ಮರ್ಸಿಡೀಸ್ ಬೆಂಜ್ ಇ ಕ್ಲಾಸ್ ಖರೀದಿಸಿದ ನಟ ರಮೇಶ್ ಅರವಿಂದ್, ಈ ಕಾರಿನಲ್ಲಿದೆ ಹಲವು ವಿಶೇಷತೆ!

By Suvarna NewsFirst Published Apr 6, 2023, 4:01 PM IST
Highlights

ಸ್ಯಾಂಡಲ್‌ವುಡ್ ಸೇರಿದಂತೆ ದಕ್ಷಿಣ ಭಾರತ ಚಿತ್ರಗಳಲ್ಲಿ ಅಭಿಮಾನಿಗಳ ಮನಗೆದ್ದಿರುವ ನಟ, ವೀಕೆಂಡ್ ವಿಥ್ ರಮೇಶ್ ಖ್ಯಾತಿಯ ನಿರೂಪಕ ರಮೇಶ್ ಅರವಿಂದ್ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ರಮೇಶ್ ಹೊಚ್ಚ ಹೊಸ ಮರ್ಸಿಡೀಸ್ ಬೆಂಜ್ ಇ ಕ್ಲಾಸ್ ಕಾರು ಖರೀದಿಸಿದ್ದಾರೆ. ಈ ಕಾರಿನ ಬೆಲೆ, ಕಾರಿನ ವಿಶೇಷತೆ ಸೇರಿದಂತೆ ವಿಶೇಷತೆ ಇಲ್ಲಿದೆ.

ಬೆಂಗಳೂರು(ಏ.06): ರಮೇಶ್ ಅರವಿಂದ್ ಕನ್ನಡಿಗ ಅತ್ಯಂತ ಪ್ರೀತಪಾತ್ರರಾದ ನಟ. ನಟನೆಯಿಂದ ಮಾತ್ರವಲ್ಲ ತಮ್ಮ ಅದ್ಭುತ ನಿರೂಪಣಾ ಕೌಶಲ್ಯದಿಂದಲೂ ರಮೇಶ್ ಅರವಿಂದ್ ಎಲ್ಲರ ಮನಗೆದ್ದಿದ್ದಾರೆ. ವೀಕೆಂಡ್ ವಿಥ್ ಕಾರ್ಯಕ್ರಮದ ಮೂಲಕ ಅತ್ಯಂತ ಜನಪ್ರಿಯರಾಗಿರುವ ರಮೇಶ್ ಅರವಿಂದ್ ಹೊಸ ಕಾರು ಖರೀದಿಸಿದ್ದಾರೆ. ಇದರಲ್ಲೇನು ವಿಶೇಷ ಅಂತೀರಾ? ರಮೇಶ್ ಅರವಿಂದ್ ಬಳಿ ಈಗಾಗಲೇ ಕೆಲ ಐಷಾರಾಮಿ ಕಾರುಗಳಿವೆ. ಈ ಬಾರಿ ರಮೇಶ್ ಅರವಿಂದ್ ಐಷಾರಾಮಿ ಮರ್ಸಿಡಿಸ್ ಬೆಂಜ್ ಇ ಕ್ಲಾಸ್ ಕಾರು ಖರೀದಿಸಿದ್ದಾರೆ. ಇದರ ಆನ್‌ರೋಡ್ ಬೆಲೆ ಸರಿ ಸುಮಾರು 1 ಕೋಟಿ ರೂಪಾಯಿ. ಕಪ್ಪು ಬಣ್ಣದ ಮೋಹಕ ಸುಂದರಿ ಇದೀಗ ರಮೇಶ್ ಅರವಿಂದ್ ಸಾರಥಿಯಾಗಿದ್ದಾರೆ.

ಮರ್ಸಿಡೀಸ್ ಬೆಂಜ್ ಇ ಕ್ಲಾಸ್ ಸೆಡಾನ್ ಕಾರು ಅತ್ಯಂತ ಐಷಾರಾಮಿ ಹಾಗೂ ಆರಾಮದಾಯಕ ಪ್ರಯಾಣ ನೀಡುತ್ತದೆ. ದೂರ ಪ್ರಯಾಣ, ನಗರದ ಜಂಜಾಟಗಳ ನಡುವೆ ಆಯಾಸವಿಲ್ಲದೆ ಪ್ರಯಾಣಕ್ಕೂ ಈ ಕಾರು ಸೂಕ್ತವಾಗಿದೆ. ಬೆಂಗಳೂರಿನ ಅಧಿಕೃತ ಮರ್ಸಿಡೀಸ್ ಬೆಂಜ್ ಕಾರು ಡೀಲರ್ ಬಳಿಯಿಂದ ರಮೇಶ್ ಅರವಿಂದ್ ಕಾರು ಖರೀದಿಸಿದ್ದಾರೆ. ಕಾರು ಡೆಲಿವರಿ ವೇಳೆ ರಮೇಶ್ ಅರವಿಂದ್ ಕುಟುಂಬ ಸಮೇತ ಶೋ ರೂಂಗೆ ಭೇಟಿ ನೀಡಿದ್ದರು. ಸಿಬ್ಬಂದಿಗಳು ಕಾರು ಕೀ ಹಸ್ತಾಂತರಿಸಿದ್ದಾರೆ. ಬಳಿಕ ಪೂಜೆ ನೆರವೇರಿಸಿ ಕಾರಿನಲ್ಲಿ ಮನೆಗೆ ತೆರಳಿದ್ದಾರೆ.

