South Eastern Railway Recruitment 2022: ಸ್ಪೋರ್ಟ್ಸ್​ ಕೋಟಾದಡಿ ಖಾಲಿ ಹುದ್ದೆಗಳ ಭರ್ತಿಗೆ ಮುಂದಾದ ಆಗ್ನೇಯ ರೈಲ್ವೆ

By Suvarna News  |  First Published Jan 3, 2022, 5:58 PM IST

ಆಗ್ನೇಯ ರೈಲ್ವೆ ಯಲ್ಲಿ ಖಾಲಿ ಇರುವ 21 ಹುದ್ದೆಗಳನ್ನು ಭರ್ತಿ ಮಾಡಲು ಸ್ಪೋರ್ಟ್ಸ್​ ಕೋಟಾದಡಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತರು ಫೆಬ್ರವರಿ 2ರೊಳಗೆ ಅರ್ಜಿ ಸಲ್ಲಿಸಬಹುದು


ಬೆಂಗಳೂರು(ಜ.3): ರೈಲ್ವೆ ಇಲಾಖೆ ಸೇರಲು ಬಯಸುವವರಿಗೆ ಸುವರ್ಣಾವಕಾಶವೊಂದು ಒಲಿದು ಬಂದಿದೆ. ಆಗ್ನೇಯ ರೈಲ್ವೆ(South Eastern Railway) ಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಸ್ಪೋರ್ಟ್ಸ್​ ಕೋಟಾ (Sports Quota) ಆಧಾರದಲ್ಲಿ ಒಟ್ಟು 21 ಸ್ಪೋರ್ಟ್ಸ್​ ಪರ್ಸನ್ ಹುದ್ದೆಗಳಿಗೆ   ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಈಗಾಗಲೇ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅಭ್ಯರ್ಥಿಗಳು ಆನ್​ಲೈನ್​ (Online) ಮೂಲಕ ಅರ್ಜಿ ಸಲ್ಲಿಸಬೇಕು. ಜನವರಿ 3ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು ಅರ್ಜಿ ಸಲ್ಲಿಸಲು ಕೊನೆಯ ದಿನ ಫೆಬ್ರವರಿ 2, 2022. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಇಲಾಖೆಯ ಅಧಿಕೃತ ವೆಬ್ ತಾಣ https://www.rrcser.co.in/ ಗೆ ಭೇಟಿ ನೀಡಬಹುದು.

ಶೈಕ್ಷಣಿಕ ವಿದ್ಯಾರ್ಹತೆ: ಆಗ್ನೇಯ ರೈಲ್ವೆ ನೇಮಕಾತಿಯ ಸ್ಪೋರ್ಟ್ಸ್​ ಕೋಟಾ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಬೋರ್ಡ್​ನಿಂದ ಕಡ್ಡಾಯವಾಗಿ 10ನೇ ತರಗತಿ, 12 ನೇ ತರಗತಿ, ಐಟಿಐ ಪೂರ್ಣಗೊಳಿಸಿರಬೇಕು. ಮತ್ತು ರಾಜ್ಯ ರಾಷ್ಟ್ರ ಮಟ್ಟದ ಕ್ರೀಡಾ ಕ್ಷೇತ್ರದಲ್ಲಿ ಮಾಡಿರುವ ಸಾಧನೆಯ ಪ್ರಮಾಣ ಪತ್ರ ಹೊಂದಿರಬೇಕು. 

Tap to resize

Latest Videos

undefined

ವಯೋಮಿತಿ: ಆಗ್ನೇಯ ರೈಲ್ವೆ ನೇಮಕಾತಿಯ ಸ್ಪೋರ್ಟ್ಸ್​ ಕೋಟಾ ಸ್ಪೋರ್ಟ್ಸ್​ ಪರ್ಸನ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ಜನವರಿ 1, 2022ಕ್ಕೆ 18-25 ವರ್ಷದೊಳಗಿರಬೇಕು. ವರ್ಗಗಳ ಆಧಾರದಲ್ಲಿ ವಯೋಮಿತಿ ಸಡಿಲಿಕೆ ಇದೆ.

KAPL Recruitment 2022: ಮಾಸಿಕ 87,000 ರೂ ವೇತನ , ಆಯುಷ್ ವಿಭಾಗದಲ್ಲಿ ಮ್ಯಾನೇಜರ್

ಅರ್ಜಿ ಶುಲ್ಕ: ಆಗ್ನೇಯ ರೈಲ್ವೆ ನೇಮಕಾತಿಗೆ ಅರ್ಜಿ ಸಲ್ಲಿಸುವ SC/ST/ಮಹಿಳೆ/ಅಲ್ಪಸಂಖ್ಯಾತ/EBC ಅಭ್ಯರ್ಥಿಗಳ ಕುಟುಂಬದ ಆದಾಯವು ವಾರ್ಷಿಕ 50000/- ಕ್ಕಿಂತ ಕಡಿಮೆ ಇದ್ದರೆ 250 ರೂ. ಅರ್ಜಿ ಶುಲ್ಕ. ಇತರ ಎಲ್ಲಾ ಅಭ್ಯರ್ಥಿಗಳಿಗೆ 500 ರೂ. ಅರ್ಜಿ ಶುಲ್ಕ ವಿಧಿಸಲಾಗಿದೆ. ಆನ್​ಲೈನ್​ ಪೇಮೆಂಟ್​​ ಮೂಲಕ ಅರ್ಜಿ ಶುಲ್ಕ ಪಾವತಿಸಲು ಅಧಿಸೂಚನೆಯಲ್ಲಿ ಹೇಳಲಾಗಿದೆ.

