East Coast Railway Recruitment 2022: ನರ್ಸಿಂಗ್​ ಸೂಪರಿಂಟೆಂಡೆಂಟ್​ ಸೇರಿ 14 ಹುದ್ದೆಗಳಿಗೆ ಪೂರ್ವ ಕರಾವಳಿ ರೈಲ್ವೆ ಅರ್ಜಿ

By Suvarna News  |  First Published Dec 17, 2021, 6:41 PM IST
  • ಖಾಲಿ ಇರುವ 14 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಪೂರ್ವ ಕರಾವಳಿ ರೈಲ್ವೆ
  • ನರ್ಸಿಂಗ್​ ಸೂಪರಿಂಟೆಂಡೆಂಟ್​  ಸೇರಿ 14 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
  • ಅರ್ಜಿ ಸಲ್ಲಿಸಲು ಕೊನೆ ದಿನ ಡಿಸೆಂಬರ್ 31
     

ಬೆಂಗಳೂರು(ಡಿ.17): ಪೂರ್ವ ಕರಾವಳಿ ರೈಲ್ವೆ (East Coast Railway)ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.  ಫಾರ್ಮಾಸಿಸ್ಟ್​​ (Pharmacist), ಹಾಸ್ಪಿಟಲ್​ ಅಟೆಂಡೆಂಟ್ (Hospital Attendant )​​, ಹೌಸ್​ ಕೀಪಿಂಗ್​ ಅಸಿಸ್ಟೆಂಟ್ (House Keeping Assistant ), ನರ್ಸಿಂಗ್​ ಸೂಪರಿಂಟೆಂಡೆಂಟ್​ (Nursing Superintendent ) ಹೀಗೆ ಒಟ್ಟು 14 ಹುದ್ದೆಗಳು ಖಾಲಿ ಇದೆ. ಈಗಾಗಲೇ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅರ್ಜಿ ಸಲ್ಲಿ ಕೊನೆ ದಿನ ಡಿಸೆಂಬರ್ 31. ಆಸಕ್ತರು ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ  ಅಭ್ಯರ್ಥಿಗಳು ಇಲಾಖೆಯ ಅಧಿಕೃತ ವೆಬ್‌ಸೈಟ್ eastcoastrail.indianrailways.gov.in ಗೆ ಭೇಟಿ ನೀಡಲು ಕೋರಲಾಗಿದೆ.


ಒಟ್ಟು 14 ಹುದ್ದೆಗಳು ಖಾಲಿ ಇದ್ದು ಅದರಲ್ಲಿ ನರ್ಸಿಂಗ್​ ಸೂಪರಿಂಟೆಂಡೆಂಟ್- 04, ಫಾರ್ಮಾಸಿಸ್ಟ್- 02, ಹಾಸ್ಪಿಟಲ್​ ಅಟೆಂಡೆಂಟ್​​- 04, ಹೌಸ್​ ಕೀಪಿಂಗ್​ ಅಸಿಸ್ಟೆಂಟ್-04 ಹುದ್ದೆಗಳ ನೇಮಕ ಮಾಡಿಕೊಳ್ಳಲಾಗುತ್ತಿದೆ. 

Tap to resize

Latest Videos

undefined

ವಿದ್ಯಾರ್ಹತೆ: ನರ್ಸಿಂಗ್​ ಸೂಪರಿಂಟೆಂಡೆಂಟ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬಿಎಸ್ಸಿ ನರ್ಸಿಂಗ್​ (BSc Nursing), ಫಾರ್ಮಾಸಿಸ್ಟ್- 12ನೇ ತರಗತಿ (PUC), ಹಾಸ್ಪಿಟಲ್​ ಅಟೆಂಡೆಂಟ್​​- 10 ನೇ ತರಗತಿ ಮತ್ತು ಹೌಸ್​ ಕೀಪಿಂಗ್​ ಅಸಿಸ್ಟೆಂಟ್-10 ನೇ ತರಗತಿ ಪಾಸಾಗಿರಬೇಕು. 

ವಯೋಮಿತಿ: ನಾಲ್ಕು ವಿಭಾಗಗಳಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ವಯೋಮಿತಿ ನಿಗದಿಪಡಿಸಲಾಗಿದ್ದು, ನರ್ಸಿಂಗ್​ ಸೂಪರಿಂಟೆಂಡೆಂಟ್ ಗೆ  20-40 ವರ್ಷ, ಫಾರ್ಮಾಸಿಸ್ಟ್‌ಗೆ 20-35 ವರ್ಷ, ಹಾಸ್ಪಿಟಲ್​ ಅಟೆಂಡೆಂಟ್‌ಗೆ 18-33 ವರ್ಷ, ಹೌಸ್​ ಕೀಪಿಂಗ್​ ಅಸಿಸ್ಟೆಂಟ್‌ಗೆ 18-33 ವರ್ಷ ನಿಗದಿಪಡಿಲಾಗಿದೆ.

ಆಯ್ಕೆ ಪ್ರಕ್ರಿಯೆ ಮತ್ತು ವೇತನ: ದಾಖಲಾತಿ ಪರಿಶೀಲನೆ ಮತ್ತು ವೈಯಕ್ತಿಕ ಸಂದರ್ಶನದ ಮೂಲಕ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 18,000 ದಿಂದ 44,900 ರೂ ತನ ವೇತನ ನೀಡಲಾಗುತ್ತದೆ. ಮತ್ತು ಆಯ್ಕೆಯಾದವರು ಒಡಿಶಾದ ಭುವನೇಶ್ವರದಲ್ಲಿ ಉದ್ಯೋಗ ಮಾಡಬೇಕಾಗುತ್ತದೆ. 

click me!