2024ರ ಮೊದಲಾರ್ಧದಲ್ಲಿ ಶಿಯೋಮಿಯಿಂದ ಕಾರ್ ಉತ್ಪಾದನೆ!

By Suvarna News  |  First Published Oct 20, 2021, 6:10 PM IST

ಸ್ಮಾರ್ಟ್‌ಫೋನ್‌ ಉತ್ಪಾದನೆಯಲ್ಲಿ ಅಗ್ರಗಣ್ಯ ಕಂಪನಿಗಳಲ್ಲಿ ಒಂದಾಗಿರುವ ಚೀನಾ (China) ಮೂಲದ ಶಿಯೋಮಿ (Xiaomi) 2024ರ ಮೊದಲಾರ್ಧ ಹೊತ್ತಿಗೆ ಎಲೆಕ್ಟ್ರಿಕ್ ಕಾರುಗಳನ್ನು ಉತ್ಪಾದಿಸಲಿದೆ. ಎಲೆಕ್ಟ್ರಿಕ್ ಸ್ಕೂಟರ್ ಮತ್ತು ಕಾರುಗಳನ್ನು ಉತ್ಪಾದಿಸಲಿದೆ ಎನ್ನಲಾಗಿದೆ. ಕಂಪನಿಯು ಬಜೆಟ್ ಹಾಗೂ ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳ ಮೂಲಕ ಹೆಚ್ಚು ಪ್ರಸಿದ್ಧಿಯಾಗಿದೆ.


ಬಜೆಟ್ ಹಾಗೂ ಪ್ರೀಮಿಯಂ ಸ್ಮಾರ್ಟ್‌ಫೋನ್‌ ಸೇರಿದಂತೆ ಇತರ ಗ್ಯಾಜೆಟ್‌ಗಳು ಉತ್ಪಾದನೆ ಹಾಗೂ ಮಾರಾಟದ ಮೂಲಕ ಹೆಚ್ಚು ಜನಪ್ರಿಯವಾಗಿರುವ ಚೀನಾದ ಮೂಲದ ಶಿಯೋಮಿ (Xiaomi Corp) ಕಂಪನಿ ಎಲೆಕ್ಟ್ರಿಕ್‌ ಕಾರ್ (Electric Car ) ಉತ್ಪಾದನೆ ಮುಂದಾಗಲಿದೆ ಎಂಬುದು ಈ ಹಿಂದೆ ಸುದ್ದಿಯಾಗಿತ್ತು. ಇದೀಗ, ಮುಂದಿನ 2024ರಲ್ಲಿ ಕಂಪನಿಯು ಬೃಹತ್ ಸಂಖ್ಯೆಯಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ಉತ್ಪಾದಿಸಲಿದೆ ಎಂಬ ವಿಷಯ ಖಚಿತಪಟ್ಟಿದೆ.

ಮಾರುತಿಯ ಆಫ್‌ರೋಡ್ ಎಸ್‌ಯುವಿ Jimny ಬಿಡುಗಡೆಗೆ ಸಜ್ಜಾಗಿದೆಯಾ?

Latest Videos

2024ರಲ್ಲಿ ಭಾರಿ ಪ್ರಮಾಣದಲ್ಲಿ ಕಾರ್ ಉತ್ಪಾದನೆ ಮಾಡುವ ಬಗ್ಗೆ Weibo ಸೋಷಿಯಲ್ ಮೀಡಿಯಾ ತಾಣದಲ್ಲಿ ಕಂಪನಿಯು ಅಧಿಕಾರಿಯೊಬ್ಬರು ಬರೆದುಕೊಂಡಿದ್ದಾರೆ ಹಲವ ವೆಬ್‌ಸುದ್ದಿ ತಾಣಗಳು ವರದಿ ಮಾಡಿವೆ. ಈ ಹಿಂದೆಯೇ ಕಂಪನಿಯು ಎಲೆಕ್ಟ್ರಿಕ್ ಕಾರ್ ಉತ್ಪಾದನೆಯಲ್ಲಿ ತೊಡಗಲಿದೆ ಎಂದು ಹೇಳಲಾಗಿತ್ತು.

