*ವಿಶ್ವದ ದುಬಾರಿ ಕಾರುಗಳಲ್ಲಿ ರೋಲ್ಸ್ ರಾಯ್ಸ್ ಒಂದು
* ಯುವಪೀಳಿಗೆಯ ಬೇಡಿಕೆ ಮೇರೆಗೆ ಎಲೆಕ್ಟ್ರಿಕ್ ಕಾರುಗಳಿಗೆ ಒತ್ತು
* ಐಸ್ ಕಾರುಗಳಿಗೆ ತಿಲಾಂಜಲಿ
ನವದೆಹಲಿ(ಫೆ.08): ವಿಶ್ಚದ ಅತ್ಯಂತ ದುಬಾರಿ ಹಾಗೂ ಐಷಾರಾಮಿ ಕಾರು ತಯಾರಕ ಕಂಪನಿ ರೋಲ್ಸ್ ರಾಯ್ಸ್ ಕೂಡ ಈ ಎಲೆಕ್ಟ್ರಿಕ್ ವಲಯಕ್ಕೆ ಕಾಲಿಡಲು ಮುಂದಾಗಿದ್ದು, 2030ರ ವೇಳೆಗೆ ತನ್ನ ಮೊದಲ ಆಲ್-ಎಲೆಕ್ಟ್ರಿಕ್ ಮಾಡೆಲ್ ಅನ್ನು ಪರಿಚಯಿಸುವುದಾಗಿ ಘೋಷಿಸಿದೆ. ಇದು ರೋಲ್ಸ್ ರಾಯ್ಸ್ ವ್ರೈತ್ಗೆ ಬದಲಿಯಾಗಿ ಸ್ಪೆಕ್ಟರ್ ಕೂಪ್ ಆಗಿರಲಿದೆ ಎಂದು ಕಂಪನಿ ಈ ಹಿಂದೆಯೇ ಬಹಿರಂಗಪಡಿಸಿತ್ತು. ರೋಲ್ಸ್ ರಾಯ್ಸ್ ಈಗ ಕಲ್ಲಿನನ್ ಎಸ್ಯುವಿ, ಘೋಸ್ಟ್ ಸಲೂನ್ ಮತ್ತು ಫ್ಯಾಂಟಮ್ ಲಿಮೋಸಿನ್ಗಳಂತಹ ದುಬಾರಿ ಕಾರುಗಳಲ್ಲಿನ ಐಸ್ ಇಂಜಿನ್ಗಳನ್ನು ಹಂತಹಂತವಾಗಿ ಕೈಬಿಟ್ಟು 2030 ರ ವೇಳೆ ಎಲ್ಲವನ್ನೂ ಎಲೆಕ್ಟ್ರಿಕ್ ಮಾದರಿಗಳನ್ನಾಗಿ ಬದಲಾಯಿಸುವ ಗುರಿ ಹೊಂದಿದೆ.
ರೋಲ್ಸ್ ರಾಯ್ಸ್ ತನ್ನ 117 ವರ್ಷಗಳ ಇತಿಹಾಸದಲ್ಲಿ 2021 ರಲ್ಲಿ ಅತಿ ಹೆಚ್ಚು ಕಾರುಗಳನ್ನು ಮಾರಾಟ ಮಾಡಿದೆ. ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ ಅದರ ಸಿಇಒ ಟಾರ್ಸ್ಟೆನ್ ಮುಲ್ಲರ್-ಒಟ್ವೋಸ್, ಪ್ರತಿ ಮಾದರಿಯನ್ನು ಇವಿ ಮೂಲಕ ಬದಲಾಯಿಸುವುದು ಮುಖ್ಯ ಎಂದು ಹೇಳಿದರು. ಈ ಬ್ರಿಟಿಷ್ ಕಾರು ತಯಾರಕ ಸಂಸ್ಥೆ, ಈಗ ಪರಿಚಯಿಸಲಿರುವ ಎಂಕೆ ಘೋಸ್ಟ್ ತಮ್ಮ ಕೊನೆಯ ಪೆಟ್ರೋಲ್-ಚಾಲಿತ ರೋಲ್ಸ್ ರಾಯ್ಸ್ ಆಗಿರಲಿದೆ ಎಂದು ತಿಳಿಸಿದೆ.’ ನಾವು ವಿಶ್ವಾದ್ಯಂತ ನಮ್ಮ ಯುವ ಗ್ರಾಹಕರ ಇಚ್ಛೆಗೆ ತಕ್ಕಂತೆ ಬದಲಾಗುತ್ತಿದ್ದೇವೆ. ಹೆಚ್ಚು ಜನರು ಎಲೆಕ್ಟ್ರಿಕ್ ರೋಲ್ಸ್ ರಾಯ್ಸ್ಗೆ ಬೇಡಿಕೆ ಇಡುತ್ತಿರುವುದನ್ನು ನಾವು ಕಂಡಿದ್ದೇವೆ’ ಎಂದು ಮುಲ್ಲರ್ ಹೇಳಿದ್ದಾರೆ.
