CNP Recruitment 2022: ನೋಟು ಮುದ್ರಣಾಲಯದಲ್ಲಿ 1 ಲಕ್ಷದವರೆಗೆ ವೇತನದ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ

By Suvarna News  |  First Published Jan 5, 2022, 4:39 PM IST

ನೋಟು ಮುದ್ರಣಾಲಯ  ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ  ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಜನವರಿ 25 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. 


ಬೆಂಗಳೂರು(ಜ.5): ನೋಟು ಮುದ್ರಣಾಲಯ (Currency Note Press) ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ  ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ವೆಲ್​​ಫೇರ್​ ಆಫೀಸರ್  (Welfare Officer), ಸೂಪರ್​ವೈಸರ್ (Supervisor) ಸೇರಿ ಒಟ್ಟು 149 ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಜನವರಿ 4 ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಜನವರಿ 25 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್‌ತಾಣ  cnpnashik.spmcil.comಗೆ ಭೇಟಿ ನೀಡಲು ಅಧಿಸೂಚನೆಯಲ್ಲಿ ಕೋರಲಾಗಿದೆ.

ಒಟ್ಟು 149 ಹುದ್ದೆಗಳ ಮಾಹಿತಿ ಈ ಕೆಳಗಿನಂತಿದೆ:
ಕಲ್ಯಾಣ ಅಧಿಕಾರಿ- 1
ಮೇಲ್ವಿಚಾರಕ (ತಾಂತ್ರಿಕ ನಿಯಂತ್ರಣ) -10
ಮೇಲ್ವಿಚಾರಕ (ತಾಂತ್ರಿಕ ಕಾರ್ಯಾಚರಣೆ - ಮುದ್ರಣ) -5
ಮೇಲ್ವಿಚಾರಕ (ಅಧಿಕೃತ ಭಾಷೆ)- 1
ಕಾರ್ಯದರ್ಶಿ ಸಹಾಯಕ -1
ಕಿರಿಯ ಕಛೇರಿ ಸಹಾಯಕ -6
ಜೂನಿಯರ್ ತಂತ್ರಜ್ಞ (ಮುದ್ರಣ/ನಿಯಂತ್ರಣ) -104
ಜೂನಿಯರ್ ಟೆಕ್ನಿಷಿಯನ್ (ವರ್ಕ್ ಶಾಪ್)- 21

Tap to resize

Latest Videos

undefined

ಅರ್ಜಿ ಶುಲ್ಕ: ನೋಟು ಮುದ್ರಣಾಲಯದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ SC/ST/PWD ಅಭ್ಯರ್ಥಿಗಳು 200 ರೂ. ಮತ್ತು ಸಾಮಾನ್ಯ/ಒಬಿಸಿ/EWS ಅಭ್ಯರ್ಥಿಗಳು 600 ರೂ. ಅರ್ಜಿ ಶುಲ್ಕ ಪಾವತಿಸಬೇಕು.

KALYANA KARNATAKA RECRUITMENT PROCESS: 14000 ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಶೀಘ್ರದಲ್ಲೇ ಆರಂಭ ಎಂದ ಬೊಮ್ಮಾಯಿ

ಶೈಕ್ಷಣಿಕ ವಿದ್ಯಾರ್ಹತೆ:
ಕಲ್ಯಾಣ ಅಧಿಕಾರಿ- ಪದವಿ, ಡಿಪ್ಲೊಮಾ, ಎಂಎ
ಮೇಲ್ವಿಚಾರಕ (ತಾಂತ್ರಿಕ ನಿಯಂತ್ರಣ) -ಬಿಇ, ಬಿ.ಟೆಕ್​, ಬಿಎಸ್ಸಿ
ಮೇಲ್ವಿಚಾರಕ (ತಾಂತ್ರಿಕ ಕಾರ್ಯಾಚರಣೆ - ಮುದ್ರಣ) -ಬಿಇ, ಬಿ.ಟೆಕ್​, ಬಿಎಸ್ಸಿ
ಮೇಲ್ವಿಚಾರಕ (ಅಧಿಕೃತ ಭಾಷೆ)- ಸ್ನಾತಕೋತ್ತರ ಪದವಿ
ಕಾರ್ಯದರ್ಶಿ ಸಹಾಯಕ - ಪದವಿ
ಕಿರಿಯ ಕಛೇರಿ ಸಹಾಯಕ -ಪದವಿ
ಜೂನಿಯರ್ ತಂತ್ರಜ್ಞ (ಮುದ್ರಣ/ನಿಯಂತ್ರಣ) -ಐಟಿಐ
ಜೂನಿಯರ್ ಟೆಕ್ನಿಷಿಯನ್ (ವರ್ಕ್ ಶಾಪ್)- ಐಟಿಐ

