ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ ಭಾರತ ಸರ್ಕಾರದ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯದ ಆಡಳಿತಾತ್ಮಕ ನಿಯಂತ್ರಣದ ಅಡಿಯಲ್ಲಿ ಬರುವ ಶಾಸನಬದ್ಧ ಸಂಸ್ಥೆಯಾಗಿದೆ.
ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (ಬಿಐಎಸ್), ಭಾರತ ಸರ್ಕಾರದ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯದ ಆಡಳಿತಾತ್ಮಕ ನಿಯಂತ್ರಣದ ಅಡಿಯಲ್ಲಿ ಬರುವ ಶಾಸನಬದ್ಧ ಸಂಸ್ಥೆಯಾಗಿದೆ. ಇದು ದೇಶದಲ್ಲಿ ಪ್ರಮಾಣೀಕರಣ, ಉತ್ಪನ್ನ ಮತ್ತು ಸಿಸ್ಟಮ್ ಪ್ರಮಾಣೀಕರಣ, ಹಾಲ್‌ಮಾರ್ಕಿಂಗ್, ಪ್ರಯೋಗಾಲಯ ಪರೀಕ್ಷೆ ಇತ್ಯಾದಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದೆ.
ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (ಬಿಐಎಸ್), ಭಾರತ ಸರ್ಕಾರದ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯದ ಆಡಳಿತಾತ್ಮಕ ನಿಯಂತ್ರಣದ ಅಡಿಯಲ್ಲಿ ಬರುವ ಶಾಸನಬದ್ಧ ಸಂಸ್ಥೆಯಾಗಿದ್ದು, ಇದು ದೇಶದಲ್ಲಿ ಪ್ರಮಾಣೀಕರಣ, ಉತ್ಪನ್ನ ಮತ್ತು ಸಿಸ್ಟಮ್ ಪ್ರಮಾಣೀಕರಣ, ಹಾಲ್ ಮಾರ್ಕಿಂಗ್, ಪ್ರಯೋಗಾಲಯ ಪರೀಕ್ಷೆ ಇತ್ಯಾದಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದೆ. ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (ಬಿಐಎಸ್), ಒಪ್ಪಂದದ ಆಧಾರದ ಮೇಲೆ ಸ್ಟ್ಯಾಂಡರ್ಡೈಸೇಶನ್ ಚಟುವಟಿಕೆಗಳಿಗೆ 107 ಸಲಹೆಗಾರರನ್ನು ನೇಮಕ ಮಾಡಿಕೊಳ್ಳಲು ಅಧಿಸೂಚನೆ ಹೊರಡಿಸಿದ್ದು, ಆಸಕ್ತ ಅರ್ಹ ಅಭ್ಯರ್ಥಿಗಳು ಆನ್‌ಲೈನ್‌ನ ಮೂಲಕ ಅರ್ಜಿ ಸಲ್ಲಿಸಬಹುದು.
undefined
ಹುದ್ದೆಯ ವಿವರ: ಸ್ಟ್ಯಾಂಡರ್ಡೈಸೇಶನ್ ಸಲಹೆಗಾರರು -107 ಹುದ್ದೆ (ವಿಭಾಗವಾರು ಹುದ್ದೆಗಳ ವರ್ಗೀಕರಣ ಇಂತಿದೆ)
1. ಸಿವಿಲ್ ಎಂಜಿನಿಯರಿಂಗ್ ವಿಭಾಗ: 15 ಹುದ್ದೆ
2. ಕೆಮಿಕಲ್ ಎಂಜಿನಿಯರಿಂಗ್ ವಿಭಾಗ: 06 ಹುದ್ದೆ
3. ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ವಿಭಾಗ: 03 ಹುದ್ದೆ
4. ಎಲೆಕ್ಟ್ರೋಟೆಕ್ನಿಕಲ್ ವಿಭಾಗ : 06 ಹುದ್ದೆ
5. ಆಹಾರ ಮತ್ತು ಕೃಷಿ ವಿಭಾಗ : 06 ಹುದ್ದೆ
6. ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗ : 07 ಹುದ್ದೆ
7. ವೈದ್ಯಕೀಯ ಸಲಕರಣೆ ಮತ್ತು ಆಸ್ಪತ್ರೆ ಯೋಜಕರ ವಿಭಾಗ : 02 ಹುದ್ದೆ
