ಅಲಯನ್ಸ್ ಏರ್ ಏವಿಯೇಷನ್ ಲಿಮಿಟೆಡ್ ಕಂಪನಿಯ ಅಗತ್ಯತೆಯ ಆಧಾರದ ಮೇಲೆ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಿದೆ. ಅಭ್ಯರ್ಥಿಗಳು ಫೆಬ್ರವರಿ 14 ಮತ್ತು 15ರಂದು ನೇರ ಸಂದರ್ಶನ ನಡೆಯಲಿದೆ.
ಬೆಂಗಳೂರು(ಫೆ.4): ಅಲಯನ್ಸ್ ಏರ್ ಏವಿಯೇಷನ್ ಲಿಮಿಟೆಡ್ (Alliance Air Aviation Limited - AAAL) ಕಂಪನಿಯ ಅಗತ್ಯತೆಯ ಆಧಾರದ ಮೇಲೆ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಿದೆ. ಕಮಾಂಡರ್ ಮತ್ತು ಫಸ್ಟ್ ಆಫೀಸರ್/ ಸೀನಿಯರ್ ಫಸ್ಟ್ ಆಫೀಸರ್ ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಳಿಂದ ಅರ್ಜಿ ಆಹ್ವಾನಿಸಿದೆ. ಏರ್ ಇಂಡಿಯಾ (Air India) ಅಧಿಸೂಚನೆಯ ಪ್ರಕಾರ, ಈ ಖಾಲಿ ಹುದ್ದೆಗಳನ್ನು AAAL ಹುದ್ದೆಗೆ ನಿಯೋಜಿಸಲಾಗಿದೆ. ನೇರ ಸಂದರ್ಶನ (Walk In Interview) ಮೂಲಕ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಈ ಉದ್ಯೋಗಗಳನ್ನು ಸೇರಲು ಇಚ್ಚಿಸುವ ಅಭ್ಯರ್ಥಿಗಳು ಫೆಬ್ರವರಿ 14 ಮತ್ತು 15ರಂದು ನಡೆಯಲಿರುವ ನೇರ ಸಂದರ್ಶನದಲ್ಲಿ ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗೆ www.airindia.in ಗೆ ಭೇಟಿ ನೀಡಬಹುದು.
ಶೈಕ್ಷಣಿಕ ವಿದ್ಯಾರ್ಹತೆ: ಅಲಯನ್ಸ್ ಏರ್ ಏವಿಯೇಷನ್ ಲಿಮಿಟೆಡ್ ನಲ್ಲಿ ಖಾಲಿ ಇರುವ ಕಮಾಂಡರ್ ಮತ್ತು ಫಸ್ಟ್ ಆಫೀಸರ್/ ಸೀನಿಯರ್ ಫಸ್ಟ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಸಂಸ್ಥೆಯಿಂದ 10+2 ಪಾಸಾಗಿರಬೇಕು.
undefined
ವಯೋಮಿತಿ: ಅಲಯನ್ಸ್ ಏರ್ ಏವಿಯೇಷನ್ ಲಿಮಿಟೆಡ್ ನಲ್ಲಿ ಖಾಲಿ ಇರುವ ಕಮಾಂಡರ್ ಮತ್ತು ಫಸ್ಟ್ ಆಫೀಸರ್/ ಸೀನಿಯರ್ ಫಸ್ಟ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಹುದ್ದೆಗೆ ಅನುಸಾರ 45 ವರ್ಷದಿಂದ 50 ವರ್ಷದೊಳಗಿನವರಾಗಿರಬೇಕು.