undefined
Ambani cars ವಿಶ್ವದ ಅತ್ಯಂತ ದುಬಾರಿ ಕಾರು ರೋಲ್ಸ್ ರಾಯ್ಸ್ ಕಲ್ಲಿನಾನ್ ಖರೀದಿಸಿದ ಮುಕೇಶ್ ಅಂಬಾನಿ!
ಇತ್ತೀಚಿನ ವರ್ಷಗಳಲ್ಲಿ ರೋಲ್ಸ್ ರಾಯ್ಸ್ ಖರೀದಿದಾರರ ವಯಸ್ಸು ಸರಾಸರಿ 43ಕ್ಕೆ ಕುಸಿದಿದೆ. ಇದು ಯುವ ಪೀಳಿಗೆಯ ಕಾರಾಗಿ ಬದಲಾಗಿದೆ. ನಮ್ಮ ಬಹಳಷ್ಟು ಗ್ರಾಹಕರು ಈಗಾಗಲೇ ಎಲೆಕ್ಟ್ರಿಕ್ ಕಾರನ್ನು ಹೊಂದಿದ್ದಾರೆ, ಅದು ಟೆಸ್ಲಾ, ಬಿಎಂಡಬ್ಲ್ಯು ಅಥವಾ ಇತರ ಮಾದರಿಯಾಗಿರಬಹುದು. ಆದ್ದರಿಂದ EV ಚಾರ್ಜರ್ಗಳನ್ನು ನಿರ್ವಹಿಸುವ ಮತ್ತು ಶ್ರೇಣಿ ನಿರ್ವಹಣೆ ವಿಷಯದಲ್ಲಿ ಅನುಭವ ಪಡೆದಿದ್ದಾರೆ ಎಂದಿದ್ದಾರೆ.
ಇನ್ನೊಂದು ವಿಶೇಷವೆಂದರೆ, ರೋಲ್ಸ್ ರಾಯ್ಸ್ ಇವಿಗಳು ಐಸಿ ಮಾದರಿಗಳಂತೆಯೇ ಬೆಲೆಯಾಗಿರುತ್ತದೆ. . "ನಾವು ಎಂದಿಗೂ 'ವೆಚ್ಚ-ಚಾಲಿತ' ಬೆಲೆಯನ್ನು ನೀಡುವುದಿಲ್ಲ, ನಾವು 'ವಿಭಾಗ-ಚಾಲಿತ' ಮತ್ತು 'ವಸ್ತು-ಚಾಲಿತ' ಬೆಲೆಯನ್ನು ನೀಡುತ್ತೇವೆ. 2023ರಲ್ಲಿ ವ್ರೈತ್ ಹೊರಹೋದ ನಂತರ ಬರಲಿರುವ ಅದೇ ಆಕಾರದ ಸ್ಪೆಕ್ಷರ್ ಕೂಡ ಅದರ ಪವರ್ಟ್ರೇನ್ಗಿಂತ ಅದರ ಸ್ಥಾನಕ್ಕೆ ಅನುಗುಣವಾಗಿ ಬೆಲೆ ಹೊಂದಿರಲಿದೆ ಎಂದು ಮುಲ್ಲರ್-ಒಟ್ವೋಸ್ ವಿವರಿಸಿದರು,
117 ವರ್ಷಗಳ ಇತಿಹಾಸದಲ್ಲೇ ದಾಖಲೆಯ ಮಾರಾಟ ಕಂಡ ರೋಲ್ಸ್ ರಾಯ್ಸ್
ಭಾರತದಲ್ಲಿ ರೋಲ್ಸ್ ರಾಯ್ಸ್ (Rolls Royce in India)
