ಮುಂಬೈ(ಫೆ.06) ಟಾಟಾ ಮೋಟಾರ್ಸ್(Tata Motors) ಕಾರು ಮಾರುಕಟ್ಟೆಯಲ್ಲಿ ಭಾರಿ ಸಂಚಲನ ಮೂಡಿಸಿದೆ. ಎಲೆಕ್ಟ್ರಿಕ್ ಕಾರಿನಲ್ಲಿ(Electric Car) ಹೊಸ ಅಧ್ಯಾಯ ಬರೆದಿರುವ ಟಾಟಾ ಮೋಟಾರ್ಸ್ ಇದೀಗ CNG ಕಾರು ಬಿಡುಗಡೆ ಮಾಡಿ ದಾಖಲೆ ಬರೆದಿದೆ. ಪೆಟ್ರೋಲ್, ಡೀಸೆಲ್ ಬೆಲೆ ದುಬಾರಿಯಾಗಿರುವ ಬೆನ್ನಲ್ಲೇ ಟಾಟಾ ಕೈಗೆಟುಕುವ ದರದಲ್ಲಿ CNG ಕಾರು ಬಿಡುಗಡೆ ಮಾಡಿ ಕಾರು ಪ್ರಿಯರ ಮನಗೆದ್ದಿದೆ. ಇದೀಗ ಒಂದು ತಿಂಗಳು ಪೂರೈಸುವ ಮೊದಲೇ 3,000 ಟಾಟಾ CNG ಕಾರುಗಳು ಮಾರಾಟ ಮಾಡಿ ಹೊಸ ದಾಖಲೆ ಬರೆದಿದೆ.
ಟಾಟಾ ಮೋಟಾರ್ಸ್ ಜನವರಿ 19ಕ್ಕೆ ಟಾಟಾ ಟಿಯಾಗೋ CNG ಹಾಗೂ ಟಿಗೋರ್ CNG ಕಾರು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದೀಗ ಒಂದು ತಿಂಗಳ ಪೂರೈಸುವ ಮೊದಲೇ ಟಿಯಾಗೋ ಹಾಗೂ ಟಿಗೋರ್(Tata Tiago CNG and Tigor CNG) ಒಟ್ಟು 3,000 ಮಾರಾಟ ಕಂಡಿದೆ. ಈ ಮೂಲಕ ಅತೀ ಕಡಿಮೆ ಅವಧಿಯಲ್ಲಿ ಗರಿಷ್ಠ ಮಾರಾಟವಾದ CNG ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.ಭಾರತದಲ್ಲಿ ಮಾರುತಿ ಸುಜುಕಿ ಹಾಗೂ ಹ್ಯುಂಡೈ CNG ಕಾರುಗಳನ್ನು ಬಿಡುಗಡೆ ಮಾಡಿತ್ತು. ಇದೇ ಮೊದಲ ಬಾರಿಗೆ ಟಾಟಾ ಮೋಟಾರ್ಸ್ ಟಿಯಾಗೋ ಹಾಗೂ ಟಿಗೋರ್ ಮೂಲಕ CNG ಕಾರುಗಳನ್ನು ಬಿಡುಗಡೆ ಮಾಡಿ ಇದೀಗ ಮಾರುಕಟ್ಟೆಯಲ್ಲಿ ಅಗ್ರಸ್ಥಾನಕ್ಕೆ ದಾಪುಗಾಲಿಡುತ್ತಿದೆ.
Nexon EV sales ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರಿಗೆ ಭಾರಿ ಬೇಡಿಕೆ, ಕಳೆದ 10 ತಿಂಗಳಲ್ಲಿ 9 ಸಾವಿರ EV ಮಾರಾಟ!
ಟಾಟಾ CNG ಕಾರಿನ ಬೆಲೆ
ಟಾಟಾ ಟಿಯಾಗೋ CNG ಕಾರು ನಾಲ್ಕು ವೇರಿಯೆಂಟ್‌ಗಳಲ್ಲಿ ಲಭ್ಯವಿದೆ. ಟಿಗೋರ್ XE, XM, XT and XZ+ ವೇರಿಯೆಂಟ್ ಬಿಡುಗಡೆ ಮಾಡಲಾಗಿದೆ ಇನ್ನು ಟಿಗೋರ್ CNG ಕಾರು XZ ಹಾಗೂ XZ+ ಎಂಬ ಎರಡು ವೇರಿಯೆಂಟ್‌ಗಳಲ್ಲಿ ಲಭ್ಯವಿದೆ. ಟಾಟಾ ಟಿಯಾಗೋ CNG ಕಾರಿನ ಬೆಲೆ 6.09 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಆರಂಭಗೊಳ್ಳುತ್ತಿದೆ. ಇನ್ನು ಟಿಗೋರ್ CNG ಕಾರಿನ ಬೆಲೆ 7.69 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ನಿಂದ ಆರಂಭಗೊಳ್ಳುತ್ತಿದೆ.
