Used Cars sales ದೇಶದ ಸಣ್ಣ ನಗರ, ಪಟ್ಟಣಗಳಲ್ಲಿ ಬಳಸಿದ ಲಕ್ಷುರಿ ಕಾರುಗಳಿಗೆ ಭಾರಿ ಬೇಡಿಕೆ!

By Suvarna News  |  First Published Feb 16, 2022, 7:19 PM IST
  • ಬಳಸಿದ ಕಾರುಗಳ ಬೇಡಿಕೆ ಹೆಚ್ಚು,  ಸಣ್ಣ ಪಟ್ಟಣದಲ್ಲೂ ವ್ಯವಹಾರ
  • ಸಣ್ಣ ನಗರ, ಪಟ್ಟಣಗಳಲ್ಲಿ ಲಕ್ಷುರಿ ಕಾರುಗಳಿಗೆ ಭಾರಿ ಬೇಡಿಕೆ
  • ಮಾರಾಟದಲ್ಲಿ ಶೇಕಡಾ 40 ರಷ್ಟು ವಹಿವಾಟು

ಗುರುಗ್ರಾಂ(ಫೆ.16): ದೇಶದ ಸಣ್ಣ ನಗರಗಳಲ್ಲಿ(India) ಬಳಸಿದ ಐಷಾರಾಮಿ ಕಾರುಗಳಿಗೆ(Luxury Cars) ಭಾರಿ ಬೇಡಿಕೆ ವ್ಯಕ್ತವಾಗುತ್ತಿದೆ. ದೇಶದ 3 ಮತ್ತು 3ನೇ ಶ್ರೇಣಿ ನಗರಗಲ್ಲಿ ಲಕ್ಷುರಿ ಕಾರುಗಳ ಮಾರಾಟ(Used Car Sales) ದುಪ್ಪಟ್ಟಾಗಿದೆ. ಕಳೆದ 6 ತಿಂಗಳಿಗೆ ಹೋಲಿಸಿದರೆ, ಮಾಹಿತಿ ಬಯಸುವಿಕೆಯಲ್ಲಿ ಶೇ 20 ರಷ್ಟು ಹೆಚ್ಚಳವಾಗಿದೆ. ಈ ಕುರಿತು ಬಳಸಿದ  ಐಷಾರಾಮಿ ಕಾರುಗಳ ಮಾರಾಟ  ಕಂಪನಿಯಾದ ಬಾಯ್ಸ್ ಆ್ಯಂಡ್ ಮಷಿನ್ಸ್ ಅಂಕಿ ಅಂಶ ತೆರೆದಿಟ್ಟಿದೆ. ಬಳಸಿದ ಕಾರುಗಳ ಮಾರಾಟದಲ್ಲಿ(Car Sales) ಶೇಕಡಾ 40 ರಷ್ಟು ವಹಿವಾಟು ಸಣ್ಣ ಪಟ್ಟಣಗಳಲ್ಲಿ ನಡೆಯುತ್ತಿದೆ.  

