ಮಹೀಂದ್ರ XUV300 ಇನ್ಮುಂದೆ 3XO ಮರುನಾಮಕರಣ, ಏ.29ಕ್ಕೆ ಅತ್ಯಾಕರ್ಷಕ ಕಾರು ಅನಾವರಣ!

Published : Apr 05, 2024, 02:52 PM ISTUpdated : Apr 05, 2024, 02:53 PM IST
ಮಹೀಂದ್ರ XUV300 ಇನ್ಮುಂದೆ 3XO ಮರುನಾಮಕರಣ, ಏ.29ಕ್ಕೆ ಅತ್ಯಾಕರ್ಷಕ ಕಾರು ಅನಾವರಣ!

ಸಾರಾಂಶ

ಮಹೀಂದ್ರ ಇದೀಗ ಹೊಚ್ಚ ಹೊಸ 3XO ಕಾರು ಅನಾವರಣಕ್ಕೆ ಸಜ್ಜಾಗಿದೆ. ಇದು XUV300 ಕಾರಾಗಿದ್ದು, ಹೊಸ ರೂಪ, ಹೊಸ ವಿನ್ಯಾಸ, ಹೊಸ ತಂತ್ರಜ್ಞಾನಗಳೊಂದಿಗೆ ಬಿಡುಗಡೆಯಾಗುತ್ತಿದೆ. ಈ ಕಾರಿಗೆ 3XO ಎಂದು ನಾಮಕರಣ ಮಾಡಲಾಗಿದೆ. ಈ ಕಾರಿನ ವಿಶೇಷತೆ ಇಲ್ಲಿದೆ  

ನವದೆಹಲಿ(ಏ.05) ಭಾರತದ ಪ್ರಮುಖ ಆಟೋಮೊಬೈಲ್ ಕಂಪನಿ ಮಹೀಂದ್ರಾ & ಮಹೀಂದ್ರಾ ಲಿಮಿಟೆಡ್ ಇಂದು ತನ್ನ ಬಹು ನಿರೀಕ್ಷಿತ ಎಸ್‌ಯುವಿ  XUV 3XO (ಎಕ್ಸ್‌ಯುವಿ -ತ್ರೀ-ಎಕ್ಸ್-ಓ ) ಹೆಸರನ್ನು ಅನಾವರಣಗೊಳಿಸಿದೆ. ಏಪ್ರಿಲ್ 29ರಂದು ಜಾಗತಿಕ ಮಟ್ಟದಲ್ಲಿ ಈ ಎಸ್‌ಯುವಿಯ ಅನಾವರಣಗೊಳ್ಳಲಿದೆ. ಇದು ಎಕ್ಸ್‌ಯುವಿ ಬ್ರ್ಯಾಂಡ್ ಡಿಎನ್‌ಎಯನ್ನು ಗೌರವಿಸುವ ಆಧುನಿಕ ತಂತ್ರಜ್ಞಾನದ ಕಾರು. 

ನೂತನ ಕಾರು ಹಲವು ವಿಶೇಷತೆಗಳನ್ನು ಹೊಂದಿದೆ. ಸೇಫ್ಟಿ ವಿಚಾರದಲ್ಲಿ ಯಾವುದೇ ರಾಜೀ ಇಲ್ಲ. ಮಹೀಂದ್ರ ಬ್ರ್ಯಾಂಡ್‌ಗೆ ತಕ್ಕಂತೆ ಗರಿಷ್ಠ ಸುರಕ್ಷತೆ ಕಾರು ಇದಾಗಿದೆ. ಪ್ರಮುಖವಾಗಿ ವಿನ್ಯಾಸದಲ್ಲಿ ಮಹತ್ತರ ಬದಲಾವಣೆ ಮಾಡಲಾಗಿದೆ. ಗ್ರಾಹಕರ ಬೇಡಿಕೆ ಹಾಗೂ ಅತ್ಯಾಕರ್ಷಕ ಡಿಸೈನ್ ಮೂಲಕ ಮಹೀಂದ್ರ XUV 3XO ಎಲ್ಲರ ಗಮನಸೆಳೆಯುತ್ತಿದೆ.   ಅದ್ಭುತ ಕಾರ್ಯಕ್ಷಮತೆ, ಅತ್ಯಾಧುನಿಕ ತಂತ್ರಜ್ಞಾನ, ಅತ್ಯಾಕರ್ಷಕ ವಿನ್ಯಾಸ ಹೊಂದಿದ್ದು, ನಗರ ಚಾಲಕರ ಆಕಾಂಕ್ಷೆಗಳನ್ನು ಪೂರೈಸುವ ನಿಟ್ಟಿನಲ್ಲಿ ವಿನ್ಯಾಸಗೊಂಡಿದೆ. ಜೊತೆಗೆ ಸಂಪೂರ್ಣ ಸುರಕ್ಷತೆಯನ್ನು ಒದಗಿಸುವ ನಿಟ್ಟಿನಲ್ಲಿ ರೂಪುಗೊಂಡಿದೆ. ಪ್ರತಿ ಪ್ರಯಾಣ ಮಾಡುವಾಗಲೂ ನಿರೀಕ್ಷೆಗೆ ಮೀರಿ ಮೂರು ಪಟ್ಟು ಹೆಚ್ಚು ಗಮನ ಸೆಳೆಯಲಿದೆ ಮತ್ತು ಗ್ರಾಹಕರಿಗೆ ಮಾಲೀಕತ್ವದ ಹೆಮ್ಮೆಯನ್ನು ಹೆಚ್ಚು ಮಾಡಲಿದೆ.