ಟಾಟಾ ಟಿಯಾಗೋ ಹಾಗೂ ಟಿಗೋರ್ CNG ಕಾರಿನಲ್ಲಿ 1.2 ಲೀಟರ್ ರೆವೊಟ್ರಾನ್ ಪೆಟ್ರೋಲ್ ಎಂಜಿನ್ ಬಳಸಲಾಗಿದೆ. ಜೊತೆಗೆ ಫ್ಯಾಕ್ಟರಿ ಫಿಟ್ಟೆಡ್ CNG ಕಿಟ್ ನೀಡಿದೆ. ಟಾಟಾ CNG ಕಾರು 73PS ಪವರ್ ಹಾಗೂ 95Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. 5 ಸ್ಪೀಡ್ ಮಾನ್ಯುಯೆಲ್ ಟ್ರಾನ್ಸ್‌ಮಿಶನ್ ಹೊಂದಿದೆ. ಟಾಟಾ ಸಿಎನ್‌ಜಿ ಕಾರು ಪ್ರತಿ ಕೆಜಿ ಸಿಎನ್‌ಜಿಗೆ 26.49 ಕಿಲೋಮೀಟರ್ ಮೈಲೇಜ್ ನೀಡಲಿದೆ. ಇನ್ನು ಬೆಲೆಯೂ ಅಗ್ಗವಾಗಿದೆ. ಹೀಗಾಗಿ ಜನರು ಇದೀಗ ಟಾಟಾ CNG ಕಾರಿನತ್ತ ವಾಲುತ್ತಿದ್ದಾರೆ.
Tata Safety Cars ಭಾರತದಲ್ಲಿ 5 ಸ್ಟಾರ್ ಸುರಕ್ಷತೆ ಕಾರು, ಹೊಸ ಮಾನದಂಡ ಸ್ಥಾಪಿಸಿದ ಟಾಟಾ ಮೋಟಾರ್ಸ್!
2022ರ ಜನವರಿ ತಿಂಗಳು ಟಾಟಾ ಮೋಟಾರ್ಸ್ ಪಾಲಿಗೆ ಸ್ಮರಣೀಯ ಹಾಗೂ ಹೆಚ್ಚು ಸಂತಸ ನೀಡಿದ ತಿಂಗಳಾಗಿದೆ. ಕಾರಣ ಟಾಟಾ ಮೋಟಾರ್ಸ್ 40,777 ಕಾರುಗಳನ್ನು ಮಾರಾಟ ಮಾಡುವ ಮೂಲಕ ಗರಿಷ್ಠ ದಾಖಲೆಯನ್ನು ಬರೆದಿದೆ. ಇದರಲ್ಲಿ 28,108 ಕಾರುಗಳು ಟಾಟಾ SUV ಕಾರುಗಳಾಗಿದೆ. ಇನ್ನು 2,892 ಎಲೆಕ್ಟ್ರಿಕ್ ಕಾರುಗಳಾಗಿದೆ. ಟಾಟಾದ ಜನಪ್ರಿಯ ಎರಡು ಕಾರುಗಳಾದ ಟಾಟಾ ನೆಕ್ಸಾನ್ ಹಾಗೂ ಟಾಟಾ ಪಂಚ್ ಪ್ರತಿ ತಿಂಗಳು 10,000 ಮಾರಾಟ ದಾಖಲೆ ಬರೆಯುತ್ತಿದೆ. ಟಾಟಾ CNG ಕಾರಿನ ಮಾರಾಟದಲ್ಲಿನ ಪ್ರಗತಿ ಓಟ್ಟು ಟಾಟಾ ಕಾರು ಮಾರಾಟದ ಶೇಕಡಾ 42 ರಷ್ಟು.
ಭಾರತದಲ್ಲಿ ಟಾಟಾ ಮೋಟಾರ್ಸ್ CNG ಕಾರುಗಳನ್ನು ಬಿಡುಗಡೆ ಮಾಡಿರುವುದು ಇದೀಗ ಮಾರುತಿ ಸುಜುಕಿ ಹಾಗೂ ಹ್ಯುಂಡೈಗೆ ತೀವ್ರ ಹೊಡೆತ ನೀಡಿದೆ. ಟಾಟಾ ಸುಲಭ ಹಾಗೂ ಕೈಗೆಟುಕುವ ದರದಲ್ಲಿ ಅತ್ಯುತ್ತಮ CNG ಕಾರುಗಳನ್ನು ನೀಡುತ್ತಿದೆ. ಇತ್ತ ಎಲೆಕ್ಟ್ರಿಕ್ ವಾಹನದಲ್ಲೂ ಅತೀ ಕಡಿಮೆ ಬೆಲೆಗೆ ಭಾರತದಲ್ಲಿ ಕಾರು ನೀಡಿದ ಹೆಗ್ಗಳಿಕೆಗೆ ಪಾತ್ರವಾಗಿದೆ.