ನಾಗರೀಕ ವಿಮಾನಯಾನ ಸಚಿವಾಲಯದಲ್ಲಿ ಉದ್ಯೋಗ, 2.8 ಲಕ್ಷದಿಂದ 7.4ಲಕ್ಷ ರೂ ವೇತನ!

By Chethan KumarFirst Published Oct 28, 2024, 1:15 PM IST
Highlights

ನಾಗರೀಕ ವಿಮಾನಯಾನ ಸಚಿವಾಲಯದಲ್ಲಿ ಕೆಲಸ ಮಾಡುಲು ಇಚ್ಚಿಸುವ ಆಸಕ್ತರಿಗೆ ಅತ್ಯುತ್ತಮ ಅವಕಾಶ ಒದಗಿ ಬಂದಿದೆ.  2.8 ಲಕ್ಷ ರೂಪಾಯಿಂದ 7.5 ಲಕ್ಷ ರೂಪಾಯಿ ವರೆಗೆ ವೇತನ ನೀಡಲಾಗುತ್ತದೆ. 
 

ನವದೆಹಲಿ(ಅ.28) ನಾಗರೀಕರ ವಿಮಾನಯಾನ ಸಚಿವಾಲಯಲ್ಲಿನ ಖಾಲಿ ಹುದ್ದೆಗಳಿಗೆ ನೇಮಕಾತಿ ಆರಂಭಗೊಂಡಿದೆ. ಆಸಕ್ತರು ತ್ವರಿತವಾಗಿ ಅರ್ಜಿ ಸಲ್ಲಿಸಿ ಕೈತುಂಬ ಸಂಬಂಳದ ವೇತನ ಗಿಟ್ಟಿಸಿಕೊಳ್ಳಬಹುದು. ನಾಗರೀಕ ಸಚಿವಾಲಯ ಈ ಕುರಿತು ಅಧಿಸೂಚನೆ ಹೊರಡಿಸಿದೆ. ಸಿವಿಲಿ ಏವಿಯೇಶನ್ (civilaviation.gov.in) ಅಧಿಕೃತ ವೆಬ್‌ಸೈಟ್ ಮೂಲಕ  ಅರ್ಜಿ ಸಲ್ಲಿಸಬಹುದು. 2.8 ಲಕ್ಷ ರೂಪಾಯಿಯಿಂದ 7.4 ಲಕ್ಷ ರೂಪಾಯಿವರೆಗೆ ವೇತನ ನೀಡಲಾಗುತ್ತದೆ. ಅತ್ಯುತ್ತಮ ಅವಕಾಶ ಒದಗಿ ಬಂದಿದ್ದು, ಈಾಗಾಲೇ ಅರ್ಜಿ ಸಲ್ಲಿಕೆ ಆರಂಭಗೊಂಡಿದೆ. 

ಒಟ್ಟು 18 ಖಾಲಿ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ವಿಶೇಷ ಅಂದರೆ ಪಿಯುಸಿ ಪಾಸ್, ಪದವಿ, ಸ್ನಾತಕೋತ್ತರ ವಿದ್ಯಾರ್ಹತೆಯ ಆಸಕ್ತರು ಅರ್ಜಿ ಸಲ್ಲಿಕೆ ಮಾಡಬಹುದು.  

Latest Videos

ಯೂನಿಯನ್ ಬ್ಯಾಂಕ್ ನೇಮಕಾತಿ, 1500ಕ್ಕೂ ಹೆಚ್ಚು ಹುದ್ದೆಗಳಿಗೆ ಅರ್ಜಿ ಅಹ್ವಾನ!

ಎವಿಯೇಶನ್ ಸಚಿವಾಲಯದಲ್ಲಿನ ನೇಮಕಾತಿ ವಿವರ
ಕನ್ಸಲ್ಟೆಂಟ್ SFOI(A):2
ಕನ್ಸಲ್ಟೆಂಟ್ FOI(A): 10
ಕನ್ಸಲ್ಟೆಂಟ್ SFOI(H:1
ಕನ್ಸಲ್ಟೆಂಟ್ FOI(H): 5

ಒಟ್ಟು 18 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ನೇಮಕಾತಿ 1 ವರ್ಷ ಅವಧಿ ಮಾಡಲಾಗುತ್ತದೆ. ಬಳಿಕ ನಿಯಮದ ಅನುಸಾರ ಮುಂದುವರಿಸಲಾಗುತ್ತದೆ. CFOI (A) ಹುದ್ದೆಗೆ ಗರಿಷ್ಠ ವಯಸ್ಸು 58, ಇನ್ನು SFOI (A), FOI (A) ಹಾಗೂ FOI (H) ಹುದ್ದೆಗಳಿಗೆ ಅರ್ಜಿ ಸಲ್ಲಿಸುವರ ವಯಸ್ಸು ಗರಿಷ್ಠ 64. 

