BELನಲ್ಲಿ ಟ್ರೈನಿ ಎಂಜಿನಿಯರ್ ಹುದ್ದೆಗಳಿಗೆ ನೇಮಕಾತಿ

By Suvarna News  |  First Published Oct 16, 2021, 3:59 PM IST

ಕೇಂದ್ರ ಸರ್ಕಾರಿ ಸ್ವಾಮ್ಯದ  ಪ್ರಮುಖ ಕಂಪನಿಗಳಲ್ಲಿ ಒಂದಾಗಿರುವ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (Bharat Electronics Limited- BEL) ಖಾಲಿ ಇರುವ ಟ್ರೈನಿ ಎಂಜಿನಿಯರ್‌ಗಳ ಹುದ್ದೆಗೆ ನೇಮಕಾತಿಯನ್ನು ಆರಂಭಿಸಿದೆ. ಈ ತಿಂಗಳು 27 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. 


ಕೇಂದ್ರ ಸರ್ಕಾರಿ (Central Government) ಸ್ವಾಮ್ಯದ ಏರೋಸ್ಪೇಸ್ (Aro Space) ಮತ್ತು ಡಿಫೆನ್ಸ್ ಎಲೆಕ್ಟ್ರಾನಿಕ್ಸ್ ಕಂಪನಿ (Defence Electronic Company) ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (Bharat Electronics Limited), ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಮುಂದಾಗಿದೆ. ಬಿಇಎಲ್(BEL)ನಲ್ಲಿ ಖಾಲಿ ಇರುವ ಟ್ರೈನಿ ಎಂಜಿನಿಯರ್ (Trainee Engineer), ಪ್ರಾಜೆಕ್ಟ್ ಎಂಜಿನಿಯರ್ (Engineer) ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

ದೇಶಾದ್ಯಂತ ಪ್ರತಿಭಾನ್ವಿತ ಅಭ್ಯರ್ಥಿಗಳಿಗಾಗಿ ಹುಡುಕಾಟ ನಡೆಸ್ತಿರೋ ಬಿಇಎಲ್ (BEL), ಮುಖ್ಯವಾಗಿ  ಫ್ರೆಶರ್ಸ್ಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿದೆ.  ಬಿಇಎಲ್ ಕಂಪನಿಯಲ್ಲಿ ಖಾಲಿ ಇರುವ ಟ್ರೈನಿ ಎಂಜಿನಿಯರ್ ಹಾಗೂ ಪ್ರಾಜೆಕ್ಟ್ ಎಂಜಿನಿಯರ್ (Project Engineer) ಹುದ್ದೆಗಳಿಗೆ ಅರ್ಜಿ ಅಹ್ವಾನಿಸಲಾಗಿದೆ. ನೇಮಕಾತಿ ಅಧಿಸೂಚನೆ ಬಗ್ಗೆ ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.

