ಥಾರ್ ಎಸ್‌ಯುವಿ ಅನ್ನು ಬುಕ್ಕಿಂಗ್ ಮಾಡಿ ನೀವು ಐದಾರು ತಿಂಗಳು ವೇಟ್ ಮಾಡಿದ ಬಳಿಕ ವಾಹನ ದೊರೆಯುತ್ತದೆ. ಅಷ್ಟರ ಮಟ್ಟಿಗೆ ಥಾರ್ ಬೇಡಿಕೆಯು ಹೆಚ್ಚಾಗಿದ್ದು, ಕಂಪನಿ ಪೂರೈಸಲು ಪ್ರಯತ್ನಿಸುತ್ತಿದೆ.
ಮಹಿಂದ್ರಾ ಕಂಪನಿ ಥಾರ್ 2020 ಸೃಷ್ಟಿಸಿರುವ ಕ್ರೇಝ್ ಎಲ್ಲರಿಗೂ ಗೊತ್ತಿರುವ ಸಂಗತಿಯೇ ಆಗಿದೆ. ಹೊಸ ಪೀಳಿಗೆಯ ಎಸ್‌ಯುವಿ ಹಲವು ವೈಶಿಷ್ಟ್ಯಗಳ ಮೂಲಕ ಗ್ರಾಹಕರನ್ನು ಸೆಳೆಯುತ್ತಲೇ ಇದೆ. ಗಾಂಧಿ ಜಯಂತಿಯಂದು ಅಂದರೆ ಅಕ್ಟೋಬರ್ 2ರಂದು ಮಾರುಕಟ್ಟೆಗೆ ಬಿಡುಗಡೆ ಥಾರ್ ಎಸ್‌ಯುವಿ ಬುಕ್ಕಿಂಗ್ ನಾಗಾಲೋಟದಲ್ಲಿ ಸಾಗುತ್ತಿದೆ. ಬಿಡುಗಡೆಯಾದ ಒಂದು ತಿಂಗಳಲ್ಲಿ ಮೈಲುಗಲ್ಲು ನೆಟ್ಟಿದೆ ಥಾರ್.
ಹಬ್ಬದ ಟೈಂನಲ್ಲೂ ಹೊಸ ಕಾರಿಗಿಂತ ಹಳೆಯ ಕಾರಿಗೆ ಫುಲ್ ಡಿಮ್ಯಾಂಡ್
undefined
ಒಂದು ತಿಂಗಳಲ್ಲಿ 20,000 ಥಾರ್ ಎಸ್‌ಯುವಿಗೆ ಬುಕ್ಕಿಂಗ್ ದೊರೆತಿದೆ ಎಂದರೆ ಅದು ಸೃಷ್ಟಿಸಿದ ಹವಾ ಎಂಥದ್ದು ಎಂಬುದನ್ನು ನೀವೇ ಊಹಿಸಬಹುದು. ಡಿಸೇಲ್ ಮತ್ತು ಪೆಟ್ರೋಲ್ ಹಾಗೂ ಆಟೋಮ್ಯಾಟಿಕ್ ಮತ್ತು ಮ್ಯಾನುಯಲ್ ಮಾದರಿ ಥಾರ್ ಎಸ್‌ಯುವಿಗೆ ಬೇಡಿಕೆ ಹೆಚ್ಚಾಗಿದೆ ಎನ್ನುತ್ತದೆ ಮಹಿಂದ್ರಾ ಕಂಪನಿ. ಅಂದರೆ, ಎಲ್ಲ ಮಾದರಿಯ ಥಾರ್‌ಗೂ ಗ್ರಾಹಕರು ಮನಸೋತಿದ್ದಾರೆ ಎಂದಾಯಿತು. ನೀವೇನಾದರೂ ಈಗ ಥಾರ್ ಬುಕ್ಕಿಂಗ್ ಮಾಡಿದರೆ ಕನಿಷ್ಠ ಐದಾರು ತಿಂಗಳಾದರೂ ಕಾಯಬೇಕಾಗುತ್ತದೆ ಥಾರ್ ಪಡೆಯಲು ಎನ್ನುತ್ತದೆ ಕಂಪನಿ. ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಕಂಪನಿ ತನ್ನ ಉತ್ಪಾದನೆಯನ್ನು ಹೆಚ್ಚಿಸಲು ನಿರ್ಧರಿಸಿದೆ. ಈ ಮೊದಲು ತಿಂಗಳಿಗೆ 2,000 ಥಾರ್ ಎಸ್‌ಯುವಿಗಳನ್ನು ಉತ್ಪಾದಿಸಲಾಗುತ್ತಿತ್ತು. ಮುಂಬರುವ ಜನವರಿ ತಿಂಗಳಿಂದ ಈ ಪ್ರಮಾಣವನ್ನು 3,000ಕ್ಕೆ ಹೆಚ್ಚಿಸಲು ನಿರ್ಧರಿಸಲಾಗಿದೆ ಎನ್ನಲಾಗುತ್ತಿದೆ.
