Indian Air Force recruitment 2022: ವಾಯುಸೇನೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟ

By Suvarna News  |  First Published Dec 19, 2021, 11:25 AM IST
  • ಭಾರತೀಯ ವಾಯುಸೇನೆ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಿದೆ
  • ಗ್ರೂಪ್ ಸಿ ಸಿವಿಲಿಯನ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಸಕ್ತರನ್ನು ಆಹ್ವಾನಿಸಿದೆ
  • 5 ಅಡುಗೆಯವರ ಹುದ್ದೆಗಳನ್ನು ಕೂಡ ಭರ್ತಿ ಮಾಡಿಕೊಳ್ಳಲಾಗುತ್ತಿದೆ
     

ಬೆಂಗಳೂರು(ಡಿ.19): ಭಾರತೀಯ ವಾಯುಸೇನೆ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ. ವಾಯುಪಡೆಯು ಗ್ರೂಪ್ ಸಿ ಸಿವಿಲಿಯನ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಉದ್ಯೋಗ ಸುದ್ದಿಯಲ್ಲಿ ಜಾಹೀರಾತು ಪ್ರಕಟವಾದ ದಿನಾಂಕದಿಂದ 30 ದಿನಗಳ ಒಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ. ಅರ್ಹ ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು ಸಂಬಂಧಪಟ್ಟ ಕೇಂದ್ರಗಳು/ ಘಟಕಗಳಿಗೆ ಕಳುಹಿಸುವ ಮೂಲಕ ಆಯಾಯ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿಯಲ್ಲಿ ವಾಯುಪಡೆಯಲ್ಲಿ 5 ಬಾಣಸಿಗರ (ಅಡುಗೆ) ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಉದ್ಯೋಗ ಸುದ್ದಿ (http://employmentnews.gov.in/NewEmp/Home.aspx) ಅಥವಾ ರೋಜ್‌ಗಾರ್ ಸಮಾಚಾರ್(http://rojgarsamachar.gov.in/) ನಲ್ಲಿ ಜಾಹೀರಾತು ಪ್ರಕಟವಾದ ದಿನಾಂಕದಿಂದ 30 ದಿನಗಳೊಳಗೆ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಕೋರಲಾಗಿದೆ.

ಅರ್ಹತೆ ಮತ್ತು ವಯೋಮಿತಿ: ಗ್ರೂಪ್ C ಸಿವಿಲಿಯನ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ ಮೆಟ್ರಿಕ್ಯುಲೇಷನ್‌ನಲ್ಲಿ ಪ್ರಮಾಣಪತ್ರ ಅಥವಾ ಕ್ಯಾಟರಿಂಗ್‌ನಲ್ಲಿ ಡಿಪ್ಲೊಮಾವನ್ನು ಪಡೆದಿರಬೇಕು. ವ್ಯಾಪಾರದಲ್ಲಿ 1 ವರ್ಷದ ಅನುಭವವಿರಬೇಕು. ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವವರು  18 ರಿಂದ 25 ವರ್ಷದೊಳಗಿನವರಾಗಿರಬೇಕು. 

Latest Videos

undefined

ಆಯ್ಕೆ ಪ್ರಕ್ರಿಯೆ: ಸ್ವೀಕೃತವಾದ ಅರ್ಜಿಗಳನ್ನು  ಮೊದಲು ವಯಸ್ಸಿನ ಮಿತಿ, ಕನಿಷ್ಠ ವಿದ್ಯಾರ್ಹತೆ, ದಾಖಲೆಗಳು ಮತ್ತು ಪ್ರಮಾಣಪತ್ರಗಳ ಆಧಾರದಲ್ಲಿ ಪರಿಶೀಲನೆ ಮಾಡಿ ಶಾರ್ಟ್ ಲಿಸ್ಟ್ ಮಾಡಲಾಗುತ್ತದೆ. ಬಳಿಕ ಆಯ್ಕೆಯಾದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆಗೆ ಹಾಜರಾಗಲು ಅವಕಾಶ ನೀಡಲಾಗುತ್ತದೆ. ಲಿಖಿತ ಪರೀಕ್ಷೆಯು ಜನರಲ್ ಇಂಟಲಿಜೆನ್ಸ್- ರೀಸನಿಂಗ್, ನ್ಯೂಮರಿಕಲ್ ಆಪ್ಟಿಟ್ಯೂಡ್, ಜನರಲ್ ಇಂಗ್ಲಿಷ್, ಜನರಲ್ ಅವೇರ್ನೆಸ್ ಮತ್ತು ಟ್ರೇಡ್/ಪೋಸ್ಟ್ ಸಂಬಂಧಿತ ಪ್ರಶ್ನೆಗಳನ್ನು ಆಧರಿಸಿರುತ್ತದೆ. ಇವುಗಳನ್ನು ಆಧರಿಸಿ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ. ಹೆಚ್ಇನ ಮಾಹಿತಿಗೆ ಆಗಾಗ http://www.employmentnews.gov.in/ ಗಮನಿಸುತ್ತಿರಿ.

