ನಿರುದ್ಯೋಗಿಗಳಿಗೊಂದು ಸಂಸತದ ಸುದ್ದಿ

By Suvarna News  |  First Published Dec 8, 2019, 1:23 PM IST

ಯುವಕರಿಗೆ ಸೇನಾ ನೇಮಕಾತಿ ರ‍್ಯಾಲಿ| ಜಿಲ್ಲೆಯಲ್ಲಿ ಪೌಷ್ಟಿಕಾಂಶದ ಕೊರತೆಯಿದ್ದು, ಯುವಕರು ಸೇನೆಗೆ ಸೇರಲು ಅಸಮರ್ಥಗುತ್ತಿದ್ದಾರೆ ಎಂದ ಜಿಲ್ಲಾಧಿಕಾರಿ| ಯುವ ಜನತೆ ಶಿಸ್ತುಬದ್ಧ ಜೀವನ, ಆಲೋಚನಾ ಕ್ರಮ, ಉತ್ತಮ ಆರೋಗ್ಯ ಹೊಂದುವ ಮೂಲಕ ಸೈನ್ಯಕ್ಕೆ ಸೇರಿ ಉತ್ತಮ ಸೇವೆ ಸಲ್ಲಿಸಬೇಕು| ಜಿಲ್ಲೆಯ ಮಾಜಿ ಸೈನಿಕರ ಹಾಗೂ ಸೈನಿಕ ಅಧಿಕಾರಿಗಳ ಸಮಸ್ಯೆಗಳನ್ನು ನಿವಾರಿಸುವಲ್ಲಿ ಕ್ರಮ ಕೈಗೊಳ್ಳುತ್ತೇನೆ|


ಕಲಬುರಗಿ(ಡಿ.08): ದೇಶಕ್ಕೆ ಸೈನಿಕ ಸೇವೆ ಅಪಾರವಾಗಿದೆ. ಜಿಲ್ಲೆಯಲ್ಲಿನ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸೈನ್ಯಕ್ಕೆ ಸೇರುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ರ‍್ಯಾಲಿ ಮಾಡುವ ಕುರಿತು ಚಿಂತನೆ ನಡೆಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಶರತ್.ಬಿ ಹೇಳಿದ್ದಾರೆ. 

ಶುಕ್ರವಾರ ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ ಕುರಿತ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಪೌಷ್ಟಿಕಾಂಶದ ಕೊರತೆಯಿದ್ದು, ಯುವಕರು ಸೇನೆಗೆ ಸೇರಲು ಅಸಮರ್ಥಗುತ್ತಿದ್ದಾರೆ. ಯುವ ಜನತೆ ಶಿಸ್ತುಬದ್ಧ ಜೀವನ, ಆಲೋಚನಾ ಕ್ರಮ, ಉತ್ತಮ ಆರೋಗ್ಯ ಹೊಂದುವ ಮೂಲಕ ಸೈನ್ಯಕ್ಕೆ ಸೇರಿ ಉತ್ತಮ ಸೇವೆ ಸಲ್ಲಿಸಬೇಕು. ಜಿಲ್ಲೆಯ ಮಾಜಿ ಸೈನಿಕರ ಹಾಗೂ ಸೈನಿಕ ಅಧಿಕಾರಿಗಳ ಸಮಸ್ಯೆಗಳನ್ನು ನಿವಾರಿಸುವಲ್ಲಿ ಕ್ರಮ ಕೈಗೊಳ್ಳುತ್ತೇನೆ ಎಂದರು. 

Tap to resize

Latest Videos

ಕಲಬುರಗಿ ಜಿಲ್ಲಾ ಮಾಜಿ ಸೈನಿಕರ ಸಂಘದ ಅಧ್ಯಕ್ಷ, ಮಾಜಿ ಸೈನಿಕ ಬಸವರಾಜ ಬಿರಾದಾರ ಮಾತನಾಡಿ, ಜಿಲ್ಲಾಡಳಿತದ ವತಿಯಿಂದ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಇರುವ ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳಿಗೆ ಸೇನೆಗೆ ಸೇರುವುದಿಂದಾಗುವ ಪ್ರಯೋಜನ ಮತ್ತು ಸೌಲಭ್ಯಗಳ ಕುರಿತು ಸಂಪೂರ್ಣ ಮಾಹಿತಿ ಯುವಕರಿಗೆ ತಿಳಿಸುವ ಕಾರ್ಯ ಮಾಡಬೇಕು. ಅಲ್ಲದೇ ಈ ಕಾರ್ಯಕ್ಕೆ ಜಿಲ್ಲೆಯ ಮಾಜಿ ಸೈನಿಕರು ಸ್ವಯಂ ಪ್ರೇರಿತರಾಗಿ ಭಾಗವಹಿಸಿ ಯುವಕರಲ್ಲಿ ಜಾಗೃತಿ ಮೂಡಿಸುತ್ತೇವೆ ಎಂದು ಹೇಳಿದರು. 

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶರತ್ ಬಿ. ಅವರು ಸಶಸ್ತ್ರ ಪಡೆಗಳ ಧ್ವಜವನ್ನು ಬಿಡುಗಡೆ ಮಾಡಿದರು. ಸೈನಿಕರ ಕಲ್ಯಾಣನಿಧಿಗೆ ಕಲಬುರಗಿ ವಿಭಾಗದ ಕೃಷಿ ಮಾರುಕಟ್ಟೆ ಇಲಾಖೆ ನೌಕರರ ಕಲ್ಯಾಣ ಸಂಘದ ಅಧ್ಯಕ್ಷ ಶಿವಶರಣಪ್ಪ ಮಜ್ಜಿಗೆ ಅವರು 2 ಲಕ್ಷ ರು. ದೇಣಿಗೆ ನೀಡಿದ್ದು, ಅವರಿಗೆ ಜಿಲ್ಲಾಧಿಕಾರಿಗಳು ನೆನಪಿನ ಕಾಣಿಗೆ ನೀಡಿ ಗೌರವಿಸಿದರು. 

ಸಭೆಯಲ್ಲಿ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಪ್ರಭಾರ ಉಪನಿರ್ದೇಶಕ ಮುನ್ನಾವರ ದೌಲಾ, ಜಿಲ್ಲಾ ಸೈನಿಕ ಮಂ ಡಳಿ ಉಪಾಧ್ಯಕ್ಷ ಕರ್ನಲ್ ತಾಂಬ್ರೆ, ನಿವೃತ್ತ ಕರ್ನಲ್ ರಾಜಶೇಖರ್ ಕಪಾಟೆ, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಪ್ರಭಾರ ವ್ಯವಸ್ಥಾಪಕರಾದ ಚೋಳರಾಜ ಹಾಗೂ ಮಾಜಿ ಸೈನಿಕರು, ಮಾಜಿ ಸೈನಿಕ ಕುಟುಂಬದವರು ಉಪಸ್ಥಿತರಿದ್ದರು.
 

click me!