ದೊಡ್ಡ ಹುದ್ದೆಗೆ ಸೇರಿ ದೇಶದ ಹಾಗೂ ಸಮಾಜದ ಸೇವೆ ಮಾಡಬೇಕೆಂಬ ಉದ್ದೇಶವನ್ನಿಟ್ಟುಕೊಂಡು ಮುನ್ನಡೆದಿದ್ದು ಅದನ್ನು ಸಾಧಿಸಿದ್ದೇನೆ. ಇದು ನಾನು ಬರೆದ 4ನೇ ಪರೀಕ್ಷೆಯಾಗಿತ್ತು, ಕಠಿಣ ಪರಿಶ್ರಮ ಮಾಡಿದ್ದೆ ಹೀಗಾಗಿ ನಾನು ಉತ್ತೀರ್ಣನಾಗುತ್ತೇನೆ ಎಂಬ ಸಂಪೂರ್ಣ ವಿಶ್ವಾಸ ನನಗೆ ಇತ್ತು. ಫಲಿತಾಂಶ ಬಂದಿದೆ ಖುಶಿ ತಂದಿದೆ ಎಂದ ಆಸೀಮ್ ಮುಜತಬಾ
ಬೀದರ್(ನ.03): ಓದುವುದಕ್ಕೆ ಸಮಯ ನಿಗದಿ ಮಾಡಿದ್ದರೆ ಸಾಲದು, ಗಮನ ಇಟ್ಟು ಓದಿದ್ದರೆ ಕಠಿಣ ಸಾಧನೆ ಕೂಡ ಸಾಧ್ಯ ಎಂದು ಐಎಎಸ್ ಉತ್ತಿರ್ಣರಾದ ಎಂಡಿ ಆಸೀಮ್ ಮುಜತಬಾ ಮನದಾಳದ ಮಾತು ಹೇಳಿದರು.
ಬೀದರ್‌ನ ಬ್ರಿಮ್ಸ್‌ನಲ್ಲಿ ಲ್ಯಾಬ್ ಟೆಕ್ನಿಶಿಯನ್ ಆಗಿದ್ದ ಎಂಡಿ ಏಜಾಜ್ ಅವರ ಪುತ್ರ ಎಂಡಿ ಆಸಿಮ್ ಅವರು ಯುಪಿಎಸ್ಸಿಯ ಅಂತಿಮ ಪರೀಕ್ಷೆಯಲ್ಲಿ 77ನೇ ರ್‍ಯಾಂಕ್ ಪಡೆದ ನಿಮಿತ್ತ ಕನ್ನಡಪ್ರಭಕ್ಕೆ ಪ್ರತಿಕ್ರಿಯೆ ನೀಡಿ, ನಾವು ಓದಲು ಗುರಿ ಇಟ್ಟುಕೊಂಡು ಅದನ್ನು ಮುಟ್ಟಲು ಮುನ್ನಡೆದರೆ ಮಾತ್ರ ಏನಾದರು ಸಾಧಿಸಲು ಸಾಧ್ಯವಿದೆ ಪರೀಕ್ಷೆಗಳು ಉತ್ತಿರ್ಣರಾಗಲು ಕೋಚಿಂಗ್ ಬೇಕು ಎಂಬುದೇನು ಇಲ್ಲ ನಾವು ಖುದ್ದು ಸ್ವಂತಾಗಿ ಓದಿದ್ದರು ಸಾಧನೆ ಮಾಡಬಲ್ಲೇವು ಎಂದರು.
undefined
ಮಿಸ್ ಇಂಡಿಯಾ ಕನಸು ತೊರೆದು ಯುಪಿಎಸ್‌ಸಿ ಪರೀಕ್ಷೆ ಬರೆದ ಮಾಡೆಲ್
ಬೀದರ್ ಗುರು ನಾನಕ ಪಬ್ಲಿಕ್ ಶಾಲೆಯಲ್ಲಿ 1ರಿಂದ 10ನೇ ತರಗತಿವರೆಗೆ ಶಿಕ್ಷಣ ಪಡೆದ ಅವರು ಹೈದ್ರಾಬಾದ್ ಚೈತನ್ಯ ಕಾಲೇಜಿನಲ್ಲಿ ಪಿಯುಸಿ ಮುಗಿಸಿದ್ದು, ಬೆಂಗಳೂರಿನ ಕಾಲೇಜಿನಲ್ಲಿ ಕೆಮಿಕಲ್ ಇಂಜಿನಿಯರ್ ಪದವಿ ಪಡೆದಿದ್ದೇನೆ ಎಂದು ತಿಳಿಸಿದರು.
ದೊಡ್ಡ ಹುದ್ದೆಗೆ ಸೇರಿ ದೇಶದ ಹಾಗೂ ಸಮಾಜದ ಸೇವೆ ಮಾಡಬೇಕೆಂಬ ಉದ್ದೇಶವನ್ನಿಟ್ಟುಕೊಂಡು ಮುನ್ನಡೆದಿದ್ದು ಅದನ್ನು ಸಾಧಿಸಿದ್ದೇನೆ. ಇದು ನಾನು ಬರೆದ 4ನೇ ಪರೀಕ್ಷೆಯಾಗಿತ್ತು, ಕಠಿಣ ಪರಿಶ್ರಮ ಮಾಡಿದ್ದೆ ಹೀಗಾಗಿ ನಾನು ಉತ್ತೀರ್ಣನಾಗುತ್ತೇನೆ ಎಂಬ ಸಂಪೂರ್ಣ ವಿಶ್ವಾಸ ನನಗೆ ಇತ್ತು. ಫಲಿತಾಂಶ ಬಂದಿದೆ ಖುಶಿ ತಂದಿದೆ.
ಮನೆಗೆ ದೊಡ್ಡ ಮಗನಾಗಿದ್ದು, ಇನ್ನಿಬ್ಬರು ಸಹೋದರರು ಎಲೆಕ್ರ್ಟಾನಿಕ್ಸ ಹಾಗೂ ಸಿವಿಲ್ ಇಂಜಿನಿಯರ ಪದವಿ ಪಡೆದಿದ್ದಾರೆ ಎಂದು ತಿಳಿಸಿದರು.