DOT Recruitment 2023: ದೂರಸಂಪರ್ಕ ಇಲಾಖೆಯಲ್ಲಿ 270 ಹುದ್ದೆಗಳಿಗೆ ಅರ್ಜಿ ಆಹ್ವಾನ

By Gowthami KFirst Published Jan 17, 2023, 4:51 PM IST
Highlights

ದೂರಸಂಪರ್ಕ ಇಲಾಖೆಯು ಡೆಪ್ಯುಟೇಶನ್ ಆಧಾರದ ಮೇಲೆ 270 ಖಾಲಿ ಇರುವ ಉಪ ವಿಭಾಗೀಯ ಇಂಜಿನಿಯರ್ ನೇಮಕಾತಿಗೆ ಅಧಿಸೂಚನೆಯನ್ನು ಹೊರಡಿಸಿದೆ. DOT ನೇಮಕಾತಿ 2023 ರಲ್ಲಿ ಆಸಕ್ತಿಯುಳ್ಳ ಅಭ್ಯರ್ಥಿಗಳು 20ನೇ ಫೆಬ್ರವರಿ 2023 ರಂದು ಅಥವಾ ಮೊದಲು ಅರ್ಜಿ ಸಲ್ಲಿಸಬಹುದು.

ಬೆಂಗಳೂರು (ಜ.17): ದೂರಸಂಪರ್ಕ ಇಲಾಖೆಯು ಡೆಪ್ಯುಟೇಶನ್ ಆಧಾರದ ಮೇಲೆ 270 ಖಾಲಿ ಇರುವ ಉಪ ವಿಭಾಗೀಯ ಇಂಜಿನಿಯರ್ ನೇಮಕಾತಿಗೆ ಅಧಿಸೂಚನೆಯನ್ನು ಹೊರಡಿಸಿದೆ. DOT ನೇಮಕಾತಿ 2023 ರಲ್ಲಿ ಆಸಕ್ತಿಯುಳ್ಳ ಅಭ್ಯರ್ಥಿಗಳು 20ನೇ ಫೆಬ್ರವರಿ 2023 ರಂದು ಅಥವಾ ಮೊದಲು ಅರ್ಜಿ ಸಲ್ಲಿಸಬಹುದು.  ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆಫ್‌ಲೈನ್ ಅಥವಾ ಪೋಸ್ಟ್ ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಯನ್ನು ಕೆಳಗೆ ನೀಡಲಾಗಿದೆ.

ಒಟ್ಟು 270 ಹುದ್ದೆಗಳ ಪ್ರದೇಶವಾರು ಮಾಹಿತಿ ಇಂತಿದೆ:
ಬೆಂಗಳೂರು- 13 ಹುದ್ದೆಗಳು
ಹೈದರಾಬಾದ್- 8 ಹುದ್ದೆಗಳು
ಚೆನ್ನೈ- 10 ಪೋಸ್ಟ್‌ಗಳು
ಕೊಯಮತ್ತೂರು- 2 ಹುದ್ದೆಗಳು
ಎರ್ನಾಕುಲಂ (ಕೊಚ್ಚಿನ್)- 8 ಹುದ್ದೆಗಳು
ನವದೆಹಲಿ- 52 ಹುದ್ದೆಗಳು
ಮುಂಬೈ- 2 ಹುದ್ದೆಗಳು
ವಿಜಯವಾಡ- 3 ಹುದ್ದೆಗಳು
ಗುವಾಹಟಿ- 9 ಹುದ್ದೆಗಳು
ಪಾಟ್ನಾ- 7 ಹುದ್ದೆಗಳು
ಪಂಚಕುಲ- 9 ಹುದ್ದೆಗಳು
ಶಿಮ್ಲಾ- 8 ಹುದ್ದೆಗಳು
ಜಮ್ಮು- 8 ಹುದ್ದೆಗಳು
ಕೋಲ್ಕತ್ತಾ- 2 ಹುದ್ದೆಗಳು
ಭೋಪಾಲ್- 7 ಹುದ್ದೆಗಳು
ರಾಯಪುರ- 3 ಹುದ್ದೆಗಳು
ಪುಣೆ- 7 ಹುದ್ದೆಗಳು
ನಾಗ್ಪುರ- 1 ಹುದ್ದೆ
ಗೋವಾ- 2 ಹುದ್ದೆಗಳು
ಮುಂಬೈ - 8 ಹುದ್ದೆಗಳು
ಶಿಲ್ಲಾಂಗ್ - 9 ಹುದ್ದೆಗಳು
ಇಂಫಾಲ್- 2 ಹುದ್ದೆಗಳು
ಐಜ್ವಾಲ್- 2 ಹುದ್ದೆಗಳು
ಕೊಹಿಮಾ- 2 ಹುದ್ದೆಗಳು
ಇಟಾನಗರ- 2 ಹುದ್ದೆಗಳು
ಅಗರ್ತಲಾ- 2 ಹುದ್ದೆಗಳು
ಭುವನೇಶ್ವರ- 7 ಹುದ್ದೆಗಳು
ಚಂಡೀಗಢ- 10 ಹುದ್ದೆಗಳು
ಜೈಪುರ- 7 ಹುದ್ದೆಗಳು
ಲಕ್ನೋ- 7 ಹುದ್ದೆಗಳು
ಮೀರತ್- 8 ಹುದ್ದೆಗಳು
ಡೆಹ್ರಾಡೂನ್- 2 ಹುದ್ದೆಗಳು
ಗ್ಯಾಂಗ್ಟಾಕ್- 2 ಹುದ್ದೆಗಳು
ಪೋರ್ಟ್ ಬ್ಲೇರ್- 2 ಹುದ್ದೆಗಳು
ಘಾಜಿಯಾಬಾದ್ - 10 ಹುದ್ದೆಗಳು
ರಾಂಚಿ- 1 ಹುದ್ದೆ 
ದೆಹಲಿ- 9 ಹುದ್ದೆಗಳು
ಅಹಮದಾಬಾದ್- 8 ಹುದ್ದೆಗಳು

