Demand for Urus: ಫೇಸ್‌ಲಿಫ್ಟ್ ಬಿಡುಗಡೆಗೆ ಮುಂದಾದ ಲ್ಯಾಂಬೋರ್ಗಿನಿ

By Suvarna NewsFirst Published Dec 8, 2021, 4:26 PM IST
Highlights

ಕಳೆದ ನಾಲ್ಕು ವರ್ಷಗಳಲ್ಲಿ ಲ್ಯಾಂಬೋರ್ಗಿನಿ  ಉರ್ಸ್‌ನ 16 ಸಾವಿರ ಕಾರುಗಳ ಮಾರಾಟ. ಇದು ದೇಶದಲ್ಲಿ ಲಭ್ಯವಿರುವ ಅತ್ಯಂತ ವೇಗದ ಎಸ್‌ಯುವಿಗಳಲ್ಲಿ ಒಂದು. ಇದರ ಫೇಸ್‌ಲಿಫ್ಟ್‌ ಬಿಡುಗಡೆಗೆ ಕಂಪನಿ ಸಿದ್ಧತೆ

ಇಟಲಿಯ ಸೂಪರ್‌ ಕಾರು ಉತ್ಪಾದಕ ಕಂಪನಿ ಲ್ಯಾಂಬೋರ್ಗಿನಿಯ ಭಾರಿ ಬೇಡಿಕೆಯ ಕಾರು ಲ್ಯಾಂಬೋರ್ಗಿನಿ ಉರ್ಸ್‌, ಕಳೆದ ನಾಲ್ಕು ವರ್ಷಗಳಲ್ಲಿ 16 ಸಾವಿರ ಕಾರುಗಳನ್ನು ಮಾರಾಟ ಮಾಡಿದೆ. ಸೂಪರ್‌ ಕಾರುಗಳು ವಲಯದಲ್ಲಿ ಇದು ಅತ್ಯುತ್ತಮ ಮಾರಾಟ ಎಂದೇ ಪರಿಗಣಿಸಲಾಗುತ್ತದೆ. ಲ್ಯಾಂಬೋರ್ಗಿನಿ (Lamborghini) 2017ರ ಡಿಸೆಂಬರ್‌ 4ರಂದು ಉರ್ಸ್‌ (Urus) ಎಸ್‌ಯುವಿ (SUV)ಯನ್ನು 2017ರಲ್ಲಿ ಬಿಡುಗಡೆಗೊಳಿಸಿತ್ತು. ಇದು ಹುರೇಕಾನ್‌ (Hirecon) ಮತ್ತು ಅವೆಂಟಡೋರ್‌ (Aventador) ನಂತರ ಬಿಡುಗಡೆಯಾದ ಮೂರನೇ ಮಾದರಿಯಾಗಿದೆ. ಈ ಉರ್ಸ್‌ ಮಾದರಿ ಹಿಂದಿನ ಎಲ್ಲಾ ದಾಖಲೆಗಳನ್ನು ಮಿರಿ ಮುನ್ನುಗ್ಗುತ್ತಿದೆ. 2004ರಿಂದ 2014ರ ಅವಧಿಯಲ್ಲಿ ಗ್ಯಾಲಾರ್ಡೋ (Gallordo) ಸೂಪರ್‌ ಕಾರಿನ ದಾಖಲೆಯನ್ನು ಇದು ಮೀರಿಸಿದೆ. 2014ರಿಂದ ಮಾರುಕಟ್ಟೆಯಲ್ಲಿರುವ ಹುರೇಕಾನ್‌ ಅನ್ನು ಕೂಡ ಇದು ಹಿಂದಿಕ್ಕಿದೆ. ಈ ಮೂಲಕ ಉರ್ಸ್‌ ಶೀಘ್ರದಲ್ಲೇ, ಲ್ಯಾಂಬೋರ್ಗಿನಿಯ ಅತಿ ಹೆಚ್ಚು ಮಾರಾಟವಾದ (Best selling car)ಕಾರುಗಳ ಪಟ್ಟಿಗೆ ಸೇರ್ಪಡೆಗೊಳ್ಳಲಿದೆ.