Indian Coast Guard Recruitment 2022: ಕರಾವಳಿ ಭದ್ರತಾಪಡೆಯಲ್ಲಿನ 322 ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟ

ವಾಯು ಪಡೆಯ 317 ಹುದ್ದೆಗಳಿಗೆ ನೇಮಕಾತಿ, ಕಾಮನ್ ಅಡ್ಮಿಷನ್ ಟೆಸ್ಟ್(AFCAT 2022)ಗೆ ಅರ್ಜಿ ಆಹ್ವಾನ: 
ಭಾರತೀಯ ವಾಯುಪಡೆ (Indian Air Force)ಯು ಏರ್‌ಫೋರ್ಸ್ ಕಾಮನ್ ಅಡ್ಮಿಷನ್ ಟೆಸ್ಟ್ (AFCAT 2022)ಗೆ ಆರ್ಜಿ ಆಹ್ವಾನಿಸಿದೆ. ಒಟ್ಟು 317 ಗ್ರೌಂಡ್ ಡ್ಯೂಟಿ(Ground Duty) (ಟೆಕ್ನಿಕಲ್ & ನಾನ್ ಟೆಕ್ನಿಕಲ್), ಕಮಿಷನ್ಡ್ ಆಫೀಸರ್ (Commissioned Officer) ಹುದ್ದೆಗಳು ಖಾಲಿ ಇದ್ದು, ಬಿಇ, ಬಿ ಟೆಕ್, ಎಂಎಸ್ಸಿ ಪದವೀಧರರು ಈ ಪರೀಕ್ಷೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು. ಡಿಸೆಂಬರ್ 30  ಕೊನೆಯ ದಿನಾಂಕವಾಗಿದೆ. ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ಅಭ್ಯರ್ಥಿಗಳು ವಾಯುಪಡೆಯ ಅಧಿಕೃತ ವೆಬ್ಸೈಟ್ indianairforce.nic.in ಗೆ ಭೇಟಿ ನೀಡಿ ಪರಿಶೀಲಿಸಬಹುದು.  ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು 250 ಅರ್ಜಿ ಶುಲ್ಕ ಪಾವತಿಸಬೇಕು ಮತ್ತು ಅಭ್ಯರ್ಥಿಗಳು ನಿಗದಿತ ವಿದ್ಯಾರ್ಹತೆಯನ್ನು ಪೂರೈಸಿರಬೇಕಾಗುತ್ತದೆ. ವಾಯುಪಡೆಯ ಅಧಿಕೃತ ಜಾಲತಾಣದಲ್ಲಿ ಈ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಸಂಬಂಧ ಎಲ್ಲ ಮಾಹಿತಿಯನ್ನು ನೀಡಲಾಗಿದೆ.

KSP Recruitment 2022: ರಾಜ್ಯ ಪೊಲೀಸ್ ಇಲಾಖೆಯಲ್ಲಿನ ನ್ಯಾಯ ವಿಜ್ಞಾನ ಪ್ರಯೋಗಾಲಯದಲ್ಲಿ ವಿವಿಧ ಹುದ್ದೆಗಳ ಭರ್ತಿಗೆ ಅಹ್ವಾನ

ಎಸ್ ಎಸ್ ಸಿ (SSC )77 ಹುದ್ದೆಗಳು, ಎಇ (AE) 129 ಹುದ್ದೆಗಳು, ಅಡ್ಮಿನ್ (Admin) 51 ಹುದ್ದೆಗಳು, ಎಸಿಸಿಟಿಎಸ್ ( Accts 21) ಹುದ್ದೆಗಳು, ಪೋಸ್ಟ್ಸ್ ಎಲ್ ಜಿಎಸ್ (PostsLgs )39 ,ಹುದ್ದೆಗಳು ಸೇರಿ ಒಟ್ಟು ೩೧೭ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತದೆ.  ಫ್ಲೈಯಿಂಗ್ ಬ್ರಾಂಚ್(Flying Branch), ಗ್ರೌಂಡ್ ಡ್ಯೂಟಿ( Ground Duty-Technical), ಗ್ರೌಂಡ್ ಡ್ಯೂಟಿ (Ground Duty-Non-Technical), ಎನ್ ಸಿಸಿ ಸ್ಪೆಷಲ್ ಎಂಟ್ರಿ (NCC Special Entry-Flying) ವಿಭಾಗದಲ್ಲಿ ನೇಮಕ ಮಾಡಿಕೊಳ್ಳಲಾಗುವುದು.

click me!