FSSAIನಲ್ಲಿ 223 ಹುದ್ದೆಗಳಿಗೆ ನೇರ ನೇಮಕಾತಿ

By Suvarna News  |  First Published Oct 15, 2021, 5:14 PM IST

ಕೇಂದ್ರ ಸರ್ಕಾರಿ ಸ್ವಾಮ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ  (Food Safety and Standard Authority of India-FSSAI) ಸಂಸ್ಥೆಯು ನೇರ ನೇಮಕಾತಿಯ ಮೂಲಕ 223 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಮುಂದಾಗಿದೆ. ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ.


ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ (The Food Safety and Standard Authority of India-FSSAI) ವಿವಿಧ ಹುದ್ದೆಗಳ ನೇರ ನೇಮಕಾತಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಹ ಹಾಗೂ ಇಚ್ಛಿತ ಅಭ್ಯರ್ಥಿಗಳು ಈ ಹುದ್ದಗೆಳಿಗೆ ಅರ್ಜಿ ಹಾಕಿಕೊಳ್ಳಬಹುದಾಗಿದೆ. ಸಂಸ್ಥೆಯ ಅಧಿಕೃತ ಜಾಲತಾಣ fssai.gov.in ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ನವೆಂಬರ್ 7 ಕೊನೆಯ ದಿನವಾಗಿದೆ. ಒಟ್ಟು 223 ಹುದ್ದೆಗಳಿಗೆ ನೇರನೇಮಕಾತಿ ನಡೆಯಲಿದೆ. ಅಧಿಸೂಚನೆ ಬಗ್ಗೆ ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.

ದಕ್ಷಿಣ ಮಧ್ಯೆ ರೈಲ್ವೆಯಲ್ಲಿ 4,103 ಅಪ್ರೆಂಟಿಸ್ ಹುದ್ದೆಗಳಿಗೆ ನೇಮಕಾತಿ 

Tap to resize

Latest Videos

undefined

ಈ ನೇಮಕಾತಿ ಮೂಲಕ  ಆಹಾರ ವಿಶ್ಲೇಷಕ (Food analyst), ತಾಂತ್ರಿಕ ಅಧಿಕಾರಿ (Technical officer), ಸಹಾಯಕ ವ್ಯವಸ್ಥಾಪಕ (Assistant Manager), ಐಟಿ ಸಹಾಯಕ, ಹಿಂದಿ ಅನುವಾದಕ (Hindi translator) ಹುದ್ದೆ ಸೇರಿ ಒಟ್ಟು 233 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.  ಬಹು ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು, ಆಯ್ಕೆ ಸಂದರ್ಭದಲ್ಲಿ ತಮ್ಮ ಆದ್ಯತೆಯ ಹುದ್ದೆಯನ್ನು ಸೂಚಿಸಬೇಕಾಗುತ್ತದೆ. ಆನ್‌ಲೈನ್ ಅರ್ಜಿಯಲ್ಲಿ ಅಭ್ಯರ್ಥಿಯು ಸೂಚಿಸಿದ ಆದ್ಯತೆಯೇ ಅಂತಿಮವಾಗಿರುತ್ತದೆ. 

ಇಲಾಖೆಯು ಪ್ರತಿಯೊಂದಕ್ಕೂ ಅರ್ಹ ವಯಸ್ಸು ಮತ್ತು ಶೈಕ್ಷಣಿಕ ಅರ್ಹತಾ ಮಾನದಂಡಗಳನ್ನು ಪ್ರತ್ಯೇಕವಾಗಿ ಸೂಚಿಸಿದೆ. ಅಭ್ಯರ್ಥಿಗಳು ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಿರುವ ಅಧಿಕೃತ ಸೂಚನೆಯಲ್ಲಿ ಮಾನದಂಡಗಳನ್ನು ಪರಿಶೀಲಿಸಬಹುದು. ಪ್ರಿನ್ಸಿಪಲ್ ಮ್ಯಾನೇಜರ್ ಹುದ್ದೆಯೊಂದು ಖಾಲಿಯಿದ್ದು, ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಸ್ನಾತಕೋತರ ಪದವಿ ಪಡೆದಿರಬೇಕು. 15  ಸಹಾಯಕ ನಿರ್ದೇಶಕರ ಹುದ್ದೆಗಳಿದ್ದು, ಪದವಿ(Degree), ಎಂಬಿಎ (MBA), ಸ್ನಾತಕೋತರ ಪದವಿ (Post Graduation), ಬಿಟೆಕ್ (BTech) ಪದವಿ ಪೂರೈಸಿರಬೇಕು.

