ಭಾರತದ ಅತ್ಯಂತ ಸುರಕ್ಷತೆಯ ಸೆಡಾನ್ ಕಾರು, NCAP ಕ್ರಾಶ್ ಟೆಸ್ಟ್‌ನಲ್ಲಿ ಸ್ಕೋಡಾ ಸ್ಲಾವಿಯಾಗೆ 5 ಸ್ಟಾರ್!

By Suvarna News  |  First Published Apr 5, 2023, 4:38 PM IST

ಭಾರತದಲ್ಲಿ 5 ಸ್ಟಾರ್ ರೇಟಿಂಗ್ ಪಡೆದ ಸೆಡಾನ್ ಕಾರು ಅನ್ನೋ ಹೆಗ್ಗಳಿಕೆಗೆ ಸ್ಕೋಡಾ ಸ್ಲಾವಿಯಾ ಪಾತ್ರವಾಗಿದೆ.ಜಾಗತಿಕ NCAP ಕ್ರಾಶ್ ಟೆಸ್ಟ್‌ನಲ್ಲಿ ಸ್ಕೋಡಾ 5 ಸ್ಟಾರ್ ರೇಟಿಂಗ್ ಪಡೆದುಕೊಂಡಿದೆ. ಇದೀಗ ಸ್ಕೋಡಾ ಸ್ಲಾವಿಯಾ ಬೇಡಿಕೆ ಡಬಲ್ ಆಗಿದೆ.


ಮುಂಬೈ(ಏ.05) ಭಾರತದಲ್ಲಿ ವಾಹನ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಹೀಗಾಗಿ ಕ್ರಾಶ್ ಟೆಸ್ಟ್‌ನಲ್ಲಿ ಗರಿಷ್ಠ ಸ್ಟಾರ್ ಗಳಿಸಿದ ಕಾರುಗಳನ್ನೇ ಗ್ರಾಹಕರು ಖರೀದಿಗೆ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಚಾಲಕ ಹಾಗೂ ಪ್ರಯಾಣಿಕರಿಗೆ ಸಂಪೂರ್ಣ ಸುರಕ್ಷತ ನೀಡಬಲ್ಲ ಕಾರುಗಳು ಗ್ರಾಹಕರ ಮೊದಲ ಆದ್ಯತೆಯಾಗಿದೆ. ಇದೀಗ ಸ್ಕೋಡಾ ಸ್ಲಾವಿಯಾ ಸೆಡಾನ್ ಕಾರು ಭಾರತದ ಅತ್ಯಂತ ಸುರಕ್ಷತೆಯ ಸೆಡಾನ್ ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.  ಜಾಗತಿಕ NCAP ಕ್ರಾಶ್ ಟೆಸ್ಟ್‌ನಲ್ಲಿ ಸ್ಕೋಡಾ ಸ್ಲಾವಿಯಾ 5 ಸ್ಟಾರ್ ರೇಟಿಂಗ್ ಪಡೆದುಕೊಂಡಿದೆ. 

ಗರಿಷ್ಟ 34 ಅಂಶಗಳ ಪೈಕಿ ಸ್ಲಾವಿಯಾ, ವಯಸ್ಕ ಪ್ರಯಾಣಿಕರಿಗಾಗಿ 29.71 ಅಂಕಗಳನ್ನು ಗಳಿಸಿದೆ. ಈ ಮೂಲಕ ವಯಸ್ಕ ಪ್ರಯಾಣಿಕರಿಗಾಗಿ 5 ಸ್ಟಾರ್ ಪಡೆಯಿತು. ಮಗು ಹಾಗೂ ಮಕ್ಕಳ ಪ್ರಯಾಣ ಸುರಕ್ಷತೆಯಲ್ಲಿ 49 ಪಾಯಿಂಟ್‌ಗಳ ಪೈಕಿ 42 ಪಾಯಿಂಟ್ಸ್ ಪಡೆದುಕೊಂಡಿತು. ಈ ಮೂಲಕ ಮಕ್ಕಳ ಪ್ರಯಾಣ ಸುರಕ್ಷತೆಯಲ್ಲೂ ಸ್ಕೋಡಾ ಸ್ಲಾವಿಯಾ 5 ಸ್ಟಾರ್ ರೇಟಿಂಗ್ ಪಡೆದುಕೊಂಡಿದೆ. ಇದೀಗ ಸ್ಕೋಡಾ ಸ್ಲಾವಿಯಾ ಭಾರತದ ಸುರಕ್ಷತೆಯ ಸೆಡಾನ್ ಕಾರು ಅನ್ನೋ ದಾಖಲೆ ಬರೆದಿದೆ.

Tap to resize

Latest Videos

undefined

Skoda Car ಸ್ಕೋಡಾ ಕುಶಾಖ್ ಮಾಂಟೆ ಕಾರ್ಲೋ ಎಡಿಶನ್ ಕಾರು ಬಿಡುಗಡೆ!