ಥಾರ್ ಮರುಭೂಮಿಯಿಂದ ಸ್ಪೂರ್ತಿ ಪಡೆದ ಮಹೀಂದ್ರ ಥಾರ್ ಅರ್ಥ್ ಎಡಿಶನ್ ಕಾರು ಬಿಡುಗಡೆ!

ಎಕ್ಸ್‌ಯುವಿ 3ಎಕ್ಸ್‌ಓ ಅಭಿವೃದ್ಧಿ ಹೊಂದುವ ಮಹಾತ್ವಾಕಾಂಕ್ಷೆ ಇರುವ ಎಲ್ಲರನ್ನೂ ಪ್ರತಿನಿಧಿಸುತ್ತದೆ. " 3XO '' ಎಂಬ ಹೆಸರಿಗೆ ತಕ್ಕುದಾಗಿ ಉನ್ನತಿಯನ್ನು ಸೂಚಿಸುತ್ತದೆ. ಜೊತೆಗೆ ಉತ್ತಮ ಅನುಭವ ಒದಗಿಸುತ್ತದೆ. ವಿಭಾಗ ಪ್ರಮುಖ ಫೀಚರ್ ಗಳನ್ನು ಹೊಂದಿರುವ ಈ ಎಸ್‌ಯುವಿ ತಮ್ಮ ಜೀವನದ ಪ್ರತಿಯೊಂದು ಅಂಶವೂ ಶ್ರೇಷ್ಠವಾಗಿರಬೇಕು ಎಂದು ಬಯಸುವ ಎಲ್ಲರಿಗೂ ಸೂಕ್ತವಾಗಿ ಹೊಂದಿಕೊಳ್ಳುತ್ತದೆ. ಹೊಚ್ಚ ಹೊಸ ಎಕ್ಸ್‌ಯುವಿ 3ಎಕ್ಸ್‌ಓ ಅನ್ನು ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಕಂಪನಿಯ ಉತ್ಪಾದನಾ ಘಟಕದಲ್ಲಿ ತಯಾರಿಸಲಾಗುತ್ತದೆ.

ಮಹೀಂದ್ರ 3XO ಕಾರಿನ ವಿಶೇಷತೆಗಳು:

• ಏಪ್ರಿಲ್ 29ರಂದು ವರ್ಲ್ಡ್ ಪ್ರೀಮಿಯರ್- ನಾವೀನ್ಯತೆ ಮತ್ತು ಶ್ರೇಷ್ಠತೆಯನ್ನು ಎತ್ತಿ ಹಿಡಿದಿರುವ ಮಹೀಂದ್ರಾದ ಹೊಸ ಎಸ್‌ಯುವಿಯ ಅನಾವರಣ 

• ನೀವು ಬಯಸುವುದೆಲ್ಲವೂ ಮತ್ತು ಅದಕ್ಕಿಂತ ಹೆಚ್ಚು ಇಲ್ಲಿ ಲಭ್ಯ - ಅಪೂರ್ವ ಕಾರ್ಯಕ್ಷಮತೆ, ಅತ್ಯಾಧುನಿಕ ತಂತ್ರಜ್ಞಾನ, ಆಕರ್ಷಕ ವಿನ್ಯಾಸ ಮತ್ತು ಅತ್ಯುತ್ತಮ ಸುರಕ್ಷತೆಯನ್ನು ಒದಗಿಸುತ್ತದೆ. ಎಕ್ಸ್‌ಯುವಿ 3ಎಕ್ಸ್‌ಓ ಆಧುನಿಕ ನಗರ ಗ್ರಾಹಕರ ಆಕಾಂಕ್ಷೆಗಳನ್ನು ಪೂರೈಸುವ ಸಲುವಾಗಿಯೂ ನಿರ್ಮಾಣಗೊಂಡಿದೆ.

21 ಸಾವಿರ ರೂಗೆ ಬುಕ್ ಮಾಡಿ ಹೊಚ್ಚ ಹೊಸ ಮಹೀಂದ್ರ XUV400 ಪ್ರೋ ಎಲೆಕ್ಟ್ರಿಕ್ ಕಾರು!

• 3ಎಕ್ಸ್ ಫ್ಯಾಕ್ಟರ್- ಎಕ್ಸ್‌ಯುವಿ 3ಎಕ್ಸ್‌ಓ ಮೂರು ಪಟ್ಟು ಜಾಸ್ತಿ ರೋಮಾಂಚನ ಉಂಟು ಮಾಡುವ ಮಹೀಂದ್ರಾದ ಅತ್ಯಪೂರ್ವ ಕೊಡುಗೆಯಾಗಿದೆ.


 

PREV
Read more Articles on
click me!

Recommended Stories

ಚಾಲನೆಯಲ್ಲಿದ್ದಾಗಲೇ ಪ್ರಜ್ಞೆ ಕಳೆದುಕೊಂಡ ಚಾಲಕ: ವಿಮಾನ ಟೇಕಾಫ್‌ದಂತೆ ಮೇಲೇರಿದ ಮರ್ಸಿಡಿಸ್: ವೀಡಿಯೋ
ಕಾಂತಾರ ನಟನಿಗೆ ದೈವದ ಅಭಯ, 1.5 ಕೋಟಿ ರೂ ವೆಲ್‌ಫೈರ್ ಕಾರಿನಲ್ಲಿ ಕಾಣಿಸಿಕೊಂಡ ರಿಷಬ್ ಶೆಟ್ಟಿ