8. ಮೆಟಲರ್ಜಿಕಲ್ ಎಂಜಿನಿಯರಿಂಗ್ ವಿಭಾಗ : 09 ಹುದ್ದೆ
9. ಪೆಟ್ರೋಲಿಯಂ ಕಲ್ಲಿದ್ದಲು ಮತ್ತು ಸಂಬಂಧಿತ ಉತ್ಪನ್ನಗಳ ವಿಭಾಗ : 05 ಹುದ್ದೆ
10. ಉತ್ಪಾದನೆ ಮತ್ತು ಸಾಮಾನ್ಯ ಇಂಜಿನಿಯರಿಂಗ್ ವಿಭಾಗ : 10 ಹುದ್ದೆ
11. ಜವಳಿ ವಿಭಾಗ : 08 ಹುದ್ದೆ
12. ಸಾರಿಗೆ ಇಂಜಿನಿಯರಿಂಗ್ ವಿಭಾಗ : 07 ಹುದ್ದೆ
13. ನೀರು ಸಂಪನ್ಮೂಲಗಳು ವಿಭಾಗ : 06 ಹುದ್ದೆ
14. ಸೇವೆ ವಲಯ ವಿಭಾಗ : 08 ಹುದ್ದೆ
15. ನಿರ್ವಹಣಾ ವಿಭಾಗ : 05 ಹುದ್ದೆ
16. ಆಯುಷ್ ವಿಭಾಗ : 04 ಹುದ್ದೆ
ಪ್ರಮುಖ ದಿನಾಂಕಗಳು :
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 19-01-2024
ವಯಸ್ಸಿನ ಮಿತಿ: ಗರಿಷ್ಠ ವಯಸ್ಸಿನ ಮಿತಿ: 65 ವರ್ಷಗಳು
ಒಪ್ಪಂದದ ಅವಧಿ: ಒಂದು ವರ್ಷ
ವೇತನ: ರೂ.75,000 (ಮಾಸಿಕ)
ಅರ್ಜಿ ಶುಲ್ಕ: ಅರ್ಜಿ ಶುಲ್ಕಇರುವುದಿಲ್ಲ.
ಶೈಕ್ಷಣಿಕ ಅರ್ಹತೆ:
1. ಸಿವಿಲ್ ಎಂಜಿನಿಯರಿಂಗ್ ಹುದ್ದೆಗೆ : ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಟಿಂಬರ್ ಸೈನ್ಸ್ ಮತ್ತು ತಂತ್ರಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿರಬೇಕು.
2. ಕೆಮಿಕಲ್ ಎಂಜಿನಿಯರಿಂಗ್ ಹುದ್ದೆಗೆ : ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸೆರಾಮಿಕ್/ಕೆಮಿಕಲ್ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿರಬೇಕು ಮತ್ತು ಗಾಜಿನ ಕಂಟೇನರ್ ತಯಾರಿಕಾ ಉದ್ಯಮ ಅಥವಾ ಗಾಜಿನ ಕಂಟೈನರ್‌ಗಳ ಸಂಶೋಧನೆ/ಪರೀಕ್ಷೆಯಲ್ಲಿ 5 ವರ್ಷ ಕೆಲಸ ಮಾಡಿದ ಅನುಭವ ಹೊಂದಿರಬೇಕು.
3. ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಹುದ್ದೆಗೆ : ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಎಲೆಕ್ಟ್ರಾನಿಕ್ಸ್ / ಇನ್ಸ್ಟ್ರುಮೆಂಟೇಶನ್ ವಿಭಾಗದಲ್ಲಿ ಇಂಜಿನಿಯರಿಂಗ್ ನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿರಬೇಕು.
4. ಎಲೆಕ್ಟ್ರೋಟೆಕ್ನಿಕಲ್ ಹುದ್ದೆಗೆ: ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿರಬೇಕು.
5. ಆಹಾರ ಮತ್ತು ಕೃಷಿ ಹುದ್ದೆಗೆ: ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಡೈರಿ ತಂತ್ರಜ್ಞಾನ/ಡೈರಿ ಎಂಜಿನಿಯರಿಂಗ್ ನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿರಬೇಕು.
