ಒಂದೇ ಚಾರ್ಜ್‌ನಲ್ಲಿ 500 ಕಿ.ಮೀ.ಗೂ ಅಧಿಕ ಮೈಲೇಜ್ ನೀಡುವ 3 ಹೊಸ ಇವಿ; ಬೆಲೆ ಎಷ್ಟು?

Published : Jul 19, 2026, 08:54 PM IST
Upcoming Electric Cars India 2026

ಸಾರಾಂಶ

Upcoming Electric Cars India 2026: ಶೀಘ್ರದಲ್ಲೇ ಭಾರತದ ಮಾರುಕಟ್ಟೆಗೆ 500 ಕಿಮೀಗೂ ಅಧಿಕ ಮೈಲೇಜ್ ನೀಡುವ ಮೂರು ಹೊಸ ಎಲೆಕ್ಟ್ರಿಕ್ ಕಾರುಗಳು ಪ್ರವೇಶಿಸಲಿವೆ. ಮಹಿಂದ್ರಾ, ಟಾಟಾ ಮತ್ತು ಮಾರುತಿ ಸುಜುಕಿ ಕಂಪನಿಗಳು ತಮ್ಮ ಬಜೆಟ್ ಫ್ರೆಂಡ್ಲಿ ಹಾಗೂ ಪ್ರೀಮಿಯಂ ಇವಿಗಳನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸಿವೆ.

ನವದೆಹಲಿ: ಹೆಚ್ಚುತ್ತಿರುವ ಪೆಟ್ರೋಲ್, ಡೀಸೆಲ್ ದರಗಳು ಮತ್ತು ವಾಯು ಮಾಲಿನ್ಯ ನಿಯಂತ್ರಣಕ್ಕಾಗಿ ಸರ್ಕಾರಗಳು ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಉತ್ತೇಜನ ನೀಡುತ್ತಿವೆ. ಹಾಗೆಯೇ ಕೆಲವು ಸಬ್ಸಿಡಿಗಳನ್ನು ಸಹ ಸರ್ಕಾರಗಳು ನೀಡುತ್ತಿವೆ. ಈ ಎಲ್ಲಾ ಬೆಳವಣಿಗೆ ಹಿನ್ನೆಲೆ ಆಟೋಮೊಬೈಲ್ ಕಂಪನಿಗಳು ಹೊಸ ವಿನ್ಯಾಸ ಮತ್ತು ಅತ್ಯಧಿಕ ಫೀಚರ್ಸ್ ಹೊಂದಿರುವ ಕಾರುಗಳನ್ನು ಮಾರುಕಟ್ಟೆಗೆ ತರುತ್ತಿವೆ. ಇತ್ತ ಎಲೆಕ್ಟ್ರಿಕ್ ಕಾರುಗಳ ಬೆಲೆಯೂ ವೇಗವಾಗಿ ಏರಿಕೆಯಾಗುತ್ತಿವೆ.

ನೀವು ಎಲೆಕ್ಟ್ರಿಕ್ ಕಾರ್ ಖರೀದಿಗೆ ಯೋಚಿಸುತ್ತಿದ್ದೀರಾ? ಕೆಲವೇ ದಿನಗಳಲ್ಲಿ ಬಜೆಟ್ ಫ್ರೆಂಡ್ಲಿಯಿಂದ ಹಿಡಿದು ಪ್ರೀಮಿಯಂ, ಹೈಪರ್ ಎಲೆಕ್ಟ್ರಿಕ್ ವಾಹನಗಳು ಮಾರುಕಟ್ಟೆಗೆ ಎಂಟ್ರಿ ಕೊಡಲು ಸಿದ್ದವಾಗಿವೆ. ಶೀಘ್ರದಲ್ಲಿಯೇ 500 ಕಿಮೀಗೂ ಅಧಿಕ ಧಮಾಧರ್ ರೇಂಜ್ ಕೊಡುವ ಮೂರು ಎಲೆಕ್ಟ್ರಿಕ್ ಕಾರ್‌ಗಳು ಮಾರುಕಟ್ಟೆಯನ್ನು ಪ್ರವೇಶಿಸಲಿವೆ. ಆ ಮೂರು ಎಲೆಕ್ಟ್ರಿಕ್ ಕಾರ್‌ಗಳ ಮಾಹಿತಿ ಈ ಕೆಳಗಿನಂತಿದೆ.

