*ಸೆಡಾನ್ ವಲಯದಲ್ಲಿ ಹೊಸ ಬೇಡಿಕೆ ಸೃಷ್ಟಿಸಲು ಕಂಪನಿ ಸಜ್ಜು
*ಸ್ಕೋಡಾ ಬೆನ್ನಲ್ಲೇ ವೋಕ್ಸ್‌ವ್ಯಾಗನ್ ಸೆಡಾನ್ ಕಾರು ಬಿಡುಗಡೆ
*ಈಗಾಗಲೇ ಪರೀಕ್ಷಾರ್ಥ ಸಂಚಾರ ಆರಂಭ
Auto Desk: ಸೆಡಾನ್ (Sedan) ವಲಯದಲ್ಲಿ ಹೊಸ ಕಾರು ಬಿಡುಗಡೆಗೆ ಸಿದ್ಧತೆ ನಡೆಸಿರುವ ವೋಕ್ಸ್‌ವ್ಯಾಗನ್ (Volkswagen), ತಮ್ಮ ಮುಂಬರುವ ಕಾರಿನ ಜಾಗತಿಕ ಪ್ರೀಮಿಯರ್ ಮಾರ್ಚ್ 8 ರಂದು ನಡೆಯಲಿದೆ ಎಂದು ಬುಧವಾರ ಪ್ರಕಟಿಸಿದೆ. ಸ್ಕೋಡಾ ಜೊತೆಗೆ, ವೋಕ್ಸ್‌ವ್ಯಾಗನ್ ಕೂಡ 2022ರಲ್ಲಿ ಸೆಡಾನ್ ಕಾರುಗಳ ಬಿಡುಗಡೆಗೆ ಸಜ್ಜಾಗಿದೆ. ಎಸ್‌ಯುವಿ (SUV) ಹಾಗೂ ಹ್ಯಾಚ್‌ಬ್ಯಾಕ್ಗಳ (hatchback) ಅಬ್ಬರದಲ್ಲಿ ಸೆಡಾನ್ ಕಾರುಗಳು ದೇಶೀಯ ಮಾರುಕಟ್ಟೆಯಲ್ಲಿ ಬೇಡಿಕೆ ಕಳೆದುಕೊಂಡಿದ್ದು, ಈ ಕಾರುಗಳ ಬಿಡುಗಡೆ ಮೂಲಕ ಅದಕ್ಕೆ ಪುನರುಜ್ಜೀವನ ನೀಡುವುದು ಈ ಕಂಪನಿಗಳ ಉದ್ದೇಶವಾಗಿದೆ.
ವೋಕ್ಸ್‌ವ್ಯಾಗನ್‌ನ ಮಧ್ಯಮ ಗಾತ್ರದ ಸೆಡಾನ್ ನಿರ್ಮಾಣ ಕಾರ್ಯ ಅಂತಿಮ ಹಂತದಲ್ಲಿದೆ. ಇದನ್ನು ವರ್ಟಸ್ (Vertus) ಎಂದು ಕರೆಯುವ ಸಾಧ್ಯತೆಯಿದೆ. ಸ್ಕೋಡಾ ಸ್ಲಾವಿಯಾದ ಬೆನ್ನಲ್ಲೇ ಇದು ಕೂಡ ಮಾರ್ಚ್‌ನಲ್ಲಿಯೇ ಬಿಡುಗಡೆಯಾಗುವ ನಿರೀಕ್ಷೆಯಿದೆ.ಕಳೆದ ಹಲವಾರು ತಿಂಗಳುಗಳಲ್ಲಿ ಇದು ದೇಶಾದ್ಯಂತ ಪರೀಕ್ಷಾರ್ಥ ಚಾಲನೆ ನಡೆಸುತ್ತಿರುವುದು ಕಂಡುಬಂದಿದೆ. ವೋಕ್ಸ್ವ್ಯಾಗನ್ ಸೆಡಾನ್ ಎಂಕ್ಯೂಬಿ ಎಓ ಐಎನ್ (MQB A0 IN) ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ. ಕಳೆದ ವರ್ಷ ದೇಶದಲ್ಲಿ ಬಿಡುಗಡೆಯಾದ ಟೈಗುನ್ ಎಸ್‌ಯುವಿ (SUV) ಕೂಡ ಇದೇ ತಂತ್ರಜ್ಞಾನಗಳನ್ನು ಒಳಗೊಂಡಿದೆ. ಮತ್ತು ಬಿಡುಗಡೆಯಾದ ನಂತರ, ಸೆಡಾನ್ ಮಾರುಕಟ್ಟೆಯಲ್ಲಿ ಫೋಕ್ಸ್‌ವ್ಯಾಗನ್ ವೆಂಟೊದ ಸ್ಥಾನಕ್ಕೆ ಬರಲಿದೆ.
