Fresco XL: ಒಂದೇ ಚಾರ್ಜ್‌ನಲ್ಲಿ 1000 ಕಿಮೀ ಚಲಿಸಲಿದೆ 8 ಆಸನಗಳ ಈ ಕಾರು!

Suvarna News   | Asianet News
Published : Feb 07, 2022, 04:22 PM IST
Fresco XL: ಒಂದೇ ಚಾರ್ಜ್‌ನಲ್ಲಿ 1000 ಕಿಮೀ ಚಲಿಸಲಿದೆ 8 ಆಸನಗಳ ಈ ಕಾರು!

ಸಾರಾಂಶ

*ಒಂದೇ ಚಾರ್ಜ್‌ಗೆ ಸಾವಿರ ಕಿಮೀ ಚಲಿಸುವ ಸಾಮರ್ಥ್ಯ *ಫ್ರೆಸ್ಕೋ ಇವಿ ಸ್ಟಾರ್ಟ್‌ ಅಪ್‌ನ ಸಾಧನೆ * ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಬಿಡುಗಡೆ

Auto Desk: ಎಲೆಕ್ಟ್ರಿಕ್ ವಾಹನಗಳ ವಲಯದಲ್ಲಿ ಸಾಮಾನ್ಯವಾಗಿ ಎದುರಾಗುವ ಪ್ರಮುಖ ಪ್ರಶ್ನೆಯೆಂದರೆ, ಅದರ ಚಾರ್ಜಿಂಗ್ಗೆ ಎಷ್ಟು  ಸಮಯ ಪಡೆಯುತ್ತದೆ, ಸಾಮರ್ಥ್ಯ ಮತ್ತು ಎಷ್ಟು ಕಿಮೀಯ ವ್ಯಾಪ್ತಿ ಹೊಂದಿದೆ ಎಂಬುದಾಗಿದೆ. ಇದಕ್ಕೆ ಉತ್ತರವಾಗಿ ಬಂದಿದೆ ಈ ಹೊಸ ಕಾರು. ಇದು ಒಂದೇ ಚಾರ್ಜ್ನಲ್ಲಿ 1 ಸಾವಿರ ಕಿಮೀ (km) ವ್ಯಾಪ್ತಿ ಒದಗಿಸುತ್ತದೆ. ಫ್ರೆಸ್ಕೊ ಎಂಬ ನಾರ್ವೆಯ ಎಲೆಕ್ಟ್ರಿಕ್ ವಾಹನ (EV) ಸ್ಟಾರ್ಟ್ಅಪ್ 8 ಆಸನಗಳ ಆಲ್-ವೀಲ್ ಡ್ರೈವ್ (All wheel drive) ಎಲೆಕ್ಟ್ರಿಕ್ ಕಾರನ್ನು ಅನಾವರಣಗೊಳಿಸಿದೆ. ಇದು ಒಂದೇ ಚಾರ್ಜ್ನಲ್ಲಿ 1,000 ಕಿಮೀ ಪ್ರಯಾಣದ ಸೌಲಭ್ಯ ಒದಗಿಸುತ್ತದೆ. ಈ ಹಿಂದೆ ರೆವೆರಿ ಎಂಬ ಪರಿಕಲ್ಪನೆಯ ಕಾರನ್ನು ಅನಾವರಣಗೊಳಿಸಿದ್ದ ಫ್ರೆಸ್ಕೊ ಮೋಟಾರ್ಸ್ (Fresco Motors), ಕೆಲವು ದಿನಗಳ ಹಿಂದೆ ತನ್ನ ಮೊದಲ ಎಲೆಕ್ಟ್ರಿಕ್ ವಾಹನವನ್ನು ಪ್ರದರ್ಶಿಸಿತ್ತು.