SKODA ಕ್ರಿಯಾಶೀಲ ಚಲನಸಾಮರ್ಥ್ಯ ಗುಣಗಳನ್ನು ಹೊಂದಿದೆ. ಸುರಕ್ಷತೆ ಮೇಲೆ ಸ್ಕೋಡಾ ಯಾವುದೇ ರಾಜೀಮಾಡಿಕೊಂಡಿಲ್ಲ. ಸುರಕ್ಷತೆಗೆ ಗರಿಷ್ಠ ಆದ್ಯತೆ ನೀಡಲಾಗಿದೆ.  ಮಾಲೀಕತ್ವ, ನಿರ್ವಹಣೆಯ ಕಡಿಮೆ ವೆಚ್ಚಗಳ ಮೇಲೆ ಹೆಚ್ಚಿನ ಗಮನಕೇಂದ್ರೀಕರಣದೊಂದಿಗೆ SLAVIA ವಿನ್ಯಾಸಗೊಳಿಸಲಾಗಿದೆ.  ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡೇ ಸ್ಲಾವಿಯಾವನ್ನು ಅಡಿಪಾಯದಿಂದ ವಿನ್ಯಾಸಗೊಳಿಸಲಾಗಿತ್ತು. ಇದರ ಸ್ಕೆಲಿಟಲ್ ರಚನೆಯನ್ನು ಲೇಸರ್ ವೆಲ್ಡ್ ಮಾಡಲಾಗಿತ್ತು. ಈ ರಚನೆಯು ಅಧಿಕ ಶಕ್ತಿಯ ಉಕ್ಕನ್ನು ಒಳಗೊಂಡಿದ್ದು, ಒಳಗಿನ ಕ್ಯಾಬಿನ್‌ಗಿಂತ ಕಾರಿನ ಹೊರಗಿನ ಶೆಲ್‌ನ ಉದ್ದಕ್ಕೂ ಕ್ರ್ಯಾಶ್‌ನ ಪ್ರಭಾವವನ್ನು ನಿವಾರಿಸಿ ಹೀರಿಕೊಳ್ಳುವುದಕ್ಕಾಗಿ ನಿರ್ಮಾಣ ಮಾಡಲಾಗಿದೆ. ಈ ಕಠಿಣವಾದ ಮತ್ತು ಪ್ರಭಾವ-ಹೀರಿಕೊಳ್ಳುವ ಬಾಡಿ ರಚನೆಯು ಪ್ರತ್ಯಕ್ಷ ಮತ್ತು ಪರೋಕ್ಷ  ಸುರಕ್ಷತಾ ತಂತ್ರಜ್ಞಾನಗಳಿಗೆ ಪೂರಕವಾಗಿದ್ದು ಸ್ಲಾವಿಯಾವನ್ನು ಒಳಗೂ ಹೊರಗೂ ಸಂಪೂರ್ಣವಾಗಿ ಸುರಕ್ಷಿತವಾದ ಕಾರನ್ನಾಗಿ ಮಾಡಿದೆ.  

ಕ್ರಾಶ್ ಟೆಸ್ಟ್ ಮಾತ್ರವಲ್ಲ, ಸ್ಕೋಡಾ ಸ್ಲಾವಿಯಾ, 6 ಏರ್‌ಬ್ಯಾಗ್ ಹೊಂದಿದೆ. ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಮಲ್ಟಿ-ಕೊಲಿಶನ್ ಬ್ರೇಕಿಂಗ್, ಟ್ರ್ಯಾಕ್ಷನ್ ಕಂಟ್ರೋಲ್, ಆಂಟಿ-ಲಾಕ್ ಬ್ರೇಕ್ಸ್, ಮಕ್ಕಳ ಆಸನಕ್ಕಾಗಿ ISOFIX ಅಳವಡಿಕೆಗಳು, ಟಾಪ್ ಟೆದರ್ ಆಂಕರ್ ಪಾಯಿಂಟ್ಸ್, ರೈನ್-ಸೆನ್ಸಿಂಗ್ ವೈಪರ್ಸ್, ಆಟೋಮ್ಯಾಟಿಕ್ ಹೆಡ್‌ಲೈಟ್ಸ್ ಹಾಗು ಟೈರ್ ಪ್ರೆಶರ್ ಮೇಲುಸ್ತುವಾರಿ ಹೊಂದಿದೆ. 

Skoda Sales ಬಿಡುಗಡೆಯಾದ ಒಂದೇ ತಿಂಗಳಲ್ಲಿ ದಾಖಲೆ, ಸ್ಕೋಡಾ ಸ್ಲಾವಿಯಾ 10 ಸಾವಿರ ಬುಕಿಂಗ್!

ನಮ್ಮ ಗ್ರಾಹಕರ ಸುರಕ್ಷತೆಯೊಂದಿಗೆ ರಾಜಿ ಮಾಡಿಕೊಳ್ಳುವ ಪ್ರಮೇಯವೇ ಇಲ್ಲ. ನಮ್ಮ ಎರಡನೇ ಇಂಡಿಯಾ 2.0 ಕಾರ್ ಆದ ಸ್ಲಾವಿಯ ಜಾಗತಿಕ NCAP ಸುರಕ್ಷತಾ ಪರೀಕ್ಷೆಗಳಲ್ಲಿ 5 ಸ್ಟಾರ್  ಪಡೆದುಕೊಂಡಿದೆ. ಈ ವಿಚಾರ ಹಂಚಿಕೊಳ್ಳವುದೇ ನಮಗೆ ಹೆಮ್ಮೆ. ಸ್ಕೋಡಾ ಉತ್ಪನ್ನಗಳನ್ನು ಖರೀದಿಸಲು ನಿರ್ಧರಿಸಿದ ನಮ್ಮ ಗ್ರಾಹಕರಿಗೆ ಹೃತ್ಪೂರ್ವಕ ಮೆಚ್ಚುಗೆ ತಿಳಿಸಲು ಬಯಸುತ್ತೇವೆ ಎಂದು ಸ್ಕೋಡಾ ಅಟೋ ಇಂಡಿಯಾ ನಿರ್ದೇಶಕ ಪೀಟರ್ ಸೋಲ್ಸ್ ಹೇಳಿದ್ದಾರೆ. 

click me!