ವಿವಿಧ ಹುದ್ದೆಗಳಿಗೆ ನೇರ ಸಂದರ್ಶನ| ಹಿರೇಕೆರೂರಿನ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ನಡೆಯಲಿರುವ ಸಂದರ್ಶನ| ಎಸ್ಸೆಸ್ಸೆಲ್ಸಿ, ಪಿಯುಸಿ, ಐಟಿಐ ಹಾಗೂ ಯಾವುದೇ ಪದವಿ ವಿದ್ಯಾರ್ಹತೆ|ಸಂದರ್ಶನದ ಪೂರ್ವದಲ್ಲಿ ನೋಂದಣಿ ಕಡ್ಡಾಯ|
ಹಾವೇರಿ(ಡಿ.13): ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಡಿ. 17 ರಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಹಿರೇಕೆರೂರಿನ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ,(ಶೆಟ್ಟರ್ ಕಾಂಪ್ಲೆಕ್ಸ್ ಕೆಎಸ್ ಆರ್‌ಟಿಸಿ ಡಿಪೋ ಹಿಂದುಗಡೆ) ವಿವಿಧ ಹುದ್ದೆಗಳಿಗೆ ನೇರ ಸಂದರ್ಶನ ಆಯೋಜಿಸಲಾಗಿದೆ.
ನೇಮಕಾತಿ ಸಂದರ್ಶನದಲ್ಲಿ ಉದ್ಯೋಗಾದಾತ ಕಂಪನಿಗಳಾದ ದಾವಣಗೆರೆಯ ತೇಜಾ ಟೆಕ್ನೀಕಲ್ ಸರ್ವಿಸ್ಸ್, ಬಂದುಳೆ ಟೆಕ್ನಾಲಾಜಿಸ್ ಸಂಸ್ಥೆ, ಆಶಿರ್ವಾದ್ ಮೈಕ್ರೋಪೈನಾನ್ಸ್ ಸಂಸ್ಥೆ, ಹುಬ್ಬಳ್ಳಿಯ ಸನ್ ಇಂಡಿಯಾ ಸಂಸ್ಥೆ ಹಾಗೂ ಮುತ್ತೂಟ್ ಮೈಕ್ರೋಫಿನ್ ಸಂಸ್ಥೆ ಹಾಗೂ ರಾಣೆಬೆನ್ನೂರಿನ ಹ್ಯಾಪಿ ಮೈಂಡ್ಸ್ ಸಲ್ಯೂಷನ್ಸ್ ಸಂಸ್ಥೆಗಳಲ್ಲಿ ಖಾಲಿ ಇರುವ ಸೆಪ್ಟಿ ಮ್ಯಾನೇಜರ್, ಡೆಲಿವರಿ ಎಕ್ಸಿಕ್ಯೂಟಿವ್, ಎಚ್.ಆರ್. ರಿಕ್ರೂಟರ್, ಬ್ರ್ಯಾಂಚ್ ಮ್ಯಾನೇಜರ್ ಹಾಗೂ ಆನ್ ಲೈನ್ ಪ್ರಮೋಟರ್ಸ್ ಹುದ್ದೆಗಳಿಗೆ ಭರ್ತಿ ಮಾಡಿಕೊಳ್ಳಲು ಸಂದರ್ಶನ ನಡೆಯಲಿದೆ.
ಮಹಿಳೆಯರ ಸುರಕ್ಷತೆಗೆ ಒತ್ತು: 6 ಸಾವಿರ ಪೊಲೀಸ್ ನೇಮಕಾತಿ
ಎಸ್ಸೆಸ್ಸೆಲ್ಸಿ, ಪಿಯುಸಿ, ಐಟಿಐ ಹಾಗೂ ಯಾವುದೇ ಪದವಿ ವಿದ್ಯಾರ್ಹತೆ ಹೊಂದಿದ 18 ರಿಂದ 30 ವರ್ಷ ವಯಸ್ಸಿನ ಉದ್ಯೋಗಾಕಾಂಕ್ಷಿ ಯುವಕ- ಯುವತಿಯರು ನೇರ ಸಂದರ್ಶನದಲ್ಲಿ ಭಾಗವಹಿಸಬಹುದಾಗಿದೆ. ಉದ್ಯೋಗಾಕಾಂಕ್ಷಿಗಳು ಕನಿಷ್ಠ 5 ಬಯೋಡಾಟಾ, 1 ಇತ್ತೀಚಿನ ಭಾವಚಿತ್ರ, ವಿದ್ಯಾರ್ಹತೆಯ ಮತ್ತು ಆಧಾರ್ ಕಾರ್ಡ್ ಝರಾಕ್ಸ್ ಪ್ರತಿಗಳೊಂದಿಗೆ ಹಾಜರಾಗಲು ತಿಳಿಸಿದೆ.
ಸಂದರ್ಶನದ ಪೂರ್ವದಲ್ಲಿ ನೋಂದಣಿ ಕಡ್ಡಾಯವಾಗಿದೆ. ಹೆಚ್ಚಿನ ಮಾಹಿತಿಗಾಗಿ ಹಾವೇರಿ ಉದ್ಯೋಗ ವಿನಿಮಯ ಕಚೇರಿಯ ವೇಳೆಯಲ್ಲಿ ದೂ.ಸಂಖ್ಯೆ 08375-249291, ಮೊಬೈಲ್ ಸಂಖ್ಯೆ 9448218559, 6360112870, 9481930137 ಸಂಪರ್ಕಿಸಬೇಕು ಎಂದು ಪ್ರಕಟಣೆ ತಿಳಿಸಿದೆ.