ಫ್ರೆಸ್ಕೊ ಎಕ್ಸ್ಎಲ್ (XL)  ಎಲೆಕ್ಟ್ರಿಕ್ ಕಾರು ಸೆಡಾನ್ ವಿನ್ಯಾಸ ಹೊಂದಿದ್ದು, ಮಿನಿವ್ಯಾನ್ ಅಥವಾ ಎಂಪಿವಿ (MPV)ಯ ಹೆಚ್ಚಿನ ಗುಣಲಕ್ಷಣಗಳನ್ನು ಹೊಂದಿದೆ. ಎಕ್ಸ್ಎಲ್ (XL) ಎಂಬ ಹೆಸರು ಅದು ಕಾರಿನ ಒಳಭಾಗದಲ್ಲಿ ನೀಡುವ ವಿಸ್ತೃತ ಜಾಗವನ್ನು ಸೂಚಿಸುತ್ತದೆ.  ಈಗಾಗಲೇ ಈ ಸ್ಟಾರ್ಟ್ಅಪ್ ಅಂತರ್ಜಾಲದಲ್ಲಿ ಕಾರಿನ ಚಿತ್ರ ಹಂಚಿಕೊಂಡಿದೆ. ಆದರೆ, ಈ ಕಾರು ಕಂಪನಿ ಹೇಳಿಕೊಂಡಂತೆ 8 ಜನರಿಗೆ ಕುಳಿತುಕೊಳ್ಳಲು ಅವಕಾಶ ಕಲ್ಪಿಸುವುದಿಲ್ಲ. ಬದಲಿಗೆ. ಇದು ವಿಮಾನದಲ್ಲಿ ಬಳಸುವ ಮಡಚಬಹುದಾದ ಆಸನಗಳಂತ ಸೀಟುಗಳನ್ನು ಹೊಂದಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: Mysuru Auto Components ಜಪಾನ್ ಪ್ಲಾಂಟ್ ಮೆಂಟೆನನ್ಸ್‌ನಿಂದ ಮೈಸೂರು ವಾಹನ ಬಿಡಿಭಾಗ ತಯಾರಿಕಾ ಘಟಕಕ್ಕೆ ಶ್ರೇಷ್ಠ ಪ್ರಶಸ್ತಿ!

ಕಾರು ತಯಾರಕರ ಪ್ರಕಾರ, ಫ್ರೆಸ್ಕೊ XL ನಾಲ್ಕು ಎಲೆಕ್ಟ್ರಿಕ್ ಮೋಟಾರ್ಗಳು, ಎರಡು-ಮಾರ್ಗ ಚಾರ್ಜಿಂಗ್ ಪೋರ್ಟ್ ಮತ್ತು 1,000 ಕಿಮೀ ವ್ಯಾಪ್ತಿಯ ಬೃಹತ್ ಬ್ಯಾಟರಿ ಹೊಂದಿದೆ. XL ಎಲೆಕ್ಟ್ರಿಕ್ ಕಾರಿನ ಬಗ್ಗೆ ಫ್ರೆಸ್ಕೊ ಇನ್ನೂ ಹೆಚ್ಚಿನ ವಿವರಗಳನ್ನು ಹಂಚಿಕೊಂಡಿಲ್ಲ.  ಇದರ ಉತ್ಪಾದನೆ ಆರಂಭಗೊಂಡಿದೆ ಎಂದು ಜನರಿಗೆ ಮಾಹಿತಿ ನೀಡಲು ಮತ್ತು ಅದು ಯಾವಾಗ ಮಾರುಕಟ್ಟೆಗೆ ಬರಬಹುದು ಎಂಬುದರ ಬಗ್ಗೆ ಒಂದು ಕಲ್ಪನೆಯನ್ನು ನೀಡಲು ಅದರ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಅದರ ಮಾದರಿಯ ವೀಡಿಯೊವನ್ನು ಮಾತ್ರ ಹಂಚಿಕೊಂಡಿದೆ. ಆದಾಗ್ಯೂ, ಫ್ರೆಸ್ಕೊ XL ಎಲೆಕ್ಟ್ರಿಕ್ ಕಾರಿಗೆ 100,000 ಯುರೋಗಳ ಬೆಲೆಯಲ್ಲಿ ಬುಕಿಂಗ್ ಆರಂಭಿಸಿದೆ. ಭಾರತೀಯ ಮೊತ್ತದಲ್ಲಿ ಸರಿಸುಮಾರು 86 ಲಕ್ಷ ರೂ.ಗಳಾಗಿವೆ. 

