Indian Air Force Recruitment 2022: ಟೆಕ್ನಿಕಲ್ ಅಪ್ರೆಂಟಿಸ್ ಹುದ್ದೆಗಳಿಗೆ ಭಾರತೀಯ ವಾಯುಪಡೆ ಅರ್ಜಿ ಆಹ್ವಾನ

By Suvarna News  |  First Published Feb 14, 2022, 8:58 PM IST

ಭಾರತೀಯ ವಾಯುಪಡೆಯು  ಒಟ್ಟು 80 ಟೆಕ್ನಿಕಲ್ ಅಪ್ರೆಂಟಿಸ್  ಹುದ್ದೆಗಳಿಗೆ ಆರ್ಜಿ ಆಹ್ವಾನಿಸಿದೆ. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಫೆಬ್ರವರಿ 19  ಕೊನೆಯ ದಿನಾಂಕವಾಗಿದೆ.


ಬೆಂಗಳೂರು(ಫೆ.14): ಭಾರತೀಯ ವಾಯುಪಡೆ (Indian Air Force)ಯು ಖಾಲಿ ಇರುವ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ. ಒಟ್ಟು 80 ಟೆಕ್ನಿಕಲ್ ಅಪ್ರೆಂಟಿಸ್ (Apprentice) ಹುದ್ದೆಗಳಿಗೆ ಆರ್ಜಿ ಆಹ್ವಾನಿಸಿದೆ. ಏರ್‌ಫೋರ್ಸ್ ಅಪ್ರೆಂಟಿಸ್ ತರಬೇತಿ ಲಿಖಿತ ಪರೀಕ್ಷೆ A3TWT 03/2022 ಮೂಲಕ 01 ಏಪ್ರಿಲ್ 2022 ರಂದು ಪ್ರಾರಂಭವಾಗುವ ಕೋರ್ಸ್‌ಗಳಿಗೆ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಫೆಬ್ರವರಿ 19  ಕೊನೆಯ ದಿನಾಂಕವಾಗಿದೆ. ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ಅಭ್ಯರ್ಥಿಗಳು ವಾಯುಪಡೆಯ ಅಧಿಕೃತ ವೆಬ್ಸೈಟ್ indianairforce.nic.in ಗೆ ಭೇಟಿ ನೀಡಿ ಪರಿಶೀಲಿಸಬಹುದು.   

ಶೈಕ್ಷಣಿಕ ವಿದ್ಯಾರ್ಹತೆ : ಭಾರತೀಯ ವಾಯುಪಡೆಯಲ್ಲಿ  ಖಾಲಿ ಇರುವ  ಟೆಕ್ನಿಕಲ್ ಅಪ್ರೆಂಟಿಸ್ ಹುದ್ದೆಗಳಿಗೆ  ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು 10ನೇ ತರಗತಿ ಮತ್ತು 10+2ನೇ ತರಗತಿ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಬೋರ್ಡ್‌/ಸಂಸ್ಥೆ/ ವಿಶ್ವವಿದ್ಯಾಲಯದಿಂದ  ಪಡೆದಿರಬೇಕು.

Tap to resize

Latest Videos

undefined

ವಯೋಮಿತಿ: ಭಾರತೀಯ ವಾಯುಪಡೆಯಲ್ಲಿ  ಖಾಲಿ ಇರುವ  ಟೆಕ್ನಿಕಲ್ ಅಪ್ರೆಂಟಿಸ್ ಹುದ್ದೆಗಳಿಗೆ  ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಏಪ್ರಿಲ್ 1,2022ರ ಅನ್ವಯ ಕನಿಷ್ಟ 14 ರಿಂದ ಗರಿಷ್ಟ 21 ವರ್ಷದೊಳಗಿರಬೇಕು.  ಓಬಿಸಿ ಅಭ್ಯರ್ಥಿಗಳಿಗೆ ಗರಿಷ್ಟ 24 ವರ್ಷ, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಗರಿಷ್ಟ 26 ವರ್ಷ ಸಡಿಲಿಕೆ ನೀಡಲಾಗಿದೆ.

ವೇತನ: ಭಾರತೀಯ ವಾಯುಪಡೆಯಲ್ಲಿ  ಖಾಲಿ ಇರುವ  ಟೆಕ್ನಿಕಲ್ ಅಪ್ರೆಂಟಿಸ್ ಹುದ್ದೆಗಳಿಗೆ  ಅರ್ಜಿ ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 7,700/ ರೂ ಸ್ಟೈಫೆಂಡ್ ದೊರೆಯಲಿದೆ.

Google Revealed Most Searched Jobs: ಲಾಕ್‌ಡೌನ್ ಬಳಿಕ ನಿರುದ್ಯೋಗಿಗಳಾಗಿ 2022 ರವರೆಗೆ ಅತೀ ಹೆಚ್ಚು ಹುಡುಕಿದ ಉದ್ಯೋಗಳಿವು

ಆಯ್ಕೆ ಪ್ರಕ್ರಿಯೆ: ಭಾರತೀಯ ವಾಯುಪಡೆಯಲ್ಲಿ  ಖಾಲಿ ಇರುವ  ಟೆಕ್ನಿಕಲ್ ಅಪ್ರೆಂಟಿಸ್ ಹುದ್ದೆಗಳಿಗೆ  ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಮೊದಲು ಆನ್‌ಲೈನ್ ಪರೀಕ್ಷೆ, ಪ್ರಾಕ್ಟಿಕಲ್ ಪರೀಕ್ಷೆ ಮಾಡಿ ಶಾರ್ಟ್ ಲಿಸ್ಟ್ ಮಾಡಲಾಗುವುದು. ಬಳಿಕ ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು .

