ಕೇಂದ್ರ ಸರ್ಕಾರಕ್ಕೆ ಪಂಗನಾಮ: ನಕಲಿ ಅಂಕಪಟ್ಟಿ ಕೊಟ್ಟು ಪೋಸ್ಟ್ ಆಫೀಸ್ ನೌಕರಿ ಪಡೆದ ಕಿರಾತಕರು!

By Sathish Kumar KH  |  First Published Jan 11, 2024, 11:04 PM IST

ಉತ್ತರ ಕರ್ನಾಟಕದ 14 ಮಂದಿ ಕಿರಾತಕರು ಕೇಂದ್ರ ಸರ್ಕಾರದ ನೌಕರಿಯನ್ನು ಪಡೆಯಲು ನಕಲಿ ಅಂಕಪಟ್ಟಿಯನ್ನು ಸಲ್ಲಿಸಿ ಅಂಚೆ ಇಲಾಖೆಯಲ್ಲಿ ನೌಕರಿ ಪಡೆದಿದ್ದಾರೆ.


ಉತ್ತರಕನ್ನಡ (ಜ.11): ಕಷ್ಟಪಟ್ಟು ಓದಿ ಅಂಕ ಗಳಿಸಿದವರಿಗೆ ನೌಕರಿ ಸಿಗುವುದು ಕಷ್ಟವಾಗಿರುವ ಕಾಲದಲ್ಲಿ, ಉತ್ತರ ಕರ್ನಾಟಕದ 14 ಮಂದಿ ಕಿರಾತಕರು ನಕಲಿ ಅಂಕಪಟ್ಟಿಯನ್ನು ಕೊಟ್ಟು ಕೇಂದ್ರ ಸರ್ಕಾರದ ನೌಕರಿಯನ್ನು ಗಿಟ್ಟಿಸಿಕೊಂಡಿದ್ದಾರೆ. ಇನ್ನು ಅಂಕಪಟ್ಟಿ ನೈಜತೆ ಪರಿಶೀಲನೆ ವೇಳೆ ಎಲ್ಲರೂ ಸಿಕ್ಕಿಬಿದ್ದು ಜೈಲು ಕಂಬಿಯ ಹಿಂದೆ ಬೀಳಲಿದ್ದಾರೆ.

ಜನ ಸಾಮಾನ್ಯರು ಸರ್ಕಾರದ ನೌಕರಿಯನ್ನು ಪಡೆಯುವುದಕ್ಕೂ ಪುಣ್ಯ ಮಾಡಿರಬೇಕು ಎಂದು ಹೇಳುತ್ತಾರೆ. ಆದರೆ, ಈ ಪ್ರಕರಣದಲ್ಲಿ 14 ಮಂದಿ ಪಾಪದ ಕೆಲಸ ಮಾಡಿ ಕೇಂದ್ರ ಸರ್ಕಾರದ ಅಂಚೆ ಇಲಾಖೆಯಲ್ಲಿ ನೌಕರಿ ಗಿಟ್ಟಿಸಿಕೊಂಡಿದ್ದಾರೆ. ವಿಜಯಪುರ, ಬೆಳಗಾವಿ, ಕಲಬುರಗಿ, ಬಾಗಲಕೋಟೆ ಮತ್ತು ಯಾದಗಿರಿ ಜಿಲ್ಲೆಯ ಹದಿನಾಲ್ಕು ಜನರು ನಕಲಿ ಅಂಕಪಟ್ಟಿಯನ್ನು ಸರ್ಕಾರಕ್ಕೆ ಕೊಟ್ಟು ನೌಕರಿ ಗಿಟ್ಟಿಸಿಕೊಂಡು ಮಹಾ ವಂಚನೆ ಮಾಡಿದ್ದಾರೆ. ಈಗ ಸರ್ಕಾರದಿಂದ ಸಂಬಳವನ್ನೂ ಪಡೆದಿದ್ದು, ಇದನ್ನು ವಸೂಲಿ ಮಾಡಲಾಗುತ್ತದೆಯೇ ಅಥವಾ ಶಿಕ್ಷೆ ನೀಡುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ. ಆದರೆ, ಈಗಾಗಲೇ ಎಲ್ಲರನ್ನೂ ಕೆಲಸದಿಂದ ವಜಾ ಮಾಡಲಾಗಿದ್ದು, ಶಿರಸಿ ಮಾರುಕಟ್ಟೆ ಪೊಲೀಸ್‌ ಠಾಣೆಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

Tap to resize

Latest Videos

undefined

ಹಾವೇರಿಯಲ್ಲಿ ನಡೆದಿದ್ದು ನೈತಿಕ ಪೊಲೀಸ್‌ಗಿರಿಯಲ್ಲ, ಸಾಮೂಹಿಕ ಅತ್ಯಾಚಾರ; ಇಲ್ಲಿದ್ದಾರೆ ನೋಡಿ ಗ್ಯಾಂಗ್ ರೇಪಿಸ್ಟ್‌?

