ಭಾರತ್ ಅರ್ಥ್ ಮೂವರ್ಸ್ ನರ್ಸ್, ಡಿಫೆನ್ಸ್, ಏರೋಸ್ಪೇಸ್, ಇಂಜಿನಿಯರಿಂಗ್ ವಿಭಾಗದ ಹುದ್ದೆಗಳಿಗೆ ಅರ್ಜಿ ಆಹ್ವಾನ

By Suvarna News  |  First Published Oct 12, 2023, 3:13 PM IST

ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ ಭಾರತದಾದ್ಯಂತ ಇರುವ ಡಿಫೆನ್ಸ್ ಮತ್ತು ಏರೋಸ್ಪೇಸ್, ​​ಗಣಿಗಾರಿಕೆ ಮತ್ತು ಹೆವಿ ಇಂಜಿನಿಯರಿಂಗ್ ಕಂಪನಿಯಲ್ಲಿ ಖಾಲಿ ಇರುವ ಗ್ರೂಪ್ ಸಿ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿದೆ.


ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ ಭಾರತದಾದ್ಯಂತ ಇರುವ ಡಿಫೆನ್ಸ್ ಮತ್ತು ಏರೋಸ್ಪೇಸ್, ​​ಗಣಿಗಾರಿಕೆ ಮತ್ತು ಹೆವಿ ಇಂಜಿನಿಯರಿಂಗ್ ಕಂಪನಿಯಲ್ಲಿ ಉತ್ಪಾದನಾ ಘಟಕಗಳು ಮತ್ತು ಮಾರ್ಕೆಟಿಂಗ್ ವಿಭಾಗ, ರೈಲು ಮತ್ತು ಮೆಟ್ರೋ ವ್ಯಾಪಾರ ವಲಯಗಳಲ್ಲಿ ವಾರ್ಷಿಕ ವಹಿವಾಟು ಸುಮಾರು ರೂ.3800 ಕೋಟಿ ಹೊಂದಿದ್ದು, ಇಲ್ಲಿ ಖಾಲಿ ಇರುವ ಗ್ರೂಪ್ ಸಿ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿದ್ದು, ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.

ಹುದ್ದೆಯ ವಿವರ
ಡಿಪ್ಲೊಮಾ ಟ್ರೈನಿ ಮೆಕ್ಯಾನಿಕಲ್: 52 ಹುದ್ದೆ
ಡಿಪ್ಲೊಮಾ ಟ್ರೈನಿ-ಎಲೆಕ್ಟ್ರಿಕಲ್ : 27 ಹುದ್ದೆ
ಡಿಪ್ಲೊಮಾ ಟ್ರೈನಿ-ಸಿವಿಲ್ : 07 ಹುದ್ದೆ
ಐಟಿಐ ಟ್ರೈನಿ-ಟರ್ನರ್ : 16 ಹುದ್ದೆ
ಐಟಿಐ ಟ್ರೈನಿ-ಮೆಷಿನಿಸ್ಟ್ : 16 ಹುದ್ದೆ
ಸ್ಟಾಫ್ ನರ್ಸ್ : 01 ಹುದ್ದೆ

Tap to resize

Latest Videos

undefined

 ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಮತ್ತು ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ: 18-10-2023

ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್‌ನಲ್ಲಿ ಎಂಜಿನಿಯರ್‌ ಹುದ್ದೆಗೆ ನೇಮಕಾತಿ, ಇಲ್ಲಿದೆ ಸಂಪೂರ್ಣ ವಿವರ

ಅರ್ಜಿ ಶುಲ್ಕ
ಸಾಮಾನ್ಯ/ಇಡ್ಬ್ಲೂಎಸ್/ಓಬಿಸಿ ಅಭ್ಯರ್ಥಿಗಳಿಗೆ : ರೂ.200
ಎಸ್‌ ಸಿ/ ಎಸ್‌ ಟಿ/ ಪಿ ಡ್ಬ್ಲೂ ಡಿ ಅಭ್ಯರ್ಥಿಗಳಿಗೆ: ಶುಲ್ಕವಿಲ್ಲ
ಗರಿಷ್ಠ ವಯಸ್ಸಿನ ಮಿತಿ (18-10-2023 ರಂತೆ): 29 ವರ್ಷಗಳು

