ECIL Recruitment: ತಾಂತ್ರಿಕ ಅಧಿಕಾರಿಗಳ ನೇಮಕ್ಕೆ ಅರ್ಜಿ ಆಹ್ವಾನ

By Suvarna News  |  First Published Nov 23, 2021, 12:54 PM IST

ಸಾರ್ವಜನಿಕ ವಲಯದ ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿ. ಕಂಪನಿಯು(ECIL) ಖಾಲಿ ಇರುವ ತಾಂತ್ರಿಕ ಅಧಿಕಾರಿಗಳ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿದೆ. ಅರ್ಹರು ಹಾಗೂ ಸೂಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ನವೆಂಬರ್ 26 ಕೊನೆಯ ದಿನವಾಗಿದೆ.


ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (Electronics Corporation of India Limited) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 9 ಟೆಕ್ನಿಕಲ್ ಆಫೀಸರ್(Technical Officer) ಹುದ್ದೆಗಳು ಖಾಲಿ ಇದ್ದು, ಬಿಇ, ಬಿ.ಟೆಕ್ ಪೂರ್ಣಗೊಳಿಸುವವರು ಅರ್ಜಿ ಸಲ್ಲಿಸಬಹುದಾಗಿದೆ. ನವೆಂಬರ್ 19 ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಆನ್ಲೈನ್(Online) ಮೂಲಕ ಮಾತ್ರವೇ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬೇಕು. ನವೆಂಬರ್ 26 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಉದ್ಯೋಗಾಂಕ್ಷಿಗಳು ಹೆಚ್ಚಿನ ಮಾಹಿತಿಗಾಗಿ ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ನ ಅಧಿಕೃತ ವೆಬ್ಸೈಟ್ www.ecil.co.in ಗೆ ಭೇಟಿ ನೀಡಬಹುದು. ಹುದ್ದೆಯ ವಿವರ , ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ಮಾಹಿತಿ ಪರಿಶೀಲಿಸಬಹುದು. ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ಟೆಕ್ನಿಕಲ್ ಆಫೀಸರ್ (Technical Officer) (ಕ್ಯಾಟಗರಿ-1): 08 ಹುದ್ದೆಗಳು ಹಾಗೂ ಟೆಕ್ನಿಕಲ್ ಆಫೀಸರ್ (Technical Officer) (ಕ್ಯಾಟಗರಿ-2): 01 ಹುದ್ದೆ ಸೇರಿ ಒಟ್ಟು 09 ಹುದ್ದೆಗಳನ್ನ ಭರ್ತಿ ಮಾಡಿಕೊಳ್ಳಲಾಗುವುದು.  ಅಧಿಸೂಚನೆ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

ಟೆಕ್ನಿಕಲ್ ಆಫೀಸರ್ (ಕ್ಯಾಟಗರಿ-1)  ಹುದ್ದೆಗೆ  ಅಭ್ಯರ್ಥಿಯು ಕಂಪ್ಯೂಟರ್ ವಿಜ್ಞಾನದಲ್ಲಿ ಪ್ರಥಮ ದರ್ಜೆ ಇಂಜಿನಿಯರಿಂಗ್ ಪದವಿ, ಅಥವಾ ಯಾವುದೇ ಮಾನ್ಯತೆ ಪಡೆದ ಸಂಸ್ಥೆ ಅಥವಾ ವಿಶ್ವವಿದ್ಯಾನಿಲಯದಿಂದ ಒಟ್ಟಾರೆಯಾಗಿ ಕನಿಷ್ಠ 60% ಅಂಕಗಳೊಂದಿಗೆ ಮಾಹಿತಿ ತಂತ್ರಜ್ಞಾನ, ಸಾಫ್ಟ್‌ವೇರ್ ಅಭಿವೃದ್ಧಿ ಕ್ಷೇತ್ರದಲ್ಲಿ ಕನಿಷ್ಠ ಒಂದು ವರ್ಷದ ನಂತರದ ಅರ್ಹತೆಯ ಅನುಭವ. ಟೆಕ್ನಿಕಲ್ ಆಫೀಸರ್ (ಕ್ಯಾಟಗರಿ-2)  ಹುದ್ದೆಗೆ  ಕಂಪ್ಯೂಟರ್ ಸೈನ್ಸ್ ಅಥವಾ ಎಲೆಕ್ಟ್ರಾನಿಕ್ಸ್‌ನಲ್ಲಿ ಪದವಿ ಪಡೆದಿರಬೇಕು.  ಎಂಜಿನಿಯರಿಂಗ್ ಪದವಿ ಮತ್ತು ಸಂವಹನದಲ್ಲಿ ಕನಿಷ್ಠ 60% ಅಂಕಗಳೊಂದಿಗೆ ಯಾವುದೇ ಮಾನ್ಯತೆ ಪಡೆದ ಸಂಸ್ಥೆ ಅಥವಾ ವಿಶ್ವವಿದ್ಯಾನಿಲಯದಿಂದ ಎಂಬೆಡೆಡ್ ಫರ್ಮ್‌ವೇರ್ ಅಭಿವೃದ್ಧಿ, ವಿನ್ಯಾಸ ಮತ್ತು ಮುಂಭಾಗದ ಅಪ್ಲಿಕೇಶನ್‌ಗಳ ಅಭಿವೃದ್ಧಿ ಕ್ಷೇತ್ರದಲ್ಲಿ ಪರಿಣತಿ C, C++, IBM ಹೊಂದಿರಬೇಕು. ಕನಿಷ್ಠ ಒಂದು ವರ್ಷದ ನಂತರದ ಅರ್ಹತೆಯ ಅನುಭವ ಇರಬೇಕು. 

