ಅಗ್ನಿಪಥ್ ಯೋಜನೆಯಡಿ 2024-25ನೇ ಸಾಲಿನ ಅಗ್ನಿವೀರ್ ನೇಮಕಾತಿಗಾಗಿ ಮಂಗಳೂರಿನ ಭಾರತೀಯ ಸೇನಾ ನೇಮಕಾತಿ ಕಚೇರಿಯು ಪುರುಷ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದ್ದು ಮಾ. 22ರವರೆಗೆ ನೋಂದಾಯಿಸಿಕೊಳ್ಳಲು ಅವಕಾಶ ನೀಡಲಾಗಿದೆ.
ಬೆಂಗಳೂರು (ಫೆ.28): ಅಗ್ನಿಪಥ್ ಯೋಜನೆಯಡಿ 2024-25ನೇ ಸಾಲಿನ ಅಗ್ನಿವೀರ್ ನೇಮಕಾತಿಗಾಗಿ ಮಂಗಳೂರಿನ ಭಾರತೀಯ ಸೇನಾ ನೇಮಕಾತಿ ಕಚೇರಿಯು ಪುರುಷ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದ್ದು ಮಾ. 22ರವರೆಗೆ ನೋಂದಾಯಿಸಿಕೊಳ್ಳಲು ಅವಕಾಶ ನೀಡಲಾಗಿದೆ.
ಹೆಸರು ನೋಂದಾಯಿಸಿದ ಅಭ್ಯರ್ಥಿಗಳಿಗೆ ಆನ್‌ಲೈನ್ ಪ್ರವೇಶ ಪರೀಕ್ಷೆ ನಡೆಸಲಾಗುವುದು. ಮೂರು ಹಂತದಲ್ಲಿ ಪರೀಕ್ಷೆಗಳು ನಡೆಯಲಿದ್ದು, ಮೊದಲ ಹಂತದಲ್ಲಿ ಆಯ್ದ ಕೇಂದ್ರಗಳಲ್ಲಿ ಆನ್‌ಲೈನ್ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಇ) ನಡೆಸಲಾಗುವುದು. ಜತೆಗೆ ಕ್ಲರ್ಕ್, ಎಸ್ಕೇಟಿ ವರ್ಗಕ್ಕೆ ಟೈಪಿಂಗ್ ಪರೀಕ್ಷೆ ನಡೆಸಲಾಗುವುದು. ಎರಡನೇ ಹಂತದಲ್ಲಿ ನೇಮಕಾತಿ ರ‍್ಯಾಲಿಗಳ ಸಮಯದಲ್ಲಿ ಆನ್‌ಲೈನ್ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಅರ್ಹತೆ ಹೊಂದಿದ ಅಭ್ಯರ್ಥಿಗಳಿಗೆ ದೈಹಿಕ ಸಾಮರ್ಥ್ಯ ಪರೀಕ್ಷೆ ನಡೆಸಲಾಗುವುದು. ಮೂರನೇ ಹಂತದಲ್ಲಿ ಹೊಂದಾಣಿಕೆ ಮತ್ತು ವೈದ್ಯಕೀಯ ಪರೀಕ್ಷೆ ನಡೆಸಲಾಗುವುದು.
undefined
ಪರಿಷತ್ ಗದ್ದಲ ತಾರಕ್ಕಕ್ಕೆ, ರವಿಕುಮಾರ್-ಜಬ್ಬರ ನಡುವಿನ ಗಲಾಟೆ ನಿಲ್ಲಿಸಲು ಮಾರ್ಷಲ್‌ಗಳ ಎಂಟ್ರಿ!
ಕ್ರೀಡಾಪಟುಗಳು, ಎನ್‌ಸಿಸಿ ಪ್ರಮಾಣಪತ್ರ ಹೊಂದಿದವರು, ಐಟಿಐ ಹಾಗೂ ಡಿಪ್ಲೋಮಾ ವಿದ್ಯಾರ್ಹತೆ ಹೊಂದಿದವರಿಗೆ ಬೋನಸ್ ಅಂಕ ನೀಡಲಾಗುವುದು. ನೋಂದಣಿ, ಪರೀಕ್ಷೆ ಮತ್ತು ಅಭ್ಯಾಸಕ್ಕಾಗಿ ಅಣಕು ಪರೀಕ್ಷೆ ಕುರಿತಾದ ವಿಡಿಯೋಗಳು ಭಾರತೀಯ ಸೇನೆಯ ವೆಬ್‌ಸೈಟ್‌ನಲ್ಲಿ ಲಭ್ಯವಿರುತ್ತದೆ.
ಯಾವುದೇ ಕಾರಣಕ್ಕೂ ಅಗ್ನಿವೀರ ಸೇವೆಗೆ ಸೇರಿಸುವ ಆಮಿಷಗಳಿಗೆ ಬಲಿಯಾಗಬಾರದು. ನೇಮಕಾತಿ ಕುರಿತ ವಿವರ ಬೇಕಾದಲ್ಲಿ ಸಮೀಪದ ಸೇನಾ ನೇಮಕಾತಿಯ ಎಆರ್‌ಒ ಅವರನ್ನು ಸಂಪರ್ಕಿಸಿ ಪಡೆದುಕೊಳ್ಳಬಹುದು ಎಂದು ಪ್ರಕಟಣೆ ತಿಳಿಸಿದೆ. ಆನ್‌ಲೈನ್‌ನಲ್ಲಿ ನೋಂದಾಯಿಸಿಕೊಳ್ಳುವ ಅಭ್ಯರ್ಥಿಗಳು ತಮ್ಮ ಶೈಕ್ಷಣಿಕ ಅರ್ಹತೆ ಪ್ರಮಾಣಪತ್ರ, ವಯೋ ದೃಢೀಕರಣ ಪತ್ರ, ಭಾವಚಿತ್ರದೊಂದಿಗೆ ನೋಂದಾಯಿಸಿಕೊಳ್ಳಬಹುದು ಎಂದು ತಿಳಿಸಲಾಗಿದೆ.
ಮ್ಯಾಟ್ರಿಮೊನಿಯಲ್ಲಿ ನಕಲಿ ಪ್ರೊಫೈಲ್ ಕ್ರಿಯೇಟ್ ಮಾಡಿ, 250 ಮಹಿಳೆಯರಿಗೆ ವಂಚಿಸಿದ ಅಂಕಲ್!
- ಕ್ರೀಡಾಪಟುಗಳು, ಐಟಿಐ ವಿದ್ಯಾರ್ಹತೆ ಹೊಂದಿದವರಿಗೆ ಬೋನಸ್ ಅಂಕ
- ಡಿಪ್ಲೊಮಾ, ಎನ್‌ಸಿಸಿ ಪ್ರಮಾಣಪತ್ರ ಹೊಂದಿದವರಿಗೂ ಬೋನಸ್ ಅಂಕ
- ನೋಂದಣಿ, ಪರೀಕ್ಷೆ, ಅಣಕು ಪರೀಕ್ಷೆ ಕುರಿತ ವಿಡಿಯೋ ವೆಬ್‌ಸೈಟ್‌ನಲ್ಲಿ ಲಭ್ಯ