ರೋಲ್ಸ್ ರಾಯ್ಸ್ ಪ್ರಸ್ತುತ ಭಾರತದಲ್ಲಿ ತನ್ನ ಎಲ್ಲಾ ಐದು ಮಾದರಿಗಳನ್ನು ಮಾರಾಟದಲ್ಲಿದೆ - ವ್ರೈತ್, ಡಾನ್, ಘೋಸ್ಟ್, ಕಲ್ಲಿನಾನ್ ಮತ್ತು ಫ್ಯಾಂಟಮ್. ರೋಲ್ಸ್ ರಾಯ್ಸ್ ಈಗ ಮುಂಬರುವ ತಿಂಗಳುಗಳಲ್ಲಿ ಹೊಸ ಘೋಸ್ಟ್ ಬ್ಲ್ಯಾಕ್ ಬ್ಯಾಡ್ಜ್ ಅನ್ನು ಭಾರತಕ್ಕೆ ತರಲು ಸಿದ್ಧವಾಗಿದೆ. ಬಿಡುಗಡೆಯನ್ನು ಇತ್ತೀಚೆಗೆ ರೋಲ್ಸ್ ರಾಯ್ಸ್ನ ಏಷ್ಯಾ ಪೆಸಿಫಿಕ್ ಪ್ರಾದೇಶಿಕ ಮಾರಾಟ ವ್ಯವಸ್ಥಾಪಕ ಸಾಂಗ್ವೂಕ್ ಲೀ ದೃಢಪಡಿಸಿದ್ದಾರೆ.
ಇತ್ತೀಚೆಗಷ್ಟೇ ಭಾರತದ ಕೋಟ್ಯಧಿಪತಿ ಉದ್ಯಮಿ ಮಕೇಶ್ ಅಂಬಾನಿ (Mukesh Ambani), ಕ್ಯಾಡಿಲಾಕ್ ಎಸ್ಕಲೇಡ್(cadillac escalade) ಕಾರು ಖರೀದಿಸಿದ್ದರು. ಈಗ ಇದೀಗ ವಿಶ್ವದ ಅತ್ಯಂತ ದುಬಾರಿ ಹಾಗೂ ಐಷಾರಾಮಿ ಕಾರು ರೋಲ್ಸ್ ರಾಯ್ಸ್ ಕಲ್ಲಿನಾನ್(Rolls Royce Cullinan)ಅನ್ನು ಖರೀದಿಸಿದ್ದಾರೆ.
ಅಂಬಾನಿ ಖರೀದಿಸಿದ ರೋಲ್ಸ್ ರಾಯ್ಸ್ ಕಲ್ಲಿನಾನ್ ಕಾರಿನ ಬೆಲೆ 13.14 ಕೋಟಿ ರೂ.ಗಳಾಗಿವೆ. 2018ರಲ್ಲಿ ರೋಲ್ಸ್ ರಾಯ್ಸ್ ಕಲ್ಲಿನಾನ್ ಕಾರನ್ನು ಬಿಡುಗಡೆ ಮಾಡಲಾಗಿತ್ತು. ಈ ಕಾರಿನ ಆರಂಭಿಕ ಬೆಲೆ 6.95 ಕೋಟಿ ರೂಪಾಯಿ(ಎಕ್ಸ್ ಶೋ ರೂಂ). ರೋಲ್ಸ್ ರಾಯ್ಸ್ ಕಲ್ಲಿನಾನ್ ಖರೀದಿಸಿದ ಮುಕೇಶ್ ಅಂಬಾನಿ ವಿಐಪಿ ನಂಬರ್‌ಗಾಗಿ ಬರೋಬ್ಬರಿ 12 ಲಕ್ಷ ರೂಪಾಯಿ ವೆಚ್ಚ ಮಾಡಿದ್ದಾರೆ.. ಅಂಬಾನಿ ಕಲ್ಲಿನಾನ್ ಕಾರು 0001 ನಂಬರ್‌ನಲ್ಲಿ ಅಂತ್ಯಗೊಳ್ಳಲಿದೆ.