ಎಂಟು ಆಸನಗಳ ಫ್ರೆಸ್ಕೊ XL ಎಲೆಕ್ಟ್ರಿಕ್ ವಾಹನವನ್ನು ನಾರ್ವೆಯ EV ಸ್ಟಾರ್ಟ್ಅಪ್ನ ಸಂಸ್ಥಾಪಕ, ಸಿಇಓ (CEO) ಮತ್ತು ಅಧ್ಯಕ್ಷ ಎಸ್ಪೆನ್ ಕ್ವಾಲ್ವಿಕ್ ವಿನ್ಯಾಸಗೊಳಿಸಿದ್ದಾರೆ. ಎಕ್ಸ್ ಎಲ್ ಎಲೆಕ್ಟ್ರಿಕ್ ಕಾರು ಹಳೆಯ ಸೆಡಾನ್ ಮಾದರಿಗಿಂತ ಭಿನ್ನವಾಗಿದ್ದು, ಇದು ಎಲೆಕ್ಟ್ರಿಕ್ ವಲಯಕ್ಕೆ ‘ತಾಜಾ ಐಡಿಯಾ’ಗಳನ್ನು ನೀಡಲಿದೆ ಎಂದು ಬಣ್ಣಿಸಿದ್ದಾರೆ.

ಇದನ್ನೂ ಓದಿ: Hyundai India apology ಬಾಯ್‌ಕಾಟ್ ಟ್ರೆಂಡಿಂಗ್ ಬೆನ್ನಲ್ಲೇ ಕ್ಷಮೆ ಕೇಳಿದ ಹ್ಯುಂಡೈ ಇಂಡಿಯಾ!

ಅಮೇರಿಕನ್ ಫ್ಯೂಚರಿಸ್ಟ್ ಜಾಕ್ವೆ ಫ್ರೆಸ್ಕೊ ಅವರ ಹೆಸರಿನಲ್ಲಿ 2017ರಲ್ಲಿ ಫ್ರೆಸ್ಕೊ ಮೋಟಾರ್ಸ್  ಅನ್ನು ಪ್ರಾರಂಭಿಸಲಾಯಿತು. ಫ್ರೆಸ್ಕೊದ ಹಿಂದಿನ ಕಾನ್ಸೆಪ್ಟ್ ಕಾರ್ ರೆವೆರಿ 2019 ರಲ್ಲಿ ಅನಾವರಣಗೊಂಡ ನಂತರ ಕಂಪನಿ ಹೊಸ ಕಾರು ತಯಾರಿಸಿರಲಿಲ್ಲ. ರೆವೆರಿ 300 ಕಿಮೀ ವೇಗವನ್ನು ನೀಡುತ್ತದೆ ಎಂದು ಫ್ರೆಸ್ಕೊ ಹೇಳಿಕೊಂಡಿದೆ ಮತ್ತು ಅದು 300 ಕಿ.ಮೀ. ಕೇವಲ ಎರಡು ಸೆಕೆಂಡುಗಳಲ್ಲಿ ಶೂನ್ಯದಿಂದ 100 ಕಿ.ಮೀ.ವೇಗ ಹೆಚ್ಚಿಸಿಕೊಳ್ಳಬಹುದು ಎಂದು ಕೂಡ ಕಂಪನಿ ತಿಳಿಸಿದೆ.

ಜನರು ಈ ಕಾರನ್ನು ಬುಕ್ ಮಾಡಲು ಮುಗಿಬಿದ್ದಿದ್ದು, ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸದ್ಯಕ್ಕೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಎಲೆಕ್ಟ್ರಿಕ್ ಕಾರುಗಳ ಪೈಕಿ ಟೆಸ್ಲಾ ಎಸ್ ಮಾದರಿ ಒಂದು ಚಾರ್ಜ್ಗೆ 575 ಕಿಮೀ ಸಂಚರಿಸುವ ಸಾಮರ್ಥ್ಯ ಹೊಂದಿದೆ. ಇದು ಸದ್ಯದ ಅತಿ ಹೆಚ್ಚು ಕಿಮೀ ವ್ಯಾಪ್ತಿ ಹೊಂದಿರುವ ಎಲೆಕ್ಟ್ರಿಕ್ ಕಾರು ಆಗಿದೆ. 

PREV
Read more Articles on
click me!

Recommended Stories

ಕಾಂತಾರ ನಟನಿಗೆ ದೈವದ ಅಭಯ, 1.5 ಕೋಟಿ ರೂ ವೆಲ್‌ಫೈರ್ ಕಾರಿನಲ್ಲಿ ಕಾಣಿಸಿಕೊಂಡ ರಿಷಬ್ ಶೆಟ್ಟಿ
Tata Sierra vs Maruti Grand Vitara : ಯಾವ SUV ಉತ್ತಮ ಎಂಜಿನ್ ಹೊಂದಿದೆ? ಬೆಲೆ, ವೈಶಿಷ್ಟ್ಯ ತಿಳಿಯಿರಿ