ಇತಿಹಾಸದಲ್ಲೇ ಮೊದಲ ಬಾರಿಗೆ ನೌಕಾ ಪಡೆಯಲ್ಲಿ ಮಹಿಳಾ ಕಮಾಂಡೋಗಳಿಗೆ ಅವಕಾಶ ನೀಡಲಾಗುತ್ತಿದೆ. ಸದ್ಯ ಮೂರೂ ಪಡೆಗಳಲ್ಲೂ ಮಹಿಳಾ ಕಮಾಂಡೋಗಳು ಇಲ್ಲ. ಆದರೀಗ, ನೌಕಾಪಡೆಯ ಎಲ್ಲ ಹುದ್ದೆಗಳಿಗೂ ಮಹಿಳೆಯರ ಪ್ರವೇಶವಾದಂತಾಗಿದೆ.
ನವದೆಹಲಿ: ಭಾರತೀಯ ಸೇನಾ ಪಡೆಗಳಲ್ಲಿ (Indian Armed Forces) ಪುರುಷರ ಪ್ರಾಬಲ್ಯ ಇರುವ ಕಮಾಂಡೋ (Commando) ಹುದ್ದೆಗಳಿಗೆ ಸದ್ಯದಲ್ಲೇ ಮಹಿಳೆಯರೂ ಲಗ್ಗೆ ಇಡಲಿದ್ದಾರೆ. ಭೂಸೇನೆ (Army), ವಾಯುಸೇನೆ (Air Force) ಹಾಗೂ ನೌಕಾಸೇನೆಯ (Navy) ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅತ್ಯುನ್ನತ ವಿಶೇಷ ಪಡೆಗಳಿಗೆ (Special Forces) ಮಹಿಳೆಯರನ್ನು (Women) ಸೇರ್ಪಡೆ ಮಾಡಿಕೊಳ್ಳಲು ನೌಕಾ ಪಡೆ ನಿರ್ಧಾರ ಕೈಗೊಂಡಿದೆ. ಇದರಿಂದಾಗಿ ಮಹಿಳೆಯರೂ ಕಮಾಂಡೋಗಳಾಗಬಹುದಾಗಿದೆ. ಭೂಸೇನೆ, ನೌಕಾಸೇನೆ ಹಾಗೂ ವಾಯುಸೇನೆಯಲ್ಲಿ ವಿಶೇಷ ಪಡೆಗಳು ಇವೆ. ಬಲಿಷ್ಠ ಯೋಧರನ್ನು ಆಯ್ಕೆ ಮಾಡಿ, ಅವರಿಗೆ ಅತ್ಯಂತ ಕಠಿಣ ತರಬೇತಿ ನೀಡಿ, ನಿರ್ಬಂಧಿತ ಪ್ರದೇಶಗಳಲ್ಲಿ ಕ್ಷಿಪ್ರ ಹಾಗೂ ರಹಸ್ಯವಾಗಿ ಕಾರ್ಯಾಚರಣೆ ನಡೆಸುವಂತೆ ಮಾಡಲಾಗುತ್ತದೆ. ಇದುವರೆಗೂ ಪುರುಷರಿಗೆ (Men) ಮಾತ್ರವೇ ಈ ಪಡೆ ಸೇರ್ಪಡೆ ಅವಕಾಶವಿತ್ತು.
ಇದೀಗ ಈ ಅರ್ಹತೆ ಹೊಂದಿರುವ ಮಹಿಳೆಯರನ್ನೂ ಮರೈನ್ ಕಮಾಂಡೋ (ಮಾರ್ಕೋಸ್) (MARCOS) ಗಳಾಗಿ ಸೇರ್ಪಡೆ ಮಾಡಿಕೊಳ್ಳಲು ನೌಕಾಪಡೆ ನಿರ್ಧರಿಸಿದೆ. ಇದು ಭಾರತೀಯ ಮಿಲಿಟರಿ ಇತಿಹಾಸದಲ್ಲೇ ಅಪರೂಪದ ಕ್ಷಣ ಎಂದು ನೌಕಾಪಡೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ. ಆದರೆ ವಿಶೇಷ ಪಡೆಗಳಿಗೆ ಮಹಿಳೆಯರನ್ನು ನಿಯೋಜಿಸುವುದಿಲ್ಲ. ಸ್ವಯಂಪ್ರೇರಿತರಾಗಿ ಮುಂದೆ ಬರಬೇಕಾಗುತ್ತದೆ ಎಂದಿದ್ದಾರೆ.