Latest Videos

undefined

ದಕ್ಷಿಣ ಮಧ್ಯೆ ರೈಲ್ವೆಯಲ್ಲಿ 4,103 ಅಪ್ರೆಂಟಿಸ್ ಹುದ್ದೆಗಳಿಗೆ ನೇಮಕಾತಿ

ಬಿಇಎಲ್ (BEL) ನೇರ ಸಂದರ್ಶನದ ಮೂಲಕ ಟ್ರೈನಿ ಎಂಜಿನಿಯರ್ ಹಾಗೂ ಪ್ರಾಜೆಕ್ಟ್ ಎಂಜಿನಿಯರ್ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಈ ನೇಮಕಾತಿ ಪ್ರಕ್ರಿಯೆ ಆಯ್ಕೆಗೆ ಹೇಗೆ? ಅರ್ಜಿ ಸಲ್ಲಿಸುವುದು ಹೇಗೆ?, ಅರ್ಹತಾ ಮಾನದಂಡ, ಅಂತಿಮ ವರ್ಷದ ಅರ್ಹತೆ ಹಾಗೂ ಇನ್ನಿತರೆ ವಿಷಯಗಳ ಬಗ್ಗೆ ಅಧಿಸೂಚನೆಯಲ್ಲಿ ಸವಿವರವಾಗಿ ತಿಳಿಸಲಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಕೆಗೆ ಅಕ್ಟೋಬರ್ 27 ಕೊನೆಯ ದಿನಾಂಕವಾಗಿದೆ. ಅಭ್ಯರ್ಥಿಗಳು ಬಿಇಎಲ್ (BEL) ಅಧಿಕೃತ ವೆಬ್‌ಸೈಟ್ bel-india.in ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಒಟ್ಟು 55 ಟ್ರೈನಿ ಎಂಜಿನಿಯರ್ ಹುದ್ದೆಗಳು ಖಾಲಿ ಇದ್ದು, ಅವುಗಳಲ್ಲಿ ಸಾಮಾನ್ಯ ವರ್ಗಕ್ಕೆ 22, ಇಡಬ್ಲ್ಯೂಎಸ್-06, ಒಬಿಸಿ-15, ಎಸ್ಸಿ-8, ಎಸ್ಟಿ-4 ಹುದ್ದೆಗಳು ಮೀಸಲಿವೆ. ಇನ್ನು 33 ಪ್ರಾಜೆಕ್ಟ್ ಎಂಜಿನಿಯರ್ ಹುದ್ದೆಗಳಲ್ಲಿ ಸಾಮಾನ್ಯ ವರ್ಗ-15, ಇಡಬ್ಲ್ಯೂಎಸ್-3, ಒಬಿಸಿ-8, ಎಸ್ಸಿ-5, ಎಸ್ಟಿ-2 ಹುದ್ದೆಗಳನ್ನ ಮೀಸಲಿಡಲಾಗಿದೆ. 

ಇನ್ನು ಆಯ್ಕೆಯಾದ ಅಭ್ಯರ್ಥಿಗಳು (Candidates) ಬಿಇಎಲ್ ಪಂಚಕುಲ ಶಾಖೆಯಲ್ಲಿ ಕೆಲಸ ನಿರ್ವಹಿಸಬೇಕಾಗುತ್ತದೆ. ಅಭ್ಯರ್ಥಿಗಳಿಗೆ ವೈದ್ಯಕೀಯ ಭತ್ಯೆ ಸೇರಿ ಒಟ್ಟು ಮಾಸಿಕ ವೇತನ ₹25,000 ರಿಂದ 50,000 ರೂ. ಪಡೆಯಬಹುದು. ತರಬೇತಿ ಇಂಜಿನಿಯರ್ ವೇತನ ಪ್ರತಿ ತಿಂಗಳಿಗೆ 25,000 ರೂ, ಇದ್ದರೆ, ಪ್ರಾಜೆಕ್ಟ್ ಎಂಜಿನಿಯರ್ ವೇತನ ಪ್ರತಿ ತಿಂಗಳಿಗೆ 35,000 ರೂ. ಆಗಿರುತ್ತದೆ.  ಅಂದಹಾಗೇ ಈ ನೇಮಕಾತಿ ಕಾಂಟ್ರ್ಯಾಕ್ಟ್ ಆಧರಿತವಾಗಿದ್ದು, ಅಭ್ಯರ್ಥಿಗಳನ್ನು ಅರ್ಹತೆ, ಅನುಭವ ಮತ್ತು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ.