ಮಹಿಂದ್ರಾದ ಹೊಸ ಕಾರ್

ಮಹಿಂದ್ರಾ ತನ್ನ ಹೊಸ Bourne-Electric Series ಮಾದರಿಯಲ್ಲಿ ಮಹಿಂದ್ರಾ XEV 4e ಕಾರ್‌ನ್ನು ರಸ್ತೆಗಿಳಿಸಲು ಎಲ್ಲಾ ತಯಾರಿಯನ್ನು ಮಾಡಿಕೊಂಡಿದೆ. ಇದು ಕೂಪೆ ಶೈಲಿಯ ಎಲೆಕ್ಟ್ರಿಕ್ ಎಸ್‌ಯುವಿ ಆಗಿದ್ದು, ಅತ್ಯಾಕರ್ಷಕ ಮತ್ತು ಅತ್ಯಾಧುನಿಕ ಲುಕ್ ಜೊತೆ ಸ್ಪೋರ್ಟಿಯಾಗಿದೆ. ರಸ್ತೆಯಲ್ಲಿ ಈ ಕಾರ್ ಬಂದ್ರೆ ಎಲ್ಲರನ್ನು ಆಕರ್ಷಿಸುವ ಹೊಸ ವಿನ್ಯಾಸವನ್ನು ಹೊಂದಿದೆ.

XEV 4eನಲ್ಲಿ ಮಹಿಂದ್ರಾ ಕಂಪನಿ 60kWh ನಿಂದ 79kWh ಸಾಮರ್ಥ್ಯದ ಪವರ್‌ಫುಲ್ ಬ್ಯಾಟರಿ ಪ್ಯಾಕ್ ಆಫ್ಷನ್ ನೀಡುವ ಸಾಧ್ಯತೆಗಳಿವೆ. ಈ ಕಾರ್ ಸಿಂಗಲ್ ಚಾರ್ಜ್‌ನಲ್ಲಿ 500 ಕಿಮೀಗೂ ಹೆಚ್ಚು ಮೈಲೇಜ್ ನೀಡುತ್ತದೆ ಎಂದು ವರದಿಯಾಗಿದೆ. ಸುಮಾರು 13 ಲಕ್ಷ ರೂ.ಗಳ ಆರಂಭಿಕ ಎಕ್ಸ್-ಶೋರೂಂ ಬೆಲೆಯೊಂದಿಗೆ ಮಾರುಕಟ್ಟೆಗೆ ಬರಲಿರುವ ಈ ಕಾರು, ಬಜೆಟ್ ಒಳಗೆ ಪ್ರೀಮಿಯಂ ಆನಂದವನ್ನು ನೀಡುವ ಸಾಮರ್ಥ್ಯವನ್ನು ಹೊಂದಿದೆ.

ಬಿಡುಗಡೆಗೆ ಸಿದ್ಧವಾಗಿದೆ ಟಾಟಾ ಹ್ಯಾರಿಯರ್ ಇವಿ

ಟಾಟಾ ಮೋಟಾರ್ಸ್ ತನ್ನ ಜನಪ್ರಿಯ ಮತ್ತು ಪವರ್‌ಫುಲ್ SUV ಹ್ಯಾರಿಯರ್‌ನ ಎಲೆಕ್ಟ್ರಿಕ್ ಆವೃತ್ತಿಯಾದ ಟಾಟಾ ಹ್ಯಾರಿಯರ್ EVಯನ್ನು ರಸ್ತೆಗಿಳಿಸಲು ಸಿದ್ಧವಾಗುತ್ತಿದೆ. ಟಾಟಾದ ಹೊಸ Acti.ev ಆರ್ಕಿಟೆಕ್ಚರ್ ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಾಣವಾಗುತ್ತಿರುವ ಹೊಸ ಇವಿ ಹ್ಯಾರಿಯರ್‌ನಂತೆ ಸದೃಢ ಮತ್ತು ಆಕರ್ಷವಾದ ಲುಕ್‌ ಹೊಂದಿದೆ. ಅಡ್ವಾನ್ಸಡ್ ಬ್ಯಾಟರಿ ಪ್ಯಾಕಪ್ ಹೊಂದಿರುವ ಫುಲ್‌ ಜಾರ್ಜ್‌ನಲ್ಲಿ 500 ಕಿಲೋಮೀಟರ್‌ಗಳಿಗಿಂತ ಹೆಚ್ಚು ಮೈಲೇಜ್ ನೀಡುತ್ತದೆ. ಆಲ್-ವೀಲ್ ಡ್ರೈವ್ ಆಫ್ಷನ್ ಜೊತೆ ಬರುತ್ತಿರುವ SUV ಬೆಲೆ ಸುಮಾರು ₹25-28 ಲಕ್ಷದಿಂದ ಪ್ರಾರಂಭವಾಗುವ ನಿರೀಕ್ಷೆಗಳಿವೆ.