ಆರ್ಥಿಕತೆಯ ಬೆಳವಣಿಗೆಗೆ ಡಿಜಿಟಲೀಕರಣವು(Digital India) ಪ್ರಮುಖ ಕೊಡುಗೆ ನೀಡುತ್ತಿರುವುದರಿಂದ, ಅದು ಬಳಸಿದ ಐಷಾರಾಮಿ ಕಾರುಗಳ ಮಾರಾಟ ಕ್ಷೇತ್ರದ ಬೆಳವಣಿಗೆಗೂ ಹೆಚ್ಚಿನ ಕೊಡುಗೆ ನೀಡುತ್ತಿದೆ. ಬಳಸಿದ ಐಷಾರಾಮಿ ಕಾರ್‌ಗಳ ಲಭ್ಯತೆಯ ಸಂಪೂರ್ಣ ವಿವರಗಳು ಅಂತರ್ಜಾಲ ತಾಣದಲ್ಲಿ ವೀಕ್ಷಿಸಲು ಲಭ್ಯ ಇರುತ್ತದೆ. ಈ ಮಾಹಿತಿಯನ್ನು ದೇಶದ ಯಾವುದೇ ಭಾಗದಿಂದ ಪಡೆದುಕೊಳ್ಳಬಹುದು. ಇದು 2ನೇ ಶ್ರೇಣಿಯ ನಗರಗಳಲ್ಲಿನ ಜನರು ತಮ್ಮ ಬಜೆಟ್‌ಗೆ ಸರಿಹೊಂದುವ ಎಲ್ಲಾ ಆಯ್ಕೆಗಳನ್ನು ಅನ್ವೇಷಿಸಲು ಮತ್ತು ಪ್ರಜ್ಞಾಪೂರ್ವಕ ಖರೀದಿ ನಿರ್ಧಾರವನ್ನು ತೆಗೆದುಕೊಳ್ಳಲು ಅನುವು ಮಾಡಿಕೊಡುತ್ತದೆ. ಗ್ರಾಹಕರ ತೃಪ್ತಿಯನ್ನು ಸಂಪೂರ್ಣ  ಖಚಿತಪಡಿಸಿಕೊಳ್ಳಲು ಸಂಪೂರ್ಣ ನೆರವಿನೊಂದಿಗೆ ಕಾರುಗಳನ್ನು ಖರೀದಿದಾರರ ಮನೆ ಬಾಗಿಲಿಗೆ ತಲುಪಿಸಲಾಗುತ್ತದೆ.

Latest Videos

undefined

Economic Crisis ಐಷಾರಾಮಿ ಮನೆಗಿಂತ ಈ ದೇಶದಲ್ಲಿ ಸೆಕೆಂಡ್ ಹ್ಯಾಂಡ್ ಕಾರು ದುಬಾರಿ!

ಸರ್ಕಾರದ ಸಕಾರಾತ್ಮಕ ನೀತಿಗಳು, ರಾಜ್ಯಗಳಲ್ಲಿ ನಿಬಂಧನೆಗಳು ತೆರವಾಗುತ್ತಿರುವುದರಿಂದ ಐಷಾರಾಮಿ ಬಳಸಿದ ಕಾರುಗಳ ಉದ್ಯಮವು 2022-23 ರಲ್ಲಿ ಗಮನಾರ್ಹವಾಗಿ ಬೆಳೆಯುತ್ತದೆ ಎಂದು ಅಂದಾಜಿಸಲಾಗಿದೆ.

ಕಳೆದ ಕೆಲವು ತಿಂಗಳುಗಳಲ್ಲಿ ಗ್ವಾಲಿಯರ್, ಇಂದೋರ್, ಸೂರತ್, ಡೆಹ್ರಾಡೂನ್, ಕಾನ್ಪುರ, ಕೊಯಿಮತ್ತೂರು, ವಿಶಾಖಪಟ್ಟಣದಂತಹ ನಗರಗಳಿಂದ ಮಾಹಿತಿ ಕೇಳುವ ಸಂಖ್ಯೆಯಲ್ಲಿ ಗಮನಾರ್ಹ ಹೆಚ್ಚಳವನ್ನು ನಾವು ಗಮನಿಸಿದ್ದೇವೆ. 2ನೇ ಶ್ರೇಣಿ ಮತ್ತು3ನೇ ಶ್ರೇಣಿಯ ಪಟ್ಟಣ - ನಗರಗಳಿಂದ ಬೇಡಿಕೆಯು ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿ ಇದೆ. ಇದಲ್ಲದೆ, ಬಳಸಿದ ಐಷಾರಾಮಿ ಕಾರುಗಳ ಮಹಿಳಾ ಗ್ರಾಹಕರ ಸಂಖ್ಯೆಯು ಹಿಂದಿನ ವರ್ಷಗಳಿಗೆ ಹೋಲಿಸಿದರೆ ಏರಿಕೆಯಾಗಿದೆ. ನಮ್ಮ ಒಟ್ಟು ಮಾರಾಟದ ಶೇ  10 ರಿಂದ ಶೇ12ರಷ್ಟು  ಮಹಿಳಾ ಖರೀದಿದಾರರಿಂದ ಆಗಿದೆ. ಕೋವಿಡ್ ಪಿಡುಗು ಪ್ರಾರಂಭವಾದಾಗಿನಿಂದ, ವೈಯಕ್ತಿಕ ಬಳಕೆಗೆ ಸ್ವಂತ ವಾಹನಗಳ ಬಳಕೆಯಲ್ಲಿ ಹೆಚ್ಚಳ ಉಂಟಾಗಿದೆ.  ಹೆಚ್ಚಿನ ಪ್ರಮಾಣದಲ್ಲಿ ವೆಚ್ಚ ಮಾಡುವ ಆದಾಯ ಹೊಂದಿರುವ ಜನರು ತಮ್ಮ ಆಕಾಂಕ್ಷೆಗಳನ್ನು ಈಡೇರಿಸುವ ಮತ್ತು ಐಷಾರಾಮಿ ಜೀವನಶೈಲಿಯ ಉತ್ಪನ್ನಗಳ ಮೇಲೆ ಹಣವನ್ನು  ಹೆಚ್ಚಿನ ಪ್ರಮಾಣದಲ್ಲಿ ವೆಚ್ಚ ಮಾಡಲು ಪ್ರಾರಂಭಿಸಿದ್ದಾರೆ ಎಂದು ಬಾಯ್ಸ್ ಆ್ಯಂಡ್ ಮಷಿನ್ಸ್ ಸಂಸ್ಥಾಪಕ ಸಿದ್ಧಾರ್ಥ್ ಚತುರ್ವೇದಿ ಹೇಳಿದ್ದಾರೆ. 