11 ಬ್ಯಾಂಕುಗಳ 7855 ಹುದ್ದೆಗಳಿಗೆ IBPS ನೇಮಕಾತಿ, ಅರ್ಜಿ ಸಲ್ಲಿಸಿ 

ಬಿಇಎಲ್ (BEL)ನ ಈ ನೇಮಕಾತಿ ಡ್ರೈವ್ಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಇಂಜಿನಿಯರಿಂಗ್ ಪದವೀಧರರಾಗಿರಬೇಕು. ಫ್ರೆಶರ್ಸ್ ಹಾಗೂ ಅನುಭವಿ ಅಭ್ಯರ್ಥಿಗಳಿಗೆ ಹೆಚ್ಚಿನ ಮನ್ನಣೆ ನೀಡಲಾಗಿದೆ. ಟ್ರೈನಿ ಇಂಜಿನಿಯರ್ ಹುದ್ದೆಗೆ ಫ್ರೆಶರ್ಸ್  ಅರ್ಜಿ ಸಲ್ಲಿಸಬಹುದು. ಹಾಗೇ ಪ್ರಾಜೆಕ್ಟ್ ಇಂಜಿನಿಯರ್ ಹುದ್ದೆಗೆ ಕನಿಷ್ಟ 2 ವರ್ಷ ಕೆಲಸದ ಅನುಭವ ಹೊಂದಿರಬೇಕು. 
 

ಬಿಇಎಲ್  (BEL) ನ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಯು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ ಸಂಸ್ಥೆಯಿಂದ 4 ವರ್ಷಗಳ ಪೂರ್ಣಾವಧಿ ಬಿ.ಇ/ಬಿ.ಟೆಕ್ ಕೋರ್ಸ್ ಓದಿರಬೇಕು. ಎಲೆಕ್ಟ್ರಾನಿಕ್ಸ್/ ಎಲೆಕ್ಟ್ರಾನಿಕ್ಸ್ & ಕಮ್ಯನಿಕೇಷನ್/ ಎಲೆಕ್ಟ್ರಾನಿಕ್ಸ್ ಟೆಲಿ ಕಮ್ಯುನಿಕೇಷನ್/ ಟೆಲಿಕಮ್ಯುನಿಕೇಷನ್/ಕಮ್ಯುನಿಕೇಷನ್/ಮೆಕ್ಯಾನಿಕಲ್- ಈ ಕೋರ್ಸ್ಗಳಲ್ಲಿ ಯಾವುದಾದರೂ ಒಂದು ವಿಷಯದಲ್ಲಿ ಬಿ.ಇ/ಬಿ.ಟೆಕ್ ಪದವಿ ಪಡೆದಿರಬೇಕು.

ಸಾಮಾನ್ಯ ವರ್ಗ, ಒಬಿಸಿ, ಇಡಬ್ಲ್ಯೂಎಸ್ ಅಭ್ಯರ್ಥಿಗಳು, ಇಂಜಿನಿಯರಿಂಗ್ ಪದವಿಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರಬೇಕು. ಎಸ್ಸಿ, ಎಸ್ಟಿ ಮತ್ತು ಪಿಡಬ್ಲ್ಯೂಡಿ ಅಭ್ಯರ್ಥಿಗಳು ಜಸ್ಟ್ ಪಾಸ್ ಆಗಿದ್ರೂ ಹುದ್ದೆಗೆ ನೇಮಕವಾಗಲು ಅರ್ಹತೆ ಹೊಂದಿರುತ್ತಾರೆ.  ಇನ್ನು  ಪ್ರಾಜೆಕ್ಟ್ ಎಂಜಿನಿಯರ್‌ ಹುದ್ದೆಗೆ  ₹500 ಅರ್ಜಿ ಶುಲ್ಕ ಹಾಗೂ ಟ್ರೈನಿ ಎಂಜಿನಿಯರ್‌ಗೆ ₹200 ಅರ್ಜಿ ಶುಲ್ಕ ಪಾವತಿಸಬೇಕು.  ಪಿಡಬ್ಲ್ಯೂಡಿ, ಎಸ್ಸಿ ಮತ್ತು ಎಸ್ಟಿ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕ ಇರುವುದಿಲ್ಲ.

FSSAIನಲ್ಲಿ 223 ಹುದ್ದೆಗಳಿಗೆ ನೇರ ನೇಮಕಾತಿ 
 

click me!