Tap to resize

Latest Videos

undefined

ಟೆಕ್ನಿಕಲ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಬೋರ್ಡ್ನಿಂದ ಎಂಜಿನಿಯರಿಂಗ್ ಪದವಿ ಪಡೆದಿರಬೇಕು. ಟೆಕ್ನಿಕಲ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 30 ವರ್ಷ ಮೀರಿರಬಾರದು.  

Teachers Recruitment: Central Railwayನಲ್ಲಿ ಅರ್ಜಿ ಆಹ್ವಾನ, ನೇರ ಸಂದರ್ಶನ

ಟೆಕ್ನಿಕಲ್ ಆಫೀಸರ್ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ತೆಲಂಗಾಣದ ಹೈದಾರಾಬಾದ್ನಲ್ಲಿ ಉದ್ಯೋಗ ನೀಡಲಾಗುತ್ತದೆ. ಟೆಕ್ನಿಕಲ್ ಆಫೀಸರ್ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ₹ 23,000 ವೇತನ ನೀಡಲಾಗುತ್ತದೆ. ಅಭ್ಯರ್ಥಿಗಳ ದಾಖಲಾತಿ ಪರಿಶೀಲನೆ ನಡೆಸಿ, ಬಳಿಕ ವೈಯಕ್ತಿಕ ಸಂದರ್ಶನಕ್ಕೆ ಕರೆಯಲಾಗುವುದು. ಆನಂತರ ಹೈದ್ರಾಬಾದ್ ಶಾಖೆಯಲ್ಲಿ ಕೆಲಸಕ್ಕೆ ನಿಯೋಜಿಸಲಾಗುತ್ತದೆ.

ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿ. ಕಂಪನಿಯು ಕೇಂದ್ರ ಅಣು ಶಕ್ತಿ ಇಲಾಖೆಯಡಿ ಕಾರ್ಯನಿರ್ವಹಿಸುತ್ತದೆ. 1967ರ ಏಪ್ರಿಲ್ 11ರಂದು ಈ ಸಂಸ್ಥೆಯನ್ನು ಎ ಎಸ್ ರಾವ್ ಅವರು ಹೈದ್ರಾಬಾದ್‌ನಲ್ಲಿ ಆರಂಭಿಸಿದರು. ಎಲೆಕ್ಟ್ರಾನಿಕ್ಸ್ ವಲಯದಲ್ಲಿ ದೇಶೀಯತೆಯನ್ನು ಹೆಚ್ಚಿಸುವುದಕ್ಕಾಗಿ ಅವರು ಈ ಸಂಸ್ಥೆಯನ್ನು ಆರಂಭಿಸಿದರು. ಇಸಿಐಎಲ್ ಮಲ್ಟಿ ಪ್ರಾಡಕ್ಟ್, ಮಲ್ಟಿ ವಿಭಾಗಗಳನ್ನು ಹೊಂದಿರುವ  ಸಂಸ್ಥೆಯಾಗಿದ್ದು, ಅಣು ಶಕ್ತಿ, ಬಾಹ್ಯಾಕಾಶ, ರಕ್ಷಣೆ ವಲಯಗಳ ಮೇಲೆ ಹೆಚ್ಚು ತನ್ನ ಗಮನವನ್ನ ಕೇಂದ್ರೀಕರಿಸಿದೆ. ದೇಶೀಯವಾಗಿ ಎಲೆಕ್ರಾನಿಕ್ಸ್ ಸೆಕ್ಯುರಿಟಿ, ಕಮ್ಯುನಿಕೇಷನ್ಸ್, ನೆಟ್‌ವರ್ಕಿಂಗ್ ಮತ್ತು ಇ ಗವರ್ನನ್ಸ್‌ನಲ್ಲೂ ತನ್ನ ಛಾಪು ಹೊಂದಿದೆ. ಹೈದ್ರಾಬಾದ್‌ನಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಈ ಸಂಸ್ಥೆ ಸಾಕಷ್ಟು ಕೊಡುಗೆಯನ್ನು ನೀಡಿದೆ.

Recruitment: ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 115 ಸ್ಪೆಷಲಿಸ್ಟ್ ಅಧಿಕಾರಿಗಳ ನೇಮಕಾತಿ ಶುರು

click me!