ಇದನ್ನೂ ಓದಿ: Slavia sedan ಉತ್ಪಾದನೆ ಆರಂಭಿಸಿದ ಸ್ಕೋಡಾ, ಮಾರ್ಚ್‌ನಲ್ಲಿ ಬಿಡು
ಅಳತೆಯಲ್ಲಿ ಹೊಸ ವೋಕ್ಸ್‌ವ್ಯಾಗನ್ ಸೆಡಾನ್ ವೆಂಟೊಗಿಂತ ಉದ್ದ ಮತ್ತು ಅಗಲವಾಗಿರಬಹುದು. ಇದರರ್ಥ ಒಳಭಾಗದಲ್ಲಿ ಹೆಚ್ಚಿನ ಕ್ಯಾಬಿನ್ ಸ್ಪೇಸ್ ದೊರೆಯಲಿದೆ.. ಎಲ್‌ಇಡಿ ಹೆಡ್ ಲೈಟ್‌ಗಳು, ಡಿಆರ್‌ಎಲ್‌ಗಳು, ಮುಂಭಾದಲ್ಲಿ ಕ್ರೋಮ್ ಗ್ರಿಲ್ ಬಾರ್ ನಂತರ ಪ್ರಮುಖಾಂಶಗಳು ಈ ಕಾರಿನಲ್ಲಿದೆ ಎಂದು ಅಂದಾಜಿಸಲಾಗುತ್ತಿದೆ.
ಹ್ಯುಂಡೈ ವೆರ್ನಾ, ಮಾರುತಿ ಸುಜುಕಿ ಸಿಯಾಜ್ ಮತ್ತು ಹೋಂಡಾ ಸಿಟಿ - ಸ್ಕೋಡಾ ಸ್ಲಾವಿಯಾ ಜೊತೆಗೆ, ಫೋಕ್ಸ್‌ವ್ಯಾಗನ್ ಸೆಡಾನ್ ಟೈಗನ್‌ನಲ್ಲಿ ಕೂಡ ಎರಡು ಎಂಜಿನ್ ಆಯ್ಕೆಗಳನ್ನು ಪಡೆಯಬಹುದು - 1.5-ಲೀಟರ್ ನಾಲ್ಕು ಸಿಲಿಂಡರ್ ಟಿಎಸ್‌ಐ ಯುನಿಟ್ ಮತ್ತು 1.0-ಲೀಟರ್ ಟಿಎಸ್ಐ ಮೂರು-ಸಿಲಿಂಡರ್ ಎಂಜಿನ್ ಪ್ರಸರಣ ಆಯ್ಕೆಗಳು. ಟೈಗೂನ್ ಮಾದರಿಯಲ್ಲಿಯೇ ಇದು ಆರು ಸ್ಪೀಡ್ ಮ್ಯಾನ್ಯುಯಲ್, ಆರು ಸ್ಪೀಡ್ ಎಟಿ ಮತ್ತು ಏಳು ಸ್ಪೀಡ್ ಡಿಎಸ್‌ಜಿ ಒಳಗೊಂಡಿರಬಹುದು ಎನ್ನಲಾಗುತ್ತಿದೆ.
