EXIM ಬ್ಯಾಂಕ್‌ನಲ್ಲಿ ಮ್ಯಾನೇಜ್ಮೆಂಟ್ ಟ್ರೈನಿ ಹುದ್ದೆಗೆ ನೇಮಕಾತಿ, ಸೆ.18ರಿಂದ ಆನ್‌ಲೈನ್ ಅರ್ಜಿ ಸಲ್ಲಿಕೆ!

By Chethan KumarFirst Published Sep 15, 2024, 8:33 PM IST
Highlights

ಎಕ್ಸ್‌ಪೋರ್ಟ್ ಇಂಪೋರ್ಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾಲಿ ಇರುವ ಮ್ಯಾನೇಜ್ಮೆಂಟ್ ಟ್ರೈನಿ ಹುದ್ದೆಗೆ ನೇಮಕಾತಿ ಆರಂಭಗೊಳ್ಳುತ್ತಿದೆ. ಸೆ.18ರಿಂದ ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭಗೊಳ್ಳುತ್ತಿದೆ. 

ನವದೆಹಲಿ(ಸೆ.15) ಎಕ್ಸ್‌ಪೋರ್ಟ್ ಇಂಪೋರ್ಟ್ ಬ್ಯಾಂಕ್ ಆಫ್ ಇಂಡಿಯಾ(EXIM) ನೇಮಕಾತಿ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿದೆ. ಬ್ಯಾಂಕ್‌ನ ಮ್ಯಾನೇಜ್ಮೆಂಟ್ ಟ್ರೈನಿ ಹುದ್ದೆಗೆ ಅರ್ಹ ಅಭ್ಯರ್ಥಿಗಳ ಅರ್ಜಿ ಆಹ್ವಾನಿಸಿದೆ. 50 ಮ್ಯಾನೇಜ್ಮೆಂಟ್ ಟ್ರೈನಿ ಹುದ್ದೆಗಳು ಖಾಲಿ ಇದ್ದು, ಸೆಪ್ಟೆಂಬರ್ 18 ರಿಂದ ಆನ್‌ಲೈನ್ ಆ್ಯಪ್ಲಿಕೇಶನ್ ಸಲ್ಲಿಕೆ ಆರಂಭಗೊಳ್ಳುತ್ತಿದೆ. ಅಕ್ಟೋಬರ್ 7ರ ವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶವಿದೆ. ಇನ್ನು ವಯೋಮಿತಿ 21ರಿಂದ 28 ವರ್ಷದೊಳಗಿರಬೇಕು.

ಮೂರು ವರ್ಷದ ಪದವಿ ಪೂರೈಸಿದ ಅಭ್ಯರ್ಥಿಗಳು EXIM ಬ್ಯಾಂಕ್‌ನ ಮ್ಯಾನೇಜ್ಮೆಂಟ್ ಟ್ರೈನಿ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಕನಿಷ್ಠ ಶೇಕಡಾ 60 ಅಗ್ರೀಗೇಟ್ ಅಂಕ ಪಡೆದಿರಬೇಕು. ವಿಶೇಷ ಅಂದರೆ ಚಾರ್ಟೆಡ್ ಅಕೌಂಟನ್ಸಿಯಲ್ಲಿ ಸ್ನಾತಕೋತ್ತರ ಪದವಿಯ 2025ರ ಅಂತಿಮ ಪರೀಕ್ಷೆ ಬರೆಯಲು ಸಜ್ಜಾಗಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶವಿದೆ. eximbankindia.in ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್ ಅರ್ಜಿ ಸಲ್ಲಿಕೆ ಕೋರಲಾಗಿದೆ. 

Latest Videos

ದಕ್ಷಿಣ ರೈಲ್ವೆಯಲ್ಲಿ ನೇಮಕಾತಿ ಆರಂಭ: SSLC, ಡಿಗ್ರಿ ಪಾಸ್ ಆದವರಿಗೆ ಪರೀಕ್ಷೆ ಇಲ್ಲದೆ ಉದ್ಯೋಗವಕಾಶ!

