Union Govt Jobs: ಕೇಂದ್ರ ಇಲಾಖೆಗಳಲ್ಲೇ 8.72 ಲಕ್ಷ ಹುದ್ದೆ ಖಾಲಿಯಿದೆ!

Published : Feb 04, 2022, 03:05 AM IST
Union Govt Jobs: ಕೇಂದ್ರ ಇಲಾಖೆಗಳಲ್ಲೇ 8.72 ಲಕ್ಷ ಹುದ್ದೆ ಖಾಲಿಯಿದೆ!

ಸಾರಾಂಶ

* ಕೇಂದ್ರ ಸರ್ಕಾರದ  ವಿವಿಧ ಇಲಾಖೆಗಳಲ್ಲಿ  9 ಲಕ್ಷ ಹುದ್ದೆ ಖಾಲಿ * ರಾಜ್ಯಸಭೆಯಲ್ಲಿ ಮಾಹಿತಿ *ಕಡಿಮೆ ನಿರುದ್ಯೋಗ: ಕರ್ನಾಟಕ ನಂ 5 *ಉದ್ಯೋಗ ಸೃಷ್ಟಿಯಲ್ಲಿ ತೆಲಂಗಾಣ ಫಸ್ಟ್‌, ಹರ್ಯಾಣ ಲಾಸ್ಟ್‌

ನವದೆಹಲಿ(ಫೆ. 04)  ಕೇಂದ್ರ ಸರ್ಕಾರದ (Union Govt)  ವಿವಿಧ ಇಲಾಖೆಗಳಲ್ಲಿ 8.72 ಲಕ್ಷ ಹುದ್ದೆಗಳು (Jobs) ಖಾಲಿಯಿವೆ ಎಂದು ಗುರುವಾರ ರಾಜ್ಯಸಭೆಗೆ (Rajya Sabha) ತಿಳಿಸಲಾಗಿದೆ. ಸಿಬ್ಬಂದಿ ರಾಜ್ಯಸಚಿವ ಜಿತೇಂದ್ರ ಕುಮಾರ್‌, 2018ರ ಮಾ.1ರ ವೇಳೆಗೆ 6.83 ಲಕ್ಷ, 2019ರ ಮಾ.31ರ ವೇಳೆಗೆ 9.10 ಲಕ್ಷ ಮತ್ತು 2020ರ ಮಾ.1ರ ವೇಳೆಗೆ3 8.72 ಲಕ್ಷ ಹುದ್ದೆ ಖಾಲಿ ಇದ್ದವು ಎಂದು ತಿಳಿಸಿದ್ದಾರೆ. ಜೊತೆಗೆ ಪ್ರಮುಖ ನೇಮಕಾತಿ ಏಜೆನ್ಸಿಗಳಾದ ಸಿಬ್ಬಂದಿ ಆಯ್ಕೆ ಆಯೋಗ(ಎಸ್‌ಎಸ್‌ಸಿ), ಕೇಂದ್ರ ಲೋಕ ಸೇವಾ ಆಯೋಗ, ರೇಲ್ವೆ ನೇಮಕಾತಿ ಮಂಡಳಿ 2018-19 ಹಾಗೂ 2020-21ರಲ್ಲಿ 2,65,468 ನೇಮಕಾತಿ ಮಾಡಿದೆ ಎಂದು ತಿಳಿಸಿದ್ದಾರೆ.

ಕಡಿಮೆ ನಿರುದ್ಯೋಗ: ಕರ್ನಾಟಕ ನಂ 5:   ಅತಿ ಕಡಿಮೆ ನಿರುದ್ಯೋಗಿಗಳನ್ನು ಹೊಂದಿರುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ (Karnataka) ದೇಶದಲ್ಲಿ ನಂ.5 ಸ್ಥಾನದಲ್ಲಿದೆ. ಮೊದಲ ಸ್ಥಾನದಲ್ಲಿ ನೆರೆಯ ತೆಲಂಗಾಣ ರಾಜ್ಯವಿದೆ ಎಂದು ವರದಿಯೊಂದು ಹೇಳಿದೆ.

ಸ್ವತಂತ್ರ ಚಿಂತಕರ ಚಾವಡಿಯಾದ ‘ಸೆಂಟರ್‌ ಫಾರ್‌ ಮಾನಿಟರಿಂಗ್‌ ಇಂಡಿಯನ್‌ ಎಕಾನಮಿ’ (ಸಿಎಂಐಇ) 2022 ಜನವರಿಯಲ್ಲಿ ದೇಶದ ವಿವಿಧ ರಾಜ್ಯಗಳಲ್ಲಿನ ನಿರುದ್ಯೋಗ ಪ್ರಮಾಣ ಕುರಿತ ವರದಿಯೊಂದನ್ನು ಬಿಡುಗಡೆ ಮಾಡಿದೆ. ವರದಿ ಅನ್ವಯ 2022ರ ಜನವರಿಯಲ್ಲಿ ನಿರುದ್ಯೋಗ ಪ್ರಮಾಣವು ಭಾರೀ ಪ್ರಮಾಣದಲ್ಲಿ ಇಳಿಕೆ ಕಂಡು ಶೇ.6.57ಕ್ಕೆ ತಲುಪಿದೆ. ದೇಶದಲ್ಲಿ ಕೋವಿಡ್‌ ಹಾವಳಿ ಕಡಿಮೆಯಾಗಿ ದೇಶದಲ್ಲೆಡೆ ಕೋವಿಡ್‌ ನಿರ್ಬಂಧ ಕ್ರಮಗಳು ತೆರವಾದ ಹಿನ್ನೆಲೆಯಲ್ಲಿ ಉದ್ಯೋಗ ಸೃಷ್ಟಿಹೆಚ್ಚಳವಾಗಿರುವುದೇ ನಿರುದ್ಯೋಗ ಪ್ರಮಾಣ ಕುಸಿತಕ್ಕೆ ಕಾರಣ ಎಂದು ಹೇಳಿದೆ.