EMPLOYEES LEAVING TECH COMPANIES: ಟೆಕ್ ಕಂಪೆನಿಗಳಲ್ಲಿ ಹೆಚ್ಚುತ್ತಿರುವ ಉದ್ಯೋಗಿಗಳ ರಾಜೀನಾಮೆ
ಉದ್ಯೋಗದ ಸ್ಥಳ: ಅಲಯನ್ಸ್ ಏರ್ ಏವಿಯೇಷನ್ ಲಿಮಿಟೆಡ್ ನಲ್ಲಿ ಖಾಲಿ ಇರುವ ಕಮಾಂಡರ್ ಮತ್ತು ಫಸ್ಟ್ ಆಫೀಸರ್/ ಸೀನಿಯರ್ ಫಸ್ಟ್ ಆಫೀಸರ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ದೆಹಲಿ, ಕೋಲ್ಕತ್ತಾ, ಬೆಂಗಳೂರು, ಹೈದರಾಬಾದ್, ಮುಂಬೈ, ಚೆನ್ನೈ ಇಲ್ಲಿ ಉದ್ಯೋಗ ನೀಡಲಾಗುತ್ತದೆ.
ಸಂದರ್ಶನ ನಡೆಯುವ ಸ್ಥಳ: AAAL ನೇಮಕಾತಿ ಅಧಿಸೂಚನೆಯ ಪ್ರಕಾರ, ಸಂದರ್ಶನವು ಪ್ರತಿ ತಿಂಗಳು 14/15 ರಂದು ದೆಹಲಿಯಲ್ಲಿ ನಡೆಯಲಿದೆ. ಏರ್ ಇಂಡಿಯಾ ನೇಮಕಾತಿ ಮತ್ತು AAAL ನೇಮಕಾತಿ ಅರ್ಜಿ ನಮೂನೆಯು www.airindia.in ನಲ್ಲಿ ದೊರೆಯಲಿದೆ.
ತಮಿಳುನಾಡು ಸರಕಾರದ ಜೊತೆ ಘರ್ಷಣೆ, ನೀಟ್ ಮಸೂದೆ ಹಿಂದಿರುಗಿಸಿದ ರಾಜ್ಯಪಾಲ
ರಾಜ್ಯ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದಲ್ಲಿ ಉದ್ಯೋಗವಕಾಶ: ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ(Karnataka Electricity Regulatory Commission - KERC) ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಚೇರ್ಪರ್ಸನ್ (Chairperson) ಹುದ್ದೆಗಳು ಖಾಲಿ ಇದ್ದು, ಬೆಂಗಳೂರಿನಲ್ಲಿ (Bengaluru) ಉದ್ಯೋಗ ಮಾಡಲು ಇಚ್ಛಿಸುವ ಅರ್ಹ ಮತ್ತು ಆಸಕ್ತರು ಆಫ್‌ಲೈನ್ ಮೂಲಕ ಮಾರ್ಚ್ 7 ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ https://kerc.karnataka.gov.in/ ಗೆ ಭೇಟಿ ನೀಡಬಹುದು.
ಶೈಕ್ಷಣಿಕ ವಿದ್ಯಾರ್ಹತೆ: ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದಲ್ಲಿ ಖಾಲಿ ಇರುವ ಚೇರ್ಪರ್ಸನ್ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಸಂಸ್ಥೆಯಿಂದ ಆಯೋಗದ ನೇಮಕಾತಿ ಅಧಿಸೂಚನೆ ಪ್ರಕಾರ ಶೈಕ್ಷಣಿಕ ಅರ್ಹತೆ ಹೊಂದಿರಬೇಕು.
ಆಯ್ಕೆ ಪ್ರಕ್ರಿಯೆ: ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದಲ್ಲಿ ಖಾಲಿ ಇರುವ ಚೇರ್ಪರ್ಸನ್ ಹುದ್ದೆಗೆ ಅಭ್ಯರ್ಥಿಗಳ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.
ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕಾದ ವಿಳಾಸ:
ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ
ಇಂಧನ ಇಲಾಖೆ
ಕೊಠಡಿ ಸಂಖ್ಯೆ 236, 2ನೇ ಮಹಡಿ, ವಿಕಾಸಸೌಧ
ಡಾ.ಬಿ.ಆರ್. ಅಂಬೇಡ್ಕರ್ ವೀಧಿ
ಬೆಂಗಳೂರು - 560001