
ನವದೆಹಲಿ(ಜೂ.19) ಬಹುತೇಕ ಎಲ್ಲಾ ಬ್ರ್ಯಾಂಡ್ ಕಂಪನಿಗಳು ಸ್ಪೆಷಲ್ ಎಡಿಶನ್, ಲಿಮಿಟೆಡ್ ಎಡಿಶನ್ ಕಾರುಗಳನ್ನು ಲಾಂಚ್ ಮಾಡುತ್ತಿದೆ. ಹೆಚ್ಚುವರಿ ಫೀಚರ್ಸ್, ಹಲವು ವಿಶೇಷತೆಗಳನ್ನೊಳಗೊಂಡ ಈ ಕಾರುಗಳಿಗೆ ಬೇಡಿಕೆಯೂ ಹೆಚ್ಚು. ಇದೀಗ ಭಾರತದ ಕಾರು ಮಾರುಕಟ್ಟೆ ಇತಿಹಾಸದಲ್ಲೇ ಮೊದಲ ಬಾರಿಗೆ ಟೀಂ ಇಂಡಿಯಾ ಕ್ರಿಕೆಟಿಗನ ಹೆಸರಿನಲ್ಲಿ ಕಾರೊಂದು ಲಾಂಚ್ ಆಗಿದೆ. ಹೌದು, ಕೂಲ್ ಕ್ಯಾಪ್ಟನ್ ಎಂದೇ ಗುರುತಿಸಿಕೊಂಡಿರುವ ಎಂಎಸ್ ಧೋನಿ ಹೆಸರಿನ ಸ್ಪೆಷಲ್ ಎಡಿಶನ್ ಕಾರು ಬಿಡುಗಡೆಯಾಗಿದೆ. ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಸಿಟ್ರೊಯೆನ್ ಕಂಪನಿ ಇದೀಗ ಧೋನಿ ಎಡಿಶನ್ ಸಿ3 ಕಾರು ಬಿಡುಗಡೆ ಮಾಡಿದೆ.
ಧೋನಿ ಸ್ಪೆಷಲ್ ಎಡಿಶನ್ ಕಾರು ಕೇವಲ 100 ಯೂನಿಟ್ ಮಾತ್ರ ಲಭ್ಯವಿದೆ. ಹೀಗಾಗಿ ಮೊದಲು ಬುಕಿಂಗ್ 100 ಗ್ರಾಹಕರಿಗೆ ಮಾತ್ರ ಈ ಕಾರು ಲಭ್ಯವಾಗಲಿದೆ. ಧೋನಿ ಎಡಿಶನ್ ಸಿ3 ಕಾರು, ಮಾಜಿ ಕ್ರಿಕೆಟಿಗನ ಸ್ಟೈಲ್, ಚರಿಷ್ಮಾ ಸೇರಿದಂತೆ ಹಲವು ವಿಚಾರಗಳಿಂದ ಸ್ಪೂರ್ತಿ ಪಡೆದು ನಿರ್ಮಾಣಗೊಂಡಿದೆ. ಇದು ಎಸ್‌ಯುವಿ ಕಾರಾಗಿದ್ದು, ಗ್ರಾಹಕರಿಗೆ ಕಸ್ಟಮೈಸ್ ಆಯ್ಕೆಯನ್ನೂ ನೀಡಿದೆ.
ಸಿಟ್ರಾನ್‌ನಿಂದ 7 ಸೀಟರ್ ಎಸ್‌ಯುವಿ ಅನಾವರಣ: ಶೇ. 90ರಷ್ಟು ಭಾರತದಲ್ಲೇ ತಯಾರಾದ ಕಾರು!
ಪ್ರಮುಖವಾಗಿ ಈ ಧೋನಿ ಸಿ3 ಕಾರಿನಲ್ಲಿ ಧೋನಿ ಲೇಬಲ್ ಗ್ರಾಫಿಕ್ಸ್, ಧೋನಿ ಗ್ಲೌವ್ ಡ್ಯಾಶ್ ಬಾಕ್ಸ್ ಸೇರಿದಂತೆ ಹಲವು ವಿಶೇಷತೆಗಳು ಈ ಕಾರಿನಲ್ಲಿದೆ. ಕೇವಲ 100 ಕಾರುಗಳನ್ನು ಮಾತ್ರ ಉತ್ಪಾದನೆ ಮಾಡಲಾಗಿದೆ. ಧೋನಿ ಸಿ3 ಕಾರಿನಲ್ಲಿ ಎಂಎಸ್ ಧೋನಿಯ ಸಹಿ ಇರಲಿದೆ. ಇದರ ಜೊತೆಗೆ ಗ್ರಾಹಕರಿಗೆ ಧೋನಿ ಸರ್ಪ್ರೈಸ್ ಗಿಫ್ಟ್‌ಗಳು ಸಿಗಲಿದೆ.
ಹೊಚ್ಚ ಹೊಸ ಧೋನಿ ಸಿ3 ಕಾರಿನ ಬುಕಿಂಗ್ ಆರಂಭಗೊಂಡಿದೆ. ಭಾರತದ ಎಲ್ಲಾ ಸಿಟ್ರೊಯೆನ್ ಡೀಲರ್‌ಶಿಪ್‌ಗಳಲ್ಲಿ ಕಾರು ಬುಕಿಂಗ್ ಮಾಡಿಕೊಳ್ಳಬಹುದು. ಇದರ ಬೆಲೆ 11.82 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಇನ್ನು ಸಿ3 ಸ್ಟಾಂಡರ್ಡ್ ಕಾರಿನ ಬೆಲೆ 8.99 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಆರಂಭಗೊಳ್ಳುತ್ತಿದೆ.
ದೊಡ್ಡ ಆಕಾರ, ಶಕ್ತಿ ಅಪಾರ ಸಿಟ್ರಾಯನ್ ಸಿ3 ಕಾರಿನ ಟೆಸ್ಟ್ ಡ್ರೈವ್!
ಕಾರಿನ ಎಂಜಿನ್ ವಿಚಾರದಲ್ಲಿ ಸಿ3 ಮಾಡೆಲ್‌ಗೂ ಧೋನಿ ಸ್ಪೆಷಲ್ ಎಡಿಶನ್ ಸಿ3 ಮಾಡೆಲ್‌ಗೂ ಹೆಚ್ಚಿನ ವ್ಯತ್ಯಾಸವಿಲ್ಲ. 1.2 ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಹೊಂದಿದೆ. 110 PS ಪವರ್ ಹಾಗೂ 205 Nm ಪೀಕ್ ಟಾರ್ಕ್ ಉತ್ಪಾದಿಸಲಿದೆ. 6 ಸ್ಪೀಡ್ ಮಾನ್ಯುಯೆಲ್ ಟ್ರಾನ್ಸ್‌ಮಿಶನ್ ಆಯ್ಕೆ ಹೊಂದಿದೆ. ಹಲವು ಆಕರ್ಷಕ ಬಣ್ಣಗಳಲ್ಲಿ ನೂತನ ಕಾರು ಲಭ್ಯವಿದೆ.