ಅಚ್ಚರಿಯ ವಿಷಯವೆಂದರೆ, ಶೇ.85ರಷ್ಟು ಲ್ಯಾಂಬೋರ್ಗಿನಿ ಉರ್ಸ್‌ನ ಖರೀದಿದಾರರು ಬ್ರ್ಯಾಂಡ್‌ಗೆ ಹೊಸಬರು. ಈ ಮೂಲಕ ವರ್ಷಗಳ ಹಿಂದೆ ಸೀಮಿತ ಗ್ರಾಹಕರನ್ನಷ್ಟೇ ಗುರಿಯಾಗಿಸಿಕೊಳ್ಳುತ್ತಿದ್ದ  ಲ್ಯಾಂಬೋರ್ಗಿನಿ ಈಗ ತನ್ನ ಗ್ರಾಹಕರ ನೆಲೆಗಳನ್ನು ಇನ್ನಷ್ಟು ವಿಸ್ತರಿಸುತ್ತಿರುವುದು ಸ್ಪಷ್ಟವಾಗಿದೆ.

ಉರ್ಸ್‌ ಎಸ್‌ಯುವಿಗೆ ಭಾರಿ ಬೇಡಿಕೆ ಸೃಷ್ಟಿಯಾದ ಹಿನ್ನೆಲೆಯಲ್ಲಿ ಲ್ಯಾಂಬೋರ್ಗಿನಿ ತನ್ನ ಉತ್ಪಾದನಾ ಘಟಕಗಳನ್ನು ವಿಸ್ತರಿಸಲು ಮುಂದಾಗಿದೆ.ಇದು ಹೊಸ ಉತ್ಪಾದನಾ ಸೌಲಭ್ಯ, ಕಚೇರಿ ಕಟ್ಟಡ, ಲಾಜಿಸ್ಟಿಕ್‌ ವೇರ್‌ಹೌಸ್‌, ಸೆಕೆಂಡ್‌ ಟ್ರೈಜನರೇಷನ್‌ (Trigeneration)ಘಟಕ, ಎನರ್ಜಿ ಹಬ್‌ (Energy Hub) ಮತ್ತು ಟೆಸ್ಟ್‌ ಟ್ರ್ಯಾಕ್‌ಗಳನ್ನು ಒಳಗೊಂಡಿದೆ. ಈ ಘಟಕದಲ್ಲಿ ಹೊಸದಾಗಿ 700 ಜನರಿಗೆ ಕೂಡ ಉದ್ಯೋಗಾವಕಾಶ ದೊರೆತಿದೆ.

2018ರಲ್ಲಿ ಉರ್ಸ್‌ ಕಂಪನಿಗೆ ಶೇ.40ರಷ್ಟು ಲಾಭ ತಂದುಕೊಟ್ಟಿದೆ ಎಂದು ಲ್ಯಾಂಬೋರ್ಗಿನಿ ಪ್ರಕಟಣೆ ತಿಳಿಸಿದೆ. 2018ರಲ್ಲಿ ಈ ಸೂಪರ್‌ಕಾರ್ 1.415 ಬಿಲಿಯನ್‌ ಯೂರೋ (Euro) ವಹಿವಾಟು ದಾಖಲಿಸಿದೆ. ಇದು 2019ರಲ್ಲಿ 1.81ಕ್ಕೆ ಏರಿಕೆಯಾಗಿತ್ತು. 2020ರಲ್ಲಿ ಕೋವಿಡ್‌ ಸಾಂಕ್ರಾಮಿಕದ ನಡುವೆ ಕೂಡ ಲ್ಯಾಂಬೋರ್ಗಿನಿ 1.61 ಬಿಲಿಯನ್‌ ಯೂರೋ ಲಾಭ ದಾಖಲಿಸಿದೆ.

