Latest Videos

ಪತ್ನಿ ಸೋನಾಕ್ಷಿಗೆ ಬೆಲೆ ಬಾಳುವ ಕಾರ್ ಗಿಫ್ಟ್ ಕೊಟ್ಟ ಜಹೀರ್ ಇಕ್ಬಾಲ್

By Mahmad RafikFirst Published Jun 25, 2024, 5:35 PM IST
Highlights

ಜಹೀರ್ ಇಕ್ಬಾಲ್ ಪತ್ನಿ ಸೋನಾಕ್ಷಿ ಸಿನ್ಹಾಗೆ 2 ಕೋಟಿ ರೂಪಾಯಿ ಬೆಲೆ ಬಾಳುವ ಬಿಎಂಡಬ್ಲ್ಯೂ ಕಾರ್ (BMW Car) ಕಾಣಿಕೆಯಾಗಿ ನೀಡಿದ್ದಾರೆ.

ಮುಂಬೈ: ಬಾಲಿವುಡ್ ದಬಂಗ್ ಗರ್ಲ್ ಸೋನಾಕ್ಷಿ ಸಿನ್ಹಾ (Bollywood Actress Sonakshi Sinha) ಗೆಳೆಯ ಜಹೀರ್ ಇಕ್ಬಾಲ್ (Actor Zaheer Iqbal) ಜೊತೆ ಮದುವೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಇಬ್ಬರ ಫೋಟೋ ಮತ್ತು ವಿಡಿಯೋಗಳು ಹರಿದಾಡುತ್ತಿವೆ. ಜಹೀರ್ ಇಕ್ಬಾಲ್ ಪತ್ನಿ ಸೋನಾಕ್ಷಿ ಸಿನ್ಹಾಗೆ 2 ಕೋಟಿ ರೂಪಾಯಿ ಬೆಲೆ ಬಾಳುವ ಬಿಎಂಡಬ್ಲ್ಯೂ ಕಾರ್ (BMW Car) ಕಾಣಿಕೆಯಾಗಿ ನೀಡಿದ್ದಾರೆ. ಬಿಎಂಡಬ್ಲ್ಯೂ ಇವಿ ಐ7 ಕಾರ್ ಇದಾಗಿದ್ದು, ಸೋನಾಕ್ಷಿ ಮತ್ತು ಜಹೀರ್ ಪುಣಾಣಿ ಡ್ರೈವ್ ಸಹ ಹೋಗಿ ಬಂದಿದ್ದಾರೆ. 

ಬ್ಯಾಟರಿ ಚಾಲಿತ ಸೆಡನ್ i7 ಆರಂಭಿಕ ಬೆಲೆ 2.3 ಕೋಟಿ ರೂ.ಗಳಿಂದ ಆರಂಭವಾಗುತ್ತದೆ. ಇದೇ ಕಂಪನಿಯ ಟಾಪ್ ಮಾಡೆಲ್ ಎಕ್ಸ್ ಶೋರೂಮ್ ಬೆಲೆ 2.50 ಕೋಟಿ ರೂ.ವರೆಗೆ ಇದೆ. ಆದ್ರೆ ಜಹೀರ್ ಇಕ್ಬಾಲ್ ಪತ್ನಿ ಸೋನಾಕ್ಷಿ ಸಿನ್ಹಾ ಅವರಿಗೆ ಯಾವ ಮಾಡೆಲ್ ಕಾರ್ ನೀಡಿದ್ದಾರೆ ಎಂಬುದರ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲ. ಹೊಸ ಕಾರ್‌ನಲ್ಲಿ ದಂಪತಿ ಕುಳಿತು  ಜನರತ್ತ ಕೈ ಬೀಸುತ್ತಿರುವ ವಿಡಿಯೋ ಹೊರ ಬಂದಿದೆ. 

