UPSC Recrutiment: ಪ್ರೊಫೆಸರ್, ಜಂಟಿ ಸಹಾಯಕ ನಿರ್ದೇಶಕ ಸೇರಿ ಹಲವು ಹುದ್ದೆಗೆ ಅರ್ಜಿ ಆಹ್ವಾನ

By Suvarna News  |  First Published Nov 19, 2021, 1:51 PM IST

ಕೇಂದ್ರ ಲೋಕಾ ಸೇವಾ ಆಯೋಗ(UPSC)ವು ಪ್ರೊಫೆಸರ್, ಪ್ರೊಫೆಸರ್, ಅಸೋಸಿಯೇಟ್ ಪ್ರೊಫೆಸರ್, ಅಸಿಸ್ಟೆಂಟ್ ಪ್ರೊಫೆಸರ್, ಜಾಯಿಂಟ್ ಅಸಿಸ್ಟೆಂಟ್ ಡೈರೆಕ್ಟರ್ ಸೇರಿ ಹಲವು ಹುದ್ದೆಗಳಿಗೆ ನೇಮಕ ಪ್ರಕ್ರಿಯೆ ಆರಂಭಿಸಿದೆ. ಅರ್ಜಿ ಸಲ್ಲಿಸಲು ಡಿಸೆಂಬರ್ 2 ಕೊನೆಯ ದಿನವಾಗಿದ್ದು, ಆಸಕ್ತರು ಮತ್ತು ಅರ್ಹರು ಅರ್ಜಿ ಸಲ್ಲಿಸಬಹುದಾಗಿದೆ.


ಲೋಕ ಸೇವಾ ಆಯೋಗವು(Union Public Service Commission-UPSC)  ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗೆ ಮುಂದಾಗಿದೆ. ಪ್ರೊಫೆಸರ್, ಅಸೋಸಿಯೇಟ್ ಪ್ರೊಫೆಸರ್, ಅಸಿಸ್ಟೆಂಟ್ ಪ್ರೊಫೆಸರ್, ಜಾಯಿಂಟ್ ಅಸಿಸ್ಟೆಂಟ್ ಡೈರೆಕ್ಟರ್, ಸೀನಿಯರ್ ಅಸಿಸ್ಟೆಂಟ್ ಕಂಟ್ರೋಲರ್ ಆಫ್ ಮೈನ್ಸ್ ಸೇರಿದಂತೆ ವಿವಿಧ ಹುದ್ದೆಗಳ ಭರ್ತಿಗೆ ನೇಮಕಾತಿ ಪ್ರಕ್ರಿಯೆ ಆರಂಭಿಸಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಈ ನೇಮಕಾತಿ ಪ್ರಕ್ರಿಯೆಯಲ್ಲಿ ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ UPSC, ಒಟ್ಟು 36 ಖಾಲಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಿದೆ. ಆಸಕ್ತ ಅಭ್ಯರ್ಥಿಗಳು ಲೋಕ ಸೇವಾ ಆಯೋಗದ ಅಧಿಕೃತ ವೆಬ್‌ಸೈಟ್ upsconline.nic.in ಮೂಲಕ ಅರ್ಜಿ ಸಲ್ಲಿಸಬಹುದು. ಆನ್‌ಲೈನ್ ನೇಮಕಾತಿ ಅರ್ಜಿ ಸಲ್ಲಿಕೆಗೆ ಡಿಸೆಂಬರ್ 2, 2021 ಕೊನೆಯ ದಿನಾಂಕವಾಗಿದೆ. ಪ್ರೊಫೆಸರ್ (Electrical Engineering) ಒಂದು ಹುದ್ದೆ, ಅಸೋಸಿಯೇಟ್ ಪ್ರೊಫೆಸರ್ (Associate Professor) 3 ಹುದ್ದೆಗಳು,  ಅಸೋಸಿಯೇಟ್ ಪ್ರೊಫೆಸರ್ (Computer Engineering/ Information Technology Engineering) 3 ಹುದ್ದೆಗಳು, ಅಸೋಸಿಯೇಟ್ ಪ್ರೊಫೆಸರ್ (Electronics and Telecommunication Engineering) 7 ಹುದ್ದೆಗಳು, ಅಸೋಸಿಯೇಟ್ ಪ್ರೊಫೆಸರ್(Computer Engineering/ Information Technology Engineering) 5  ಹುದ್ದೆಗಳು, ಜಂಟಿ ಅಸಿಸ್ಟೆಂಟ್ ಡೈರೆಕ್ಟರ್(Joint Assistant Director)3 ಹುದ್ದೆ, ಡೆಪ್ಯೂಟಿ ಡೈರೆಕ್ಟರ್ (Deputy Director) 6 ಹುದ್ದೆ ಹಾಗೂ ಸೀನಿಯರ್ ಅಸಿಸ್ಟೆಂಟ್ ಕಂಟ್ರೋಲರ್ ಆಫ್ ಮೈನ್ಸ್  8 ಹುದ್ದೆಗಳು ಸೇರಿ ಒಟ್ಟು 36 ಹುದ್ದೆಗಳನ್ನ ಭರ್ತಿ ಮಾಡಿಕೊಳ್ಳಲಾಗುತ್ತದೆ. 