ಬರಲಿದೆ ಉರ್ಸ್‌ ಫೇಸ್‌ಲಿಫ್ಟ್‌:
ಲ್ಯಾಂಬೋರ್ಗಿನಿ ಉರ್ಸ್‌ನ ಫೇಸ್‌ಲಿಫ್ಟ್‌ (Facelift) ಬಿಡುಗಡೆಗೆ ಕಂಪನಿ ಸಿದ್ಧತೆ ನಡೆಸಿದೆ. ಇದು ಪ್ಲಗ್‌-ಇನ್‌ ಹೈಬ್ರಿಡ್‌ ಪವರ್‌ ಟ್ರೈನ್‌ನೊಂದಿಗೆ ಬರಲಿದೆ. ಇದು ಹಿಂದಿಗಿಂತಲೂ ಹೆಚ್ಚು ಕಾರ್ಯಕ್ಷಮತೆಯುಳ್ಳ ಎಸ್‌ಯುವಿ ಆಗಲಿದೆ.

ಲ್ಯಾಂಬೋರ್ಗಿನಿ ಉರ್ಸ್‌ ಟ್ವಿನ್‌-ಟರ್ಬೊ 4.0 ಲೀಟರ್‌ ವಿ8 ಇಂಜಿನ್‌ ಹೊಂದಿದ್ದು,ಇದು 650 ಪಿಎಸ್‌ ಪವರ್‌ ಮತ್ತು 850 ಎನ್‌ಎಂ ಟಾರ್ಕ್‌ ನೀಡಲಿದೆ. ಉರ್ಸ್‌ ಐಸ್‌ –ಪವರ್ಡ್‌ ಎಸ್‌ಯುವಿಗಳ ಪೈಕಿ ಅತ್ಯಂತ ವೇಗದ ಎಸ್‌ಯುವಿ ಆಗಿದೆ. ಇದು ಕೇವಲ 3.6 ಕ್ಷಣಗಳಲ್ಲಿ ಗಂಟೆಗೆ 0-100 ಕಿಮೀ ವೇಗ ಹೆಚ್ಚಿಸುವ ಸಾಮರ್ಥ್ಯ ಹೊಂದಿದ್ದು, ಗಂಟೆಗೆ 305 ಕಿಮೀ ವೇಗದಲ್ಲಿ ಚಲಿಸಬಲ್ಲದು.

ಕೊರೋನಾ ಸಂಕಷ್ಟದ ನಡುವೆ ಹೊಸ ಮೈಲಿಗಲ್ಲು ಸ್ಥಾಪಿಸಿದ ಲ್ಯಾಂಬೋರ್ಗಿನಿ!
ಕೊರೋನಾ ಸಂಕಷ್ಟದಿಂದ (Covid19 Crisis) ಆಟೋಮೊಬೈಲ್ ಕ್ಷೇತ್ರ (Automobile Industry) ನೆಲ ಕಚ್ಚಿದಾಗಲೂ ಸೂಪರ್ ಕಾರು (Super car) ಲ್ಯಾಂಬೋರ್ಗಿನಿ (Lamborghini ) ಕಾರುಗಳ ಪೈಕಿ SUV ಕಾರಾದ ಉರುಸ್ ಅತೀ ಬೇಡಿಕೆಯ ಕಾರಾಗಿ ಮಾರ್ಪಟ್ಟಿತ್ತು. ಸ್ಯಾಂಡಲ್‍‌ವುಡ್ (Sandalwood) ನಟರೂ ಲ್ಯಾಂಬೋರ್ಗಿನಿ ಉರುಸ್ ಕಾರು ಹೊಂದಿದ್ದಾರೆ. ಇದೇ ಉರುಸ್ ಕಾರು 10,000 ಕಾರು ಮಾರುಕಟ್ಟೆ (10K Car Market) ಪ್ರವೇಶಿಸುವ ಮೂಲಕ ಹೊಸ ಮೈಲಿಗಲ್ಲು (Milestone) ಸ್ಥಾಪಿಸಿತ್ತು.

click me!