ಅರ್ಜಿ ಸಲ್ಲಿಕೆ : ಭಾರತೀಯ ವಾಯುಪಡೆಯಲ್ಲಿ  ಖಾಲಿ ಇರುವ  ಟೆಕ್ನಿಕಲ್ ಅಪ್ರೆಂಟಿಸ್ ಹುದ್ದೆಗಳಿಗೆ  ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ https://www.apprenticeshipindia.gov.in/ ಗೆ ಭೇಟಿ ನೀಡಿ. ಅಲ್ಲಿ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡಿ ಜೊತೆಗೆ ಅಗತ್ಯ ದಾಖಲೆಗಳನ್ನು ಲಗತ್ತಿಸುವ ಮೂಲಕ ಫೆಬ್ರವರಿ 19,2022ರೊಳಗೆ ಅರ್ಜಿ ಸಲ್ಲಿಸಬೇಕು.

IISC Recruitment 2022: ಬೆಂಗಳೂರಿನ ಐಐಎಸ್‌ಸಿಯಲ್ಲಿ ಇಂಜಿನಿಯರಿಂಗ್, MBA ಮಾಡಿದವರಿಗೆ ಉದ್ಯೋಗವಕಾಶ

ಆಯಿಲ್ ಇಂಡಿಯಾ ಲಿಮಿಟೆಡ್‌ನಲ್ಲಿ ಖಾಲಿ ಇರುವ  ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ: ಆಯಿಲ್ ಇಂಡಿಯಾ ಲಿಮಿಟೆಡ್‌ನಲ್ಲಿ (Oil India Limited) ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಲಾಗಿದೆ. ಗ್ರೇಡ್ III, V ಯಲ್ಲಿ ಒಟ್ಟು 62  ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತರು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ  ಫೆಬ್ರವರಿ 25,2022ರೊಳಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್‌ಸೈಟ್ https://www.oil-india.com/ ಗೆ ಭೇಟಿ ನೀಡಲು ಕೋರಲಾಗಿದೆ.

ಶೈಕ್ಷಣಿಕ ವಿದ್ಯಾರ್ಹತೆ: ಆಯಿಲ್ ಇಂಡಿಯಾ ಲಿಮಿಟೆಡ್‌ನಲ್ಲಿ ನೇಮಕಾತಿಯ ಗ್ರೇಡ್ III, V ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಬೋರ್ಡ್‌/ಸಂಸ್ಥೆ/ ವಿಶ್ವವಿದ್ಯಾಲಯದಿಂದ ಬಿ.ಎಸ್ಸಿ, 10+2, ವಿದ್ಯಾರ್ಹತೆಯನ್ನು  ಪಡೆದಿರಬೇಕು.

ವಯೋಮಿತಿ: ಆಯಿಲ್ ಇಂಡಿಯಾ ಲಿಮಿಟೆಡ್‌ನಲ್ಲಿ ನೇಮಕಾತಿಯ ಗ್ರೇಡ್ III, V ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಹುದ್ದೆಗೆ ಅನುಸಾರವಾಗಿ 31 ರಿಂದ 36 ವರ್ಷದ ಒಳಗಿನ ವಯೋಮಾನದವರಾಗಿರಬೇಕು.SC,ST,OBC ಅಭ್ಯರ್ಥಿಗಳಿಗೆ ಅರಕಾರದ ನಿಯಮದನ್ವಯ ವಯೋಮಿತಿ ಸಡಿಲಿಕೆ ನೀಡಲಾಗಿದೆ.

ಆಯ್ಕೆ ಪ್ರಕ್ರಿಯೆ: ಆಯಿಲ್ ಇಂಡಿಯಾ ಲಿಮಿಟೆಡ್‌ನಲ್ಲಿ ನೇಮಕಾತಿಯ ಗ್ರೇಡ್ III, V ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಅಭ್ಯರ್ಥಿಗಳನ್ನು ಕಂಪ್ಯೂಟರ್ ಆಧಾರಿತ   (Computer Based Test-CBT) ಆನ್‌ಲೈನ್ ಪರೀಕ್ಷೆ ಮತ್ತು ನೇರ ಸಂದರ್ಶನದ  ಮೂಲಕ ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಶುಲ್ಕ : ಆಯಿಲ್ ಇಂಡಿಯಾ ಲಿಮಿಟೆಡ್‌ನಲ್ಲಿ ನೇಮಕಾತಿಯ ಗ್ರೇಡ್ III, V ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು 200/-ರೂ ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಬೇಕಿರುತ್ತದೆ. ಪರಿಶಿಷ್ಟ/ಪರಿಶಿಷ್ಟ ಪಂಗಡ/ಅಂಗವಿಕಲ ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇರುತ್ತದೆ.

ಅರ್ಜಿ ಸಲ್ಲಿಕೆ ವಿಧಾನ: ಆಯಿಲ್ ಇಂಡಿಯಾ ಲಿಮಿಟೆಡ್‌ನಲ್ಲಿ ನೇಮಕಾತಿಯ ಗ್ರೇಡ್ III, V ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ https://www.oil-india.com/default.aspx ಗೆ ಭೇಟಿ ನೀಡಿ.  ಅಲ್ಲಿ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡಿ ಜೊತೆಗೆ ಅಗತ್ಯ ದಾಖಲೆಗಳನ್ನು ಲಗತ್ತಿಸುವ ಮೂಲಕ  ಫೆಬ್ರವರಿ 25,2022ರೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ. ಅಧಿಸೂಚನೆ ಓದಲು ಈ ಲಿಂಕ್ ಕ್ಲಿಕ್ ಮಾಡಿ. https://www.oil-india.com/Document/Career/Advertisement_for_Multiple_Posts_2022.pdf

click me!