BPCL Recruitment 2022; ಜೂನಿಯರ್‌ ಎಕ್ಸಿಕ್ಯೂಟಿವ್‌ ಹುದ್ದೆಗಳಿಗೆ ನೇಮಕಾತಿ

By Suvarna News  |  First Published Jul 24, 2022, 3:40 PM IST

ಕೇಂದ್ರ ಸರ್ಕಾರಿ ಸ್ವಾಮ್ಯದ ಭಾರತ್‌ ಪೆಟ್ರೋಲಿಯಂ ಕಾರ್ಪೊರೇಷನ್‌ ಲಿಮಿಟೆಡ್‌ ಸಂಸ್ಥೆಯಲ್ಲಿ ಖಾಲಿ ಇರುವ ಜೂನಿಯರ್‌ ಎಕ್ಸಿಕ್ಯೂಟಿವ್‌ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ. ಅರ್ಜಿ ಸಲ್ಲಿಸಲು ಆಗಸ್ಟ್ 8 ಕೊನೆಯ ದಿನವಾಗಿದೆ.


ಕೇಂದ್ರ ಸರ್ಕಾರಿ ಸ್ವಾಮ್ಯದ ಭಾರತ್‌ ಪೆಟ್ರೋಲಿಯಂ ಕಾರ್ಪೊರೇಷನ್‌ ಲಿಮಿಟೆಡ್‌(ಬಿಪಿಸಿಎಲ್‌) ಸಂಸ್ಥೆಯಲ್ಲಿ ಹೊಸ ನೇಮಕಾತಿಗಳು ಶೀಘ್ರವೇ ನಡೆಯಲಿದ್ದು, ಈ ಕುರಿತಾಗಿ ಭಾರತ್‌ ಪೆಟ್ರೋಲಿಯಂ ಸಂಸ್ಥೆ ಅಧಿಕೃತವಾಗಿ ಅಧಿಸೂಚನೆಯನ್ನು ಹೊರಡಿಸಿದೆ. ಶೀಘ್ರವೇ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಕೋರಲಾಗಿದ್ದು, ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಶೀಘ್ರವೇ ಅರ್ಜಿ ಸಲ್ಲಿಸಬಹುದಾಗಿದೆ. ನೇಮಕಾತಿ ವಿವರಗಳಾದ ಆಯ್ಕೆ ಪ್ರಕ್ರಿಯೆ, ವೇತನ ಶ್ರೇಣಿ, ಬೇಕಾದ ದಾಖಲೆಗಳು, ವಿದ್ಯಾರ್ಹತೆ ಹಾಗೂ ವಯೋಮಿತಿ, ಅರ್ಜಿ ಸಲ್ಲಿಕೆ ಹೇಗೆ ಎಂಬ ವಿಚಾರಗಳ ಕುರಿತು ಕೆಳಗಡೆ ಮಾಹಿತಿ ನೀಡಲಾಗಿದೆ.

ಹುದ್ದೆಗಳು, ವಿದ್ಯಾರ್ಹತೆ: ಬಿಪಿಸಿಎಲ್‌ ಸಂಸ್ಥೆಯು ಹೊರಡಿಸಿರುವ ನೇಮಕಾತಿ ಅಧಿಸೂಚನೆಯಯಲ್ಲಿ ಅಧಿಕೃತವಾಗಿ ಹುದ್ದೆಗಳ ಸಂಖ್ಯೆ ತಿಳಿಸಿಲ್ಲವಾದ್ದರಿಂದ ಅರ್ಜಿ ಸಲ್ಲಿಸಲು ಸಂಖ್ಯೆಗಳ ಮಿತಿಯಿರುವುದಿಲ್ಲ. ಆದರೆ ಜೂನಿಯರ್‌ ಎಕ್ಸಿಕ್ಯೂಟಿವ್‌ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಸಲ್ಲಿಕೆಯನ್ನು ಸಂಸ್ಥೆ ನಿರೀಕ್ಷಿಸಿದೆ. ಇನ್ನು ಅಭ್ಯರ್ಥಿಗಳ ವಿದ್ಯಾರ್ಹತೆ ಕುರಿತು ನಿಗದಿ ಮಾಡಲಾಗಿದ್ದು, ಜೂನಿಯರ್‌ ಎಕ್ಸಿಕ್ಯೂಟಿವ್‌( ಆಪರೇಷನ್ಸ್‌) ಹಾಗೂನ ಜೂನಿಯರ್‌ ಎಕ್ಸಿಕ್ಯೂಟಿವ್‌( ಅಕೌಂಟೆಂಟ್‌) ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಚಾರ್ಟೆಡ್‌ ಅಕೌಂಟೆಂಟ್‌(ಸಿಎ), ಸಿಎಂಎ, ಪದವಿ ಪಡೆದಿರಬೇಕು. ಅಂತೆಯೆ ಜೂನಿಯರ್‌ ಎಕ್ಸಿಕ್ಯೂಟಿವ್‌(ಕಾರ್ಯಾಚರಣೆ) ಹುದ್ದೆಗೆ ಡಿಪ್ಲೊಮಾ ಇನ್‌ ಇಂಜಿನಿಯರಿಂಗ್‌/ ಬಿಎಸ್ಸಿ/ ಬಿ.ಇ/ಬಿ.ಟೆಕ್‌ ಇನ್‌ ಮೆಕ್ಯಾನಿಕಲ್‌/ ಎಲೆಕ್ಟ್ರಿಕಲ್‌/ ಇನ್‌ಶ್ಟು್ರಮೆಂಟೇಷನ್‌/ ಎಲೆಕ್ಟ್ರಾನಿಕ್ಸ್‌/ ಸಿವಿಲ್‌/ ಕೆಮಿಕಲ್‌ ಇಂಜಿನಿಯರಿಂಗ್‌ ಇವುಗಳಲ್ಲಿ ಯಾವುದಾದರು ಒಂದು ಪದವಿ ಪಡೆದಿರಬೇಕು.