ಇದನ್ನೂ ಓದಿ: ತನ್ನ ಬಳಿ ₹25 ಕೋಟಿ ಆಸ್ತಿ ಇದ್ದರೂ, ಅಪ್ಪನ ₹45 ಲಕ್ಷ ಸಾಲ ತೀರಿಸಲು ನಯಾಪೈಸೆ ಕೊಡದೆ ಬೀದಿಗೆ ತಳ್ಳಿದ ಮಗಳು!

ಮಾರುತಿ ಸುಜುಕಿಯಿಂದಲೂ ಇ-ವಿಟಾರಾ

ಭಾರತದ ಅತ್ಯಂತ ವಿಶ್ವಾಸಾರ್ಹ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ಕೂಡ ಇವಿ ವಿಭಾಗಕ್ಕೆ ತನ್ನ ಮೊದಲ ಪ್ರಮುಖ ಹೆಜ್ಜೆ ಇರಿಸಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದೆ. ಮಾರುತಿ ಸುಜುಕಿ ಕಂಪನಿಯ ಮೊದಲ ಸಂಪೂರ್ಣ ಎಲೆಕ್ಟ್ರಿಕ್ ಎಸ್‌ಯುವಿ ರಸ್ತೆಯಲ್ಲಿ ಕಾಣಿಸಲಿದೆ. ಈ ಹೊಸ ಕಾರ್ 49kWh ಮತ್ತು 61kWh ಸಾಮರ್ಥ್ಯದ ಎರಡು ದೊಡ್ಡ ಬ್ಯಾಟರಿ ಪ್ಯಾಕ್ ಒಳಗೊಂಡಿರಲಿದ್ದು, ಒಂದೇ ಚಾರ್ಜ್‌ನಲ್ಲಿ 500 ರಿಂದ 543 ಕಿಲೋಮೀಟರ್‌ ಮೈಲೇಜ್ ನೀಡುತ್ತದೆ. ₹15.99 ಲಕ್ಷದ ಆರಂಭಿಕ ಎಕ್ಸ್-ಶೋರೂಂ ಬೆಲೆಯೊಂದಿಗೆ ಬರಲಿದ್ದು, ಟಾಟಾ ನೆಕ್ಸಾನ್ EVಗೆ ಇದು ನೇರ ಸ್ಪರ್ಧೆ ನೀಡುವ ಸಾಧ್ಯತೆಗಳಿವೆ.

ಇದನ್ನೂ ಓದಿ: ಹೊಸ ಕಾರು ಖರೀದಿಸಲು ಆತುರ ಬೇಡ, ಮುಂದಿನ 14 ದಿನಗಳಲ್ಲಿ ಮಾರುಕಟ್ಟೆಗೆ ಬರ್ತಿದೆ 3 ಜಬರ್ದಸ್ತ್ ಕಾರ್‌!

PREV
Read more Articles on
click me!

Recommended Stories

ಎಥೆನಾಲ್-20 ಪೆಟ್ರೋಲ್: ಹಳೆಯ ಕಾರುಗಳ ಮಾಲೀಕರು ಏನು ಮಾಡಬೇಕು? ಇಂಜಿನ್ ಸಮಸ್ಯೆ ತಪ್ಪಿಸಲು ತಜ್ಞರ ಸಲಹೆ ಇಲ್ಲಿವೆ!
ಹೊಸ ಕಾರು ಖರೀದಿಸಲು ಆತುರ ಬೇಡ, ಮುಂದಿನ 14 ದಿನಗಳಲ್ಲಿ ಮಾರುಕಟ್ಟೆಗೆ ಬರ್ತಿದೆ 3 ಜಬರ್ದಸ್ತ್ ಕಾರ್‌!