Bengaluru: ಪ್ಯಾರಾಚೂಟ್‌ ರೆಜಿಮೆಂಟ್‌ನ ಮೊದಲ ಅಗ್ನಿವೀರರ ಮೊದಲ ಬ್ಯಾಚ್‌ ನಿರ್ಗಮನ

By Suvarna News  |  First Published Jun 18, 2023, 10:26 PM IST

ಪ್ಯಾರಾಚೂಟ್‌ ರೆಜಿಮೆಂಟ್‌ನ ಮೊದಲ ಅಗ್ನಿವೀರ ಮೊದಲ ಬ್ಯಾಚ್‌ ನಿರ್ಗಮನ. ಯಾವುದೇ ಸ್ಥಿತಿಯಲ್ಲಿದ್ದರೂ ಸೋಲಿಗೆ ಭಯಪಡಬೇಡಿ ಎಂದ ಮೇಜರ್‌ ಜನರಲ್‌


ಬೆಂಗಳೂರು (ಜೂ.18): ನಗರದ ಹಳೆ ಮದ್ರಾಸ್‌ ರಸ್ತೆಯಲ್ಲಿನ ಎಎಸ್‌ಸಿ ಕೇಂದ್ರ (ಉತ್ತರ) ಹಾಗೂ ಜೆ.ಸಿ.ನಗರದ ಭಾರತೀಯ ಸೇನಾ ಪ್ಯಾರಾಚೂಟ್‌ ರೆಜಿಮೆಂಟ್‌ ತರಬೇತಿ ಕೇಂದ್ರಗಳಲ್ಲಿ ಅಗ್ನಿಪಥ ಯೋಜನೆಯ ಮೊದಲ ಬ್ಯಾಚ್‌ನ ಎರಡು ಯೂನಿಟ್‌ನ ಸೈನಿಕರ ನಿರ್ಗಮನ ಪಥಸಂಚಲನ ಪ್ರತ್ಯೇಕವಾಗಿ ಜರುಗಿತು.

ಈ ವೇಳೆ ಮಾತನಾಡಿದ ಸಶಸ್ತ್ರ ಪಡೆಗಳ ವಿಶೇಷ ಕಾರ್ಯಾಚರಣೆ ವಿಭಾಗದ ಕಮಾಂಡಿಂಗ್‌ ಜನರಲ್‌ ಆಫೀಸರ್‌ ಮೇಜರ್‌ ಜನರಲ್‌ ಜೆ.ಎಸ್‌.ನಂದಾ, ಪ್ಯಾರಾಚೂಟ್‌ ರೆಜಿಮೆಂಟ್‌ನಲ್ಲಿ ತರಬೇತಿ ದೊರೆತಿರುವುದು ಅದೃಷ್ಟ. ಇಲ್ಲಿ ಶಾರೀರಿಕ ತರಬೇತಿ ನೀಡಲಾಗುತ್ತದೆ. ಆದರೆ, ಮಾನಸಿಕ ದೃಢತೆಯನ್ನು ನಿಮಗೆ ನೀವೇ ತಂದುಕೊಳ್ಳಬೇಕು. ಸೈನಿಕರದ್ದು ಸುಲಭದ ಕೆಲಸವಲ್ಲ. ಯಾವುದೇ ಸ್ಥಿತಿಯಲ್ಲಿದ್ದರೂ ಸೋಲಿಗೆ ಭಯಪಡಬೇಡಿ ಎಂದು ಧೈರ್ಯ ತುಂಬಿದರು.

Tap to resize

Latest Videos

undefined

ಇಳಿವಯಸ್ಸಲ್ಲೂ ದುಡಿಯುವ ಮಹಿಳೆಯರಿಗೆ ಬೆಂಗಳೂರು ಬೆಸ್ಟ್‌: ಸಮೀಕ್ಷೆ

ಅತ್ಯುತ್ತಮ ನೇಮಕಾತಿಗಾಗಿ ‘ಗಿಲ್’ ಪದಕವನ್ನು ಸುನಿಲ್ ಬಾದಲ್, ಸಹಿಷ್ಣುತೆಯಲ್ಲಿ ಅತ್ಯುತ್ತಮ ‘ಕಮಾಂಡೆಂಟ್ಸ್‌ ಎಂಡ್ಯೂರೆನ್ಸ್…’ ಪದಕವನ್ನು ಮಹಮ್ಮದ್‌ ಫಿರೋಜ್, ಫೈರಿಂಗ್‌ ಮತ್ತು ಶಸ್ತ್ರಾಸ್ತ್ರ ತರಬೇತಿಯಲ್ಲಿ ‘ಘಾಡ್ಗೆ’ ಪದಕವನ್ನು ಅಂಕಿತ್‌, ದೈಹಿಕ ತರಬೇತಿಯಲ್ಲಿ ‘ಚೀಮಾ’ ಪದಕವನ್ನು ಮುತ್ತುರಾಜ ದೊಡ್ಡಮನಿ, ಡ್ರಿಲ್‌ನಲ್ಲಿ ಉತ್ತಮ ನೇಮಕಾತಿಗಾಗಿ ‘ಛೆಟ್ರಿ’ ಪದಕವನ್ನು ದೇವೆರ್‌ ಪ್ರತೀಕ್‌ ಬಾಬನರಾವ್‌ ಪಡೆದರು.

