BEL Recruitment 2021: ಹೈದ್ರಾಬಾದ್ ಬಿಇಎಲ್‌ನಲ್ಲಿ 84 ಹುದ್ದೆಗಳಿಗೆ ನೇಮಕಾತಿ, ಅರ್ಜಿ ಸಲ್ಲಿಸಿ!

By Suvarna News  |  First Published Dec 20, 2021, 10:28 AM IST

*ಬಿಇಎಲ್‌ನ ಹೈದ್ರಾಬಾದ್ ಘಟಕದ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ
*ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು 2021 ಡಿಸೆಂಬರ್ 31 ಕೊನೆಯ ದಿನವಾಗಿದೆ
*ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಛಿಸುವವರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು


ಹೈದರಾಬಾದ್‌ (ಡಿ.20): ಸರ್ಕಾರಿ ಸ್ವಾಮ್ಯದ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (Bharath Electronics Limited-BEL) ಮತ್ತೊಮ್ಮೆ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ. ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಬಿಇಎಲ್‌ನ ಹೈದರಾಬಾದ್ ಘಟಕದ ನೇಮಕಾತಿಗಾಗಿ ಅರ್ಜಿಗಳನ್ನ ಕರೆಯಲಾಗಿದೆ.  ಕಾಂಟ್ರ್ಯಾಕ್ಟ್ ಆಧಾರದ ಮೇಲೆ 84 ಟ್ರೈನಿ ಇಂಜಿನಿಯರ್-I ಮತ್ತು ಪ್ರಾಜೆಕ್ಟ್ ಇಂಜಿನಿಯರ್-I ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಅರ್ಜಿ ಸಲ್ಲಿಸಲು ಡಿಸೆಂಬರ್ 31 ಕೊನೆಯ ದಿನಾಂಕವಾಗಿದೆ. ಆಸಕ್ತ ಅಭ್ಯರ್ಥಿಗಳು ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಅಧಿಕೃತ ವೆಬ್‌ಸೈಟ್ bel-india.in ಮೂಲಕ ಅರ್ಜಿ ಸಲ್ಲಿಸಬಹುದು. ಬಿಇಎಲ್ ನೇಮಕಾತಿ ನೋಟಿಫಿಕೇಷನ್ ಬಗ್ಗೆ ತಿಳಿಯಲು

ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್‌ನ ಹೈದ್ರಾಬಾದ್ ಘಟಕದಲ್ಲಿ ಸದ್ಯ  ಟ್ರೈನಿ ಇಂಜಿನಿಯರ್-1 (Trainee Engineer–I (Electronics)- 19 ಹುದ್ದೆಗಳು, ಟ್ರೈನಿ ಇಂಜಿನಿಯರ್-1  ಟ್ರೈನಿ ಇಂಜಿನಿಯರ್-1  (Mechanical)- 11 ಹುದ್ದೆಗಳು, ಟ್ರೈನಿ ಇಂಜಿನಿಯರ್-1 (Computer Science): 03 ಹುದ್ದೆಗಳು, ಪ್ರಾಜೆಕ್ಟ್ ಇಂಜಿನಿಯರ್–I (Electronics)- 36 ಹುದ್ದೆಗಳು, ಪ್ರಾಜೆಕ್ಟ್ ಇಂಜಿನಿಯರ್–I (Mechanical): 08 ಹುದ್ದೆಗಳು, ಪ್ರಾಜೆಕ್ಟ್ ಇಂಜಿನಿಯರ್–I (Computer Science) -06 ಹುದ್ದೆಗಳು, ಪ್ರಾಜೆಕ್ಟ್ ಇಂಜಿನಿಯರ್–I (Electrical)- 01 ಹುದ್ದೆ ಸೇರಿ ಒಟ್ಟು 84 ಟ್ರೈನಿ ಹುದ್ದೆಗಳನ್ನ ಈ ನೇಮಕಾತಿ ಡ್ರೈವ್ನಲ್ಲಿ ಭರ್ತಿ ಮಾಡಿಕೊಳ್ಳಲಾಗುತ್ತದೆ.

Tap to resize

Latest Videos

undefined

ICAR Recruitment 2022: ಕೃಷಿ ವಿಜ್ಞಾನ ಕೇಂದ್ರದಲ್ಲಿ ಸಹಾಯಕ, ಕೌಶಲ್ಯಯುಕ್ತ ಸಿಬ್ಬಂದಿ ಹುದ್ದೆಗೆ ಅರ್ಜಿ ಆಹ್ವಾನ 

ಟ್ರೈನಿ ಇಂಜಿನಿಯರ್-I(Trainee Engineer–I) ಹುದ್ದೆಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ  ಒಪ್ಪಂದದ ಪ್ರಕಾರ 1ನೇ, 2ನೇ ಮತ್ತು 3ನೇ ವರ್ಷಕ್ಕೆ ಕ್ರಮವಾಗಿ. ರೂ.25,000/-, ರೂ.28,000/- ಮತ್ತು ರೂ.31,000/- ಸಂಭಾವನೆ ನೀಡಲಾಗುತ್ತದೆ.