undefined
ಇದನ್ನು ಓದಿ: Indian Navy MR Recruitment 2022: ಭಾರತೀಯ ನೌಕಾಪಡೆಯಲ್ಲಿ ಅಗ್ನಿವೀರರು ನೇಮಕಾತಿ
ಮತ್ತೊಬ್ಬ ಅಧಿಕಾರಿ ಕೂಡ ಇದನ್ನು ದೃಢಪಡಿಸಿದ್ದು, ಸ್ವಯಂಪ್ರೇರಿತವಾಗಿ ಮಾರ್ಕೋಸ್‌ಗಳಾಗಲು ಬಯಸುವ ಆಯ್ಕೆ ಇನ್ನು ಮಹಿಳಾ ಅಧಿಕಾರಿಗಳು, ಅಗ್ನಿವೀರರಿಗೂ ಇರುತ್ತದೆ ಎಂದಿದ್ದಾರೆ. ಇದರೊಂದಿಗೆ ನೌಕಾಪಡೆಯ ಎಲ್ಲ ವಿಭಾಗಗಳೂ ಮಹಿಳೆಯರಿಗೆ ಮುಕ್ತವಾದಂತೆ ಆಗಿದೆ.
ಕಮಾಂಡೋ ಕೆಲಸ ಏನು..?
ಭೂಮಿ, ಸಮುದ್ರ ಹಾಗೂ ಆಕಾಶದಲ್ಲಿ ಕಾರ್ಯಾಚರಣೆ ನಡೆಸುವ ರೀತಿ ಮಾರ್ಕೋಸ್‌ಗಳನ್ನು ಸನ್ನದ್ಧಗೊಳಿಸಲಾಗುತ್ತದೆ. ಶತ್ರುಪಡೆಗಳ ಯುದ್ಧ ನೌಕೆ, ಸಾಗರೋತ್ತರ ಘಟಕಗಳು ಹಾಗೂ ಪ್ರಮುಖ ಆಸ್ತಿಗಳ ಮೇಲೆ ರಹಸ್ಯ ದಾಳಿಯನ್ನು ನಡೆಸುವ ಸಾಮರ್ಥ್ಯ ಹೊಂದಿರಬೇಕಾಗುತ್ತದೆ. ನೌಕಾಪಡೆ ಕಾರ್ಯಾಚರಣೆಯ ಅವಶ್ಯಕತೆಗಳಿಗಾಗಿ ವಿಶೇಷ ಡೈವಿಂಗ್ ಕಾರ್ಯಾಚರಣೆ, ವೀಕ್ಷಣೆ, ಸರ್ವೇಕ್ಷಣೆ ನಡೆಸಬೇಕಾಗುತ್ತದೆ. ಇಂತಹ ಕಮಾಂಡೋಗಳನ್ನು ಉಗ್ರಗಾಮಿಗಳ ವಿರುದ್ಧದ ಕಾರ್ಯಾಚರಣೆಗೂ ಬಳಸಿಕೊಳ್ಳಲಾಗುತ್ತದೆ.
ಇದನ್ನೂ ಓದಿ: Indian Navy ಯೋಧರ ಭೇಟಿ ಮಾಡಿದ ಚಿರಂಜೀವಿ: ಎನ್‌ಸಿಸಿ ದಿನಗಳ ಮೆಲುಕು ಹಾಕಿದ ಮೆಗಾ ಸ್ಟಾರ್
ಮಾರ್ಕೋಸ್ ಏನು ಮಾಡುತ್ತಾರೆ..?
