ದೇಶ ಸೇವೆಗೆ ಯುವಕರ ಕಾತುರ ಹೆಮ್ಮೆ ವಿಷಯ: ಕೇಂದ್ರ ಸಚಿವ ಖೂಬಾ

By Kannadaprabha NewsFirst Published Dec 11, 2022, 12:30 AM IST
Highlights

ಭಾರತೀಯ ಸೇನೆಯ ನಿಯಮದಂತೆ ಆಯ್ಕೆ ನಡೆಯುತ್ತಿದೆ. ಯುವಕರು ತಮ್ಮ ಶಕ್ತಿ ಮತ್ತು ಸಾಮರ್ಥ್ಯವನ್ನು ಇದರಲ್ಲಿ ತೋರಿಸಿ ಆಯ್ಕೆಯಾಗಬೇಕು. ತಮಗೆಲ್ಲರಿಗೂ ಒಳ್ಳೆಯದಾಗಲಿ ಎಂದು ರಾರ‍ಯಲಿಯಲ್ಲಿ ಭಾಗವಸಿದ್ದ ಎಲ್ಲಾ ಅಭ್ಯರ್ಥಿಗಳಿಗೆ ಶುಭ ಹಾರೈಸಿದ ಕೇಂದ್ರ ಸಚಿವ ಖೂಬಾ

ಬೀದರ್‌(ಡಿ.11):  ದೇಶ ಸೇವೆಗಾಗಿ ಸೇನೆ ಸೇರುವ ತವಕ ಯುವಜನಾಂಗದಲ್ಲಿ ತುಂಬಿ ತುಳುಕುತ್ತಿರುವದು ನಮಗೆಲ್ಲ ಹೆಮ್ಮೆ ಹಾಗೂ ಸಂತಸ ಮೂಡಿಸುತ್ತದೆ ಎಂದು ಕೇಂದ್ರ ನೂತನ ನವೀಕರಿಸಬಹುದಾದ ಇಂಧನ ಮೂಲ ಹಾಗೂ ರಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವರಾದ ಭಗವಂತ ಖೂಬಾ ಹೇಳಿದರು.

ಶನಿವಾರ ಬೆಳಗ್ಗೆ ಅಗ್ನಿವೀರ ಯೋಜನೆಯಡಿ ಜಿಲ್ಲಾ ನೆಹರು ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತೀಯ ಸೇನಾ ನೇಮಕಾತಿ ರಾರ‍ಯಲಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಾರತ ಸರ್ಕಾರದ ರಕ್ಷಣಾ ಇಲಾಖೆ ಅಗ್ನಿವೀರ ಯೋಜನೆಯಡಿ ಈ ಸೇನಾ ನೇಮಕಾತಿ ರಾರ‍ಯಲಿ ನಮ್ಮ ಭಾಗದಲ್ಲಿ ನಡೆಸುತ್ತಿದೆ. ಇದರಲ್ಲಿ 70 ಸಾವಿರಕ್ಕೂ ಹೆಚ್ಚಿನ ಅಭ್ಯರ್ಥಿಗಳು ಭಾಗವಹಿಸಿರುವುದು ಸಂತಸದ ವಿಷÜಯವಾಗಿದೆ. ಕಳೆದ ಒಂದು ವಾರದಿಂದ ಈ ರಾರ‍ಯಲಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿದೆ ಎಂದರು.

INDIAN NAVY MR RECRUITMENT 2022: ಭಾರತೀಯ ನೌಕಾಪಡೆಯಲ್ಲಿ ಅಗ್ನಿವೀರರು ನೇಮಕಾತಿ

ಭಾರತೀಯ ಸೇನೆಯ ನಿಯಮದಂತೆ ಆಯ್ಕೆ ನಡೆಯುತ್ತಿದೆ. ಯುವಕರು ತಮ್ಮ ಶಕ್ತಿ ಮತ್ತು ಸಾಮರ್ಥ್ಯವನ್ನು ಇದರಲ್ಲಿ ತೋರಿಸಿ ಆಯ್ಕೆಯಾಗಬೇಕು. ತಮಗೆಲ್ಲರಿಗೂ ಒಳ್ಳೆಯದಾಗಲಿ ಎಂದು ರಾರ‍ಯಲಿಯಲ್ಲಿ ಭಾಗವಸಿದ್ದ ಎಲ್ಲಾ ಅಭ್ಯರ್ಥಿಗಳಿಗೆ ಶುಭ ಹಾರೈಸಿದರು.

ಬ್ರಿಗೇಡಿಯರ್‌ ಎ.ಎಸ್‌ ವಾಲಿಂಬೆ, ಡಿಡಿಜಿ. ರಿಕ್ರ್ಯೂಟಿಂಗ್‌ ಝಡ್‌ಆರ್‌ಓ ಬೆಂಗಳೂರು ಇವರು ಕೇಂದ್ರ ಸಚಿವರಾದ ಭಗವಂತ ಖೂಬಾ ಅವರಿಗೆ ಸೇನಾ ನೇಮಕಾತಿ ಕುರಿತು ಮಾಹಿತಿ ನೀಡಿದರು. ಸಚಿವರು ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವಿವಿಧ ಹಂತಗಳ ಆಯ್ಕೆಯ ಸ್ಥಳಗಳಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.

ಈ ಸಂದರ್ಭದಲ್ಲಿ ಕರ್ನಲ್‌ ನಿಶಾಂತ ಡಿಐಆರ್‌ ಆರ್‌ಟಿಜಿ ಬೆಳಗಾವಿ, ಕರ್ನಲ್‌ ರವಿಕಾಂತ ಕಮಾಂಡಿಂಗ್‌ ಆಫೀಸರ್‌ 16 ಬಿಹಾರ, ಬೀದರ್‌ ತಹಸೀಲ್ದಾರ್‌ ಅಣ್ಣಾರಾವ್‌ ಪಾಟೀಲ್‌, ಮುಖ್ಯ ಪಶು ವೈದ್ಯಾಧಿಕಾರಿ ಗೌತಮ ಅರಳಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
 

click me!