ಅರ್ಜಿ ಸಲ್ಲಿಸಲು ಅಕ್ಟೋಬರ್ 28 ಕೊನೆಯ ದಿನ. ಹೀಗಾಗಿ ಆಸಕ್ತರು ಹಾಗೂ ಅರ್ಹರು ಇಂದೇ ಅರ್ಜಿ ಸಲ್ಲಿಸಬೇಕು. ನವೆಂಬರ್ 2 ರಂದು ಸಲ್ಲಿಸಿದ ಅರ್ಜಿ ಹಾಗೂ ದಾಖಲೆಗಳ ಪರಿಶೀಲನೆ ನಡೆಯಲಿದೆ. ಮೊದಲ ಹಂತದಲ್ಲಿ ದಾಖಲಾತಿ ಹಾಗೂ ಅರ್ಹರನ್ನು ಶಾರ್ಟ್ ಲಿಸ್ಟ್ ಮಾಡಿ ಮುಂದಿನ ಹಂತದ ಲಿಖಿತ ಪರೀಕ್ಷೆ, ಸಂದರ್ಶನಕ್ಕೆ ಅಹ್ವಾನಿಸಲಾಗುತ್ತದೆ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಲ್ಲಾ ದಾಖಲೆಗಳ ಪ್ರಿಂಟ್ ಔಟ್ ತೆಗೆದು ಸಹಿ ಹಾಕಿ ದೆಹಲಿಯ ಸಿವಿಲ್ ಎವಿಯೇಶನ್ ಸಚಿವಾಲಯದ ಕಚೇರಿಗೆ ಕಳುಹಿಸಬೇಕು. 

ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ಮೂಲಕ ಮಾತ್ರ ಅರ್ಜಿ ಸಲ್ಲಿಕೆ ಮಾಡಬೇಕು. ಇತರ ಯಾವುದೇ ಎಜೆನ್ಸಿ ಅಥವಾ ವೆಬ್‌ಲೈಟ್ ಮೂಲಕ ಅರ್ಜಿ ಸಲ್ಲಿಕೆಗೆ ಮಾಡಿದರೆ ಮಾನ್ಯವಾಗುವುದಿಲ್ಲ. ಇಷ್ಟೇ ಅಲ್ಲ ಮೋಸಹೋಗುವ ಸಾಧ್ಯತೆ ಇದೆ. ಹೀಗಾಗಿ ಅರ್ಜಿ ಸಲ್ಲಿಕೆ ವೇಳೆ ಎಚ್ಚರವಹಿಸಬೇಕಾಗುತ್ತದೆ. 

ಬೆಂಗಳೂರಿನ ಹೊಸ ಆ್ಯಪಲ್ ಸ್ಟೋರ್‌ನಲ್ಲಿ ಉದ್ಯೋಗ, ಲಕ್ಷ ರೂ ಸಂಬಳದ 400 ಹುದ್ದೆಗೆ ನೇಮಕಾತಿ!

ವಿದ್ಯಾರ್ಹತೆ ದಾಖಲೆ ಪತ್ರ, ಜನನ ಪ್ರಮಾಣ ಅಥವಾ ಹುಟ್ಟಿದ ದಿನಾಂಕ ಪ್ರಮಾಣೀಕರಿಸುವ ದಾಖಲೆ ಪತ್ರ, ಅನ್ನು ಜಾತಿ ಸೇರಿದಂತೆ ಇತರ ಕೆಲ ವಿಭಾಗದಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸೂಕ್ತ ದಾಖಲೆ ಸಲ್ಲಿಕೆ ಮಾಡಬೇಕು. ನವೆಂಬರ್ 2 ರಂದು ದಾಖಲೆಗಳ ಪರಿಶೀಲನೆ ನಡೆಯಲಿದೆ. ನಾಗರೀಕ ವಿಮಾನಯಾನದಲ್ಲಿ ಕೈತುಂಬಳ ಸಂಬಳದ ವೇತನ ಸಿಗಲಿದೆ. 
 

click me!