ಇದನ್ನೂ ಓದಿ: Volkswagen Tiguan Facelift:ಸೆಲ್ಟೋಸ್, ಕಂಪಾಸ್ ಪ್ರತಿಸ್ಪರ್ಧಿ, VW ಟೈಗೂನ್ SUV ಫೇಸ್‌ಲಿಫ್ಟ್ ಕಾರು ಬಿಡುಗಡೆ
ಭಾರತದಲ್ಲಿ ಸ್ಕೋಡಾ ಮತ್ತು ವೋಕ್ಸ್‌ವ್ಯಾಗನ್ ಮಾರುಕಟ್ಟೆ ಕುಸಿದಿದೆ. ಎಸ್‌ಯುವಿ ಹಾಗೂ ಹ್ಯಾಚ್‌ಬ್ಯಾಕ್ ವಲಯದಲ್ಲಿ ಈ ಕಾರು ತಯಾರಕರು ನಿರೀಕ್ಷಿತ ಯಶಸ್ಸು ಕಳಿಸಿಲ್ಲ. ಕಳೆದ ವರ್ಷ ಅಂದಾಜಿಸಿದಷ್ಟು ಮಾರುಕಟ್ಟೆ ಷೇರು ಪಡೆದುಕೊಳ್ಳುವಲ್ಲಿ ಕೂಡ ವಿಫಲವಾಗಿವೆ. ಈ ಹಿನ್ನೆಲೆಯಲ್ಲಿ ಈಗ ಮಧ್ಯಮ ಗಾತ್ರದ ಸೆಡಾನ್‌ಗಳ ಮೊರೆ ಹೋಗಿದ್ದು, ಮಾರುಕಟ್ಟೆಯಲ್ಲಿ ಮತ್ತೆ ಅವುಗಳಿಗೆ ಜಾಗ ಮಾಡಿಕೊಡುವ ಪಣ ತೊಟ್ಟಿವೆ.
ಈ ವಿಭಾಗಕ್ಕೆ ತಾಜಾ ಜೀವನವನ್ನು ತುಂಬಲು ಪ್ರೀಮಿಯಂ ಕೊಡುಗೆಯ ಅಗತ್ಯವಿದೆ ಎಂದು ಸ್ಕೋಡಾ ವಿಶ್ವಾಸವಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಸ್ಕೋಡಾ ಆಟೋ ಇಂಡಿಯಾದ ಬ್ರಾಂಡ್ ಡೈರೆಕ್ಟರ್ ಝಾಕ್ ಹೋಲಿಸ್, ಯಾವುದೇ ಹೊಸ ಉತ್ಪನ್ನಗಳಿಲ್ಲದ ಕಾರಣ ಸೆಡಾನ್ ವಿಭಾಗವು ಕುಗ್ಗುತ್ತಿದೆ. ಆದರೆ, ಸೆಡಾನ್ ಸ್ಲಾವಿಯಾ ಹೊಸ ಕ್ರಾಂತಿ ತರಲಿದೆ ಮತ್ತು ಪ್ರಾರಂಭದಲ್ಲಿ ಪ್ರತಿ ತಿಂಗಳು ಸುಮಾರು 3,000 ಸ್ಲಾವಿಯಾವನ್ನು ಮಾರಾಟ ಮಾಡುವ ವಿಶ್ವಾಸವಿದೆ ಎಂದಿದ್ದಾರೆ.
2022-2024 ರಲ್ಲಿ ಭಾರತದಲ್ಲಿ ವೋಕ್ಸ್‌ವ್ಯಾಗನ್ ವರ್ಟಸ್, ಟೈಗೂನ್, ಆಲ್ ಸ್ಪೇಸ್ 2022, ವೆಂಟೋ 2022, ಪೋಲೋ 2022, ಪಸಾಟ್ 2023 ನಂತಹ 5 ಕಾರುಗಳು ಬಿಡುಗಡೆಯಾಗಲಿವೆ. ಮುಂಬರುವ ಈ 5 ಕಾರುಗಳಲ್ಲಿ 6 ಸೆಡಾನ್‌ಗಳು, 2 ಎಸ್‌ಯುವಿ(SUV)ಗಳು ಮತ್ತು 2 ಹ್ಯಾಚ್‌ಬ್ಯಾಕ್‌ಗಳಿರಲಿವೆ. ಈ ಪೈಕಿ 3 ಕಾರುಗಳು ಮುಂದಿನ ಮೂರು ತಿಂಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.