3 ಕೋಟಿ ಮೊತ್ತದ ಮರ್ಸಿಡಿಸ್ ಮೆಬ್ಯಾಕ್ ಖರೀದಿಸಿದ ನಟಿ ನೀತೂ ಕಪೂರ್, ಪುತ್ರ ರಣಬೀರ್ ಬಳಿ ಇಲ್ಲ ಈ ಕಾರು!

ರಮೇಶ್ ಅರವಿಂದ್ ಖರೀದಿಸಿದ ಮರ್ಸಿಡಿಸ್ ಬೆಂತ್ ಇ ಕ್ಲಾಸ್ ಕಾರು  ಹಲವು ವಿಶೇಷತೆಗಳನ್ನು ಹೊಂದಿದೆ. ಮರ್ಸಿಡಿಸ್ ಬೆಂಜ್ ಇ ಕ್ಲಾಸ್ ಕಾರು ಪೆಟ್ರೋಲ್ ಹಾಗೂ ಡೀಸೆಲ್ ವೇರಿಯೆಂಟ್‌ನಲ್ಲಿ ಲಭ್ಯವಿದೆ. ಪೆಟ್ರೋಲ್ ಎಂಜಿನ್‌ನಲ್ಲಿ 3 ವೇರಿಯೆಂಟ್ ಲಭ್ಯವಿದ್ದರೆ, ಡೀಸೆಲ್ ವೇರಿಯೆಂಟ್‌ನಲ್ಲಿ 2 ವೇರಿಯೆಂಟ್ ಲಭ್ಯವಿದೆ. ಪೆಟ್ರೋಲ್ ವೇರಿಯೆಂಟ್ ಬೆಂಜ್ ಇ ಕ್ಲಾಸ್  E 350 d AMG ಲೈನ್ ಕಾರಿನ ಎಕ್ಸ್ ಶೋ ರೂಂ ಬೆಲೆ 85 ಲಕ್ಷ ರೂಪಾಯಿ. ಇನ್ನು ಆರ್‌ಟಿಒ ಮೊತ್ತ 15.30 ಲಕ್ಷ ರೂಪಾಯಿ ಹಾಗೂ ವಿಮೆ 2.30 ಲಕ್ಷ ರೂಪಾಯಿ. ಈ ಮೂಲಕ 1.03 ಕೋಟಿ ರೂಪಾಯಿ ಆನ್ ರೋಡ್ ಬೆಲೆಯಾಗಲಿದೆ.ಡೀಸೆಲ್ ವೇರಿಯೆಂಟ್ ಬೇಸ್ ಮಾಡೆಲ್ ಕಾರಿನ ಆನ್ ರೋಡ್ ಬೆಲೆ ಸರಿಸುಮಾರು 81 ಲಕ್ಷ ರೂಪಾಯಿ, ಇನ್ನು ಟಾಪ್ ಮಾಡೆಲ್ ಡೀಸೆಲ್ ಕಾರಿನ ಬೆಲೆ 1.03 ಕೋಟಿ ರೂಪಾಯಿ. 

ಮರ್ಸಿಡಿಸ್ ಬೆಂಜ್ ಇ ಕ್ಲಾಸ್ ಕಾರು 1991 ಸಿಸಿ ಎಂಜಿನ್ ಹೊಂದಿದೆ. 194.44bhp ಪವರ್ ಹಾಗೂ 320Nm ಪೀಕ್ ಟಾರ್ಕ್ ಉತ್ಪಾದಿಸಲ್ಲ ಸಾಮರ್ಥ್ಯ ಹೊಂದಿದೆ. 4 ಸಿಲಿಂಡರ್ ಹೊಂದಿದೆ. ಇನ್ನು ಗರಿಷ್ಠ ವೇಗ ಗಂಟೆಗೆ 240 ಕಿಲೋಮೀಟರ್. ಒಂದು ಲೀಟರ್ ಪೆಟ್ರೋಲ್‌ಗೆ 15 ಕಿ.ಮೀ ಮೈಲೇಜ್ ನೀಡಲಿದೆ. ಡೀಸೆಲ್ ಎಟಿ ವೇರಿಯೆಂಟ್ ಬೆಲೆ 2925 ಸಿಸಿ ಎಂಜಿನ್ ಹೊಂದಿದೆ. 

ಮೊದಲ ಉದ್ಯೋಗಿಗೆ ಮರ್ಸಿಡಿಸ್ ಬೆಂಜ್ ಕಾರು ಗಿಫ್ಟ್ ನೀಡಿದ ಕೇರಳದ ಐಟಿ ಕಂಪನಿ!

MBUX ಸಿಸ್ಟಮ್, ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಎಬಿಸಿ, ಇಬಿಡಿ, ಹಿಲ್ ಅಸಿಸ್ಟ್ ಬ್ರೇಕಿಂಗ್ ಸಿಸ್ಟಮ್, ಸನ್ ರೂಫ್, ಕ್ರೂಸ್ ಕಂಟ್ರೋಲ್, ಕಾರಿನೊಳಗೆ ಸೆಲ್ಫಿ ಕ್ಯಾಮರಾ ಸೇರಿದಂತೆ ಎಲ್ಲಾ ಫೀಚರ್ಸ್ ಈ ಕಾರಿನಲ್ಲಿದೆ.
 

click me!