ಹೊಸ ಥಾರ್ 2020 ಎಸ್‌ಯುವಿ ವಾಹನವನ್ನು ಬಾಡಿ-ಆನ್-ಫ್ರೇಮ್ ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾಗಿದೆ ಮತ್ತು ಇದು ಈ ಹಿಂದಿದ್ದ ಎಸ್‌ಯುವಿಗಿಂತಲೂ ಗಮನಾರ್ಹವಾಗಿ ದೊಡ್ಡದಾಗಿದೆ ಎಂದು ಹೇಳಬಹುದು. ಹೀಗಿದ್ದರೂ, ಹೊಸ ವಾಹನವು ಹಳೆಯ ಲುಕ್‌ನ್ನು ಹಾಗೆಯೇ ಉಳಿಸಿಕೊಂಡಿದೆ. ಎಎಕ್ಸ್ ಶ್ರೇಣಿಯಲ್ಲಿ 16 ಇಂಚಿನ ಸ್ಟೀಲ್ ವ್ಹೀಲ್ಸ್, ಕಡಿಮೆ ಉಪಕರಣಗಳು ಮತ್ತು ಸ್ವಯಂಚಾಲಿತ ಗೇರ್‌ಬಾಕ್ಸ್‌ಗಳಿಲ್ಲ. ಆದರೆ ದೊಡ್ಡದಾದ 18 ಇಂಚಿನ ಅಲಾಯ್ ವೀಲ್‌ಗಳು, ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಗಳು ಮತ್ತು ಹೆಚ್ಚಿನ ಫೀಚರ್‌ಗಳನ್ನು ಈ ಹೊಸ ಥಾರ್ ವಾಹನ ಹೊಂದಿದೆ.
ವಿನ್ಯಾಸದ ಬಗ್ಗೆ ಹೇಳುವುದಾದರೆ ಇದು ನಿಜವಾಗಿಯೂ ತ್ರಿಡೋರ್ ಮಾದರಿಯ ಸಂಪ್ರದಾಯವನ್ನು ಮುಂದುವರಿಸಿದೆ. ಈ ವಾಹನದಲ್ಲಿ ಚಕ್ರಗಳ ಅನುಪಾತವೂ ಇನ್ನೂ ಚೆನ್ನಾಗಿದೆ. ಒಟ್ಟಾರೆ ವಾಹನದ ಅಂದವೂ ಕೂಡ ಗಮನ ಸೆಳೆಯುತ್ತದೆ. ಹಳೆಯ ಮಾಡೆಲ್‌ಗಿಂತಲೂ ಹೆಚ್ಚಿನ ಪ್ರಮಾಣದ ಸುಧಾರಣೆಗಳನ್ನು ನೀವು ಹೊಸ ಮಾಡೆಲ್‌ನಲ್ಲಿ ಕಾಣಬಹುದು. ಎಂಜಿನ್ ಬಗ್ಗೆ ಹೇಳುವುದಾದರೆ, ಥಾರ್‌ನಲ್ಲಿ 2.0 ಲೀಟರ್ ಎಂಸ್ಟಾಲಿಯನ್ 150 ಟಿ ಜಿಡಿಐ ಪೆಟ್ರೋಲ್ ಎಂಜಿನ್ ಇದ್ದು, 5000 ಆರ್‌ಪಿಎಂಗೆ 150 ಬಿಎಚ್‌ಪಿ ಪವರ್ ಉತ್ಪಾದಿಸುತ್ತದೆ ಮತ್ತು 1,500ರಿಂದ 3,000 ಆರ್‌ಪಿಎಂ ಮಧ್ಯೆ 320 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಇದೇ ವೇಳೆ, 2.2 ಡಿಸೇಲ್ ಎಂಜಿನ್ 3,760 ಆರ್‌ಪಿಎಂನಲ್ಲಿ 130 ಹಾರ್ಸ್ ಪವರ್ ಉತ್ಪಾದಿಸುತ್ತದೆ. ಹಾಗೆಯೇ 1,600ರಿಂದ 2,800 ಆರ್‌ಪಿಎಂ ಮಧ್ಯೆ 300 ಎನ್‌ಎಂ ಟಾರ್ಕ್ ಕೂಡ ಸಿಗುತ್ತದೆ. ಎರಡೂ ಎಂಜಿನ್‌ಗಳು 6 ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್‌ಗಳನ್ನು ಹೊಂದಿವೆ.
