ಬರೋಬ್ಬರಿ 6 ಕೋಟಿ ರೂ ಬೆಂಟ್ಲೆ ಖರೀದಿಸಿದ ರಣಬೀರ್, ಹಿರಿಯರೊಬ್ಬರಿಗೆ ಹಣ ನೀಡಲು ಕಾರು ನಿಲ್ಲಿಸಿದ ನಟ!

By Suvarna News  |  First Published Apr 4, 2024, 10:15 PM IST

ಆ್ಯನಿಮಲ್ ಚಿತ್ರದ ಯಶಸ್ಸಿನಲ್ಲಿರುವ ರಣಬೀರ್ ಕಪೂರ್ ಇದೀಗ ದುಬಾರಿ ಬೆಂಟ್ಲೆ ಕಾರು ಖರೀದಿಸಿದ್ದಾರೆ. ಹೊಚ್ಚ ಹೊಸ ಕಾರಿನ ಬೆಲೆ ಬರೋಬ್ಬರಿ 6 ಕೋಟಿ ರೂಪಾಯಿ. ಖುದ್ದು ಡ್ರೈವ್ ಮಾಡಿದ ರಣಬೀರ್ ಕಪೂರ್, ಭಿಕ್ಷುಕರ ಬಳಿ ಕಾರು ನಿಲ್ಲಿಸಿ ಹಣ ನೀಡಿ ತೆರಳಿದ್ದಾರೆ.
 


ಮುಂಬೈ(ಏ.04) ಬಾಲಿವುಡ್ ನಟ ರಣಬೀರ್ ಕಪೂರ್ ಆ್ಯನಿಮಲ್ ಚಿತ್ರ ಭಾರಿ ಯಶಸ್ಸು ಕಂಡಿದೆ. ಈ ಯಶಸ್ಸಿನ ಅಲೆಯಲ್ಲಿರುವ ರಣಬೀರ್ ಕಪೂರ್ ಇದೀಗ ಐಷಾರಾಮಿ ಹಾಗೂ ದುಬಾರಿ ಬೆಂಟ್ಲೆ ಕಾರು ಖರೀದಿಸಿದ್ದಾರೆ. ಬರೋಬ್ಬರಿ 6 ಕೋಟಿ ರೂಪಾಯಿ ನೀಡಿ ಬೆಂಟ್ಲೆ ಕಾಂಟಿನೆಂಟಲ್ GT V8 ಕಾರು ಖರೀದಿಸಿದ್ದಾರೆ.  ಇದು ಎಕ್ಸ್ ಶೋ ರೂಂ ಬೆಲೆಯಾಗಿದೆ. ಇದರ ಆನ್ ರೋಡ್ ಬೆಲೆ ಮತ್ತೊಂದು ಕೋಟಿ ಹೆಚ್ಚಾಗಲಿದೆ.ನೀಲಿ ಬಣ್ಣದ ಈ ಕಾರು ಅತ್ಯಂತ ಆಕರ್ಷಕ ಮಾತ್ರವಲ್ಲ, ಆರಾಮದಾಯಕ ಪ್ರಯಾಣ ನೀಡಲಿದೆ.

ಕಾರು ಖರೀದಿಸಿದ ರಣಬೀರ್ ಕಪೂರ್ ಖುದ್ದು ಡ್ರೈವ್ ಮಾಡಿ ಮನೆಗೆ ತೆರಳಿದ್ದಾರೆ. ಬೆಂಟ್ಲಿ ಕಾಂಟಿನೆಂಟಲ್  GT V8 ಮೂಲಕ ತೆರಳಿದ ರಣಬೀರ್ ಕಪೂರ್ ಭಿಕ್ಷುಕರೊಬ್ಬರು ವಾಹನಕ್ಕೆ ಅಡ್ಡ ಬಂದಿದಿದ್ದಾರೆ. ಇದೇ ವೇಳೆ ಕಾರು ನಿಲ್ಲಿಸಿದ ರಣಬೀರ್ ಕಪೂರ್ ಹಣ ನೀಡಿ ಮುಂದೆ ಸಾಗಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.

