2.50 ಲಕ್ಷಕ್ಕೂ ಹೆಚ್ಚು ಹುದ್ದೆಗಳು ಖಾಲಿ ಉಳಿದಿವೆ, ಅದರಲ್ಲಿ 2.48 ಲಕ್ಷ ಹುದ್ದೆಗಳು ಸ್ಟೇಷನ್ ಮಾಸ್ಟರ್‌ಗಳು, ತಂತ್ರಜ್ಞರು ಮತ್ತು ಜೂನಿಯರ್ ಎಂಜಿನಿಯರ್‌ಗಳನ್ನು ಒಳಗೊಂಡಿರುವ ಗ್ರೂಪ್ ಸಿ (ಗೆಜೆಟೆಡ್ ಅಲ್ಲದ) ವರ್ಗದಲ್ಲಿ ಬರುತ್ತವೆ.

ಗೆಜೆಟೆಡ್ ಅಲ್ಲದ ವಿಭಾಗದಲ್ಲಿ ಅತಿ ಹೆಚ್ಚು ಹುದ್ದೆಗಳು ಉತ್ತರ ರೈಲ್ವೆ ವಲಯದಲ್ಲಿ 32,468 ಹುದ್ದೆಗಳನ್ನು ಹೊಂದಿದ್ದರೆ, ಪೂರ್ವ ಮತ್ತು ಪಶ್ಚಿಮ ರೈಲ್ವೆಯಲ್ಲಿ ಕ್ರಮವಾಗಿ 29,869 ಮತ್ತು 25597 ಹುದ್ದೆಗಳಿವೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಶುಕ್ರವಾರ ರಾಜ್ಯಸಭೆಗೆ ತಿಳಿಸಿದರು. 

ನಟನೆಗೆ ಮನಸೋತು ಅಮೆರಿಕಾದಲ್ಲಿದ್ದ 1 ಕೋಟಿ ರೂ ಉದ್ಯೋಗ ತೊರೆದು ಭಾರತಕ್ಕೆ

2021-22 ರ ರೈಲ್ವೆ ವಾರ್ಷಿಕ ಪುಸ್ತಕದ ಪ್ರಕಾರ, ಮಾರ್ಚ್ 31, 2022 ರಂತೆ ಭಾರತೀಯ ರೈಲ್ವೆಯಲ್ಲಿ ಸಾಮಾನ್ಯ ಉದ್ಯೋಗಿಗಳ ಸಂಖ್ಯೆ 12,12,882 ರಷ್ಟಿದೆ.  ಗ್ರೂಪ್-ಎ ಮತ್ತು ಗ್ರೂಪ್-ಬಿ ವಿಭಾಗಗಳಲ್ಲಿ ಖಾಲಿ ಇರುವ ಹುದ್ದೆಗಳು 2,070 ಆಗಿದ್ದು, ಪೂರ್ವ ರೈಲ್ವೆ 216 ಹುದ್ದೆಗಳೊಂದಿಗೆ ಅಗ್ರಸ್ಥಾನದಲ್ಲಿದೆ ಮತ್ತು ಪಶ್ಚಿಮ ರೈಲ್ವೆ 192 ಖಾಲಿ ಹುದ್ದೆಗಳೊಂದಿಗೆ ನಂತರದ ಸ್ಥಾನದಲ್ಲಿದೆ.

ಖಾಲಿ ಇರುವ ಹುದ್ದೆಗಳನ್ನು ಯಾವಾಗ ಭರ್ತಿ ಮಾಡಲಾಗುತ್ತದೆ ಎಂಬ ಬಿಜೆಪಿ ಸಂಸದರ ಪ್ರಶ್ನೆಗೆ,ರೈಲ್ವೆ ಒಂದು ದೊಡ್ಡ ಸಂಸ್ಥೆಯಾಗಿದ್ದು, ಖಾಲಿ ಹುದ್ದೆಗಳ ಭರ್ತಿ ಮತ್ತು ಅದು ಸಂಭವಿಸುವುದು ನಿರಂತರ ಪ್ರಕ್ರಿಯೆಯಾಗಿದೆ ಎಂದು ವೈಷ್ಣವ್ ತಿಳಿಸಿದ್ದಾರೆ. 

ಕಾರ್ಯಾಚರಣೆಯ ಅಗತ್ಯತೆಗಳಿಗೆ ಅನುಗುಣವಾಗಿ ನೇಮಕಾತಿ ಏಜೆನ್ಸಿಗಳೊಂದಿಗೆ ರೈಲ್ವೆಯಿಂದ ಇಂಡೆಂಟ್‌ಗಳನ್ನು ಇರಿಸುವ ಮೂಲಕ ಖಾಲಿ ಹುದ್ದೆಗಳನ್ನು ಪ್ರಾಥಮಿಕವಾಗಿ ಭರ್ತಿ ಮಾಡಲಾಗುತ್ತದೆ,  ಎಂದು  ವೈಷ್ಣವ್ ಹೇಳಿದರು.

ಅಮೆಜಾನ್‌ನಿಂದ 1 ಕೋಟಿ ರೂಪಾಯಿಗೂ ಹೆಚ್ಚು ಪ್ಯಾಕೇಜ್ ಪಡೆಯುವ ಮೂಲಕ ಇತಿಹಾಸ

30 ಜೂನ್, 2023 ರಂತೆ ಒಟ್ಟು 1.28 ಲಕ್ಷ ಅಭ್ಯರ್ಥಿಗಳನ್ನು ಗ್ರೂಪ್ ‘ಸಿ’ ಹುದ್ದೆಗಳಿಗೆ ಲೆವೆಲ್-1 (ಹಿಂದಿನ ಗ್ರೂಪ್-ಡಿ) ಹೊರತುಪಡಿಸಿ ಎಂಪನೆಲ್ ಮಾಡಲಾಗಿದೆ. ಇದಲ್ಲದೆ, 30 ಜೂನ್, 2023 ರಂತೆ 1.47 ಲಕ್ಷ ಅಭ್ಯರ್ಥಿಗಳನ್ನು ಲೆವೆಲ್-1 ಪೋಸ್ಟ್‌ಗಳಿಗೆ ಎಂಪನೆಲ್ ಮಾಡಲಾಗಿದೆ  ಎಂದು ವೈಷ್ಣವ್ ಹೇಳಿದ್ದಾರೆ.

ನಿವೃತ್ತ ಅಗ್ನಿವೀರರ ನೇಮಕಾತಿಯಲ್ಲಿ ಶೇಕಡಾವಾರು ಮೀಸಲಾತಿಯ ಪ್ರಶ್ನೆಗೆ ವೈಷ್ಣವ್ ಅವರುರೈಲ್ವೆ ಪ್ರೊಟೆಕ್ಷನ್ ಫೋರ್ಸ್ (ಆರ್‌ಪಿಎಫ್) ಮತ್ತುರೈಲ್ವೆ ಪ್ರೊಟೆಕ್ಷನ್ ಸ್ಪೆಷಲ್ ಫೋರ್ಸ್ (ಆರ್‌ಪಿಎಸ್‌ಎಫ್) ಅಡಿಯಲ್ಲಿ ಕಾನ್ಸ್‌ಟೇಬಲ್‌ಗಳ ನೇಮಕಾತಿಗಾಗಿ ಶೇಕಡಾ 10 ರಷ್ಟು ಕೋಟಾವನ್ನು ಮೀಸಲಿಡಲಾಗಿದೆ ಎಂದು ತಿಳಿಸಿದರು.

click me!