ವಾಹನ ಖರೀದಿಸಿದ್ರೆ ರೋಡ್ ಟ್ಯಾಕ್ಸ್, ನೋಂದಣಿ ಶುಲ್ಕ ಕಟ್ಟೋದು ಬೇಡ!...
ಈ ಥಾರ್ ಬಿಡುಗಡೆಯಾದ ನಾಲ್ಕು ದಿನದಲ್ಲೇ 9,000 ಬುಕ್ಕಿಂಗ್‌ಗಳನ್ನು ಪಡೆದು ದಾಖಲೆ ಸೃಷ್ಟಿಸಿತ್ತು. ಎಸ್‌ಯುವಿ ವಿಭಾಗದಲ್ಲಿ ಕಿಯಾ ಸೆಲ್ಟೋಸ್ 12 ದಿನದಲ್ಲಿ 9,000 ಬುಕ್ ಆಗಿ ದಾಖಲೆ ಬರೆದಿತ್ತು. ಆ ದಾಖಲೆಯನ್ನು ನಾಲ್ಕೇ ದಿನಕ್ಕೆ ಥಾರ್ ಮುರಿದು ಹಾಕಿತ್ತು. ಬಿಡುಗಡೆಯ ಆರಂಭದಲ್ಲಿ ಥಾರ್ ದೇಶದ 18 ನಗರಗಳಲ್ಲಿ ದೊರೆಯುತ್ತಿತ್ತು. ಜೊತೆಗೆ, ಅಕ್ಟೋಬರ್ 10ರೊಳಗೇ ದೇಶದ 100 ನಗರಗಳಲ್ಲೂ ಈ ಥಾರ್ ದೊರೆಯುತ್ತಿದೆ.
ಎಲ್ಲಾ ವರ್ಗದ ಜನರು ಈ ಥಾರ್‌ಗೆ ಮಾರು ಹೋಗಿದ್ದಾರೆ. ನಗರ, ಗ್ರಾಮೀಣ, ಯುವಕರು, ಮಹಿಳೆಯರು, ಸೆಲೆಬ್ರೆಟಿಗಳು, ರಾಜಕೀಯ ನಾಯಕರು ಸೇರಿದಂತೆ ಹಲವರು ಥಾರ್ ಬುಕ್ಕಿಂಗ್ ಮಾಡುತ್ತಿದ್ದಾರೆ ಮತ್ತು ತಮ್ಮ ಮೆಚ್ಚುಗೆಯನ್ನು ಸೂಚಿಸುತ್ತಿದ್ದಾರೆ. ಕಾಶ್ಮೀರದ ಮಾಜಿ ಸಿಎಂ ಒಮರ್ ಅಬ್ದುಲ್ಲಾ, ಮಲೆಯಾಳಂ ನಟ ಪೃಥ್ವಿರಾಜ್ ಸೇರಿ ಹಲವು ಗಣ್ಯರು ಮೆಚ್ಚುಗೆ ಸೂಚಿಸಿದ್ದನ್ನು ನೀವಿಲ್ಲ ಸ್ಮರಿಸಬಹುದು.
ಪ್ರತಿ 3 ನಿಮಿಷಕ್ಕೊಂದು ಮಾರುತಿ ಸುಜುಕಿ ಬಲೆನೋ ಹ್ಯಾಚ್‌ಬ್ಯಾಕ್ ಕಾರು ಮಾರಾಟ!