Tap to resize

Latest Videos

undefined

ಹೊಸ BMW X1 ಖರೀದಿಸಿದ ನಟ ನಿರ್ದೇಶಕ ತರುಣ್ ಸುಧೀರ್, ತಾಯಿ ಜೊತೆ ಮೊದಲ ರೌಂಡ್!

ಬೆಂಟ್ಲಿ ಬ್ರಿಟಿಷ್ ಲಕ್ಷುುರಿ ಬ್ರ್ಯಾಂಡ್ ಕಾರು. ಸ್ಪೋರ್ಟ್ಸ್ ಕಾರು 3996 cc ಎಂಜಿನ್ ಹೊಂದಿದೆ. 542bhp ಪವರ್ ಹಾಗೂ 770Nm ಟಾರ್ಕ್ ಸಾಮರ್ಥ್ಯ ಹೊಂದಿದೆ. ಅತ್ಯಾಥುನಿಕ ತಂತ್ರಜ್ಞಾನ, ಗರಿಷ್ಠ ಸುರಕ್ಷತೆ ಸೇರಿದಂತೆ ಹಲವು ಅಡ್ವಾಂಟೇಜ್ ಈ ಕಾರಿನಲ್ಲಿದೆ. ಬಾಲಿವುಡ್ ಸೂಪರ್ ಸ್ಟಾರ್ಸ್, ಉದ್ಯಮಿಗಳು, ಶ್ರೀಮಂತರು ಬೆಂಟ್ಲೆ ಕಾರನ್ನು ಹೆಚ್ಚು ಇಷ್ಟುಪಡುತ್ತಾರೆ. ಮುಕೇಶ್ ಅಂಬಾನಿ ಬಳಿಯೂ ಬೆಂಟ್ಲಿ ಕಾಂಟಿನೆಂಟಲ್ ಜಿಟಿ ಕಾರಿದೆ. 

 

 
 
 
 
 
 
 
 
 
 
 
 
 
 
 

A post shared by Voompla (@voompla)

 

ಲಕ್ಷುರಿ ಕಾರು ಖರೀದಿಸಿದಿ ಸುದ್ದಿಯಾಗಿರುವ ರಣಬೀರ್ ಇತ್ತೀಚೆಗೆ ತಮ್ಮ ಪುತ್ರಿ ರಹಾ ಕಪೂರ್‌ಗೆ ಬರೋಬ್ಬರಿ 250 ಕೋಟಿ ರೂಪಾಯಿ ಬಂಗಲೆಯನ್ನು ಗಿಫ್ಟ್ ಆಗಿ ನೀಡಿದ್ದರು. ಮುಂಬೈನ ಬಾಂದ್ರಾದಲ್ಲಿ ರಣಬೀರ್ ಹಾಗೂ ಅಲಿಯಾ ಭಟ್ ಈ ಮನೆ ಖರೀದಿಸಿ ಪುತ್ರಿಗೆ ಉಡುಗೊರೆ ನೀಡಿದ್ದಾರೆ. ಪುತ್ರಿಗೆ ಒಂದು ವರ್ಷವಾಗುತ್ತಿರುವ ಹಿನ್ನಲೆಯಲ್ಲಿ ಈ ದುಬಾರಿ ಉಡುಗೊರೆ ನೀಡಲಾಗಿದೆ.  ಇದರ ಬೆನ್ನಲ್ಲೇ ಇದೀಗ ದುಬಾರಿ ಕಾರು ಕೂಡ ಖರೀದಿಸಿದ್ದಾರೆ.

ಹೊಸ ಆಡಿ ಕ್ಯೂ7 ಖರೀದಿಸಿದ ಅಶ್ವಿನಿ ಪುನೀತ್ ರಾಜ್‌ಕುಮಾರ್, ಇದು ಅಪ್ಪು ನೆಚ್ಚಿನ ಕಾರು!

2024ನೇ ಸಾಲಿನ ಫಿಲಂಫೇರ್‌ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಆನಿಮಲ್ ಚಿತ್ರದ ನಟನೆಗೆ ರಣಬೀರ್ ಕಪೂರ್ ಅತ್ಯುತ್ತಮ ನಟ ಅನ್ನೋ ಬಿರುದು ಪಡೆದಿದ್ದಾರೆ.

 

 
 
 
 
 
 
 
 
 
 
 
 
 
 
 

A post shared by Voompla (@voompla)

 

click me!