Jobs in Konkan Railway: ಜ್ಯೂನಿಯರ್ ಟೆಕ್ನಿಕಲ್ ಅಸಿಸ್ಟಂಟ್‌ ಹುದ್ದೆಗಳಿಗೆ ವಾಕ್ ಇನ್ ಇಂಟರ್‌ವ್ಯೂ

Suvarna News   | Asianet News
Published : Nov 25, 2021, 05:00 AM IST
Jobs in Konkan Railway: ಜ್ಯೂನಿಯರ್ ಟೆಕ್ನಿಕಲ್ ಅಸಿಸ್ಟಂಟ್‌ ಹುದ್ದೆಗಳಿಗೆ ವಾಕ್ ಇನ್ ಇಂಟರ್‌ವ್ಯೂ

ಸಾರಾಂಶ

ಕೊಂಕಣ ರೈಲ್ವೆ ಕಾರ್ಪೋರೇಷನ್ ಲಿಮಿಟೆಡ್ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಮುಂದಾಗಿದೆ. ಜೂನಿಯರ್ ಟೆಕ್ನಿಕಲ್ ಅಸಿಸ್ಟಂಟ್ ಹುದ್ದೆಗಳಿಗೆ ಇದೇ ಡಿಸೆಂಬರ್ 13ರಿದಂ 17ರವರೆಗೆ ವಾಕ್ ಇನ್ ಇಂಟರ್‌ವ್ಯೂ ನಡೆಯಲಿದೆ. ಆಸಕ್ತರು ಹಾಗೂ ಅರ್ಹ ಅಭ್ಯರ್ಥಿಗಳು ಈ ಸಂದರ್ಶನಕ್ಕೆ ಹಾಜರಾಗಬಹುದಾಗಿದೆ.

ಕೊಂಕಣ ರೈಲ್ವೆ ಕಾರ್ಪೋರೇಷನ್ ಲಿಮಿಟೆಡ್ (Konkan Railway Corporation Limited) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಮುಂದಾಗಿದೆ. ಒಟ್ಟು 18 ಜೂನಿಯರ್ ಟೆಕ್ನಿಕಲ್ ಅಸಿಸ್ಟೆಂಟ್ (Junior Technical Assistant) ಹುದ್ದೆಗಳು ಖಾಲಿ ಇದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಕೊಂಕಣ ರೈಲ್ವೆ ಕಾರ್ಪೋರೇಷನ್ ಲಿಮಿಟೆಡ್ (Konkan Railway Corporation Limited) ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಬಿಇ, ಬಿ.ಟೆಕ್ (B.E, B Tech) ಪದವೀಧರರು ಅರ್ಜಿ ಸಲ್ಲಿಸಬಹುದಾಗಿದೆ.  ನೇರ ಸಂದರ್ಶನದ (Walk-in-Interview) ಮೂಲಕ ಟೆಕ್ನಿಕಲ್ ಅಸಿಸ್ಟೆಂಟ್ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಡಿಸೆಂಬರ್ 13ರಿಂದ 17ರವರೆಗೆ ನಡೆಯಲಿರುವ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು. ನೇರ ಸಂದರ್ಶನಕ್ಕೆ ಪಾಲ್ಗೊಳ್ಳುವ ಮುನ್ನ ಅಭ್ಯರ್ಥಿಗಳು ಹುದ್ದೆಯ ಬಗ್ಗೆ ಇನ್ನಷ್ಟು ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯಲು ಅಧಿಕೃತ ವೆಬ್ಸೈಟ್ www.konkanrailway.com ಗೆ ಭೇಟಿ ನೀಡಿ ಪರಿಶೀಲಿಸಬಹುದು. ಆಸಕ್ತರು ಹಾಗೂ ಅರ್ಹ ಅಭ್ಯರ್ಥಿಗಳು ಈ ಸಂದರ್ಶನಕ್ಕೆ ಹಾಜರಾಗಬಹುದು. ಸಂದರ್ಶನವು 2021 ಡಿಸೆಂಬರ್ 13ರಿದಂ 17ರವರೆಗೆ ನಡೆಯಲಿದೆ. ನೋಟಿಫಿಕೇಷನ್ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

ಜೂನಿಯರ್ ಟೆಕ್ನಿಕಲ್ ಅಸಿಸ್ಟೆಂಟ್- 18 ಹುದ್ದೆಗಳ ಪೈಕಿ SC ವರ್ಗಕ್ಕೆ 03 ಹುದ್ದೆ, ಎಸ್ಟಿ ವರ್ಗಕ್ಕೆ 02 ಹುದ್ದೆ, ಒಬಿಸಿ-04 ಹುದ್ದೆ ಹಾಗೂ ಸಾಮಾನ್ಯ ವರ್ಗಕ್ಕೆ 09 ಹುದ್ದೆಗಳನ್ನ ಮೀಸಲಿಡಲಾಗಿದೆ. ಜೂನಿಯರ್ ಟೆಕ್ನಿಕಲ್ ಅಸಿಸ್ಟೆಂಟ್ (Jinior Technical Assistant) ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ ಬೋರ್ಡ್ನಿಂದ ಕಡ್ಡಾಯವಾಗಿ ಬಿಇ/ ಬಿ.ಟೆಕ್ ಪೂರ್ಣಗೊಳಿಸಿರಬೇಕು. ಎಲೆಕ್ಟ್ರಾನಿಕ್ಸ್ (Electronics) / ಎಲೆಕ್ಟ್ರಿಕಲ್ & ಎಲೆಕ್ಟ್ರಾನಿಕ್ಸ್ (Electrics and Electronics) / ಎಲೆಕ್ಟ್ರಾನಿಕ್ಸ್ & ಟೆಲಿಕಮ್ಯುನಿಕೇಷನ್ (Electronics and Telecommunication)  ಮತ್ತು ಕಮ್ಯುನಿಕೇಷನ್/ ಇನ್ಸ್ಟುಮೆಂಟೇಶನ್ ವಿಭಾಗದಲ್ಲಿ ಶೇ.60ರಷ್ಟು ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು.

