EPFO Recruitment 2022: ಇಪಿಎಫ್ಓ ನಲ್ಲಿ ಖಾಲಿ ಇರುವ 98 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

By Suvarna News  |  First Published Dec 20, 2021, 1:41 PM IST
  • ನೌಕರರ ಭವಿಷ್ಯ ನಿಧಿ ಸಂಸ್ಥೆಯಲ್ಲಿ 98 ಹುದ್ದೆಗಳು ಖಾಲಿ
  • ಜನವರಿ 2, 2022 ರೊಳಗೆ  ಅರ್ಜಿ ಸಲ್ಲಿಸಲು ಕೋರಲಾಗಿದೆ
  • ಅಭ್ಯರ್ಥಿಗಳು ಆಫ್​ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು

ಬೆಂಗಳೂರು(ಡಿ.20): ನೌಕರರ ಭವಿಷ್ಯ ನಿಧಿ ಸಂಸ್ಥೆ (Employees Provident Fund Organisation) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಪ್ರಕಟಿಸಿದೆ. ಡೆಪ್ಯುಟಿ ಡೈರೆಕ್ಟರ್, ಅಸಿಸ್ಟೆಂಟ್ ಡೈರೆಕ್ಟರ್​, ಆಡಿಟರ್, ಅಸಿಸ್ಟೆಂಟ್ ಆಡಿಟ್​ ಆಫೀಸರ್ ಸೇರಿ ಒಟ್ಟು 98 ಹುದ್ದೆಗಳು ಖಾಲಿ ಇದೆ.  ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಖಾಲಿ ಇರುವ ಹುದ್ದೆಗಳಿಗೆ  ಜನವರಿ 2, 2022 ರೊಳಗೆ  ಅರ್ಜಿ ಸಲ್ಲಿಸಲು ಕೋರಲಾಗಿದೆ. ಅಭ್ಯರ್ಥಿಗಳು ಆಫ್​ಲೈನ್ (Offline)​ ಮೂಲಕ ಅರ್ಜಿ ಸಲ್ಲಿಸಲು ಕೋರಲಾಗಿದೆ. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗೆ  ಇಲಾಖೆಯ ಅಧಿಕೃತ ವೆಬ್‌ತಾಣ  www.epfindia.gov.in ಗೆ ಭೇಟಿ ನೀಡಿ ತಿಳಿದುಕೊಳ್ಳಬಹುದು. 

ಒಟ್ಟು 98 ಹುದ್ದೆಗಳು ಖಾಲಿ ಇದ್ದು, ಮಾಹಿತಿ ಇಂತಿದೆ
ಡೆಪ್ಯುಟಿ ಡೈರೆಕ್ಟರ್​-13
ಅಸಿಸ್ಟೆಂಟ್ ಡೈರೆಕ್ಟರ್​-25
ಅಸಿಸ್ಟೆಂಟ್ ಆಡಿಟ್ ಆಫೀಸರ್-26
ಆಡಿಟರ್-34

Latest Videos

undefined

ವಿದ್ಯಾರ್ಹತೆ: ಡೆಪ್ಯುಟಿ ಡೈರೆಕ್ಟರ್, ಅಸಿಸ್ಟೆಂಟ್ ಡೈರೆಕ್ಟರ್​, ಆಡಿಟರ್, ಅಸಿಸ್ಟೆಂಟ್ ಆಡಿಟ್​ ಆಫೀಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಬೋರ್ಡ್​​ನಿಂದ ಯಾವುದೇ ಪದವಿ ಪಡೆದವರು ಅರ್ಹರಾಗಿರುತ್ತಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

NHM Recruitment 2022: ಬರೋಬ್ಬರಿ 2980 ಲ್ಯಾಬ್ ಟೆಕ್ನಿಷಿಯನ್ ಹುದ್ದೆಗಳ ಭರ್ತಿ

ವಯೋಮಿತಿ ಮತ್ತು ವೇತನ: ಆಫೀಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 56 ವರ್ಷ ಮೀರಿರಬಾರದು. ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ರೂ. 15,600-39,100 ವೇತನ ನೀಡಲಾಗುತ್ತದೆ.

ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲೆಗಳೊಂದಿಗೆ 
ಶ್ರೀ ಪರಿತೋಷ್​ ಕುಮಾರ್
ರೀಜನಲ್​ ಪ್ರಾವಿಡೆಂಟ್ ಫಂಡ್ ಕಮಿಷನರ್-1(HRM)
ಭವಿಷ್ಯ ನಿಧಿ ಭವನ
14 ಭಿಕಜಿ ಕ್ಯಾಮ ಸರ್ಕಲ್
ನವದೆಹಲಿ-11006

India post recruitment 2021: ಅಂಚೆ ಇಲಾಖೆಯಲ್ಲಿ ನೇಮಕಾತಿ, SSLC, PUC ಮುಗಿಸಿದವರು ಅರ್ಜಿ ಹಾಕಿ

ಲಿಖಿತ ಪರೀಕ್ಷೆ,ದಾಖಲಾತಿ ಪರಿಶೀಲನೆ, ಮತ್ತು ವೈಯಕ್ತಿಕ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಭಾರತದಲ್ಲಿ ಎಲ್ಲಿ ಬೇಕಾದರೂ ಕೆಲಸ ಮಾಡಬಹುದು.

ಸರ್ಕಾರಿ ಸ್ವಾಮ್ಯದ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (Bharath Electronics Limited-BEL) ಮತ್ತೊಮ್ಮೆ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ. ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಬಿಇಎಲ್‌ನ ಹೈದರಾಬಾದ್ ಘಟಕದ ನೇಮಕಾತಿಗಾಗಿ ಅರ್ಜಿಗಳನ್ನ ಕರೆಯಲಾಗಿದೆ.  ಕಾಂಟ್ರ್ಯಾಕ್ಟ್ ಆಧಾರದ ಮೇಲೆ 84 ಟ್ರೈನಿ ಇಂಜಿನಿಯರ್-I ಮತ್ತು ಪ್ರಾಜೆಕ್ಟ್ ಇಂಜಿನಿಯರ್-I ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಅರ್ಜಿ ಸಲ್ಲಿಸಲು ಡಿಸೆಂಬರ್ 31 ಕೊನೆಯ ದಿನಾಂಕವಾಗಿದೆ. ಆಸಕ್ತ ಅಭ್ಯರ್ಥಿಗಳು ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಅಧಿಕೃತ ವೆಬ್‌ಸೈಟ್ bel-india.in ಮೂಲಕ ಅರ್ಜಿ ಸಲ್ಲಿಸಬಹುದು. ಬಿಇಎಲ್ ನೇಮಕಾತಿ ನೋಟಿಫಿಕೇಷನ್ ಬಗ್ಗೆ ತಿಳಿಯಲು 

ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್‌ನ ಹೈದ್ರಾಬಾದ್ ಘಟಕದಲ್ಲಿ ಸದ್ಯ  ಟ್ರೈನಿ ಇಂಜಿನಿಯರ್-1 (Trainee Engineer–I (Electronics)- 19 ಹುದ್ದೆಗಳು, ಟ್ರೈನಿ ಇಂಜಿನಿಯರ್-1  ಟ್ರೈನಿ ಇಂಜಿನಿಯರ್-1  (Mechanical)- 11 ಹುದ್ದೆಗಳು, ಟ್ರೈನಿ ಇಂಜಿನಿಯರ್-1 (Computer Science): 03 ಹುದ್ದೆಗಳು, ಪ್ರಾಜೆಕ್ಟ್ ಇಂಜಿನಿಯರ್–I (Electronics)- 36 ಹುದ್ದೆಗಳು, ಪ್ರಾಜೆಕ್ಟ್ ಇಂಜಿನಿಯರ್–I (Mechanical): 08 ಹುದ್ದೆಗಳು, ಪ್ರಾಜೆಕ್ಟ್ ಇಂಜಿನಿಯರ್–I (Computer Science) -06 ಹುದ್ದೆಗಳು, ಪ್ರಾಜೆಕ್ಟ್ ಇಂಜಿನಿಯರ್–I (Electrical)- 01 ಹುದ್ದೆ ಸೇರಿ ಒಟ್ಟು 84 ಟ್ರೈನಿ ಹುದ್ದೆಗಳನ್ನ ಈ ನೇಮಕಾತಿ ಡ್ರೈವ್ನಲ್ಲಿ ಭರ್ತಿ ಮಾಡಿಕೊಳ್ಳಲಾಗುತ್ತದೆ.

click me!