TCS Mass Resignation: ವರ್ಕ್‌ಫ್ರಮ್ ಹೋಂ ನಿಲ್ಲಿಸಿದ ಟಿಸಿಎಸ್‌, ಮಹಿಳಾ ಉದ್ಯೋಗಿಗ

ಎಎಸ್‌ಸಿ ಕೇಂದ್ರದಲ್ಲಿ 113 ಅಗ್ನಿವೀರರು ಹಾಗೂ ಪ್ಯಾರಾಚೂಟ್‌ ರೆಜಿಮೆಂಟ್‌ನಲ್ಲಿ 212ಅಗ್ನಿವೀರರು ಪಥಸಂಚಲನ ನಡೆಸಿದರು. ಇವರೆಲ್ಲರೂ ಕಳೆದ 24 ವಾರಗಳಿಂದ ತರಬೇತಿ ಪಡೆದಿದ್ದಾರೆ. ಪರೇಡನ್ನು ಅಗ್ನಿವೀರರ ಪೋಷಕರು, ಕುಟುಂಬಸ್ಥರು ಕಣ್ತುಂಬಿಕೊಂಡರು. ಎಎಸ್‌ಸಿ ಉತ್ತರ ಕೇಂದ್ರದಲ್ಲಿ ಬ್ರಿಗೇಡಿಯರ್‌ ತೇಜ್‌ಪಾಲ್‌ ಮಾನ್‌ ಇದ್ದರು.

ಜೂ.23ಕ್ಕೆ ವಿಶೇಷ ನೇಮಕಾತಿ ಮೇಳ:
ಬೀದರ್‌: ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಬೀದರ್‌ ಮತ್ತು ಡಾನ್‌ ಬಾಸ್ಕೋ ಪ್ರೈವೆಟ್‌ ಇವರ ಸಹಯೋಗದಲ್ಲಿ ಜೂ.23ರಂದು ವಿಶೇಷ ನೇಮಕಾತಿ ಮೇಳವನ್ನು ಆಯೋಜಿಸಲಾಗಿದೆ. ಮೇಳದಲ್ಲಿ ಬ್ಯಾಕಿಂಗ್‌, ಫೈನಾನ್ಸ್‌, ಸಾಪ್ಟವೇರ್‌, ಬಿಪಿಓ ಕಂಪನಿಗಳು ಭಾಗವಹಿಸುತ್ತಿದ್ದು, 18 ರಿಂದ 35 ವರ್ಷ ವಯಸ್ಸಿನವರು ಭಾಗವಹಿಸಬಹುದಾಗಿದೆ. ವಿದ್ಯಾರ್ಹತೆ ಎಸ್ಸೆಸ್ಸೆಲ್ಸಿ ಮತ್ತು ಯಾವುದೇ ಪದವಿ ಹೊಂದಿರಬೇಕು. ಜಿಲ್ಲೆಯ ಅಭ್ಯರ್ಥಿಗಳಿಗೆ ಇದೊಂದು ಸುವರ್ಣವಕಾಶ, ಗ್ರಾಮೀಣ ಅಭ್ಯರ್ಥಿಗಳಿಗೆ ವಿಶೇಷ ಆದ್ಯತೆ ನೀಡಲಾಗುವುದು. ಭಾಗವಹಿಸುವ ಅಭ್ಯರ್ಥಿಗಳು ಮೊ: 9480842995, 9916528852, 9739760206, 8310391378 ಇಲ್ಲಿಗೆ ಕರೆ ಮಾಡಿ ಪೂರ್ವ ನೋಂದಣಿ ಮಾಡಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಡಾನ್‌ ಬಾಸ್ಕೋ ಪ್ರೈವೆಟ್‌, ಔರಾದ್‌ ರೋಡ್‌, ಚಿಕ್ಕಪೇಟ ಬೀದರಗೆ ಸಂಪರ್ಕಿಸುವಂತೆ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಅಧಿ​ಕಾರಿಗಳು ತಿಳಿಸಿದ್ದಾರೆ.

click me!