ಐಟಿಐ ಪಾಸು ಮಾಡಿದ್ದೀರಾ? ಇಸಿಐಎಲ್‌ನಲ್ಲಿ 243 ಅಪ್ರೆಂಟಿಸ್‌ ಹುದ್ದಗೆಳಿಗೆ ನೇಮಕಾತಿ

By Suvarna News  |  First Published Sep 7, 2021, 6:46 PM IST

ಐಟಿಐ ಪಾಸು ಮಾಡಿದವರಿಗೆ ಇಲ್ಲೊಂದು ಅಪ್ರೆಂಟಿಸ್ ಮಾಡುವ ಅವಕಾಶವಿದೆ. ಎಲೆಕ್ಟ್ರಾನಿಕ್ಸ್ ಕಾರ್ಪೊರೇಶನ್ ಆಫ್ ಇಂಡಿಯಾ 243 ಅಪ್ರೆಂಟಿಸ್ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುತ್ತಿದೆ. ಸೆಪ್ಟೆಂಬರ್ 16 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಆಯ್ಕೆಯಾದ ಅಭ್ಯರ್ಥಿಗಳಿಗೆ ಸ್ಟೈಫಂಡ್ ಕೂಡ ಇದೆ.


ನೀವು ಐಟಿಐ ಮುಗಿಸಿ ಕೆಲಸ ಹುಡುಕಾಡ್ತಿದ್ದೀರಾ ? ಹಾಗಿದ್ರೆ ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್(ಇಸಿಐಎಲ್)ನಲ್ಲೊಮ್ಮೆ ಟ್ರೈ ಮಾಡಿ ನೋಡಿ. ಸದ್ಯ ಖಾಲಿ ಇರುವ ಸಾಕಷ್ಟು ಅಪ್ರೆಂಟಿಸ್ ಹುದ್ದೆಗಳಿಗೆ ಭರ್ತಿ ಮಾಡಿಕೊಳ್ಳಲು ಇಸಿಐಎಲ್ ಮುಂದಾಗಿದೆ.

ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (ಇಸಿಐಎಲ್) ಅಪ್ರೆಂಟಿಸ್ ಶಿಪ್ ಆಕ್ಟ್ 1961 ರ ಅಡಿಯಲ್ಲಿ ಖಾಲಿ ಇರುವ 243 ಐಟಿಐ ಟ್ರೇಡ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಇಸಿಐಎಲ್ ಹೈದ್ರಾಬಾದ್ ಶಾಖೆಗೆ ಈ ಎಲ್ಲ ಹುದ್ದೆಗಳಿಗೆ ಭರ್ತಿ ಮಾಡಿಕೊಳ್ಳಲಾಗುವುದು.

Tap to resize

Latest Videos

undefined

ರಕ್ಷಣಾ ಇಲಾಖೆಯಲ್ಲಿ ಎಸ್ಸೆಸ್ಸೆಲ್ಸಿ ಪಾಸಾದವರಿಗೆ ಜಾಬ್, 400 ಹುದ್ದೆಗಳಿಗೆ ನೇಮಕಾತಿ

ಆಸಕ್ತ ಅಭ್ಯರ್ಥಿಗಳು ecil.co.in ನಲ್ಲಿ ಟ್ರೇಡ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.  ITI ಟ್ರೇಡ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ನೇಮಕಾತಿಗೆ ಅರ್ಜಿ ಸಲ್ಲಿಸಲು ಕೊನೆಯ ಸೆಪ್ಟೆಂಬರ್ 16 ಕೊನೆಯ ದಿನಾಂಕವಾಗಿದೆ.

ಒಟ್ಟು 243 ಹುದ್ದೆಗಳಿದ್ದು, ಆಯ್ಕೆಯಾದ ಅಪ್ರೆಂಟಿಸ್ ಹುದ್ದೆಗಳಿಗೆ ಪ್ರತಿ ತಿಂಗಳು 7700- 8050 ರೂ. ಸ್ಟೈಫಂಡ್ ಸಿಗಲಿದೆ.  ಈ ನೇಮಕಾತಿ ಪ್ರಕ್ರಿಯೆಯಲ್ಲಿ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 123 ಹುದ್ದೆ, ಇಡಬ್ಲ್ಯೂ ಎಸ್ - 12 ಹುದ್ದೆ, ಓಬಿಸಿ -66 ಹುದ್ದೆಗಳು, ಎಸ್ಸಿ-36 ಹಾಗೂ ಎಸ್ಟಿ- 18 ಹುದ್ದೆಗಳು ಸೇರಿ ಒಟ್ಟು 243 ಹುದ್ದೆಗಳನ್ನ ಭರ್ತಿ ಕೊಳ್ಳಲಾಗುವುದು. ಆಯ್ಕೆಯಾದ ಅಭ್ಯರ್ಥಿಗಳು ಅಪ್ರೆಂಟಿಸ್‌ಶಿಪ್ ಆಕ್ಟ್ 1961 ರ ಅಡಿಯಲ್ಲಿ ಇಸಿಐಎಲ್ ಹೈದರಾಬಾದ್‌ನಲ್ಲಿ ಐಟಿಐ ಟ್ರೇಡ್ ಅಪ್ರೆಂಟಿಸ್‌ಶಿಪ್‌ಗೆ ಒಳಪಡಲಿದ್ದಾರೆ.