ಉಪ ವ್ಯವಸ್ಥಾಪಕರ 4 ಹುದ್ದೆಗಳಿದ್ದು, ಅಭ್ಯರ್ಥಿಯು ಸ್ನಾತಕೋತ್ತರ ಪದವಿ ಗಳಿಸಿರಬೇಕು. 125 ತಾಂತ್ರಿಕ ಅಧಿಕಾರಿ ಹುದ್ದೆಗಳನ್ನ ಭರ್ತಿ ಮಾಡಿಕೊಳ್ಳುತ್ತಿದ್ದು,  ಬಿಇ ಮತ್ತು ಬಿಟೆಕ್, ಸ್ನಾತಕೋತ್ತರ ಪದವಿ ಪಡೆದಿರಬೇಕು. ಕೇಂದ್ರ ಆಹಾರ ಸುರಕ್ಷತಾ ಅಧಿಕಾರಿ- 37 ಹುದ್ದೆಗಳಿದ್ದು,    ಪದವಿ, ಸ್ನಾತಕೋತತರ ಪದವಿ ಪಡೆದಿದ್ದರೆ ಅರ್ಜಿ ಹಾಕಬಹುದು. ಸಹಾಯಕ ವ್ಯವಸ್ಥಾಪಕರ 8 ಹುದ್ದೆಗಳಿದ್ದು, ಪದವಿ, ಸ್ನಾತಕೋತ್ತರ ಪದವಿ ಹೊಂದಿರಬೇಕು. ಇನ್ನು 33 ಸಹಾಯಕ ಹುದ್ದೆಗಳಿದ್ದು, ಅಭ್ಯರ್ಥಿಯು ಪದವಿ, ಸ್ನಾತಕೋತತರ ಪದವಿ ಅಥವಾ ಎಂಟೆಕ್ ಪದವಿ ಪಡೆದಿರಬೇಕು. ವೈಯಕ್ತಿಕ ಸಹಾಯಕರು- 19 ಹುದ್ದೆಗಳಿದ್ದು,  ಪದವಿ, ಡಿಪ್ಲೋಮೊ (Diploma) ಆಗಿರಬೇಕು. ಹಾಗೇ 3 ಕಿರಿಯ ಸಹಾಯಕ ಹುದ್ದೆಗಳಿಗೆ ಪಿಯುಸಿ (PUC) ಓದಿದ್ರೆ ಸಾಕು.

ಸೇನೆಯಲ್ಲಿ NCCಗೆ ಅವಕಾಶ: ಆಯ್ಕೆಯಾದವರಿಗೆ 1.77 ಲಕ್ಷ ರೂ.ವರೆಗೆ ಸಂಬಳ 

ಪ್ರಿನ್ಸಿಪಲ್ ಮ್ಯಾನೇಜರ್ (Principle Manager) ಹುದ್ದೆಗೆ ಅರ್ಜಿ ಸಲ್ಲಿಸುವವರಿಗೆ ಗರಿಷ್ಠ ವಯಸ್ಸು 50 ವರ್ಷ ಮೀರಿರಬಾರದು. ಸಹಾಯಕ ನಿರ್ದೇಶಕರು, ಉಪ ವ್ಯವಸ್ಥಾಪಕರು, ಆಹಾರ ವಿಶ್ಲೇಷಕರ ಹುದ್ದೆಗೆ ಅರ್ಜಿ ಸಲ್ಲಿಸುವವರು 35 ವರ್ಷ ವಯೋಮಿತಿ ಮೀರಿರಬಾರದು. 

ಹಾಗೇ ಕಿರಿಯ ಸಹಾಯಕ ಹುದ್ದೆ ಹೊರತು ಪಡಿಸಿ ಉಳಿದ ಹುದ್ದೆಗಳಿಗೆ 30 ವರ್ಷ ಮೀರಿರಬಾರದು. ಒಬಿಸಿ (OBC) ಅಭ್ಯರ್ಥಿಗಳಿಗೆ- 3 ವರ್ಷ ಹಾಗೂ ಎಸ್ಸಿ/ ಎಸ್ಟಿ (SC, ST) ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ (Age relaxation) ಇರುತ್ತದೆ.

ಸಾಮಾನ್ಯ ಮತ್ತು ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 1.500 ರೂ ಅರ್ಜಿ ಶುಲ್ಕ ಪಾವತಿಸಬೇಕು. ಇನ್ನು ಎಸ್ಸಿ, ಎಸ್ಟಿ, ಮಹಿಳೆಯರು, ಎಕ್ಸ್ ಸರ್ವಿಸ್ ಮ್ಯಾನ್, ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳು 500 ರೂ ಅರ್ಜಿ ಶುಲ್ಕ ಪಾವತಿಸಬೇಕು. ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕವೇ ಪಾವತಿಸಬೇಕು.

ನೈರುತ್ಯ ರೈಲ್ವೆಯಲ್ಲಿ 904 ಅಪ್ರೆಂಟಿಸ್‌‌ಗೆ ಅರ್ಜಿ ಆಹ್ವಾನ : ರಾಜ್ಯದಲ್ಲೇ ಕೆಲಸ ಮಾಡುವ ಅವಕಾಶ 

ಕಂಪ್ಯೂಟರ್ ಆಧಾರಿತ ಪರೀಕ್ಷೆ, ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.  ಅಧಿಸೂಚನೆಯ ಪ್ರಕಾರ, ಅರ್ಹತೆ ಮತ್ತು ಅರ್ಹತಾ ಮಾನದಂಡಗಳ ಕಟ್-ಆಫ್ ದಿನಾಂಕವನ್ನು ನವೆಂಬರ್ 7, 2021 ರಂದು ಘೋಷಿಸಲಾಗುತ್ತದೆ. ಪರೀಕ್ಷೆಯು CBT ಕ್ರಮದಲ್ಲಿ ನಡೆಯುತ್ತದೆ. ಇಲಾಖೆಯು ಸರಿಯಾದ ಸಮಯದಲ್ಲಿ ಅಭ್ಯರ್ಥಿಗಳಿಗೆ  ದಿನಾಂಕಗಳನ್ನು ತಿಳಿಸುತ್ತದೆ. ಅಭ್ಯರ್ಥಿಯು ನಮೂನೆ ಭರ್ತಿ, ಶುಲ್ಕ/ಸೂಚನೆ ಶುಲ್ಕ ಪಾವತಿ ಅಥವಾ ಪ್ರವೇಶ ಪತ್ರ ಡೌನ್‌ಲೋಡ್ ಮಾಡುವಲ್ಲಿ ಯಾವುದೇ ಸಮಸ್ಯೆ ಎದುರಿಸಿದರೆ, ಅವರು ಇಲಾಖೆಯನ್ನು ಇ-ಮೇಲ್ ಮೂಲಕ ಸಂಪರ್ಕಿಸಬಹುದು.

click me!