ಸೆಕೆಂಡ್ ಹ್ಯಾಂಡ್ ಕಾರು ಖರೀದಿಸುವವರಿಗೆ ಇಲ್ಲಿದೆ 5 ಟಿಪ್ಸ್!

ಇತ್ತೀಚಿನ ದಿನಗಳಲ್ಲಿ ಐಷಾರಾಮಿ ಕಾರ್ ಆಯ್ಕೆ ಮಾಡಲು ಸಿದ್ಧರಿರುವ ಜನರ ಸಂಖ್ಯೆ ಹೆಚ್ಚಾಗಿದೆ. ಐಷಾರಾಮಿ ಕಾರುಗಳಿಗೆ ಬದಲಾಯಿಸಲು ಬಳಸಿದ ಐಷಾರಾಮಿ ಕಾರುಗಳು ಅತ್ಯಂತ ಕಡಿಮೆ ವೆಚ್ಚದ ವಿಧಾನವಾಗಿದೆ. ಐಷಾರಾಮಿ ಬಳಸಿದ ಕಾರು ಮಾರುಕಟ್ಟೆಯನ್ನು ವಿಸ್ತರಿಸಲು ಇದು ಪ್ರಮುಖ ಕೊಡುಗೆ ನೀಡುವ  ಸಂಗತಿಯಾಗಿದೆ. ಕಳೆದ ಎರಡು ತ್ರೈಮಾಸಿಕಗಳಲ್ಲಿ, ನಾವು ಶೇ 75ರಷ್ಟು ಹೆಚ್ಚು ಹೊಸ ಗ್ರಾಹಕರನ್ನು ಕಂಡಿದ್ದೇವೆ. ಇವರಲ್ಲಿ ಹೆಚ್ಚಿನವರು 2 ಮತ್ತು 3ನೇ ಶ್ರೇಣಿಯ ನಗರ ಮತ್ತು ಪಟ್ಟಣಗಳಿಗೆ ಸೇರಿದವರಾಗಿದ್ದಾರೆ.

ಸ್ಪರ್ಧೆಯಲ್ಲಿ ಬಾಯ್ಸ್ ಆ್ಯಂಡ್ ಮಷಿನ್ಸ್ ಯಾವಾಗಲೂ ಮುಂಚೂಣಿಯಲ್ಲಿ ಇರಲಿದೆ. ತನ್ನ ಎಲ್ಲ ಗ್ರಾಹಕರಿಗೆ ವಾಹನದ ಎಂಜಿನ್ ಮತ್ತು ಟ್ರಾನ್ಸ್ಮಿಷನ್‌ನಲ್ಲಿ ಆರು ತಿಂಗಳ ವಾರಂಟಿಯನ್ನು ನೀಡುತ್ತದೆ.
 

click me!