HAL Recruitment 2022: ವೈದ್ಯಕೀಯ ಅಧಿಕಾರಿ ಸೇರಿ ವಿವಿಧ ಹುದ್ದೆಗಳಿಗೆ HAL ನೇಮಕಾತಿ

By Suvarna NewsFirst Published Mar 16, 2022, 4:48 PM IST
Highlights

ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಕಂಪನಿಯು ಖಾಲಿ ಇರುವ ವೈದ್ಯಕೀಯ ಅಧಿಕಾರಿ ಸೇರಿ ಒಟ್ಟು 15 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಎಪ್ರಿಲ್ 10 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.

ಬೆಂಗಳೂರು(ಮಾ.16): ಬೆಂಗಳೂರಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (Hindustan Aeronautics Limited-HAL) ಕಂಪನಿಯು ಖಾಲಿ ಇರುವ  ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ. ವೈದ್ಯಕೀಯ ಅಧಿಕಾರಿ, ವೈದ್ಯಕೀಯ ಸೂಪರಿಂಟೆಂಡೆಂಟ್  ಸೇರಿ ಒಟ್ಟು 15 ಹುದ್ದೆಗಳು ಖಾಲಿ ಇದೆ.  ಈಗಾಗಲೇ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆಪ್‌ಲೈನ್ ಮೂಲಕ ಎಪ್ರಿಲ್ 10ರೊಳಗೆ  ಅರ್ಜಿ ಸಲ್ಲಿಸಬೇಕು. ನೇಮಕಾತಿ ಬಗೆಗಿನ ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್‌ಸೈಟ್ https://hal-india.co.in/  ಭೇಟಿ ನೀಡಬಹುದು.

ಒಟ್ಟು 15 ಹುದ್ದೆಗಳ ಮಾಹಿತಿ
ವೈದ್ಯಕೀಯ ಅಧೀಕ್ಷಕರು (ಜನರಲ್ ಮೆಡಿಸಿನ್): 3 ಹುದ್ದೆಗಳು
ವೈದ್ಯಕೀಯ ಅಧೀಕ್ಷಕರು (ನೇತ್ರವಿಜ್ಞಾನ) 1: ಹುದ್ದೆ
ವೈದ್ಯಕೀಯ ಅಧೀಕ್ಷಕರು/ಶ್ರೀ. ವೈದ್ಯಕೀಯ ಅಧಿಕಾರಿ (ಮೂಳೆರೋಗ): 1ಹುದ್ದೆ
ವೈದ್ಯಕೀಯ ಅಧೀಕ್ಷಕರು (ಅರಿವಳಿಕೆ): 1 ಹುದ್ದೆ
ವೈದ್ಯಕೀಯ ಸೂಪರಿಂಟೆಂಡೆಂಟ್ (ಪೀಡಿಯಾಟ್ರಿಕ್ಸ್) : 2 ಹುದ್ದೆಗಳು
ವೈದ್ಯಕೀಯ ಸೂಪರಿಂಟೆಂಡೆಂಟ್ (ರೇಡಿಯಾಲಜಿ) : 1 ಹುದ್ದೆ
ಜನರಲ್ ಡ್ಯೂಟಿ ಮೆಡಿಕಲ್ ಆಫೀಸರ್ (GDMO): 6 ಹುದ್ದೆಗಳು