Wipro Recruitment: ಎಂಜಿನಿಯರ್ ಪದವೀಧರರಿಗೆ ಉದ್ಯೋಗಾವಕಾಶ

ಜೂನಿಯರ್ ಟೆಕ್ನಿಕಲ್ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ಗರಿಷ್ಠ 25 ವರ್ಷ ಮೀರಿರಬಾರದು. SC/ST ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ನೀಡಲಾಗಿದೆ. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ಇದೆ. 

ಜೂನಿಯರ್ ಟೆಕ್ನಿಕಲ್ ಅಸಿಸ್ಟೆಂಟ್ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ 30,000 ರೂ. ವೇತನ ನೀಡಲಾಗುತ್ತದೆ.  ದಾಖಲಾತಿ ಪರಿಶೀಲನೆ ನಡೆಸಿದ ಬಳಿಕ ಅಭ್ಯರ್ಥಿಗಳನ್ನು ವೈಯಕ್ತಿಕ ಸಂದರ್ಶನ ಕರೆಯಲಾಗುತ್ತದೆ.  USBRL ಪ್ರಾಜೆಕ್ಟ್ ಹೆಡ್ ಆಫೀಸ್, ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್, ಸತ್ಯಂ ಕಾಂಪ್ಲೆಕ್ಸ್, ಮಾರ್ಬಲ್ ಮಾರ್ಕೆಟ್ ಬಡಾವಣೆ- ತ್ರಿಕೂಟ ನಗರ, ಜಮ್ಮು, ಜಮ್ಮು & ಕಾಶ್ಮೀರ-180011 - ಇಲ್ಲಿ ಸಂದರ್ಶನ ನಡೆಸಲಾಗುತ್ತದೆ. ಎರಡು ಹಂತಗಳಲ್ಲಿ ಸಂದರ್ಶನ ನಡೆಯಲಿದ್ದು, SC/ ST/ OBC ಅಭ್ಯರ್ಥಿಗಳಿಗೆ ಡಿಸೆಂಬರ್ 13  ಮತ್ತು  14ರಂದು ಸಂದರ್ಶನ ನಡೆಯಲಿದೆ. ಇನ್ನು ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಡಿಸೆಂಬರ್ 15-17ರವರೆಗೆ ಸಂದರ್ಶನ ನಡೆಯಲಿದೆ.

ಭಾರತೀಯ ರೇಲ್ವೆ (Indian Railway) ಯಲ್ಲಿ ಕೊಂಕಣ ರೇಲ್ವೆಯು ತನ್ನದೇ ಆದ ವಿಶಿಷ್ಟತೆಯನ್ನು ಹೊಂದಿದೆ. ಈ ಕೊಂಕಣ ರೈಲ್ವೆ ಕಾರ್ಪೊರೇಷನ್‌ನಲ್ಲಿ ಕೆಲಸ ಮಾಡಲು ಇಚ್ಛೆಹೊಂದಿದವರಿಗೆ ಇದೊಂದು ಸುವರ್ಣಾವಕಾಶವಾಗಿದ್ದು, ಹೆಚ್ಚಿನ ಮಾಹಿತಿಯನ್ನು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ, ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ತಿಳಿದುಕೊಳ್ಳಬಹುದಾಗಿದೆ. ಈ ಎಲ್ಲ ಹುದ್ದೆಗಳಿಗೆ ಸಂದರ್ಶನದ ಮೂಲಕ ನೇಮಕಾತಿಯನ್ನು ಮಾಡಿಕೊಳ್ಳಲಾಗುತ್ತಿದೆ. ಅಧಿಕೃತ ವೆಬ್ಸೈಟ್ www.konkanrailway.com

ECIL Recruitment: ತಾಂತ್ರಿಕ ಅಧಿಕಾರಿಗಳ ನೇಮಕ್ಕೆ ಅರ್ಜಿ ಆಹ್ವಾನ    

PREV
Read more Articles on
click me!

Recommended Stories

ಭಾರತದ ಹೊಸ 4 ಕಾರ್ಮಿಕ ಸಂಹಿತೆ ಜಾರಿಗೆ, ಕನಿಷ್ಠ ವೇತನ, 1 ವರ್ಷದದಲ್ಲಿ ಗ್ರಾಚ್ಯುಟಿ, 40 ಕೋಟಿ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ
ಹುಷಾರಿಲ್ಲ ಅಂದ್ರೆ MLA, MP ಕೂಡ ರಜೆ ತೆಗೆದ್ಕೊಳ್ಬೇಕಾ? ಹಿಂಗಿದೆ ರೂಲ್ಸ್