6. ಮೆಕ್ಯಾನಿಕಲ್ ಇಂಜಿನಿಯರಿಂಗ್ ಹುದ್ದೆಗೆ : ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಮೆಕ್ಯಾನಿಕಲ್ ಇಂಜಿನಿಯರಿಂಗ್ ನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿರಬೇಕು.
7. ವೈದ್ಯಕೀಯ ಸಲಕರಣೆ ಮತ್ತು ಆಸ್ಪತ್ರೆ ಯೋಜಕರ ಹುದ್ದೆಗೆ : ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಜೈವಿಕ ವೈದ್ಯಕೀಯ ಎಂಜಿನಿಯರಿಂಗ್ ಅಥವಾ ಜೈವಿಕ ತಂತ್ರಜ್ಞಾನ ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು.
8. ಮೆಟಲರ್ಜಿಕಲ್ ಎಂಜಿನಿಯರಿಂಗ್ ಹುದ್ದೆಗೆ: ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಮೆಟಲರ್ಜಿಕಲ್ ಎಂಜಿನಿಯರಿಂಗ್ ಅಥವಾ ವಸ್ತು ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು.
9. ಪೆಟ್ರೋಲಿಯಂ ಕಲ್ಲಿದ್ದಲು ಮತ್ತು ಸಂಬಂಧಿತ ಉತ್ಪನ್ನಗಳ ಹುದ್ದೆಗೆ : ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸಾವಯವ ರಸಾಯನಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು.
10. ಉತ್ಪಾದನೆ ಮತ್ತು ಸಾಮಾನ್ಯ ಇಂಜಿನಿಯರಿಂಗ್ ಹುದ್ದೆಗೆ : ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಮೆಕ್ಯಾನಿಕಲ್ ಇಂಜಿನಿಯರಿಂಗ್ ನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿರಬೇಕು.
11. ಜವಳಿ ವಿಭಾಗ ಹುದ್ದೆಗೆ : ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಜವಳಿ ಎಂಜಿನಿಯರಿಂಗ್/ತಂತ್ರಜ್ಞಾನ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿರಬೇಕು.
12. ಸಾರಿಗೆ ಇಂಜಿನಿಯರಿಂಗ್ ಹುದ್ದೆಗೆ: ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಮರೀನ್ ಇಂಜಿನಿಯರಿಂಗ್/ನೌಕಾದಳ , ವಾಸ್ತುಶಿಲ್ಪ ಮತ್ತು ಹಡಗು ನಿರ್ಮಾಣ , ದುರಸ್ತಿ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿರಬೇಕು.
13. ನೀರು ಸಂಪನ್ಮೂಲ ವಿಭಾಗ ಹುದ್ದೆಗೆ : ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸಿವಿಲ್ ಇಂಜಿನಿಯರಿಂಗ್ ನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿರಬೇಕು.
14. ಸೇವಾ ವಲಯ ವಿಭಾಗ ಹುದ್ದೆಗೆ : ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಎಂ ಬಿ ಎ ಪದವಿ ಪಡೆದಿರಬೇಕು.
15. ನಿರ್ವಹಣಾ ವಿಭಾಗ ಹುದ್ದೆಗೆ : ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸಂಖ್ಯಾಶಾಸ್ರ್ತದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿರಬೇಕು.
16. ಆಯುಷ್ ವಿಭಾಗದ ಹುದ್ದೆಗೆ : ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿ ಎನ್ ವೈ ಎಸ್ ಪದವಿ ಪಡೆದಿರಬೇಕು.
ಆಯ್ಕೆ ವಿಧಾನ: ಅಭ್ಯರ್ಥಿಗಳು ಗಳಿಸಿದ ಅಂಕಗಳು ಮತ್ತು ಸಂದರ್ಶನ ಆಧಾರದ ಮೇಲೆ ಅಂತಿಮ ಪಟ್ಟಿ ತಯಾರಿಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್‌ಸೈಟ್ ವೀಕ್ಷಿಸಲು ಕೋರಲಾಗಿದೆ.