ಶೈಕ್ಷಣಿಕ ವಿದ್ಯಾರ್ಹತೆ
ಡಿಪ್ಲೊಮಾ ಟ್ರೈನಿ ಮೆಕ್ಯಾನಿಕಲ್ : ಅಭ್ಯರ್ಥಿಗಳು ಡಿಪ್ಲೊಮಾದಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್‌ ಪದವಿ ಪಡೆದಿರಬೇಕು.
ಡಿಪ್ಲೊಮಾ ಟ್ರೈನಿ-ಎಲೆಕ್ಟ್ರಿಕಲ್ : ಅಭ್ಯರ್ಥಿಗಳು ಡಿಪ್ಲೊಮಾದಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ ಪದವಿ ಪಡೆದಿರಬೇಕು.
ಡಿಪ್ಲೊಮಾ ಟ್ರೈನಿ-ಸಿವಿಲ್ : ಅಭ್ಯರ್ಥಿಗಳು ಡಿಪ್ಲೊಮಾದಲ್ಲಿ ಸಿವಿಲ್ ಎಂಜಿನಿಯರಿಂಗ್‌ ಪದವಿ ಪಡೆದಿರಬೇಕು.
ಐಟಿಐ ಟ್ರೈನಿ-ಟರ್ನರ್ : ಅಭ್ಯರ್ಥಿಗಳು ರಾಷ್ಟ್ರೀಯ ಅಪ್ರೆಂಟಿಸ್ ಪ್ರಮಾಣಪತ್ರದೊಂದಿಗೆ ಐಟಿಐ ಟರ್ನರ್ ವಿಭಾಗದಲ್ಲಿ ಶೇಕಡಾ 60 ಅಂಕ ಪಡೆದಿರಬೇಕು.
ಐಟಿಐ ಟ್ರೈನಿ-ಮೆಷಿನಿಸ್ಟ್ : ಅಭ್ಯರ್ಥಿಗಳು ರಾಷ್ಟ್ರೀಯ ಅಪ್ರೆಂಟಿಸ್ ಪ್ರಮಾಣಪತ್ರದೊಂದಿಗೆ ಐಟಿಐ ಮೆಷಿನಿಸ್ಟ್ ಟ್ರೇಡ್ ವಿಭಾಗದಲ್ಲಿ ಶೇಕಡಾ 60 ಅಂಕ ಪಡೆದಿರಬೇಕು.
ಸ್ಟಾಫ್ ನರ್ಸ್ : ಬಿ ಎಸ್ಸಿ (ನರ್ಸಿಂಗ್) ಅಥವಾ ಎಸ್.ಎಸ್.ಎಲ್.ಸಿ ಮತ್ತು 3 ವರ್ಷ ನರ್ಸಿಂಗ್ ಡಿಪ್ಲೊಮಾ ಮಾಡಿರಬೇಕು.

ವೇತನ ಶ್ರೇಣಿ
ಡಿಪ್ಲೊಮಾ ಟ್ರೈನಿ ಮೆಕ್ಯಾನಿಕಲ್: ರೂ. 23,910-85,570
ಡಿಪ್ಲೊಮಾ ಟ್ರೈನಿ-ಎಲೆಕ್ಟ್ರಿಕಲ್ : 23,910-85,570
ಡಿಪ್ಲೊಮಾ ಟ್ರೈನಿ-ಸಿವಿಲ್ : 23,910-85,570
ಐಟಿಐ ಟ್ರೈನಿ-ಟರ್ನರ್ : 16,900 - 60,650
ಐಟಿಐ ಟ್ರೈನಿ-ಮೆಷಿನಿಸ್ಟ್ : 16,900 - 60,650
ಸ್ಟಾಫ್ ನರ್ಸ್ : 18,780- 67,390

ಆಯ್ಕೆ ವಿಧಾನ: ಆನ್‌ ಲೈನ್‌ ಮಾದರಿ ಲಿಖಿತ ಪರೀಕ್ಷೆಯನ್ನು ನಡೆಸಲಾಗುತ್ತದೆ. ಇದರ ಆಧಾರದ ಮೇಲೆ ಮೆರಿಟ್‌ ಪಟ್ಟಿಯನ್ನು ಮಾಡಲಾಗುತ್ತದೆ.
 

click me!