 ಅಂದಹಾಗೇ ಈ ಅಪ್ರೆಂಟಿಸ್‌ಶಿಪ್‌ನ ಅವಧಿ ಒಂದು ವರ್ಷ ಮಾತ್ರ ಇರಲಿದ್ದು,  ಅದು ಅಕ್ಟೋಬರ್ 2021 ರಿಂದ ಆರಂಭವಾಗುತ್ತದೆ. ಅಭ್ಯರ್ಥಿಗಳಿಗೆ ಮಾಸಿಕ 8050 ರೂ. ಸ್ಟೈಫಂಡ್ ಸಿಗಲಿದೆ. 

ಬಿಎಚ್ಇಎಲ್‌ನಲ್ಲಿ ಅಪ್ರೆಂಟಿಸ್‌ ಹುದ್ದೆಗಳಿಗೆ ಆಹ್ವಾನ, ಅರ್ಜಿ ಹಾಕಿ

ಎಲೆಕ್ಟ್ರಿಷಿಯನ್-30, ಎಲೆಕ್ಟ್ರಾನಿಕ್ ಮೆಕ್ಯಾನಿಕ್-70, ಫಿಟ್ಟರ್- 65, ಆರ್ & ಎಸಿ- 07, ಎಂಎಂವಿ- 01, ಟರ್ನರ್-10, ಮೆಕ್ಯಾನಿಸ್ಟ್-05, ಮೆಕ್ಯಾನಿಸ್ಟ್ (ಜಿ)-03, ಎಂಎಂ ಟೂಲ್ ಮೈಂಟ್-02, ಕಾರ್ಪೆಂಟರ್- 05, ಕೋಪಾ- 16, ಡೀಸೆಲ್ ಮೆಕ್- 05, ಪ್ಲಂಬರ್- 02, ಎಸ್ಎಂಡಬ್ಲ್ಯೂ-02, ವೆಲ್ಡರ್-15, ಪೇಂಟರ್-05 ಸೇರಿ ಒಟ್ಟು 243 ಅಪ್ರೆಂಟಿಸ್ ಹುದ್ದೆಗಳನ್ನ ನೇಮಕ ಮಾಡಿಕೊಳ್ಳಾಗುತ್ತಿದೆ.

ಅಭ್ಯರ್ಥಿಯು ಐಟಿಐ ಪಾಸ್ ಆಗಿದ್ದು, ಪ್ರಮಾಣ ಪತ್ರವನ್ನು ಹೊಂದಿರಬೇಕು. ಸಂಬಂಧಿತ ಟ್ರೇಡ್‌ನಲ್ಲಿ NCVT ಪ್ರಮಾಣಪತ್ರವನ್ನು ಹೊಂದಿರಬೇಕು. ಅಭ್ಯರ್ಥಿಯ ವಯೋಮಿತಿ 18 ವರ್ಷದಿಂದ 25 ವರ್ಷದೊಳಗೆ ಇರಬೇಕು. ಆಸಕ್ತ ಅಭ್ಯರ್ಥಿಗಳು Careers.ecil.co.in ವೆಬ್‌ಸೈಟ್ ಮೂಲಕ  ಸೆಪ್ಟೆಂಬರ್ 16 ರೊಳಗೆ ಅರ್ಜಿ ಸಲ್ಲಿಸಬೇಕು. ಅಭ್ಯರ್ಥಿಗಳು ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯದ (MSDE) apprenticeshipindia.org. ವೆಬ್‌ಸೈಟ್‌ನಲ್ಲಿ ಮೊದಲು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿರಬೇಕು.  
 

ಅಪ್ರೆಂಟಿಸ್ ಹುದ್ದೆಗಳಿಗೆ ಅಭ್ಯರ್ಥಿಯು ಐಟಿಐನಲ್ಲಿ ಪಡೆದಿರುವ ಅಂಕಗಳನ್ನು ಆಧರಿಸಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಸೆಪ್ಟೆಂಬರ್ 16ಕ್ಕೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಮುಕ್ತಾಯಗೊಳ್ಳಲಿದ್ದು, ಸೆಪ್ಟೆಂಬರ್ 20 ರಿಂದ 25ರೊಳಗೆ ದಾಖಲೆಗಳ ಪರಿಶೀಲನೆ ನಡೆಯಲಿದೆ. ಅಕ್ಟೋಬರ್ 9ರೊಳಗೆ ನೇಮಕಾತಿ ಪ್ರಕ್ರಿಯೆ ಮುಕ್ತಾಯವಾಗಲಿದೆ. ಬಳಿಕ ಅಕ್ಟೋಬರ್ 15ರಿಂದಲೇ ಅಪ್ರೆಂಟಿಸ್ಶಿಪ್ ತರಬೇತಿ ಶುರುವಾಗಲಿದೆ. 

ವಿವಿಧ ಹುದ್ದೆಗಳಿಗೆ UPSC ನೇಮಕಾತಿ, ಅರ್ಜಿ ಹಾಕಿ

ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್, ಕಾರ್ಪೊರೇಟ್ ಕಲಿಕೆ ಮತ್ತು ಅಭಿವೃದ್ಧಿ ಕೇಂದ್ರ (CLDC), ನಳಂದ ಕಾಂಪ್ಲೆಕ್ಸ್, TIFR ರಸ್ತೆ, ECIL ಹೈದರಾಬಾದ್ - 500 062-  ಇಲ್ಲಿ ಡಾಕ್ಯುಮೆಂಟ್ಗಳ ಪರಿಶೀಲನೆ ಕಾರ್ಯ ನಡೆಯಲಿದೆ. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿ ಹಾಗೂ ವಿವರಗಳಿಗಾಗಿ hrcldc@ecil.co.in / hrclc@ecil.co.in ಗೆ ಈ-ಮೇಲ್ ಮೂಲಕ ಸಂಪರ್ಕಿಸಬಹುದು. 

click me!