OBC ಹಾಗೂ ಜನರಲ್ ಕೆಟಗರಿಯಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅರ್ಜಿ ಶುಲ್ಕ 600 ರೂಪಾಯಿ ಭರಿಸಬೇಕು. ಇನ್ನು ಎಸ್‌ಸಿ, ಎಸ್‌ಟಿ, ಇವಿಎಸ್ ಸೇರಿದಂತೆ ಇತರ ಕೆಲ ಕೆಟರಿಯಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅರ್ಜಿ ಶುಲ್ಕ 100 ರೂಪಾಯಿ ಭರಿಸಬೇಕು. 

ಅರ್ಜಿ ಸಲ್ಲಿಕೆ ಹೇಗೆ?
EXIM ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್ eximbankindia.in ಕ್ಲಿಕ್ ಮಾಡಿ ಲಾಗಿನ್ ಆಗಬೇಕು
ಕರಿಯರ್ ಸೆಕ್ಷನ್ ಕಳಗಡೆ ಉಲ್ಲೇಖಿಸಿರುವ EXIM ಬ್ಯಾಂಕ್ ಎಂಟಿ ನೇಮಕಾತಿ 2024 ನೋಟಿಫಿಕೇಶನ್(ಪಿಡಿಎಪ್ ಫಾರ್ಮ್) ಕ್ಲಿಕ್ ಮಾಡಬೇಕು
ಬಳಿಕ ಆನ್‌ಲೈನ್ ಅಪ್ಲೈ ಲಿಂಕ್ ಕ್ಲಿಕ್ ಮಾಡಬೇಕು
ಹೊಸ ಪೇಜ್ ತೆರೆದುಕೊಂಡ ಬಳಿಕ ಅಭ್ಯರ್ಥಿಗಳು ವಿವರಗಳನ್ನು ನಮೂದಿಸಬೇಕು. ಶೈಕ್ಷಣಿಕ ವಿವರ, ಇತರ ವೈಯುಕ್ತಿಕ ಮಾಹಿತಿಗಳನ್ನು ದಾಖಲಿಸಬೇಕು
ಅಗತ್ಯವಿರುವ ದಾಖಲೆಗಳನ್ನು, ಅಂಕಪಟ್ಟಿ,ವಿಳಾಸ ದೃಢೀಕರಣ ಸೇರಿದಂತೆ ದಾಖಲೆ ಪತ್ರಗಳನ್ನು ಅಪ್ಲೋಡ್ ಮಾಡಬೇಕು
ಅರ್ಜಿ ಶುಲ್ಕ ಭರ್ತಿ ಮಾಡಿ ಸಬ್‌ಮಿಟ್ ಬಟನ್ ಕ್ಲಿಕ್ ಮಾಡಬೇಕು
ಭರ್ತಿ ಮಾಡಿದ ಅರ್ಜಿಯನ್ನು ಸೇವ್ ಮಾಡಿ ಇಟ್ಟುಕೊಳ್ಳಿ

ಕರ್ನಾಟಕದಲ್ಲಿ ಹೊಸ ಬಿಟಿ ನೀತಿ: 5 ವರ್ಷದಲ್ಲಿ 30,000 ಉದ್ಯೋಗ

ಹುದ್ದೆ ಹಾಗೂ ಕೆಟಗರಿ ವಿವರ
ಅನ್‌ರಿಸರ್ವಡ್ ಹುದ್ದೆ 22
ಪರಿಸಿಷ್ಠ ಜಾತಿ 7
ಪರಿಶಿಷ್ಠ ಪಂಗಡ 3
ಇತರ ಹಿಂದುಳಿದ ವರ್ಗ 13
ಆರ್ಥಿಕವಾಗಿ ಹಿಂದುಳಿಗ ವರ್ಗ 5
ವಿಶೇಷಚೇತನ 2

click me!