ಕಣ್ಣು ಕುಕ್ಕುತ್ತೆ ಹೀರಾಮಂಡಿಯ ಫರೀದನ್, ಸೋನಾಕ್ಷಿಯ 14 ಕೋಟಿಯ ಮುಂಬೈ ಮನೆಯ ಅದ್ಧೂರಿತನ

ಕಾರ್ ಶೈಲಿ ಮತ್ತು ವಿನ್ಯಾಸ ಹೀಗಿದೆ 

ಕಾರ್ ಹೊರಗು ಮತ್ತು ಒಳಗಿನಿಂದ ಹಲವು ವಿಶೇಷತೆಗಳನ್ನು ಹೊಂದಿದೆ. ಕಾರ್ ಪ್ರಿಯರಿಗಾಗಿಯೇ ವಿಶೇಷವಾಗಿ ಈ ಕಾರ್ ಒಳಭಾಗವನ್ನು ಡಿಸೈನ್ ಮಾಡಲಾಗಿದೆ. ಕಿಡ್ನಿ ಮಾದರಿಯಲ್ಲಿ ಕಾರ್ ಆಕರ್ಷಕವಾಗಿ ವಿನ್ಯಾಸಗೊಂಡಿದ್ದು, ಮುಂಭಾಗ ಗ್ರಿಲ್ ವ್ಯವಸ್ಥೆಯನ್ನು ಹೊಂದಿದೆ. ಎಲ್‌ಇಡಿ ಹೆಡ್‌ಲೈಟ್ ಹೊಂದಿದ್ದು, ಡಿಆರ್‌ಎಲ್ ಸೆಟಪ್ ಸಹ ಇದೆ. 

ಮಾರುಕಟ್ಟೆಯಲ್ಲಿ ಬಿಎಂಡಬ್ಲ್ಯೂ ಕಾರ್ ನೀಲಿ ಮತ್ತು ಶ್ವೇತ ಬಣ್ಣದಲ್ಲಿ ಲಭ್ಯವಿದೆ. ಇಂಟರ್‌ನಲ್ ಕೊಂಬುಸ್ಟೇಶನ್ ಇಂಜಿನ್ (ICE)  ಹೊಂದಿದೆ. ಸದ್ಯ G70 ಜನರೇಷನ್ 7 ಸಿರೀಸ್ ಮಾಡೆಲ್ ಕಾರ್‌ಗಳು ಮಾರಾಟವಾಗುತ್ತಿವೆ. 740 xDrive60 and M70 xDrive ಎಂಬ ಎರಡು ಮಾಡೆಲ್‌ಗಳಲ್ಲಿ ಕಾರ್ ಲಭ್ಯವಿದೆ. ಈ ಮೊದಲು  536 bhp ಮತ್ತು 745Nm ಟಾರ್ಕ್‌ನ ಪವರ್ ಇತ್ತು. ಇದೀಗ  641 bhp ಮತ್ತು 1015Nm ಗರಿಷ್ಠ ಟಾರ್ಕ್‌ ಹೊಂದಿದೆ. ಎರಡು ಮಾಡೆಲ್‌ಗಳ ರೊಬಸ್ಟ್ ರೇಂಜ್  (robust range) ಕ್ರಮವಾಗಿ 625 ಕಿಮೀ ಮತ್ತು 560 ಕಿಮೀ ಆಗಿದೆ. 4.7 ಸೆಕೆಂಡ್‌ನಲ್ಲಿ 100 ಕಿಮೀ ವೇಗದಲ್ಲಿ ಹೋಗಬಹುದಾಗಿದೆ. ಎಂ ಟ್ರಿಮ್ 3.7 ಸೆಕೆಂಡ್‌ನಲ್ಲಿ ವೇಗ ಹೆಚ್ಚಿಸಬಹುದು.

ಬಾಯ್‌ಫ್ರೆಂಡ್ ಜಹೀರ್ ಜೊತೆ ಸೋನಾಕ್ಷಿ ಸಿನ್ಹಾ ಮದುವೆ, ಮುಸ್ಲಿಂ ಜೊತೆ ಮದ್ವೆ ಅಂತ ಟ್ರೋಲ್!

click me!