India post recruitment 2021: ಅಂಚೆ ಇಲಾಖೆಯಲ್ಲಿ ನೇಮಕಾತಿ, SSLC, PUC ಮುಗಿಸಿದವರು ಅರ್ಜಿ ಹಾಕಿ

By Suvarna News  |  First Published Dec 19, 2021, 9:02 PM IST

* ಅಂಚೆ ಇಲಾಖೆಯಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ
*ಎಸ್‌ಎಸ್ಎಲ್‌ಸಿ, ಪಿಯುಸಿ ಓದಿದವರಿಗೆ ಅಂಚೆ ಇಲಾಖೆಯಲ್ಲಿ ಕೆಲಸ
* ಒಟ್ಟು 60 ಹುದ್ದೆಗಳ ಭರ್ತಿಗೆ ನಡೆಯುತ್ತಿರುವ ನೇಮಕಾತಿ


ಬೆಂಗಳೂರು, (ಡಿ.19): ಅಂಚೆ ಇಲಾಖೆ, ಮುಖ್ಯ ಪೋಸ್ಟ್‌ಮಾಸ್ಟರ್ ಜನರಲ್ ಕಚೇರಿ, ಬಿಹಾರ ವೃತ್ತದಲ್ಲಿ(Bihar Postal Circle Recruitment 2021) ಖಾಲಿ ಇರುವ ವಿವಿಧ 60 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ.

'ಸ್ಪೋರ್ಟ್ಸ್ ಕೋಟಾ' (Sports Quota)ಅಡಿಯಲ್ಲಿ  ನೇರ ನೇಮಕಾತಿಗಾಗಿ ಖಾಲಿ ಹುದ್ದೆಗಳನ್ನು ಪ್ರಕಟಿಸಲಾಗಿದೆ. ಈ ಬಗ್ಗೆ ಅಂಚೆ ಇಲಾಖೆ, ಮುಖ್ಯ ಪೋಸ್ಟ್‌ಮಾಸ್ಟರ್ ಜನರಲ್ ಕಚೇರಿ, ಬಿಹಾರ ವೃತ್ತ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ತಿಳಿಸಿದೆ.

Tap to resize

Latest Videos

undefined

ಖಾಸಗಿ, ಸರ್ಕಾರಿ ಹುದ್ದೆಗಳ ನೇಮಕಾತಿ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅಂಚೆ ಸಹಾಯಕ(Postal Assistant (PA)) - 31, ವಿಂಗಡಣೆ ಸಹಾಯಕ (Sorting Assistant (SA)) - 11, ಪೋಸ್ಟ್‌ಮ್ಯಾನ್(Postman)-o5,  ಎಂಟಿಎಸ್(ಮಲ್ಟಿ-ಟಾಸ್ಕಿಂಗ್ ಸ್ಟಾಫ್)೯MTS    )-13 ಹುದ್ದೆಗಳ ನೇಮಕಾತಿ ಅರ್ಜಿ ಆಹ್ವಾನಿಸಿದ್ದು 31.12.2021ರೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ.

ವಯೋಮಿತಿ:

* ಪೋಸ್ಟಲ್ ಅಸಿಸ್ಟೆಂಟ್/ಸಾರ್ಟಿಂಗ್ ಅಸಿಸ್ಟೆಂಟ್: ಅಭ್ಯರ್ಥಿಯು 18 ರಿಂದ 27 ವರ್ಷ ವಯಸ್ಸಿನವರಾಗಿರಬೇಕು.
* ಮಲ್ಟಿ-ಟಾಸ್ಕಿಂಗ್ ಸಿಬ್ಬಂದಿ: ಅಭ್ಯರ್ಥಿಯು 18 ರಿಂದ 25 ವರ್ಷ ವಯಸ್ಸಿನವರಾಗಿರಬೇಕು.
ಪೋಸ್ಟ್‌ ಮ್ಯಾನ್: ಅಭ್ಯರ್ಥಿಯು 18 ರಿಂದ 27 ವರ್ಷ ವಯಸ್ಸಿನವರಾಗಿರಬೇಕು.

ವೇತನ ಶ್ರೇಣಿ 
* ಪೋಸ್ಟಲ್/ಸಾರ್ಟಿಂಗ್ ಅಸಿಸ್ಟೆಂಟ್ - ಪೇ ಮ್ಯಾಟ್ರಿಕ್ಸ್‌ನಲ್ಲಿ ಹಂತ 4 (ರೂ. 25,500-81,100).
* ಪೋಸ್ಟ್‌ಮ್ಯಾನ್ - ಪೇ ಮ್ಯಾಟ್ರಿಕ್ಸ್‌ನಲ್ಲಿ ಹಂತ 3 (ರೂ. 21,700-69,100).
* ಮಲ್ಟಿ-ಟಾಸ್ಕಿಂಗ್ ಸಿಬ್ಬಂದಿ - ಪೇ ಮ್ಯಾಟ್ರಿಕ್ಸ್‌ನಲ್ಲಿ ಹಂತ 1 (ರೂ. 18,000-56,900).
*ಅರ್ಜಿ ಶುಲ್ಕವನ್ನು  ಒಂದು ಹುದ್ದೆಗೆ .100 ರೂ. ನಿಗದಿಪಡಿಸಲಾಗಿದೆ.

* ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ/ವಿಶ್ವವಿದ್ಯಾಲಯ/ಸಂಸ್ಥೆಯಿಂದ 10ನೇ, 12ನೇ ತರಗತಿ ಅಥವಾ ತತ್ಸಮಾನ ತೇರ್ಗಡೆಯಾಗಿರಬೇಕು

ಪ್ರಮುಖ ದಿನಾಂಕಗಳು
* ಅರ್ಜಿ ಸಲ್ಲಿಸಲು ಕೊನೆ ದಿನ: 31.12.2021
* ಅರ್ಜಿ ಶುಲ್ಕ ಪಾವತಿಗೆ ಕೊನೆ ದಿನಾಂಕ: 31.12.2021

ಅರ್ಜಿ ಸಲ್ಲಿಸುವುದು ಹೇಗೆ?
ಲಕೋಟೆಗಳನ್ನು "ಪೋಸ್ಟಲ್ ಅಸಿಸ್ಟೆಂಟ್ / ಸಾರ್ಟಿಂಗ್ ಅಸಿಸ್ಟೆಂಟ್ / ಪೋಸ್ಟ್‌ಮ್ಯಾನ್ / ಎಂಟಿಎಸ್ ಹುದ್ದೆಗೆ ನೇಮಕಾತಿಗಾಗಿ ಅರ್ಜಿಯನ್ನು ಬಿಹಾರ ಪೋಸ್ಟಲ್ ಸರ್ಕಲ್‌ನಲ್ಲಿ ಸ್ಪೋರ್ಟ್ಸ್ ಕೋಟಾದಡಿಯಲ್ಲಿ" ಎಂದು ಬರೆಯಬೇಕು ಮತ್ತು ನೋಂದಾಯಿತ / ಸ್ಪೀಡ್ ಪೋಸ್ಟ್ ಮೂಲಕ  5th Floor, O/O the Chief Postmaster General, BIHAR Circle, PATNA – 800001 ಈ ವಿಳಾಸಕ್ಕೆ ಅರ್ಜಿ ಕಳುಹಿಸಬೇಕು,
 

click me!