ಶಿಯೋಮಿ (Xiaomi)ಯು 2024ರ ಮೊದಲಾರ್ಧದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ (Electric Scooter) ಹಾಗೂ ಶಿಯೋಮಿ ಕಾರ್ ಉತ್ಪಾದನೆ ಮಾಡಿ, ರಸ್ತೆಗಿಳಿಸಲಿದೆ. ಇತ್ತೀಚಿನ ಕೆಲವು ವರ್ಷಗಳಲ್ಲಿ ಜಗತ್ತಿನಾದ್ಯಂತ ಮೊಬಿಲಿಟಿಯಲ್ಲಿ ಸಂಪರ್ಕ ಕ್ರಾಂತಿಯೇ ಸಂಭವಿಸುತ್ತಿದೆ. ಬಹುತೇಕ ರಾಷ್ಟ್ರಗಳು ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಮತ್ತು ಮಾರಾಟಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಿದೆ. ಇದರ ಪರಿಣಾಮ, ಹೊಸ ವಲಯದಲ್ಲಿನ ಅವಕಾಶವನ್ನು ಬಾಚಿಕೊಳ್ಳುವುದಕ್ಕಾಗಿ ಬಹುತೇಕ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳ ಉತ್ಪಾದನಗೆ ಮುಂದಾಗಿವೆ. ಗೂಗಲ್ (Google), ಆಪಲ್ (Apple) ಕೂಡ ಎಲೆಕ್ಟ್ರಿಕ್ ಕಾರುಗಳನ್ನು ಉತ್ಪಾದಿಸಲಿವೆ. 

ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಯಲ್ಲಿ ಮುಂದಿನ 10 ವರ್ಷದಲ್ಲಿ 10 ಬಿಲಿಯನ್ ಡಾಲರ್  ಹೂಡಿಕೆ ಮಾಡುತ್ತಿರುವುದಾಗಿ ಈ ಹಿಂದೆಯೇ ಶಿಯೋಮಿ ಅಧಿಕೃತವಾಗಿ ಹೇಳಿಕೊಂಡಿತ್ತು. ಜಗತ್ತಿನ ಅತಿ ದೊಡ್ಡ ಆಟೋಮೊಬೈಲ್ ಹಾಗೂ ಎಲೆಕ್ಟ್ರಿಕ್ ವೆಹಿಕಲ್ ಮಾರುಕಟ್ಟೆಯಾಗಿರುವ ಚೀನಾ ಮಾರುಕಟ್ಟೆಯಲ್ಲಿ ಶಿಯೋಮಿ ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಯಲ್ಲಿ ತೊಡಗುವ ಮೂಲಕ ಮಹತ್ವದ ಪಾತ್ರ ನಿರ್ವಹಣೆಯ ಸಾಧ್ಯತೆ ಇದೆ. ಚೀನಾ (China) ಮಾತ್ರವಲ್ಲದೇ, ಭಾರತ (India)ವೂ ಸೇರಿದಂತೆ ಇತರ ರಾಷ್ಟ್ರಗಳ ಮಾರುಕಟ್ಟೆಯಲ್ಲೂ ಶಿಯೋಮಿ ಧೂಳೆಬ್ಬಿಸಬಹುದು.