KERC Recruitment 2022: ರಾಜ್ಯ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದಲ್ಲಿ ಉದ್ಯೋಗವಕಾಶ, ಇಂದೇ ಅರ್ಜಿ ಸಲ್ಲಿಸಿ

ಕರ್ನಾಟಕ ನಂ.5: ಸಿಎಂಐಎ ವರದಿ ಅನ್ವಯ ಕೇವಲ ಶೆ.0.7ರಷ್ಟು ನಿರುದ್ಯೋಗದೊಂದಿಗೆ ತೆಲಂಗಾಣ ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನಗಳಲ್ಲಿ ಕ್ರಮವಾಗಿ ಗುಜರಾತ್‌ (ಶೇ.1.2), ಮೇಘಾಲಯ (ಶೇ.1.5), ಒಡಿಶಾ (ಶೇ.1.8) ಮತ್ತು ಕರ್ನಾಟಕ (ಶೇ.2.9) ರಾಜ್ಯಗಳಿವೆ. ಹರಾರ‍ಯಣ ಅತಿ ಹೆಚ್ಚು ನಿರುದ್ಯೋಗ ದರ ಶೇ.23.4ರೊಂದಿಗೆ ಕೊನೆಯ ಸ್ಥಾನದಲ್ಲಿದೆ.

ರಾಜ್ಯ ನಿರುದ್ಯೋಗ ದರ

ತೆಲಂಗಾಣ 0.7%

ಗುಜರಾತ್‌ 1.2%

ಮೇಘಾಲಯ 1.5%

ಒಡಿಶಾ 1.8%

ಕರ್ನಾಟಕ 2.9%


ಕರ್ನಾಟಕದ ನಿರೀಕ್ಷೆ:  ಕರ್ನಾಟಕಕ್ಕೆ  ಹೆಚ್ಚಿನ ಬಂಡವಾಳ ಆಕರ್ಷಿಸಲು ನಿಟ್ಟಿನಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ, ರಾಜ್ಯ ಮಟ್ಟದ ಏಕಗವಾಕ್ಷಿ ಸಮಿತಿಯಡಿ ಒಟ್ಟು 2367.99 ಕೋಟಿ ರೂ. ಮೊತ್ತದ 88 ಯೋಜನೆಗಳಿಗೆ ಅನುಮೋದನೆ  ನೀಡಲಾಗಿದೆ.

ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ ಆರ್ ನಿರಾಣಿ  ಅವರ ನೇತೃತ್ವದಲ್ಲಿ ರಾಜ್ಯ ಮಟ್ಟದ ಏಕಗವಾಕ್ಷಿ  ಅನುಮೋದನಾ ಸಮಿತಿಯ ಸಭೆ ನಡೆದು ತೀರ್ಮಾನ ತೆಗೆದುಕೊಳ್ಳಲಾಗಿದೆ . ಒಟ್ಟು 88 ಯೋಜನೆಗಳಿಂದ  2367.99 ಕೋಟಿ ರೂ. ಬಂಡವಾಳ  ರಾಜ್ಯದಲ್ಲಿ ಹೂಡಿಕೆಯಾಲಿದ್ದು,ಇದರಿಂದ 10904 ಉದ್ಯೋಗಗಳು(Jobs) ಸೃಷ್ಟಿಯಾಗಲಿವೆ ಎಂದು ನಿರೀಕ್ಷಿಸಲಾಗಿದೆ.

ಪ್ರಧಾನಮಂತ್ರಿ ಗತಿ ಶಕ್ತಿ ಯೋಜನೆಯಡಿ ಮುಂದಿನ 5 ವರ್ಷದಲ್ಲಿ   60 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಲಾಗುವುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದರು.  ಕೋವಿಡ್ ಸಂಕಷ್ಟದಲ್ಲಿಯೂ ದೇಶದ ಆರ್ಥಿಕ ಪರಿಸ್ಥಿತಿ ಚೇತರಿಸಿಕೊಳ್ಳುತ್ತಿದೆ.  ಯುವಕರು ಮತ್ತು ಮಹಿಳೆಯರ ಸಬಲೀಕರಣ ಮಾಡುವುದೇ ನಮ್ಮ ಸರ್ಕಾರದ ಮುಂದಿರುವ ಗುರಿ ಎಂದು ತಿಳಿಸಿದ್ದರು. 

 

PREV
Read more Articles on
click me!

Recommended Stories

ಭಾರತದ ಹೊಸ 4 ಕಾರ್ಮಿಕ ಸಂಹಿತೆ ಜಾರಿಗೆ, ಕನಿಷ್ಠ ವೇತನ, 1 ವರ್ಷದದಲ್ಲಿ ಗ್ರಾಚ್ಯುಟಿ, 40 ಕೋಟಿ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ
ಹುಷಾರಿಲ್ಲ ಅಂದ್ರೆ MLA, MP ಕೂಡ ರಜೆ ತೆಗೆದ್ಕೊಳ್ಬೇಕಾ? ಹಿಂಗಿದೆ ರೂಲ್ಸ್