ಶೈಕ್ಷಣಿಕ ವಿದ್ಯಾರ್ಹತೆ: ದೂರಸಂಪರ್ಕ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯ/ಸಂಸ್ಥೆಯಿಂದ  ಹುದ್ದೆಗೆ ಅನುಸಾರವಾಗಿ ಎಲೆಕ್ಟ್ರಿಕಲ್/ಎಲೆಕ್ಟ್ರಾನಿಕ್ಸ್/ಎಲೆಕ್ಟ್ರಿಕಲ್ ಕಮ್ಯುನಿಕೇಷನ್/ಕಂಪ್ಯೂಟರ್ ಸೈನ್ಸ್/ಟೆಲಿ ಕಮ್ಯುನಿಕೇಷನ್/ಮಾಹಿತಿ ತಂತ್ರಜ್ಞಾನ/ಇನ್‌ಸ್ಟ್ರುಮೆಂಟೇಶನ್ ಎಂಜಿನಿಯರಿಂಗ್‌ನಲ್ಲಿ ಬಿಇ/ಬಿ.ಟೆಕ್   ಮಾಡಿರಬೇಕು.

ವಯೋಮಿತಿ: ದೂರಸಂಪರ್ಕ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು  ಗರಿಷ್ಟ 56 ವರ್ಷದ ಒಳಗಿರಬೇಕು.

BMRCL Recruitment 2023: ನಮ್ಮ ಮೆಟ್ರೋದಲ್ಲಿ ಹಲವು ಹುದ್ದೆಗಳು, 1,65,000 ರೂ ವರೆಗೂ ವೇತನ

ಆಯ್ಕೆ ಪ್ರಕ್ರಿಯೆ: ದೂರಸಂಪರ್ಕ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಅಥವಾ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

BBMP Recruitment 2023: ಬರೋಬ್ಬರಿ 3673 ಪೌರ ಕಾರ್ಮಿಕ ಭರ್ತಿಗೆ ಅರ್ಜಿ ಆಹ್ವಾನ

ವೇತನ ವಿವರ: ದೂರಸಂಪರ್ಕ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಸಲ್ಲಿಸಿ ಆಯ್ಕೆಯಾದ  ಅಭ್ಯರ್ಥಿಗಳಿಗೆ ಮಾಸಿಕ 47,600 ರೂ ನಿಂದ 1,51,1000 ರೂವರೆಗೆ ವೇತನ ದೊರೆಯಲಿದೆ.

LAYOFF: ಕಂಪನಿಯ ಶೇ. 20 ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಿದ ಶೇರ್‌ಚಾಟ್‌..!

ಅರ್ಜಿ ಸಲ್ಲಿಸಬೇಕಾದ ವಿಳಾಸ:
ADG-1 (A & HR), DGT HQ,
ಕೊಠಡಿ ಸಂಖ್ಯೆ 212, 2 ನೇ ಮಹಡಿ,
UIDAII ಕಟ್ಟಡ, ಕಾಳಿ ಮಂದಿರದ ಹಿಂದೆ,
ನವದೆಹಲಿ - 110001

click me!