ಮಾರುಕಟ್ಟೆಗೆ ಲಗ್ಗೆ ಇಡಲಿದೆ ಹೊಸ ಬಜಾಜ್ ಪಲ್ಸರ್ 250 ಬೈಕ್

ಈಗಾಗಲೇ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಯಲ್ಲಿ ಸಾಕಷ್ಟು ಕಂಪನಿಗಳು ತಮ್ಮ ಅದೃಷ್ಟ ಪರೀಕ್ಷೆಯನ್ನು ಮಾಡಿಕೊಳ್ಳುತ್ತಿದ್ದೇವೆ. ಸದ್ಯಕ್ಕೆ ಅಮೆರಿಕ ಮೂಲದ ಟೆಸ್ಲಾ (Tesla) ಕಂಪನಿ ಎಲೆಕ್ಟ್ರಿಕ್ ವಾಹನಗಳ ಮಾರುಕಟ್ಟೆಯಲ್ಲಿ ಜಾಗತಿಕ  ಲೀಡರ್ ಎನಿಸಿಕೊಂಡಿದೆ. ಹಾಗಿದ್ದೂ, ಸಾಂಪ್ರದಾಯಿಕ ಕಾರು ಉತ್ಪಾದನಾ ಕಂಪನಿಗಳಾದ ವೋಕ್ಸವಾಗನ್ (Volkswagen), ಫೋರ್ಡ್ (Ford), ಹುಂಡೈ (Hyundai), ಟೊಯೋಟಾ (Toyota) ಸೇರಿದಂತೆ ಇನ್ನಿತರ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಯಲ್ಲಿ ತೊಡಗಿಸಿಕೊಂಡಿವೆ.
 

ಇತ್ತೀಚೆಗಷ್ಟೇ ಅಂದರೆ, ಕಳೆದ ಮಾರ್ಚ್ ತಿಂಗಳಲ್ಲಿ ಆಪಲ್ (Apple) ಕಂಪನಿ ಎಲೆಕ್ಟ್ರಿಕ್ ಕಾರು ಉತ್ಪಾದನೆ ಮೇಲೆ ಗಮನ ಕೇಂದ್ರೀಕರಿಸುವುದಾಗಿ ಹೇಳಿಕೊಂಡಿತ್ತು. ಇದೀಗ ಚೀನಾ (China) ಮೂಲದ ಮತ್ತೊಂದು ಸ್ಮಾರ್ಟ್‌ಫೋನ್ ಉತ್ಪಾದನಾ ಕಂಪನಿಯಾಗಿರುವ ಶಿಯೋಮಿ ಕೂಡ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಗಳಿಯುವ ಬಗ್ಗೆ ಹೇಳಿಕೊಂಡಿದೆ ಎಂದು ಎಂದು ಸುದ್ದಿಯಾಗಿತ್ತು. 

ಈಗಾಗಲೇ ಜಗತ್ತಿನ ಪ್ರಮುಖ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿಯಾಗಿರುವ ಆಪಲ್ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಬಗ್ಗೆ ಹೇಳಿಕೊಂಡಿದೆ. ಅದರ ಬೆನ್ನಲ್ಲೇ ಇದೀಗ ಶಿಯೋಮಿ ಕೂಡ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಗೆ ಮುಂದಾಗಿದೆ. ಬಹುಶಃ ಇದೇ ಟ್ರೆಂಡ್ ಮುಂದುವರಿದರೆ ಇನ್ನೂ ಒಂದಿಷ್ಟು ಸ್ಮಾರ್ಟ್‌ಫೋನ್ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳ ಉತ್ಪಾದನಾ ಕ್ಷೇತ್ರಕ್ಕೆ ಮುಂದಡಿಯಿಡಬಹುದು.

ಎಂಟ್ರಿ ಕೊಟ್ಟ ಪಂಚ್, ಈ ಕಾರಿಗೆ ಅತಿ ಹೆಚ್ಚು ಬುಕ್ಕಿಂಗ್!

ಭಾರತವು ಸೇರಿದಂತೆ ಜಗತ್ತಿನ ಬಹಳಷ್ಟು ರಾಷ್ಟ್ರಗಳು ಸಾಂಪ್ರದಾಯಿಕ ಎಂಜಿನ್ ವಾಹನಗಳ ಬಳಕೆಯನ್ನು ಎಷ್ಟು ಸಾಧ್ಯವೋ ಅಷ್ಟು ತಗ್ಗಿಸುತ್ತಿವೆ. ವಿಶೇಷವಾಗಿ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಮತ್ತು ಮಾರಾಟಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಿವೆ. ಎಲೆಕ್ಟ್ರಿಕ್ ವಾಹನಗಳ ಬಳಕೆಯಿಂದಾಗಿ ತೈಲ ಮೇಲಿನ ಅವಲಂಬನೆ ಕಡಿಮೆಯಾಗುವುದು ಮಾತ್ರವಲ್ಲದೇ ಪರಿಸರ ಮಾಲಿನ್ಯವನ್ನೂ ತಪ್ಪಿಸಬಹುದಾಗಿದೆ.

click me!