Tap to resize

Latest Videos

undefined

ವಯಸ್ಸು ಹಾಗೂ ಅರ್ಜಿ ಶುಲ್ಕ: ಪೆಟ್ರೋಲಿಯಂ ಸಂಸ್ಥೆಯ ನೇಮಕಾತಿ ನಿಯಮದ ಅನ್ವಯ ಜೂನಿಯರ್‌ ಎಕ್ಸಿಕ್ಯೂಟಿವ್‌( ಆಪರೇಷನ್ಸ್‌) ಹುದ್ದೆಯ ಅಭ್ಯರ್ಥಿ ಗರಿಷ್ಠ 30ರಿಂದ 32 ವರ್ಷದೊಳಗೆ ಇರಬೇಕಿದೆ.ಇನ್ನು ಜೂನಿಯರ್‌ ಎಕ್ಸಿಕ್ಯೂಟಿವ್‌( ಅಕೌಂಟೆಂಟ್‌) ಹಾಗೂ ಜೂನಿಯರ್‌ ಎಕ್ಸಿಕ್ಯೂಟಿವ್‌(ಕಾರ್ಯಾಚರಣೆ) ಹುದ್ದೆಯ ಅಭ್ಯರ್ಥಿಗೆ ಗರಿಷ್ಠ 30ರಿಂದ 35 ವರ್ಷದೊಳಗಿರಬೇಕು. ಸರ್ಕಾರಿ ನಿಯಮದ ಅನ್ವ ಯ ಒಬಿಸಿ ಅಭ್ಯರ್ಥಿಗೆ 03 ವರ್ಷ, ಎಸ್‌ಸಿ/ಎಟಿ ಅಭ್ಯರ್ಥಿಗೆ 05 ವರ್ಷ ಹಾಗೂ ಪಿಡಬ್ಲ್ಯುಡಿ ಅಭ್ಯರ್ಥಿಗೆ 10 ವರ್ಷ ರಿಯಾಯಿತಿ ನೀಡಲಾಗಿದೆ. ಅರ್ಜಿ ಶುಲ್ಕದ ಕುರಿತೂ ತಿಳಿಸಲಾಗಿದ್ದು, ಪಿಡಬ್ಲ್ಯುಡಿ,ಎಸ್‌ಸಿ/ಎಟಿ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಿಂದ ರಿಯಾಯಿತಿ ನೀಡಲಾಗಿದ್ದು, ಸಮಾನ್ಯ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ 500 ರು. ನಿಗದಿ ಮಾಡಲಾಗಿದೆ. ಅರ್ಜಿ ಶುಲ್ಕವನ್ನು ನೆಫ್‌್ಟಅಥವಾ ಆರ್‌ಟಿಜಿಎಸ್‌ ವಿಧಾನದಲ್ಲಿ ಪಾವತಿಸಬೇಕಿದೆ.