ಪ್ರೊಫೆಸರ್ (ಎಲೆಕ್ಟ್ರಿಕಲ್ ಇಂಜಿನಿಯರಿಂಗ್) ಶೈಕ್ಷಣಿಕ ಮಟ್ಟ -14, ಅಸೋಸಿಯೇಟ್ ಪ್ರೊಫೆಸರ್ (ಎಲೆಕ್ಟ್ರಾನಿಕ್ಸ್ ಮತ್ತು ಟೆಲಿಕಮ್ಯುನಿಕೇಶನ್ ಇಂಜಿನಿಯರಿಂಗ್) 1,31,400 ರೂ. ವೇತನವಿದೆ.  ಅಸೋಸಿಯೇಟ್ ಪ್ರೊಫೆಸರ್ (ಕಂಪ್ಯೂಟರ್ ಇಂಜಿನಿಯರಿಂಗ್/ಮಾಹಿತಿ ತಂತ್ರಜ್ಞಾನ ಇಂಜಿನಿಯರಿಂಗ್) ರೂ 1,31,400 ವೇತನ, ಸಹಾಯಕ ಪ್ರಾಧ್ಯಾಪಕರು (ಎಲೆಕ್ಟ್ರಾನಿಕ್ಸ್ ಮತ್ತು ಟೆಲಿಕಮ್ಯುನಿಕೇಶನ್ ಇಂಜಿನಿಯರಿಂಗ್) ಹುದ್ದೆಗೆ 57,700 ರೂ. ವೇತನ, ಸಹಾಯಕ ಪ್ರಾಧ್ಯಾಪಕರು (ಕಂಪ್ಯೂಟರ್ ಇಂಜಿನಿಯರಿಂಗ್/ಮಾಹಿತಿ ತಂತ್ರಜ್ಞಾನ ಇಂಜಿನಿಯರಿಂಗ್) ರೂ.57,700 ವೇತನ ಲಭ್ಯವಾಗಲಿದೆ. ಇನ್ನು ಜಂಟಿ ಸಹಾಯಕ ನಿರ್ದೇಶಕ ಹುದ್ದೆಗೆ ವೇತನ ಮಟ್ಟ- 8, ಉದ್ಯೋಗದ ಉಪ ನಿರ್ದೇಶಕರಿಗೆ ಹಂತ-11, ಹಿರಿಯ ಸಹಾಯಕ ನಿಯಂತ್ರಕರು: ವೇತನ ಮಟ್ಟ- 11ರಡಿ ವೇತನ ನೀಡಲಾಗುತ್ತದೆ.

Latest Videos

undefined

LICಯಲ್ಲಿ ಸಲಹೆಗಾರ ಉದ್ಯೋಗ
ಭಾರತದ ಸರ್ಕಾರಿ ಸ್ವಾಮ್ಯದಲ್ಲಿರುವ ಜೀವ ವಿಮಾ ನಿಗಮ (Life Insurance Corporation-LIC) ಖಾಲಿ ಇರುವ ಸಲಹೆಗಾರರ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ತೀರ್ಮಾನಿಸಿದೆ. ಅದಕ್ಕಾಗಿ ಅರ್ಹ ಹಾಗೂ ಆಸಕ್ತಿಯುಳ್ಳ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಜೀವ ವಿಮಾ ನಿಗಮ (ಲೈಫ್ ಇನ್ಶುರೆನ್ಸ್ ಕಾರ್ಪೊರೇಶನ್-LIC) ಯ ಅಧಿಕೃತ ವೆಬ್‌ಸೈಟ್‌ನಲ್ಲಿ ಸಲಹೆಗಾರರ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
ಹುದ್ದೆಗೆಳಿಗೆ 100 ವ್ಯಕ್ತಿಗಳನ್ನು ನೇಮಕ ಮಾಡಿಕೊಳ್ಳಲಾಗುವುದು. ಎಲ್ಐಸಿ ಸಲಹೆಗಾರರ ಹುದ್ದೆಗಳಿಗೆ ಆಯ್ಕೆ ಆದ ಅಭ್ಯರ್ಥಿಗಳನ್ನು ಸಾರ್ವಜನಿಕ ಆಡಳಿತ ಮತ್ತು ರಕ್ಷಣಾ ವಿಭಾಗದಲ್ಲಿ ಕೆಲಸಕ್ಕೆ ನಿಯೋಜಿಸಲಾಗುತ್ತದೆ.  

ಲೈಫ್ ಇನ್ಶುರೆನ್ಸ್ ಕಾರ್ಪೊರೇಶನ್-LICನ ಸಲಹೆಗಾರರ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು, ಯಾವುದೇ ಮಾನ್ಯತೆ ಪಡೆದ ಮಂಡಳಿಯಿಂದ ಪದವಿಯನ್ನು ಹೊಂದಿರಬೇಕು. ಜೊತೆಗೆ ಈ ಸಲಹೆಗಾರರ ಹುದ್ದೆಗೆ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್‌ನ ಕಾರ್ಯನಿರ್ವಹಣೆಯ ಅಗತ್ಯವಿರುತ್ತದ್ದು, ನವದೆಹಲಿ ಕೆಲಸ ಮಾಡಬೇಕಾಗುತ್ತದೆ. 

Job Vacancy: BPCL, OILನಲ್ಲಿ ಉದ್ಯೋಗಕ್ಕೆ ಅರ್ಜಿ ಆಹ್ವಾನ

ಅಂದ ಹಾಗೇ ಎಲ್ಐಸಿ (Life Insurance Corporation-LIC) ಅಡ್ವೈಸರ್ ಹುದ್ದೆಯೂ ಪಾರ್ಟ್ ಟೈಮ್ (Part Time) ಜಾಬ್ ಆಗಿರುತ್ತದೆ. ಎಲ್ಐಸಿ (Life Insurance Corporation-LIC) ಅಡ್ವೈಸರ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ  7,000  ರೂ.ನಿಂದ 25,000ರೂ.ವರೆಗೂ ವೇತನವನ್ನು ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಪರಿಶೀಲಿಸಬಹುದು.  

click me!