ನಕಲಿ ಅಂಕಪಟ್ಟಿ ಸೃಷ್ಠಿಸಿ ಹುದ್ದೆ ಪಡೆದು ವಂಚನೆ ಮಾಡಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಶಿರಸಿಯಲ್ಲಿ ನಡೆದಿದೆ. ಶಿರಸಿಯ ಅಂಚೆ ಕಚೇರಿಯಲ್ಲಿ ಗ್ರಾಮೀಣ ಅಂಚೆ ಸೇವಕರಾಗಿ 14 ಜನರು ಹುದ್ದೆ ಪಡೆದಿದ್ದಾರೆ. 2023ರಲ್ಲಿ ನಡೆದ ನೇಮಕಾತಿ ಪ್ರಕ್ರಿಯೆಯಲ್ಲಿ 14 ಮಂದಿ ಆಯ್ಕೆಯಾಗಿದ್ದರು. ಮಾರ್ಚ್ 2023ರಲ್ಲಿ ನಕಲಿ ಅಂಕಪಟ್ಟಿ ಸಲ್ಲಿಸಿ ಹುದ್ದೆ ಪಡೆದಿದ್ದರು. ಅಂಕಪಟ್ಟಿಯ ಸತ್ಯಾಸತ್ಯತೆ ಪರಿಶೀಲಿಸಿದಾಗ ವಂಚನೆ ಬಯಲಾಗಿದೆ. ಈ ಕುರಿತು ಅಂಚೆ ಇಲಾಖೆಯ ಅಂಚೆ ನಿರೀಕ್ಷಕರಿಂದ ಶಿರಸಿ ಮಾರುಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ನಕಲಿ ಅಂಕಪಟ್ಟಿ ಸೃಷ್ಠಿಸಿ ವಂಚನೆ ಮಾಡಿದವರು
1) ಮೋಹನ ರುಕ್ಯಾ ನಾಯಕ್ (24) ಸಾ|| ಕಮಲ ನಗರ, ಉಡಾಪುರ, ಗುರುಮಿಟಿಲ್, ಯಾದಗಿರಿ
2) ಹನುಮಂತ ಭೀಮಪ್ಪ ಮದಿಹಳ್ಳಿ, (21) ಸಾ|| #45 ಕುರುಬರ ದ ಗೋಕಾಕ ಬೆಳಗಾವಿ 
3) ವಿಠಲ ಬಸಪ್ಪ ಹೊಸೂರ, ಪ್ರಾಯ: (31), ಸಾ|| ಬಸಪ್ಪ, ಹೊಸೂರ, ಮುಘಲಕೋಡ್ ರಾಯಭಾಗ ಬೆಳಗಾವಿ 591235 
4) ದುಂಡಪ್ಪ ರಾಮಪ್ಪ ಆಶಿರೋಟಿ, (23) ಸಾ|| ರಾಮಪ್ಪಾ ಆಶಿರೋಟಿ, ಮಸಗುಪ್ಪಿ ಗೋಕಾಕ- 591312
5) ಶರಣ್ ಕುಮಾರ್ ಮೋತಿಲಾಲ್ (26) ಸಾ|| 2-117/A, ಚಂದು ನಾಯಕ ತಾಂಡ, ಚಂದಾಪುರ, ಕಲಬುರಗಿ – 585318 
6) ಸುರೇಶ ಶಿವಪ್ಪ, ಕುಡಗಿ (28) ಸಾ|| ಗೌರಿ ಗುಂಡಿ ಓಣಿ, ನಿಡಗುಂದಿ, ಬಸವನಬಾಗೇವಾಡಿ ವಿಜಯಪುರ - 586213 
7) ಅಮೃತಾ ಅರವಿಂದಬಾಬು ನಾಯಕ (25) ಸಾ|| #239/58, ವಾರ್ಡ್ ನ.10, 5 ಕ್ರಾಸ್, ಪಿ ಎಮ್, ನಾಡಗೌಡ ಬಡಾವಣೆ, ವಿನಾಯಕನಗರ ಬಾಗಲಕೋಟ - 587101 
8) ಸಚಿನ ಮಾರುತಿ ಭಜಂತ್ರಿ, (27) ಸಾ|| ಭಜಂತ್ರಿ ಓಣಿ, ನಿಡಗುಂದಿ, ಬಸವನಬಾಗೇವಾಡಿ ವಿಜಯಪುರ - 586213 
9) ಮಮಿತಾ ಬಾಬು ರಾಥೋಡ್, (29) ಸಾ|| ಅಂಕ, ವಿಜಯಪುರ 
10) ಸತೀಶ ಮೋತಿಲಾಲ್ ಪವಾರ (31)  ಸಾ|| ನಿಡಗುಂದಿ, ಬಸವನಬಾಗೇವಾಡಿ ವಿಜಯಪುರ 
11) ಆಕಾಶ್ ಶ್ರೀನಿವಾಸ ಭಜಂತ್ರಿ, (26) ಸಾ|| ವಡವಡಗಿ, ಬಸವನಬಾಗೇವಾಡಿ ವಿಜಯಪುರ 
12) ಮೋಹನ್ ನಾಮದೇವ ಚವಾಣ್, (31) ಸಾ|| ಅಂಕಲಗಿ, ವಿಜಯಪುರ 
13) ದಿಲೀಪ್ ಧನಸಿಂಗ್ ಪವಾರ, (28) ಸಾ|| ತಿಕೋಟಾ, ವಿಜಯಪುರ 
14) ರವಿ ಮಹಾದೇವಪ್ಪ ದಡ್ಡಿ, (26) ಸಾ|| ಕಲಿಗುಡಿ ಗೋಕಾಕ ಬೆಳಗಾವಿ

ರಾಮ ಮಂದಿರ ಭಾರತದ ಹೃದಯವಾದರೆ, ಶ್ರೀರಾಮ ಆತ್ಮವಾಗಿದ್ದಾರೆ; ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ

click me!