ಅರ್ಜಿ ಸಲ್ಲಿಕೆ, ಆಯ್ಕೆ: ಅಧಿಸೂಚನೆಯಲ್ಲಿ ಅರ್ಜಿ ಸಲ್ಲಿಕೆ ಹೇಗೆ ಹಾಗೂ ಆಯ್ಕೆ ಪ್ರಕ್ರಿಯೆ ಹೇಗೆ ಮಾಡಲಾಗುತ್ತದೆ ಎಂಬ ವಿವರಗಳನ್ನು ನೀಡಲಾಗಿದೆ. ಅಭ್ಯರ್ಥಿಯು ಮೊದಲು ಅಧಿಸೂಚನೆಯನ್ನು ಸಂಪೂರ್ಣ ಓದಬೇಕು. ಬಳಿಕ ಬಿಪಿಸಿಎಲ್‌ನ ಅಧಿಕೃತ ವೆಬ್‌ಸೈಟ್ಗೆ ಭೇಟಿ ನೀಡಬೇಕು. ಅಲ್ಲಿ ದೊರೆಯುವ ಆನ್‌ಲೈನ್‌ ನಮೂನೆ ಅರ್ಜಿಯನ್ನು ಸರಿಯಾದ ಮಾಹಿತಗಳ ಮೂಲಕ ಭರ್ತಿಗೊಳಿಸಬೇಕು. ಅರ್ಜಿಯ ಜೊತೆಗೆ ಆಧಾರ್‌ಕಾರ್ಡ್‌, ಎಸ್‌ಎಸ್‌ಎಲ್‌ಸಿ, ಪಿಯುಸಿ ಹಾಗೂ ಮೇಲೆ ತಿಳಿಸಲಾಗಿರುವ ಪದವಿಯ ಅಂಕಪಟ್ಟಿಗಳು, ಜಾತಿ ಮೀಸಲು ಪ್ರಮಾಣಪತ್ರಗಳ ನಕಲುಪ್ರತಿಗಳನ್ನು ಲಗತ್ತಿಸಿ ಕಳುಹಿಸಬೇಕಿದೆ. ಅರ್ಜಿ ಸಲ್ಲಿಸಿದ ಅಭ್ಯರ್ಥಿಗೆ ಲಿಖಿತ ಪರೀಕ್ಷೆ ನಡೆಸಲಿದ್ದು, ಬಳಿಕ ಕಂಪ್ಯೂಟರ್‌ ಆಧಾರಿತ ಪರೀಕ್ಷೆಗೆ ಒಳಪಡಿಸಲಾಗುವುದು. ಅಂತಿಮವಾಗಿ ವೈಯಕ್ತಿಕ ಸಂದರ್ಶನ ನಡೆಸಲಾಗುತ್ತದೆ.

ವೇತನ ಶ್ರೇಣಿ ಹೀಗಿದೆ: ಭಾರತ್‌ ಪೆಟ್ರೋಲಿಯಂ ಕಾರ್ಪೊರೇಷನ್‌ ಲಿಮಿಟೆಡ್‌ ಸಂಸ್ಥೆಯು ಹೊರಡಿಸಿರುವ ಅಧಿಸೂಚನೆಯಲ್ಲಿ ಇರುವಂತೆ ಮೇಲಿನ ಮೂರು ವಿಭಾಗಗಳ ಉದಯೋಗಿಗಳಿಗೆ ಮಾಸಿಕವಾಗಿ 30,000ರು. ಇಂದ 1.20 ಲಕ್ಷ ರು.ವರೆಗೆ ಪಾವತಿಸಲಾಗುತ್ತದೆ. ಹೆಚ್ಚಿನ ಮಾಹಿತಿಗಳನ್ನು ಅಧಿಸೂಚನೆಯಲ್ಲಿ ನೀಡಲಾಗಿದೆ.

*ಆರ್ಜಿ ಸಲ್ಲಿಸಲು 08 ಆಗಸ್ಟ್‌ ಕೊನೆಯ ದಿನಾಂಕವಾಗಿದೆ

*ಆಧಿಕೃತ ಅಧಿಸೂಚನೆ ಹಾಗೂ ಆನ್‌ಲೈನ್‌ ಅರ್ಜಿ ನಮೂನೆಗಾಗಿ https://www.bharatpetroleum.in/

* ಆರ್ಜಿ ಸಲ್ಲಿಸಲು ಈಮೇಲ್‌ ವಿಳಾಸ: https://www.bharatpetroleum.in/

* ಆರ್ಜಿ ಶುಲ್ಕವನ್ನು ನೆಫ್‌್ಟಅಥವ ಆರ್‌ಟಿಜಿಎಸ್‌ ಮೂಲಕ ಪಾವತಿಸಬೇಕು

* ಸಾಮಾನ್ಯ ವರ್ಗದ ಅಭ್ಯರ್ಥಿಗೆ ಅರ್ಜಿ ಶುಲ್ಕ 500 ರು.

click me!