ಸಮುದ್ರ, ಗಾಳಿ ಮತ್ತು ಭೂಮಿಯಲ್ಲಿ ತೀವ್ರವಾದ ಕಾರ್ಯಾಚರಣೆಗಳನ್ನು ಕೈಗೊಳ್ಳಲು ಮಾರ್ಕೋಸ್ ತರಬೇತಿ ಪಡೆದಿದ್ದಾರೆ. ಅವರು ಶತ್ರು ಯುದ್ಧನೌಕೆಗಳ ವಿರುದ್ಧ ರಹಸ್ಯ ದಾಳಿಗಳನ್ನು ನಡೆಸಲು ಸಮರ್ಥರಾಗಿದ್ದಾರೆ, ವಿಶೇಷ ಡೈವಿಂಗ್ ಕಾರ್ಯಾಚರಣೆಗಳು, ಕಣ್ಗಾವಲು ಮತ್ತು ವಿಚಕ್ಷಣ ಕಾರ್ಯಾಚರಣೆಗಳು, ಕಡಲಾಚೆಯ ಮತ್ತು ಇತರ ಪ್ರಮುಖ ಆಸ್ತಿಗಳ ಸ್ಥಾಪನೆಗಳು ಮತ್ತು ನೌಕಾ ಕಾರ್ಯಾಚರಣೆಗಳನ್ನು ಬೆಂಬಲಿಸುತ್ತದೆ.
ಮಾರ್ಕೋಸ್ ಅತ್ಯಂತ ರಹಸ್ಯವಾಗಿ ಕಾರ್ಯನಿರ್ವಹಿಸುತ್ತಾರೆ ಮತ್ತು ಕಡಲ ಪರಿಸರದಲ್ಲಿ ಭಯೋತ್ಪಾದಕರ ವಿರುದ್ಧ ಹೋರಾಡಲು ಸಮರ್ಥರಾಗಿದ್ದಾರೆ. ಕಾಶ್ಮೀರದ ವುಲಾರ್ ಸರೋವರ ಪ್ರದೇಶದಲ್ಲಿ ಭಯೋತ್ಪಾದನಾ ನಿಗ್ರಹ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಅವರನ್ನು ನಿಯೋಜಿಸಲಾಗಿದೆ.
ಇದನ್ನೂ ಓದಿ: Karwar Warship Museum: ವಾರ್‌ಶಿಪ್ ಮ್ಯೂಸಿಯಂ ನಿರ್ವಹಣೆಯಲ್ಲಿ ನಿರ್ಲಕ್ಷ್ಯ, ಪ್ರವಾಸಿಗರ ಬೇಸರ
ಮಾರ್ಕೋಸ್ 1991 ರಲ್ಲಿ ತಮಿಳುನಾಡು ಕರಾವಳಿಯಲ್ಲಿ ಆಪರೇಷನ್ ತಾಶಾದ ಭಾಗವಾಗಿದ್ದರು, ಅಲ್ಲಿ ಅವರು ಶ್ರೀಲಂಕಾ ಮತ್ತು ಭಾರತದ ನಡುವೆ ಎಲ್‌ಟಿಟಿಇ ಉಗ್ರಗಾಮಿಗಳ ಚಲನೆಯನ್ನು ನಿರ್ಬಂಧಿಸಿದರು ಮತ್ತು ಶಸ್ತ್ರಾಸ್ತ್ರಗಳ ಕಳ್ಳಸಾಗಣೆಯನ್ನು ನಿಲ್ಲಿಸಿದರು. 1999 ರ ಕಾರ್ಗಿಲ್ ಯುದ್ಧದ ಸಮಯದಲ್ಲಿ, ರಹಸ್ಯ ಕಾರ್ಯಾಚರಣೆಗಳನ್ನು ನಡೆಸಲು ಮಾರ್ಕೋಸ್ ಭಾರತೀಯ ಸೇನೆಗೆ ಇವರು ಸಹಾಯ ಮಾಡಿದರು. 2015 ರಲ್ಲಿ ಯೆಮೆನ್‌ನಲ್ಲಿ ನಡೆದ ಆಪರೇಷನ್ ರಾಹತ್ ಸಮಯದಲ್ಲಿ, ಅವರು ಅಂತರ್ಯುದ್ಧದಲ್ಲಿ ಸಿಲುಕಿದ ಸಾವಿರಾರು ಭಾರತೀಯರು ಮತ್ತು ವಿದೇಶಿ ಪ್ರಜೆಗಳನ್ನು ಯಶಸ್ವಿಯಾಗಿ ಸ್ಥಳಾಂತರಿಸಿದರು.