ಭಾರತೀಯ ವೈದ್ಯ ಸಂಶೋಧನಾ ಮಂಡಳಿಯಲ್ಲಿನ NCDIR ವಿಭಾಗದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಜನವರಿ 30 ಕೊನೆಯ ದಿನಾಂಕವಾಗಿದೆ.
ಬೆಂಗಳೂರು(ಜ.7): ಭಾರತೀಯ ವೈದ್ಯ ಸಂಶೋಧನಾ ಮಂಡಳಿಯಲ್ಲಿ (ICMR) ಬರುವ ರಾಷ್ಟ್ರೀಯ ಕಾಯಿಲೆ ಮಾಹಿತಿಯುಕ್ತ ಮತ್ತು ಸಂಶೋಧನಾ ಕೇಂದ್ರ (The National Centre for Disease Informatics and Research -NCDIR) ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಪ್ರಾಜೆಕ್ಟ್ ಸೈಂಟಿಸ್ಟ್, ರಿಸರ್ಚ್ ಅಸೋಸಿಯೇಟ್, ಕಂಪ್ಯೂಟರ್ ಪ್ರೋಗ್ರಾಮರ್ (Computer Programmer) ಸೇರಿ ಒಟ್ಟು 15 ಹುದ್ದೆಗಳು ಖಾಲಿ ಇದೆ. ಈಗಾಗಲೇ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಜನವರಿ 30 ಕೊನೆಯ ದಿನಾಂಕವಾಗಿದೆ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ NCDIRನ ಅಧಿಕೃತ ವೆಬ್ಸೈಟ್ www.ncdirindia.orgಗೆ ಭೇಟಿ ನೀಡಲು ಕೋರಲಾಗಿದೆ.
ಒಟ್ಟು 15 ಹುದ್ದೆಗಳು ಮತ್ತು ತಿಂಗಳ ವೇತನ ವಿವರ ಇಲ್ಲಿದೆ
ಕಂಪ್ಯೂಟರ್ ಪ್ರೋಗ್ರಾಮರ್ -6 ಹುದ್ದೆ, ತಿಂಗಳ ವೇತನ 32,500 ರೂ.
ಸಂಶೋಧನಾ ಸಹಾಯಕ (Research Associate)-3 ಹುದ್ದೆ, ತಿಂಗಳ ವೇತನ 46,800 ರಿಂದ 60,760 ರೂ.
ಪ್ರಾಜೆಕ್ಟ್ ವಿಜ್ಞಾನಿ-3 ಹುದ್ದೆಗಳು ತಿಂಗಳ ವೇತನ 57,660 ರಿಂದ 68,875 ರೂ
ಯೋಜನಾ ನಿರ್ವಾಹಕ ಸಹಾಯಕ (Project Admin Assistant)-2 ಹುದ್ದೆಗಳು ತಿಂಗಳ ವೇತನ 32,000 ರೂ
ಹಿರಿಯ ಸಂಶೋಧನಾ ಸಹಾಯಕ (Senior Research Fellow)- 1 ಹುದ್ದೆಗಳು ತಿಂಗಳ ವೇತನ 36,400//-
undefined
ಶೈಕ್ಷಣಿಕ ವಿದ್ಯಾರ್ಹತೆ: ಸ್ನಾತಕೋತ್ತರ ಪದವಿ (postgraduate), ಪಿಎಚ್.ಡಿ (PhD)ಪೂರ್ಣಗೊಳಿಸಿರುವವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಅಧಿಸೂಚನೆ ಪ್ರಕಾರ, ಪ್ರಾಜೆಕ್ಟ್ ಸೈಂಟಿಸ್ಟ್, ರಿಸರ್ಚ್ ಅಸೋಸಿಯೇಟ್, ಕಂಪ್ಯೂಟರ್ ಪ್ರೋಗ್ರಾಮರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ BE/B.Tech,MD/MS,MDS,MBBS/BDS,MSW,ME/M.Tech,ಪೂರ್ಣಗೊಳಿಸಿರಬೇಕು.
KFD FG Exam Result Announced: ಫಾರೆಸ್ಟ್ ಗಾರ್ಡ್ ಹುದ್ದೆ ಲಿಖಿತ ಪರೀಕ್ಷೆಯ ಫಲಿತಾಂಶ ಬಿಡುಗಡೆ
ಅರ್ಜಿ ಶುಲ್ಕ: ಅಧಿಸೂಚನೆ ಪ್ರಕಾರ ರಾಷ್ಟ್ರೀಯ ಕಾಯಿಲೆ ಮಾಹಿತಿಯುಕ್ತ ಮತ್ತು ಸಂಶೋಧನಾ ಕೇಂದ್ರದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಸಲ್ಲಿಸುವ ಸಾಮಾನ್ಯ (UR), OBC ಮತ್ತು EWS ಅಭ್ಯರ್ಥಿಗಳಿಗೆ- 1000 ರೂ. ಮತ್ತು SC/ ST/ PWD ಅಭ್ಯರ್ಥಿಗಳಿಗೆ 100 ರೂ.
ಪಾವತಿ ವಿಧಾನ: ನೆಟ್ ಬ್ಯಾಂಕಿಂಗ್/UPI/ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಮೂಲಕ ಪಾವತಿಸಬೇಕು.
ವಯೋಮಿತಿ: NCDIR ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಕನಿಷ್ಠ ವಯಸ್ಸು 21 ಮತ್ತು ಗರಿಷ್ಠ ವಯಸ್ಸು 32 ಆಗಿದೆ. ಇದರ ಜೊತೆಗೆ ಹುದ್ದೆಗನುಸಾರ ಮತ್ತು ಕೆಟಗರಿಗೆ ಅನುಸಾರ ವಯೋಮಿತಿ ಸಡಿಲಿಕೆ ಇದೆ.
ಆಯ್ಕೆ ಪ್ರಕ್ರಿಯೆ: ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದವರು ಬೆಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸಬೇಕಾಗುತ್ತದೆ.
SEBI Recruitment 2022: ಆಫೀಸರ್ ಗ್ರೇಡ್ ಎ ಹುದ್ದೆಗೆ ಅರ್ಜಿ ಆಹ್ವಾನಿಸಿದ ಭದ್ರತೆ ಮತ್ತು ವಿನಿಮಯ ಮಂಡಳಿ
ಚಿಕ್ಕಮಗಳೂರಿನಲ್ಲಿ ದಾದಿಯರು ಸೇರಿ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ: ಚಿಕ್ಕಮಗಳೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿ (District Health and Family Welfare Society Chikkamagaluru) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಕನ್ಸಲ್ಟೆಂಟ್ಸ್, ನರ್ಸ್ ಸೇರಿ ಒಟ್ಟು 45 ಹುದ್ದೆಗಳು ಖಾಲಿ ಇದ್ದು, ಡಿಪ್ಲೋಮಾ, ಬಿಎಸ್ಸಿ ನರ್ಸಿಂಗ್, ಎಂಬಿಬಿಎಸ್ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಈಗಾಗಲೇ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಆಸಕ್ತರು ಆಫ್ಲೈನ್ (Offline) ಮೂಲಕ ಅರ್ಜಿ ಸಲ್ಲಿಸಲು ಜನವರಿ 12 ಕೊನೆಯ ದಿನಾಂಕವಾಗಿದೆ. ಹೆಚ್ಚಿನ ಮಾಹಿತಿಗಾಗಿ chikkamagaluru.nic.in ಗೆ ಭೇಟಿ ನೀಡಲು ಕೋರಲಾಗಿದೆ.