ಕೇಂದ್ರ ಸರ್ಕಾರಿ ನೌಕರರಿಗೆ ವರ್ಕ್ ಫ್ರಂ ಹೋಂ, ಆದ್ರೆ ಈ ನಿಯಮ ಉಲ್ಲಂಘಿಸಬಾರ್ದು!

By Suvarna NewsFirst Published Mar 26, 2020, 9:04 AM IST
Highlights

ಕೊರೋನಾ ವೈರಸ್ ನಿಯಂತ್ರಿಸಲು ದೇಶವಿಡೀ 21 ದಿನ ಲಾಕ್‌ಡೌನ್| ಕೇಂದ್ರ ನೌಕರರಿಗೂ ವರ್ಕ್ ಫ್ರಂ ಹೋಂ| ಮನೆಯಿಂದ ಕೆಲ ಮಾಡೋರಿಗೆ ಈ ನಿಯಮ ಅನ್ವಯ

ನವದೆಹಲಿ(ಮಾ.26): ಕೊರೋನಾ ವೈರಸ್ ಹರಡು ಭೀತಿ ಹೆಚ್ಚಾದ ಬೆನ್ನಲ್ಲೇ ಕೇಂದ್ರ ಸರ್ಕಾರದ ಬಹುತೇಕ ಇಲಾಖೆಗಳು ನೌಕರರಿಗೆ ಮನೆಯಿಂದಲೇ ಕೆಲಸ ನಿರ್ವಹಿಸುವಂತೆ ಆದೇಶಿಸಿವೆ. ಕೇಂದ್ರ ಮಾಹಿತಿ ಹಾಗೂ ತಂತ್ರಜ್ಞಾನ ಇಲಾಖೆ ಈ ಎಲ್ಲಾ ನೌಕರರಿಗೆ ಕೆಲ ನಿಯಮಗಳನ್ನು ವಿಧಿಸಿ ವರ್ಕ್ ಫ್ರಂ ಹೋಂ ಮಾಡುವಂತೆ ಸೂಚಿಸಿದೆ. ಇನ್ನು ಇದೇ ಮೊದಲ ಬಾರಿ ಸರ್ಕಾರಿ ನೌಕರರಿಗೆ ಮನೆಯಿಂದ ಕೆಲ ಮಾಡುವ ಅವಕಾಶ ನೀಡಲಾಗಿದೆ.

ಇಲಾಖೆ ಹಿರಡಿಸಿರುವ ಆದೇಶದಲ್ಲಿ ಕೊರೋನಾ ವೈರಸ್ ಹರಡುವ ಭೀತಿ ದಿನೇ ದಿನೇ ಹೆಚ್ಚುತ್ತಿದ್ದು, ನೌಕರರ ರಕ್ಷಣೆಗಾಗಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಅಲ್ಲದೇ ಈ ಸೋಂಕು ಹರಡದಂತೆ ಕಟ್ಟು ನಿಟ್ಟಿನ ಕ್ರಮ ವಹಿಸಲಾಗಿದೆ. ಹೀಗಿರುವಾಗ ಮನೆಯಿಂದ ಕೆಲಸ ಮಾಡುವಾಗ ಯಾವುದೇ ತಪ್ಪುಗಳು ನಡೆಯಬಬಾರದು ಎಂದಿದೆ.

ಕೊರೋನಾ ಭೀತಿ ಇರೋ ಟೈಮಲ್ಲಿ ವರ್ಕ್ ಫ್ರಮ್‌ ಹೋಮ್‌: ಇದನ್ನು ಪಾಲಿಸಿ

ಅಲ್ಲದೇ ಮನೆಯಿಂದ ಕೆಲ ಮಾಡುವುದನ್ನು ನೌಕರರು ಪೇಯ್ಡ್ ಲೀವ್(ಸಂಬಳ ಸಹಿತ ರಜೆ) ಎಂದು ಪರಿಗಣಿಸಬಾರದು. ಅಲ್ಲದೇ ಕೆಲಸದ ದಿನ ಬೆಳಗ್ಗೆ ಹತ್ತು ಗಂಟೆಗೂ ಮೊದಲೇ ಟಾರ್ಗೆಟ್‌ಗಳನ್ನು ಸೆಟ್ ಮಾಡಬೇಕು. ಅಲ್ಲದೇ ಇಮೇಲ್ ಅಥವಾ ಇಆಫೀಸ್ ಮೂಲಕವೇ ಎಲ್ಲಾ ಕೆಲಸಗಳನ್ನು ನಿರ್ವಹಿಸಬೇಕು. ಮೊಬೈಲ್ ಮೂಲಕ ಯಾವುದೇ ವರದಿಗಳನ್ನು ಕಳುಹಿಸುವಂತಿಲ್ಲ. ಅಲ್ಲದೇ ಬೆಳಗ್ಗೆ ಹತ್ತು ಗಂಟೆಯಿಂದ ಸಂಜೆ ಐದು ಗಂಟೆಯವರೆಗೆ ಕೆಲಸ ಮಾಡಲೇಕು ಎಂದಿದೆ. 

ಇನ್ನು ರಿಮೋಟ್‌ ಮೀಟಿಂಗ್‌ಗಳನ್ನು ಫೋನಗ ಅಥವಾ ವಾಟ್ಸಾಪ್ ಮೂಲಕ ಮಾಡಬಹುದು. ಹೀಗಿರುವಾಗ ಇಂತಹ ಮೀಟಿಂಗ್‌ ಮಾಹಿತಿಯನ್ನು ಇತರರಿಗೆ ಕನಿಷ್ಟ ಪಕ್ಷ ಒಂದು ಗಂಟೆಗೂ ಮೊದಲೇ ತಿಳಿಸಬೇಕು ಎಂದಿದೆ. ಅಲ್ಲದೇ ಇಂತಹ ಮೀಟಿಂಗ್‌ಗಳನ್ನು ಪ್ರತಿಯೊಬ್ಬರೂ ತಪ್ಪದೇ ಅಟೆಂಡ್ ಮಾಡಬೇಕು. 

ಮನೆಯೊಳಗೆ ಕೂತು ಆಗಲೇ ತಲೆ ಕೆಟ್ಟಿದೆ, ಇನ್ನೊಂದೆರಡು ವಾರ ಇರೋದು ಹೇಗೆ?

ಆಫೀಸ್ ಸಮಯದಲ್ಲಿ ಯಾವುದೇ ಕ್ಷಣಗದಲ್ಲಾದರೂ ಎಲ್ಲಾ ನೌಕರರು ಫೋನ್‌ ರಿಸೀವ್ ಮಾಡಲೇಬೇಕು. ಮಾರ್ಚ್ 25ರಿಂದ ಆರಂಭಿಸಿ ಮುಂದಿನ ಆದೇಶದವರೆಗೂ ನೌಕರರು ಮನೆಯಿಂದಲೇ ಕೆಲಸ ನಿರ್ವಹಿಸಬೇಕು ಎಂದು ಇದರಲ್ಲಿ ಆದೇಶಿಸಲಾಗಿದೆ. 

click me!