NIMHANS Recruitment 2022: ಸೀನಿಯರ್ ರೆಸಿಡೆಂಟ್ ಹುದ್ದೆಗೆ ಅರ್ಜಿ ಆಹ್ವಾನಿಸಿದ ನಿಮ್ಹಾನ್ಸ್

ವಯೋಮಿತಿ ವಿವರ:
ಕಲ್ಯಾಣ ಅಧಿಕಾರಿ- 18-30 ವರ್ಷ
ಮೇಲ್ವಿಚಾರಕ (ತಾಂತ್ರಿಕ ನಿಯಂತ್ರಣ) -18-30 ವರ್ಷ
ಮೇಲ್ವಿಚಾರಕ (ತಾಂತ್ರಿಕ ಕಾರ್ಯಾಚರಣೆ - ಮುದ್ರಣ) -18-30 ವರ್ಷ
ಮೇಲ್ವಿಚಾರಕ (ಅಧಿಕೃತ ಭಾಷೆ)- 18-30 ವರ್ಷ
ಕಾರ್ಯದರ್ಶಿ ಸಹಾಯಕ -18-28 ವರ್ಷ
ಕಿರಿಯ ಕಛೇರಿ ಸಹಾಯಕ -18-28 ವರ್ಷ
ಜೂನಿಯರ್ ತಂತ್ರಜ್ಞ (ಮುದ್ರಣ/ನಿಯಂತ್ರಣ) -18-25 ವರ್ಷ
ಜೂನಿಯರ್ ಟೆಕ್ನಿಷಿಯನ್ (ವರ್ಕ್ ಶಾಪ್)- 18-25 ವರ್ಷ

ವೇತನ:
ಕಲ್ಯಾಣ ಅಧಿಕಾರಿ- ಮಾಸಿಕ 29740-103000 ರೂ
ಮೇಲ್ವಿಚಾರಕ (ತಾಂತ್ರಿಕ ನಿಯಂತ್ರಣ) -ಮಾಸಿಕ  27600-95910 ರೂ
ಮೇಲ್ವಿಚಾರಕ (ತಾಂತ್ರಿಕ ಕಾರ್ಯಾಚರಣೆ - ಮುದ್ರಣ) -ಮಾಸಿಕ  27600-95910 ರೂ
ಮೇಲ್ವಿಚಾರಕ (ಅಧಿಕೃತ ಭಾಷೆ)- ಮಾಸಿಕ  27600-95910 ರೂ
ಕಾರ್ಯದರ್ಶಿ ಸಹಾಯಕ -ಮಾಸಿಕ  23910-85570 ರೂ
ಕಿರಿಯ ಕಛೇರಿ ಸಹಾಯಕ -ಮಾಸಿಕ 21540-77160 ರೂ
ಜೂನಿಯರ್ ತಂತ್ರಜ್ಞ (ಮುದ್ರಣ/ನಿಯಂತ್ರಣ) -ಮಾಸಿಕ 18780-67390 ರೂ
ಜೂನಿಯರ್ ಟೆಕ್ನಿಷಿಯನ್ (ವರ್ಕ್ ಶಾಪ್)- ಮಾಸಿಕ 18780-67390 ರೂ

ಆಯ್ಕೆ ಪ್ರಕ್ರಿಯೆ: ನೋಟು ಮುದ್ರಣಾಲಯದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಆನ್​ಲೈನ್​ ಪರೀಕ್ಷೆ, ಸ್ಟೆನೋಗ್ರಫಿ ಮತ್ತು  ಟೈಪಿಂಗ್ ಟೆಸ್ಟ್ ಮೂಲಕ ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳು ಮಹಾರಾಷ್ಟ್ರದ ನಾಸಿಕ್‌ ನಲ್ಲಿ ಕರ್ತವ್ಯ ನಿರ್ವಹಿಸಬೇಕಾಗುತ್ತದೆ.

ನೋಟು ಮುದ್ರಣಾಲಯದ ಅಧಿಸೂಚನೆ ಓದಲು   ಅರ್ಜಿ ಸಲ್ಲಿಸಲು ಈ ಲಿಂಕ್ ಕ್ಲಿಕ್ ಮಾಡಿ

click me!