ಪ್ರಾಜೆಕ್ಟ್ ಇಂಜಿನಿಯರ್-I (Project Engineer): ಅಭ್ಯರ್ಥಿಗಳಿಗೆ 1ನೇ, 2ನೇ, 3ನೇ ವರ್ಷ ಮತ್ತು 4ನೇ ವರ್ಷಕ್ಕೆ ತಿಂಗಳಿಗೆ ರೂ.35,000/-, ರೂ.40,000/-, ರೂ.45,000/- ಮತ್ತು ರೂ.50,000/- ಗಳ ಸಂಯೋಜಿತ ಸಂಭಾವನೆಯನ್ನು ನೀಡಲಾಗುತ್ತದೆ. ಟ್ರೈನಿ ಇಂಜಿನಿಯರ್-I (ಎಲೆಕ್ಟ್ರಾನಿಕ್ಸ್): ಅಭ್ಯರ್ಥಿಯು ಸಂಬಂಧಿತ ಇಂಜಿನಿಯರಿಂಗ್ ವಿಭಾಗದಲ್ಲಿ BE/B.Tech/B.Sc Engineering ಮಾಡಿರಬೇಕು. ಜೊತೆಗೆ 1 ವರ್ಷ ಕೆಲಸದ ಅನುಭವವನ್ನು ಹೊಂದಿರಬೇಕು.

ಪ್ರಾಜೆಕ್ಟ್ ಇಂಜಿನಿಯರ್-I (ಎಲೆಕ್ಟ್ರಾನಿಕ್ಸ್) ಹುದ್ದೆಗೆ ಅಭ್ಯರ್ಥಿಯು ಸಂಬಂಧಿತ ಎಂಜಿನಿಯರಿಂಗ್ ವಿಭಾಗದಲ್ಲಿ BE/B.Tech/B.Sc Engg ಪದವಿ ಜೊತೆಗೆ 2 ವರ್ಷಗಳ ಉದ್ಯೋಗ ಅನುಭವವನ್ನು ಹೊಂದಿರಬೇಕು. ಅಭ್ಯರ್ಥಿಗಳು ಎಸ್ ಬಿಐ (ಆನ್‌ಲೈನ್ ಮೋಡ್ ಮೂಲಕ ಅಥವಾ SBI ಶಾಖೆಯ ಮೂಲಕ) ಕಲೆಕ್ಟ್ ಮೂಲಕ ಅರ್ಜಿ ಶುಲ್ಕವನ್ನು ಪಾವತಿಸಬೇಕು. ಟ್ರೈನಿ ಇಂಜಿನಿಯರ್-I ಹುದ್ದೆಗೆ ಅಭ್ಯರ್ಥಿಗಳು  200 ರೂ. ಶುಲ್ಕ ಪಾವತಿಸಬೇಕು. ಪ್ರಾಜೆಕ್ಟ್ ಇಂಜಿನಿಯರ್-I ಹುದ್ದೆಗೆ 500/-ರೂ. ಶುಲ್ಕ ನಿಗದಿಯಾಗಿದೆ. ಇನ್ನು PWD/SC/ST ಅಭ್ಯರ್ಥಿಗಳಿಗೆ ಯಾವುದೇ ಶುಲ್ಕ ಇರುವುದಿಲ್ಲ.

BSNL recruitment 2022: ಅಪ್ರೆಂಟಿಸ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ 

ಆಫ್ ಲೈನ್ ಮೂಲಕ ಅರ್ಜಿ ಕಳಿಸಲು ಬಯಸುವವರು, ಸ್ಪೀಡ್ ಪೋಸ್ಟ್ ಅಥವಾ ಕೊರಿಯರ್ ಮಾಡಬಹುದು. ಅಭ್ಯರ್ಥಿಗಳು ಸ್ವಯಂ ದೃಢೀಕರಿಸಿದ ಎಲ್ಲಾ ಸಂಬಂಧಿತ ದಾಖಲೆಗಳೊಂದಿಗೆ ನಿಗದಿತ ಅರ್ಜಿ ನಮೂನೆಯಲ್ಲಿ ಸ್ಪೀಡ್ ಪೋಸ್ಟ್/ಕೊರಿಯರ್ ಮೂಲಕ ಕಳುಹಿಸಬಹುದು. ಜನರಲ್ ಮ್ಯಾನೇಜರ್ (HR), ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್, I.E Nacharam, ಹೈದರಾಬಾದ್-500076, ತೆಲಂಗಾಣ ರಾಜ್ಯ- ಈ ವಿಳಾಸಕ್ಕೆ ಅಭ್ಯರ್ಥಿಗಳು ಅರ್ಜಿ ಕಳುಹಿಸಬೇಕು.  ಡಿಸೆಂಬರ್ 31, 2021 ರಂದು ಅಥವಾ ಮೊದಲು ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಮಾಡಬೇಕು. ಸಂದರ್ಶನದ ಆಧಾರದ ಮೇಲೆ ಸಮರ್ಥ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.

click me!