ಶೈಕ್ಷಣಿಕ ವಿದ್ಯಾರ್ಹತೆ:  ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಹುದ್ದೆಗೆ ಅನುಸಾರ ವಿದ್ಯಾರ್ಹತೆ ಪಡೆದಿರಬೇಕು.
ವೈದ್ಯಕೀಯ ಅಧೀಕ್ಷಕರು(ಜನರಲ್ ಮೆಡಿಸಿನ್): MBBS, 
ಜನರಲ್ ಮೆಡಿಸಿನ್‌ನಲ್ಲಿ ಸ್ನಾತಕೋತ್ತರ ಪದವಿ, DNB ಮಾಡಿರಬೇಕು.
ವೈದ್ಯಕೀಯ ಸೂಪರಿಂಟೆಂಡೆಂಟ್ (ನೇತ್ರಶಾಸ್ತ್ರ): MBBS, ನೇತ್ರವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ, DNB ಮಾಡಿರಬೇಕು.
ವೈದ್ಯಕೀಯ ಅಧೀಕ್ಷಕರು/ಶ್ರೀ. ವೈದ್ಯಕೀಯ ಅಧಿಕಾರಿ (ಆರ್ಥೋಪೆಡಿಕ್): MBBS, ಮೂಳೆಚಿಕಿತ್ಸೆಯಲ್ಲಿ ಸ್ನಾತಕೋತ್ತರ ಪದವಿ, DNB ಮಾಡಿರಬೇಕು.
ವೈದ್ಯಕೀಯ ಸೂಪರಿಂಟೆಂಡೆಂಟ್ (ಅರಿವಳಿಕೆ): MBBS, ಅರಿವಳಿಕೆಯಲ್ಲಿ ಸ್ನಾತಕೋತ್ತರ ಪದವಿ, DNB ಮಾಡಿರಬೇಕು.
ವೈದ್ಯಕೀಯ ಸೂಪರಿಂಟೆಂಡೆಂಟ್ (ಪೀಡಿಯಾಟ್ರಿಕ್ಸ್): MBBS, ಪೀಡಿಯಾಟ್ರಿಕ್ಸ್‌ನಲ್ಲಿ ಸ್ನಾತಕೋತ್ತರ ಪದವಿ, DNB ಮಾಡಿರಬೇಕು.
ವೈದ್ಯಕೀಯ ಸೂಪರಿಂಟೆಂಡೆಂಟ್ (ರೇಡಿಯಾಲಜಿ): MBBS, ರೇಡಿಯಾಲಜಿಯಲ್ಲಿ ಸ್ನಾತಕೋತ್ತರ ಪದವಿ, DNB ಮಾಡಿರಬೇಕು.
ಜನರಲ್ ಡ್ಯೂಟಿ ಮೆಡಿಕಲ್ ಆಫೀಸರ್ (GDMO): MBBS ಮಾಡಿರಬೇಕು.

NBCC RECRUITMENT 2022: ವಿವಿಧ ಜೂನಿಯರ್ ಇಂಜಿನಿಯರ್ ಹುದ್ದೆಗಳಿಗೆ ಎನ್‌ಬಿಸಿಸಿ ನೇಮಕಾತಿ

ವಯೋಮಿತಿ: ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಹುದ್ದೆಗೆ ಅನುಸಾರ ವಯೋಮಿತಿ ಹೊಂದಿರಬೇಕು. ಜನರಲ್ ಡ್ಯೂಟಿ ಮೆಡಿಕಲ್ ಆಫೀಸರ್ ಹುದ್ದೆಗೆ ಗರಿಷ್ಠ 35 ವರ್ಷ, ಮಿಕ್ಕೆಲ್ಲಾ ಹುದ್ದೆಗೆ ಗರಿಷ್ಠ 45 ವರ್ಷಗಳ ವಯೋಮಿತಿ ನಿಗದಿಪಡಿಸಲಾಗಿದೆ. ಸರಕಾರದ ನಿಯಮಗಳ ಅನುಸಾರ SC/ST ಅಭ್ಯರ್ಥಿಗಳಿಗೆ 5 ವರ್ಷ, OBC ಅಭ್ಯರ್ಥಿಗಳಿಗೆ 3 ವರ್ಷ, PwBD/PH ಅಭ್ಯರ್ಥಿಗಳಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆ ನೀಡಲಾಗಿದೆ.

ಅರ್ಜಿ ಶುಲ್ಕ: ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳಿಗೆ ₹500 ಅರ್ಜಿ ಶುಲ್ಕ ವಿಧಿಸಲಾಗಿದೆ. SC/ST/PWBD ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕವಿಲ್ಲ.

ಆಯ್ಕೆ ಪ್ರಕ್ರಿಯೆ: ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ವೈಯಕ್ತಿಕ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

NTPC Recruitment 2022: ವಿವಿಧ ಎಕ್ಸಿಕ್ಯೂಟಿವ್ ಟ್ರೈನಿ ಹುದ್ದೆಗಳಿಗೆ ಎನ್‌ಟಿಪಿಸಿ ನೇಮಕಾತಿ

ವೇತನ:  ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ  ₹40,000 ದಿಂದ ₹1,80,000 ವೇತನ ದೊರೆಯಲಿದೆ.

ಅರ್ಜಿ ಸಲ್ಲಿಸಬೇಕಾದ ವಿಳಾಸ
Chief Manager (HR)
Recruitment Cell
Koraput Division
Hindustan Aeronautics Limited
Koraput Division
Sunabeda – 763002, 
Dist: Koraput, Odisha
ಸಂದೇಹಗಳಿದ್ದರೆ 06853-220929
ಈ ಮೇಲ್ recruitment.koraput@hal-india.com

click me!