ಆಯ್ಕೆ ಪ್ರಕ್ರಿಯೆ: ಆಗ್ನೇಯ ರೈಲ್ವೆ ನೇಮಕಾತಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು  ಸ್ವೀಕೃತ ಅರ್ಜಿಯ ಆಧಾರದಲ್ಲಿ ಶಾರ್ಟ್​​ಲಿಸ್ಟಿಂಗ್ ಮಾಡಿ, ಕ್ರೀಡಾ ಪ್ರಯೋಗಗಳು, ಕ್ರೀಡಾ ಸಾಧನೆ ಮತ್ತು ಶೈಕ್ಷಣಿಕ ಅರ್ಹತೆಯ ಆಧಾರದಲ್ಲಿ ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಆಂಧ್ರಪ್ರದೇಶ, ತಮಿಳುನಾಡು, ಕೇರಳ, ಕರ್ನಾಟಕದಲ್ಲಿ  ಉದ್ಯೋಗ ದೊರೆಯಲಿದೆ.  

ವೇತನ: ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗೆ ಅನುಸಾರ ವೇತನ ದೊರೆಯಲಿದೆ. ರೈಲ್ವೇ ಇಲಾಖೆಯ ಅಧಿಸೂಚನೆಯನ್ನು ಓದಲು

NHPC Recruitment 2022: ಜಲ ವಿದ್ಯುತ್ ಶಕ್ತಿ ನಿಗಮದಲ್ಲಿ 1.6ಲಕ್ಷ ವೇತನದ ಟ್ರೈನಿ ಇಂಜಿನಿಯರ್

ಖಾಲಿ ಇರುವ 21 ಹುದ್ದೆಗಳಿಗೆ ಸ್ಪೋರ್ಟ್ಸ್​ ಕೋಟಾದಡಿ  ಅರ್ಜಿ ಆಹ್ವಾನಿಸಿದ ಪಶ್ಚಿಮ ಮಧ್ಯ ರೈಲ್ವೆ: ಪಶ್ಚಿಮ ಮಧ್ಯ ರೈಲ್ವೇ (Western Central Railway)ನೇಮಕಾತಿ ಪ್ರಕಟಣೆ ಹೊರಡಿಸಿದೆ. ಆಸಕ್ತ  ಅರ್ಹ ಅಭ್ಯರ್ಥಿಗಳು  ಅರ್ಜಿ ಸಲ್ಲಿಸಬಹುದಾಗಿದೆ. ಒಟ್ಟು 21 ಸ್ಪೋರ್ಟ್ಸ್​ ಪರ್ಸನ್​ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಸ್ಪೋರ್ಟ್ಸ್​ ಕೋಟಾ, 10ನೇ ತರಗತಿ ಹಾಗೂ 12ನೇ ತರಗತಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಅಭ್ಯರ್ಥಿಗಳು ಆನ್​ಲೈನ್​(Online) ಮೂಲಕ ಅರ್ಜಿ ಸಲ್ಲಿಸಲು ಜನವರಿ 22 ಕೊನೆ ದಿನವಾಗಿದೆ.  ಅಭ್ಯರ್ಥಿಗಳು ಪಶ್ಚಿಮ ಮಧ್ಯ ರೈಲ್ವೆಯ ಅಧಿಕೃತ ವೆಬ್​​ ತಾಣ ​ wcr.indianrailways.gov.in ಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಲು ಕೋರಲಾಗಿದೆ. 

ವಿದ್ಯಾರ್ಹತೆ ಮತ್ತು ವಯೋಮಿತಿ: ಪಶ್ಚಿಮ ಮಧ್ಯ ರೈಲ್ವೆಯಲ್ಲಿ ಖಾಲಿ ಇರುವ ಸ್ಪೋರ್ಟ್ಸ್​ ಪರ್ಸನ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಬೋರ್ಡ್​​ನಿಂದ ಕಡ್ಡಾಯವಾಗಿ 10ನೇ ತರಗತಿ/ 12ನೇ ತರಗತಿ ಪಾಸಾಗಿರಬೇಕು. ಜೊತೆಗೆ ಟೆಕ್ನಿಕಲ್​ ಹುದ್ದೆಗಳಿಗೆ ಐಟಿಐ ಪಾಸಾಗಿರಬೇಕು. ಅಭ್ಯರ್ಥಿಗಳ ವಯಸ್ಸು 18-25 ವರ್ಷದೊಳಗಿರಬೇಕು. PWD ಅಭ್ಯರ್ಥಿಗಳಿಗೆ 10 ವರ್ಷ, ಎಸ್​​ಸಿ/ಎಸ್​ಟಿ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.

click me!