ಇಂದು ಉದ್ಯೋಗ ಮೇಳ: ಮೋದಿಯಿಂದ 51,000 ಜನರಿಗೆ ನೇಮಕ ಪತ್ರ

By Kannadaprabha News  |  First Published Aug 28, 2023, 2:00 AM IST

ರೋಜ್‌ಗಾರ್‌ ಮೇಳ ಯೋಜನೆಯಡಿ ದೇಶಾದ್ಯಂತ ಗೃಹ ಸಚಿವಾಲಯ, ಕೇಂದ್ರೀಯ ಸಶಸ್ತ್ರ ಪಡೆ, ಕೇಂದ್ರೀಯ ಪೊಲೀಸ್‌ ಪಡೆ, ಗಡಿ ಭದ್ರತಾ ಪಡೆ, ಗಡಿ ಪೊಲೀಸ್‌ ಮತ್ತು ದೆಹಲಿ ಪೊಲೀಸ್‌ ಪಡೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಸರ್ಕಾರವು ಸಿಬ್ಬಂದಿಗಳನ್ನು ನೇಮಿಸಿಕೊಳ್ಳುತ್ತದೆ. 10 ಲಕ್ಷ ಉದ್ಯೋಗ ಸೃಷ್ಟಿಸುವ ಗುರಿಯೊಂದಿಗೆ ಪ್ರಧಾನಿ ಮೋದಿ 2022ರ ಅಕ್ಟೋಬರ್‌ನಲ್ಲಿ ರೋಜ್‌ಗಾರ್‌ ಮೇಳವನ್ನು ಉದ್ಘಾಟಿಸಿದ್ದರು.


ನವದೆಹಲಿ(ಆ.28): ರೋಜ್‌ಗಾರ್‌ ಮೇಳ ಯೋಜನೆಯಡಿ ನೂತನವಾಗಿ ಸರ್ಕಾರಿ ಉದ್ಯೋಗಕ್ಕೆ ನೇಮಕಗೊಂಡಿರುವ ಸುಮಾರು 51,000ಕ್ಕೂ ಹೆಚ್ಚು ಜನರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫ್‌ರೆನ್ಸ್‌ ಮೂಲಕ ಇಂದು(ಸೋಮವಾರ) ನೇಮಕಾತಿ ಪತ್ರಗಳನ್ನು ವಿತರಿಸಲಿದ್ದಾರೆ. ಈ ಯೋಜನೆಯಡಿ ದೇಶಾದ್ಯಂತ 45 ಕಡೆಗಳಲ್ಲಿ ನೇಮಕಾತಿ ಪ್ರಕ್ರಿಯೆ ನಡೆಸಲಾಗುತ್ತದೆ.

ಮುಂಜಾನೆ 10.30 ಗಂಟೆಗೆ ವರ್ಚುವಲ್‌ ಆಗಿ ನೇಮಕಾತಿ ಪತ್ರ ವಿತರಣೆ ಮಾಡಲಿರುವ ಮೋದಿ, ಬಳಿಕ ನೂತನ ಉದ್ಯೋಗಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ರೋಜ್‌ಗಾರ್‌ ಮೇಳ ಯೋಜನೆಯಡಿ ದೇಶಾದ್ಯಂತ ಗೃಹ ಸಚಿವಾಲಯ, ಕೇಂದ್ರೀಯ ಸಶಸ್ತ್ರ ಪಡೆ, ಕೇಂದ್ರೀಯ ಪೊಲೀಸ್‌ ಪಡೆ, ಗಡಿ ಭದ್ರತಾ ಪಡೆ, ಗಡಿ ಪೊಲೀಸ್‌ ಮತ್ತು ದೆಹಲಿ ಪೊಲೀಸ್‌ ಪಡೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಸರ್ಕಾರವು ಸಿಬ್ಬಂದಿಗಳನ್ನು ನೇಮಿಸಿಕೊಳ್ಳುತ್ತದೆ. 10 ಲಕ್ಷ ಉದ್ಯೋಗ ಸೃಷ್ಟಿಸುವ ಗುರಿಯೊಂದಿಗೆ ಪ್ರಧಾನಿ ಮೋದಿ 2022ರ ಅಕ್ಟೋಬರ್‌ನಲ್ಲಿ ರೋಜ್‌ಗಾರ್‌ ಮೇಳವನ್ನು ಉದ್ಘಾಟಿಸಿದ್ದರು.

Latest Videos

undefined

ಅಮೆರಿಕ ಕಂಪೆನಿಯಲ್ಲಿ 1 ಕೋಟಿಗೂ ಅಧಿಕ ಉದ್ಯೋಗ ಆಫರ್‌ ಪಡೆದ ವೆಲ್ಲೂರು ವಿಐಟಿ ವಿದ್ಯಾರ್ಥಿ!

ಕಳೆದ ಅಕ್ಟೋಬರ್‌ನಲ್ಲಿ 75,000, ನವೆಂಬರ್‌ನಲ್ಲಿ 71,000, ಜನವರಿಯಲ್ಲಿ 71,000, ಏಪ್ರೀಲ್‌ನಲ್ಲಿ 71,000, ಮೇನಲ್ಲಿ 71,000, ಜೂನ್‌ನಲ್ಲಿ 70,000 ಮತ್ತು ಜುಲೈನಲ್ಲಿ 70,000 ಸೇರಿ ಈವರೆಗೆ ಈ ಯೋಜನೆಯಡಿ 5ಲಕ್ಷ 70 ಸಾವಿರಕ್ಕೂ ಅಧಿಕ ಜನರಿಗೆ ಮೋದಿ ನೇಮಕಾತಿ ಪತ್ರ ವಿತರಿಸಿದ್ದಾರೆ.

click me!